ಮಂಗಳವಾರ, ಡಿಸೆಂಬರ್ 31, 2013
ವನ್ಯ ಜೀವಿಗಳಿಗೆ ನಮ್ಮ ಪತ್ರ
೨೦೧೨ ರಲ್ಲಿ ನಮ್ಮ ವನ್ಯ ಜೀವಿಗಳು ನೀಡಿದ ಸಂದೇಶಗಳಿಂದಾಗಿ ನಾವು ನಮ್ಮ ಶಾಲೆಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚೆ ನಡೆಸಿ, ಸದ್ಯ ನಾವು ನಮ್ಮ ಶಾಲೆಯ ಗಿಡ-ಮರಗಳಲ್ಲಿ ನೀರಿನ ಬಟ್ಟಲುಗಳನ್ನು, ಕಾಳುಗಳನ್ನು ತಮಗಾಗಿ ಮೀಸಲು ಇಟ್ತಿದ್ದೇವೆ. ನಮ್ಮ ಊರಿನ ಹಿರಿಯ ಧರ್ಮಪ್ಪಜ್ಜ ಯಾವಾಗಲೂ ಅತ್ಯಂತ ಖಾಳಜಿಯಿಂದ ನೀರನ್ನು ವಿನಿಯೋಗಿಸಲು ಅವು ಸಣ್ಣ ಸಣ್ನ ಸಸಿಗಳಿಗೆ ಹಾಕುತ್ತಾ ಸೂಕ್ಷ್ಮತೆಯನ್ನು ವಹಿಸುತ್ತಿದ್ದಾನೆ. ನಮ್ಮನ್ನು ನಾವು ಇದರಲ್ಲಿ ತೊಡಗಿಸಿಕೊಂಡಿದ್ದೇವೆ.
ಇಂತಿ ನಿಮ್ಮ
ಶಾಲಾ ಮಕ್ಕಳು
ನೀರು
ಮಂಡ ನೆ : ಕುಮಾರಿ ಭಾಗ್ಯ
ವಿಷಯ : ನೀರು
ತರಗತಿ ಗೋಷ್ಠಿ - ೦೬
ವಿಷಯ : ನೀರು
ತರಗತಿ ಗೋಷ್ಠಿ - ೦೬
ನಾವು ನಮ್ಮ ಶಾಲೆಯ ಪಠ್ಯಗಳಲ್ಲಿ, ಶಿಕ್ಷಕರು ಪಾಠಗಳಲ್ಲಿ ಹೇಳಿದಂತೆ ನಮಗೆ ನೀರು ದ್ರವ ರೂಪದಲ್ಲಿ ಇದೆ ಎನ್ನುವುದನ್ನು ನಾವೆಲ್ಲ ಅಭ್ಯಾಸ ಮಾಡಿದ್ದೇವೆ. ನೀರು ಪ್ರತಿಯೊಬ್ಬ ಮನುಷ, ಪ್ರಾಣಿ, ಪಕ್ಷಿ, ಗಿಡ-ಮರಗಳಿಂದ ಹಿಡಿದು ಎಲ್ಲವುಅದಕ್ಕೂ ನೀರು ಅತ್ಯಂತ ಅವಶ್ಯಕ. ನೀರಿಲ್ಲದೆ ಯಾರು ಬದುಕೋದಕ್ಕೆ ಆಗುವುದೇ ಇಲ್ಲ. ಮಳೆಯ ಕಾರಣ ಭೂಮಿಗೆ ಬರುವ ನೀರು ಕೆರೆ, ಭಾವಿ, ಹಳ್ಲ, ಕೊಳ್ಳಗಳ ಮಖಾಂತರ ಮತ್ತೇ ಹಾವಿಯಾಗಿ ಮೋಡವಾಗಿ ಸಾಗಿ ಮಳೆಯನ್ನು ಸುರಿಸುತ್ತದೆ. ಇದು ನಿರಂತರ ಪ್ರಕ್ರಿಯೆ. ನೀರು ಇಲ್ಲದೆ ಬದುಕುವುದೇ ಕಷ್ಟ. ಮಳೆ ಬರದೇ ಇದ್ದಾಗ ನಮ್ಮ ಊರಲ್ಲಿ ಗುರ್ಜಿ ಹಾಕುತ್ತಾರೆ. ಇದು ನಮ್ಮ ಜನರ ನಂಬಿಕೆಯಿಂದ ಮಳೆ ಬರಬಹುದು ಎಂಬ ಕಾರಣವು ಆಗಿದೆ.
ಶಿಕ್ಷಣ
ಮಂಡನೆ : ಕುಮಾರ ಅಮರೇಶ
ವಿಷಯ : ಶಿಕ್ಷಣ
ತರಗತಿ ಗೋಷ್ಠಿ - ೦೫
ವಿಷಯ : ಶಿಕ್ಷಣ
ತರಗತಿ ಗೋಷ್ಠಿ - ೦೫
ಮಂಗನಿಂದ ಮಾನವನಾದ ಎಂದು ನಾವು ಇಂದು ನಮ್ಮ ಪಠ್ಯಗಳಲ್ಲಿ ಸಾಕಷ್ಟು ಬಾರಿ ಓದಿ ಅದನ್ನೇ ಪರೀಕ್ಷೆಗಳಲ್ಲಿ ಬರೆದು ಇದ್ದೇವೆ. ಹೌದು ನಾವು ಈ ನಮ್ಮ ಶಿಕ್ಷಣ ಪಡೆಯುವುದರ ಮುಖಾಂತರ ಅಂದು ಮಂಗನಿಂದ ಪ್ರಾರಂಭವಾಗಿದ್ದು ಇಂದು ಮಂಗಳಯಾನಕ್ಕೆ ಸಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಶಿಕ್ಷಣ ಪ್ರತಿಯೊಬ್ಬರಿಗೂ ಮುಖ್ಯವಾಗಿ ಮೂಲವಾಗಿ ಬೇಕು. ಶಿಕ್ಷಣದಿಂದಾಗಿ ನಾವು ಎಲ್ಲರು ಒಂದೆಡೆ ಕುಳಿತು ಕಲಿಯುವುದರ ಜೊತೆಗೆ, ಬೇರೆ ಬೇರೆ ಭಾಷೆಗಳ ಕಲಿಯುವಿಕೆಯಿಂದಾಗಿ ಜಗತ್ತಿನೊಡನೆ ನಮ್ಮನ್ನು ನಾವು ಹಂಚಿಕೊಳ್ಳುವ ಪ್ರಸಂಗ ಒದಗಿ ಬಂದಿದೆ. ಶಿಕ್ಷಣ ಶಿಕ್ಷಣದ ಕುರಿತು ಇನ್ನೂ ಸಾಕಷ್ಟು ವಿಚಾರಗಳನ್ನು ನಾವು ನಮ್ಮ ಕಲಿಯುವಿಕೆಯಿಂದ ಪಡೆಯಬಹುದಾಗಿದೆ.
ಮೂಢನಂಬಿಕೆ
ತರಗತಿ ಗೋಷ್ಠಿ - ೦೪
ವಿಷಯ : ಮೂಢನಂಬಿಕೆ
ಮಂಡನೆ : ಕುಮಾರ ಶಶಿಧರ
ಮೂಢನಂಬಿಕೆ ನಾವು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾನೂ ಹೆಚ್ಚು ಆಚರಿಸುವಂಥ ಪದ್ಧತಿಗಳಾಗಿವೆ. ನಾವು ಯಾವುದೇ ಕೆಲಸಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂತು ಅಂತಾಂದರೆ, ಹಲ್ಲಿ ಲೊಚಗುಟ್ಟಿದಾಗ, ಬಲ-ಎಡ ಕಣ್ಣು ಹಾರಿದಾಗ ಹೀಗೆ ನಾವು ಕಾರ್ಯದ ಕುರಿತು ಯೋಚಿಸದೆ ಅಯ್ಯೋ ಏನೋ ಆಗಿ ಹೋಗುತ್ತದೆ ಎಂಬ ಭಯದಲ್ಲಿ ನಮ್ಮ ಗುರಿಗಳತ್ತ ಗಮನವನ್ನೇ ನೀಡುವುದಿಲ್ಲ.
ಆ ದಿನದ ನೆನಪು ....
ನಂತರ ೭.೦೦ ಘಂಟೆಗೆ ವರ್ಷ ಪೂರ್ತಿ ನಡೆಸಿದ ಸಾಂಸ್ಕೃತಿಕ ವಿಷಯಗಳನ್ನು ಛಾಯಚಿತ್ರಗಳನ್ನು ಜನರಿಗೆ ಪ್ರದರ್ಶನವನ್ನಿಟ್ಟು ೨೫ ನಿಮಿಷದ ಮಕ್ಕಳ ಕಲಿಕೆಯ ಸಾಕ್ಷ್ಯಚಿತ್ರವನ್ನು ತೋರ್ಪಡಿಸಿದರು. ಇದು ನಮಗೆ ಹೆಮ್ಮೆಯ ವಿಷಯವಾಗಿತ್ತು. ಹಾಗೆ "ನಮ್ಮೂರ ಹಬ್ಬ" ನಾಟಕದ ಮೂಲಕ ಮೊಹರಂನ್ನು ನೆನಪಿಸುವಂತೆ ವಿದ್ಯಾರ್ಥಿಗಳು ಕಲಾ ಪ್ರದರ್ಶನವನ್ನು ನೈತಿಕ ಜೀವನದಂತೆ ನಟಿಸಿದರು. ಈ ನಾಟಕಕ್ಕೆ ವಿಷಯ ಸಂಗ್ರಹಣೆ ಮಾಡಿ ನಿರ್ದೇಶಿಸಿದ ಶಿಕ್ಷಕರ ಪಾತ್ರ ಮಹತ್ವದ್ದಾಗಿತ್ತು.
ಆ ಕಾರ್ಯಕ್ರಮದಲ್ಲಿ ಶ್ರೀಮತಿ ಅನುಪಮಾ ಪ್ರಕಾಶರವರು ನಮ್ಮೂಎಇನ ಚಿಕ್ಕ ಮಕ್ಕಳೊಂದಿಗೆ ಕುಳಿತುಕೊಂಡು ಮಾತನಾಡುವುದು ತುಂಭಾ ಆಶ್ಚರ್ಯಕರ ಸಂಗತಿಯಾಗಿತ್ತು. ಕೆಲವು ಸಮಯ ಮಳೆರಾಯನ ಆರ್ಭಟದಿಂದ ಕಾರ್ಯಕ್ರಮ ಅಸ್ಥವ್ಯಸ್ಥವಾಗಿತ್ತು. ಇದರಿಂದ ಜನರಲ್ಲಿ ಗೊಂದಲವಾಗಿ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಯಿತು. ಇದು ನಾಟಕ ಶಿಕ್ಷಕರಾದ ಗುರುರಾಜ ಗುರುಗಳಿಗೆ ಬೇಸರವಾದ ಸಂಗತಿಯಾದರು ಕಾರ್ಯಕ್ರಮ ತುಂಭಾ ಅಚ್ಚುಕಟ್ಟಾಗಿ ನೆರವೇರಿತು. ಆಸೆಗಳು ನೂರಾರಿದ್ದು ನೆರವೇರಿಸುವ ಶಕ್ತಿಯಾದ ಶಿಕ್ಷಕ ವೃಂದಕ್ಕೆ ನಾವು ಯಾವಾಗಲು ಚಿರರುಣಿ.
ಧನ್ಯಾವಾದಗಳೊಂದಿಗೆ.
ಕುಮಾರ ಯಮನೂರಪ್ಪ ಗಂಗೂರ
ಹಳೇ ವಿದ್ಯಾರ್ಥಿ
ಶುಕ್ರವಾರ, ಡಿಸೆಂಬರ್ 13, 2013
ಹೈದ್ರಾಬಾದ್ ಕರ್ನಾಟಕ
ಮಂಡನೆ : ಕುಮಾರಿ ಜಯಶ್ರೀ
ವಿಷಯ : ಹೈದ್ರಾಬಾದ್ ಕರ್ನಾಟಕ
ತರಗತಿ ಗೋಷ್ಠಿ - ೦೩

ವಿಷಯ : ಹೈದ್ರಾಬಾದ್ ಕರ್ನಾಟಕ
ತರಗತಿ ಗೋಷ್ಠಿ - ೦೩
ಹೈದ್ರಾಬಾದ್ ಕರ್ನಾಟಕ ವಿಶೇಷ ತಿದ್ದುಪಡಿ ಕಲ್೦ ೩೭೧ ಜೆ ತಿದ್ದುಪಡಿ ನಮ್ಮ ಉತ್ತರದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರ್, ಯಾದಗಿರಿ, ಬಳ್ಳಾರಿ ಹಾಗೂ ಕೊಪ್ಪಳಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಂಸ್ಥಾನಗಳೇನು ಇದ್ದವು ಅವು ಸ್ವಾತಂತ್ರ್ಯ ಭಾರತದಲ್ಲಿ ಒಂದಾದಾಗ ಹೈದ್ರಾಬಾದನ ನಿಜಾಮರೌ ವಿಲೀನಕ್ಕೆ ಒಪ್ಪಲಿಲ್ಲ. ತದ ನಂತರ ಉಕ್ಕಿನ ಮನುಷ್ಯ ಎಂದೇ ಕರೆಯಿಸಿಕೊಳ್ಳುವ ಸರ್ದಾರ್ ವಲ್ಲಭಬಾಯಿ ಪಾಟೇಲ್ ಅವರ ಆಗಮನದಿಂದ ವಿಲೀನಕ್ಕೆ ಒಪ್ಪಿ ಸ್ವಾತಂತ್ರ ಭಾರತದಲ್ಲಿ ಒಂದಾಯಿತು. ಆದರೆ ಕರ್ನಾಟಕ ರಾಜ್ಯದಲ್ಲಿ ಹಿಂದಿನಿಂದಲೂ ಅತ್ಯಂತ ಕಡೇಯ ಸ್ಥಾನದಲ್ಲಿ ಇದ್ದು ಬಂದಿರುವ ನಮ್ಮ ಈ ಭಾಗ ಹಲವಾರು ಹೋರಾಟಗಳಿಂದ ಸ್ಥಾನಮಾನ ಪಡೆಯಿತು ನಿಜ ಆದರೆ ಅಷ್ಟೇ ಕಾರ್ಯ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು, ನಾವು - ನೀವು ಎಲ್ಲರೂ ಶ್ರಮ ವಹಿಸಬೇಕು. ಹೀಗಾದಾಗ ಮಾತ್ರ ನಮ್ಮ ಭಾಗ ಹಿಂದೆಯಲ್ಲ ಮುಂದೆ ಬರಲು ಸಾಧ್ಯ.
ಮಂಗಳವಾರ, ಡಿಸೆಂಬರ್ 10, 2013
ಮಕ್ಕಳ ಕಾವ್ಯ
ಮಂಡ ನೆ : ಕುಮಾರ ಮಂಜುನಾಥ
ವಿಷಯ : ಮಕ್ಕಳ ಕಾವ್ಯ
ತರಗತಿ ಗೋಷ್ಠಿ - ೦೨
ಮಕ್ಕಳ ಕಾವ್ಯದ ಕುರಿತು ನಾನು ತಿಳೀಯಲು ಬಯಸಿದಾಗ ನಮ್ಮ ಕನ್ನಡದಲ್ಲಿ ಎಷ್ಟೇ ಪುರತನದಿಂದಲೂ ಸಾಹಿತ್ಯ ಬೆಳೆದು ಬಂದರು ಮಕ್ಕಳ ಕಾವ್ಯದ ಮೇಲೆ ಬರೆದಿದ್ದು ಅತ್ಯಂತ ಕಡಿಮೆಯೇ ಎಂದು ಹೇಳಬೇಕಾಗಿ ಬಂದಿದೆ. ಕಾರಣ ಹಿರಿಯರು ಹೇಳುತ್ತಿದ್ದ ಲಾಲಿ ಹಾಡು, ಜೋಗಳಪದಗಳನ್ನು ತಾಯಿಂದರು ತತ್ ಕ್ಷಣಕ್ಕೆ ಹಾಡುತ್ತಿದ್ದರು ಆದರೆ ಅದನ್ನು ರಚಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಎಂಥೆಥ ಹಾಡಗಳನ್ನು ಕಟ್ಟಿ ಹಾಡಿದ ನಮ್ಮ ಹಿರಿಯರು ಮೌಖಿಕಕ್ಕೆ ಮಾತ್ರ ಕಾವ್ಯವನ್ನು ನಿಲ್ಲಿಸಿದರು. ಇದ್ದ ಕೆಲವು ಮಕ್ಕಳ ಕಾವ್ಯಗಳು ಅದ್ಭುತವಾದದ್ದನ್ನು ನಾವು ನಮ್ಮ ಹಿಂದಿನ ಪ್ರಾಥಮಿಕ ಪಠ್ಯಗಳಲ್ಲಿ ಕಾಣುತ್ತೇವೆ. ಗೋವಿನ ಹಾಡು ಎಂದೆಂದು ಮರೆಯುವುದಕ್ಕೆ ಸಾದ್ಯವೇ ಇಲ್ಲ.
ವಿಷಯ : ಮಕ್ಕಳ ಕಾವ್ಯ
ತರಗತಿ ಗೋಷ್ಠಿ - ೦೨
ಮಕ್ಕಳ ಕಾವ್ಯದ ಕುರಿತು ನಾನು ತಿಳೀಯಲು ಬಯಸಿದಾಗ ನಮ್ಮ ಕನ್ನಡದಲ್ಲಿ ಎಷ್ಟೇ ಪುರತನದಿಂದಲೂ ಸಾಹಿತ್ಯ ಬೆಳೆದು ಬಂದರು ಮಕ್ಕಳ ಕಾವ್ಯದ ಮೇಲೆ ಬರೆದಿದ್ದು ಅತ್ಯಂತ ಕಡಿಮೆಯೇ ಎಂದು ಹೇಳಬೇಕಾಗಿ ಬಂದಿದೆ. ಕಾರಣ ಹಿರಿಯರು ಹೇಳುತ್ತಿದ್ದ ಲಾಲಿ ಹಾಡು, ಜೋಗಳಪದಗಳನ್ನು ತಾಯಿಂದರು ತತ್ ಕ್ಷಣಕ್ಕೆ ಹಾಡುತ್ತಿದ್ದರು ಆದರೆ ಅದನ್ನು ರಚಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಎಂಥೆಥ ಹಾಡಗಳನ್ನು ಕಟ್ಟಿ ಹಾಡಿದ ನಮ್ಮ ಹಿರಿಯರು ಮೌಖಿಕಕ್ಕೆ ಮಾತ್ರ ಕಾವ್ಯವನ್ನು ನಿಲ್ಲಿಸಿದರು. ಇದ್ದ ಕೆಲವು ಮಕ್ಕಳ ಕಾವ್ಯಗಳು ಅದ್ಭುತವಾದದ್ದನ್ನು ನಾವು ನಮ್ಮ ಹಿಂದಿನ ಪ್ರಾಥಮಿಕ ಪಠ್ಯಗಳಲ್ಲಿ ಕಾಣುತ್ತೇವೆ. ಗೋವಿನ ಹಾಡು ಎಂದೆಂದು ಮರೆಯುವುದಕ್ಕೆ ಸಾದ್ಯವೇ ಇಲ್ಲ.
ಕನ್ನಡದಲ್ಲಿ ಮಕ್ಕಳ ಸಾಹಿತ್ಯ
ಮಂಡನೆ : ಕುಮಾರಿ ಶಶಿಕಲಾ
ವಿಷಯ : ಕನ್ನಡದಲ್ಲಿ ಮಕ್ಕಳ ಸಾಹಿತ್ಯ
ತರಗತಿ ಗೋಷ್ಠಿ -೦೧
ಶನಿವಾರ, ಡಿಸೆಂಬರ್ 7, 2013
ಸೋಮವಾರ, ಡಿಸೆಂಬರ್ 2, 2013
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)