ಶುಕ್ರವಾರ, ನವೆಂಬರ್ 23, 2012

ಮಕ್ಕಳ ದಿನಾಚರಣೆ - ಬರಹ

ನೆಹರುಜೀ 
                        
              14.11.2012 ರಂದು ನಡೆದ ಮಕ್ಕಳ ದಿನಾಚರಣೆ ನೆಹರು ಅವರ 123 ನೇ ಜಯಂತೋತ್ಸವ ಬಗ್ಗೆ ನಮ್ಮ ಶಾಲೆಯ ಮುಖ್ಯ ಗುರುಗಳು, ನನ್ನ ಸಹಪಾಠಿಗಳು ಹಾಗೂ ನಮ್ಮ ಗುರುಬಳಗದವರೆಲ್ಲ ನಮಗೆ ಮಕ್ಕಳ ಜಯಂತೋತ್ಸವದ ಕುರಿತು ಉಪನ್ಯಾಸ ನೀಡಿದರು. ಸ್ವತಂತ್ರ್ಯ  ಸಿಕ್ಕ ನಂತರ ಪ್ರಪ್ರಥಮ ದೇಶದ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರುರವರಾಗಿದ್ದರು. ಇವರಿಗೆ ಮಕ್ಕಳ ಭವಿಷ್ಯದಲ್ಲಿಯೇ ಭಾರತದ ಭವಿಷ್ಯವನ್ನು ಕಂಡು ಕೊಂಡಿದ್ದರು. 

                ಪಂಡಿತ್ ಜವಹರಲಾಲ್ ನೆಹರುರವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ನಮ್ಮ ಶಾಲೆಯಲ್ಲಿ  ಪಂಡಿತರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರನ್ನ ಮನದಲ್ಲಿ ನೆನೆಯುವುದರ ಜೊತೆಗೆ ನಮ್ಮ ಶಾಲಾ ಸಂಸತ್ತಿನಿಂದ ಕಾರ್ಯಕ್ರಮವನ್ನು ನಡೆಸಿದೆವು. ಪ್ರಧಾನಿಯಾಗಿ ಆಯ್ಕೆಗೊಂಡಿರುವ ನಾನು ನನ್ನ ಸ್ನೇಹಿತರು ಸಂಸತ್ತಿನ ಸಚಿವರುಗಳು ಎಲ್ಲರೂ  ಕೂಡಿ ಕೊಂಡು ಮುಖ್ಯೋಪಾಧ್ಯಾಯರನ್ನು ಮಖ್ಯ ಅತಿಥಿಯಾಗಿ ಆಹ್ವಾನಿಸಿ, ದತ್ತಾತ್ರೇಯ ಪತ್ತಾರ ಗುರುಗಳನ್ನು ಪ್ರಾಸ್ತಾವಿಕವಾಗಿ ಮಾತಾನಾಡಲು ಆಮಂತ್ರಿಸಿ, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ವೇದಿಕೆಯ ಮೇಲೆ ಸದಾ ಶಿಕ್ಷಕರನ್ನು ನೋಡುತ್ತಿದ್ದ ನಾವು ಇಂದು ವೇದಿಕೆಯ ಮೇಲೆ ಇದ್ದದ್ದು ವಿಶೇಷವಾಗಿತ್ತು. 

                   ಈ ರೀತಿ ಕಾರ್ಯಕ್ರಮಗಳನ್ನು ಮಾಡುವುದು, ವೇದಿಕೆಯ ಮೇಲೆ ವಿಧ್ಯಾರ್ಥಿಗಳನ್ನು ಕಳುಹಿಸುವುದರಿಂದ ಸಂತೋಷದ ಜೊತೆಗೆ ಮುಜುಗರ ಹೋಗುವುದು. ಭಯ ಪಡದೇ ನಾವು ರಂಗವನ್ನು ಹತ್ತಲು ಸಾಧ್ಯಾವಾಗುತ್ತದೆ. ಸದಾ ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸುವ ಶಿಕ್ಷಕರಿಗೆ ನಾವು ಧನ್ಯಾವಾದಗಳನ್ನು ತಿಳಿಸುತ್ತೇವೆ. ಮಕ್ಕಳ ಕನಸುಗಳಿಗೆ ಇದೊಂದು ಮೊದಲ ಹೆಜ್ಜೆಯಾಗುತ್ತಿರುವುದು ವಿಶೇಷ.

ಮಂಜುಳಾ ಎಸ್. ಇಲಾಳ 
ಶಾಲಾ ಸಂಸತ್ತಿನ ಪ್ರಾಧಾನಿ,
ಸರಕಾರಿ ಪ್ರೌಢಶಾಲೆ,
ಜಹಗಿರ್ ಗುಡದೂರ 

ಗುರುವಾರ, ನವೆಂಬರ್ 22, 2012

ಮಕ್ಕಳ ದಿನಾಚರಣೆ


                           ನವಂಬರ್ 14 ರಂದು ನಡೆದ ಮಕ್ಕಳ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ನಡೆಸಲಾಯಿತು. ಶಾಲಾ ಸಂಸತ್ತಿನ ಪದಾಧಿಕಾರಿಗಳಾದ ನಮ್ಮ ವಿಧ್ಯಾರ್ಥಿಗಳು ಇಡೀ ಕಾರ್ಯಕ್ರಮವನ್ನು ನಡೆಸುವುದರ ಜೊತೆಗೆ ಮಕ್ಕಳೇ ವೇದಿಕೆ ಮೇಲೆ ಇದ್ದದ್ದು ವಿಶೇಷ. ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಾಯರು ವಹಿಸಿಕೊಂಡಿದ್ದರು. ಎಲ್ಲ ಶಾಲೆಯ ಪ್ರತಿನಿಧಿಗಳು ಭಾಷಣ ಮಾಡಿ, ನೆಹರು ಅವರ ಕುರಿತು ಮಕ್ಕಳಲ್ಲಿ - ಮಕ್ಕಳಿಂದ ಬಂದ ಹೊಸ ಹೊಸ ವಿಚಾರಗಳು ಶ್ಲಾಘನೀಯ ಎಂದೇ ಹೇಳಬಹುದಾಗಿದೆ.







ಭಾನುವಾರ, ನವೆಂಬರ್ 18, 2012

ರೇಶ್ಮೆ ಗೂಡುಗಳ ವೀಕ್ಷಣೆ





                              ಕೃಷಿಗೆ ಸಂಬಂಧ ಪಟ್ಟ ವಿಚಾರಗಳನ್ನು ನಮ್ಮ ಮುದ್ದು ವಿಧ್ಯಾರ್ಥಿಗಳಿಗೆ ತಿಳಿಯ ಪಡಿಸಬೇಕಾಗಿರುವುದು ಇಂದಿನ ಶಿಕ್ಷಣ ಕ್ರಮದಲ್ಲಿ ಅವಶ್ಯಕವಾಗಿ ಇರಬೇಕಾಗಿದೆ. ಗ್ರಾಮೀಣ ಮಕ್ಕಳಿಗೆ ಸಂಪೂರ್ಣ ಜ್ಞಾನ ನೀಡುವುದರ ಜೊತೆಗೆ ಕೃಷಿ ಇಂದು ಎಷ್ಟು ಅವಶ್ಯಕ ಎನ್ನುವುದನ್ನು ಮನದಟ್ಟ ಮಾಡಬೇಕಾಗಿದೆ. ನಗರ ಪ್ರದೇಶಗಳಲ್ಲಿ ಕೃಷಿಯ ವಿಚಾರಗಳು ವಿಧ್ಯಾರ್ಥಿಗಳಿಗೆ ಸಿಗುವುದು ಕಡಿಮೆ. ಪ್ರಾಯೋಗಿಕವಾಗಿ ವಿದ್ಯಾರ್ಥಿಗಳು ಸ್ಥಳಗಳನ್ನು ಬೇಟಿ ಮಾಡುವುದರೊಂದಿಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾದಂಥಹದ್ದು. ಶಿಕ್ಷಕರು-ವಿದ್ಯಾರ್ಥಿಗಳೊಂದಿಗೆ  ಪ್ರವಾಸದ ಜೊತೆಗೆ ಇಂಥಹ ಕೃಷಿಗೆ ಸಂಬಂಧ ಪಟ್ಟ ಮಾಹಿತಿಗಳನ್ನು ತಜ್ಞರಿಂದ ಮಕ್ಕಳಿಗೆ ತಿಳಿಸುವುದು ನಮ್ಮ ಕರ್ತವ್ಯವಾಗಿದೆ.





                         ರೇಷ್ಮೆ ಹುಳುಗಳ ಗೂಡುಗಳನ್ನು ಕಟ್ಟುವ ಕ್ರಮದ ಕುರಿತು, ಪ್ರತಿ ಹಂತಗಳಲ್ಲಿ ಹುಳುಗಳ ಬೆಳವಣಿಗೆ ಸಮಗ್ರವಾದ ವಿವರಗಳನ್ನು ಶರಣಪ್ಪ ರಾಜೂರ ಅವರ ಹೊಲದಲ್ಲಿ ಕಂಡು, ಕೇಳಿದ ವಿಧ್ಯಾರ್ಥಿಗಳು ತಮ್ಮ ಮನೆಯ ಪರಿಸರದಲ್ಲಿ , ತಮ್ಮ ಹೊಲದಲ್ಲಿ  ಪಾಲಕರು ಅನುಸರಿಸಿದ ಕ್ರಮಗಳ ಕುರಿತು ಹಂಚಿಕೊಂಡಾಗ ಮಕ್ಕಳ ಕಲಿಕೆಯಲ್ಲಿ ನಾವು ಕೆಳಮಟ್ಟದಲ್ಲಿ ನೋಡುವ ಜನರನ್ನು ಇತ್ತ ಗಮನಹರಿಸುವಂತೆ ಮಾಡಬೇಕಾಗಿದೆ.