ಗುರುವಾರ, ಡಿಸೆಂಬರ್ 31, 2015

ಬುಧವಾರ, ಡಿಸೆಂಬರ್ 30, 2015

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಗಾರ

ಕಳೆದ ಡಿಸೆಂಬರ್ ೨೮ ರಂದು ಹತ್ತಿರದ ತುಗ್ಗಲಡೋಣಿ ಪ್ರೌಢಶಾಲೆಯಲ್ಲಿ ಒಂದು ದಿನದ ವಿಶೇಷ ಕಾರ್ಯಗಾರ ಆಯೋಜಿಸಲಾಗಿತ್ತು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಗೊಂದಲವಾಗದಂತೆ ಮಾರ್ಗದರ್ಶನ ನೀಡಿದರು.




ಭಾನುವಾರ, ಡಿಸೆಂಬರ್ 20, 2015

English Workshop





ಗುರುವಾರ, ಡಿಸೆಂಬರ್ 17, 2015

ಶನಿವಾರ, ಡಿಸೆಂಬರ್ 12, 2015

ಶನಿವಾರ, ಡಿಸೆಂಬರ್ 5, 2015

ಕನಕದಾಸರು

ಕನಕದಾಸರು ಸಾಕಷ್ಟು ಕೀತ್ರಣೆಗಳನ್ನು ಬರೆದಿದ್ದಾರೆ ಆದರೆ ಅವು ಜನರಿಗೆತಿಳಿದಿಲ್ಲ ಜನರಿಗೆತಿಳಿಯ ಬೇಕಾದರೆ ಯಾವುದಾದರು ಕಾಯ್ರಕ್ರಮದಲ್ಲಿ ಅಥವಾ ಪ್ರವಚನದಲ್ಲಿ ಈ ಕನಕದಾಸರ ಕೀತ್ರಣೆಗಳನ್ನು,ಚರಿತ್ರೆಯನ್ನು ಮತ್ತು ಹಾಡುಗಳನ್ನು ಇದರಮೂಲಕ ತಿಳಿಸಬಹುದು


ಗುರುವಾರ, ಡಿಸೆಂಬರ್ 3, 2015

ನನ್ನ ತಮ್ಮ ಕನಕಪ್ರಸಾದ್ ನಾಳೆಯಿಂದ ಬ್ಲಾಗ್ ಗೆ ಬರಹಗಳನ್ನು ದಾಖಲಿಸುತ್ತಾನೆ.

ಆನಂದ ಡೊಳ್ಳಿನ

ಬುಧವಾರ, ಡಿಸೆಂಬರ್ 2, 2015

Facebook ನಲ್ಲಿ 500 ಗಡಿ ದಾಟಿದ ನಮ್ಮ ಹೆಜ್ಜೆಗಳು ಪೇಜ್


ಹೆಜ್ಜೆಗಳು ಬ್ಲಾಗ್ ನಂತರ ಫೇಸ್ ಬುಕ್ ನಲ್ಲಿ ಹೆಜ್ಜೆಗಳು ಪೇಜ್ ಅನ್ನು ರಚಿಸಿ, ನಮ್ಮ ಸಾಕಷ್ಟು ಚಟುವಟಿಕೆಗಳನ್ನು ನಿರಂತರವಾಗಿ ದಾಖಲಿಸುತ್ತಾ ಬಂದಿದ್ದೇವೆ.  ಲೈಕಿಸಿದವರ ಸಂಖ್ಯೆ ಈಗ 500 ರ ಗಡಿ ದಾಟಿದ್ದು ನಮ್ಮ ಕಾರ್ಯ ಚಟುವಟಿಕೆಗೆ ಸಾಕಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಎಲ್ಲರಿಗೂ ಅಭಿನಂದಿಸುತ್ತಾ, ನಮ್ಮ ಚಟುವಟಿಕೆಗಳನ್ನು ಇನ್ನಷ್ಟು ಉತ್ತಮಗೊಳಿಸಲು ಸಲಹೆ - ಸೂಚನೆಗಳನ್ನು ನೀಡಿರೆಂದು ಬಯಸುವ


ನಿಮ್ಮಯ
ಗುರುರಾಜ್

ಶುಕ್ರವಾರ, ನವೆಂಬರ್ 20, 2015

ಹಾಂಕಾಂಗ್ ನಿಂದ ಆಗಮಿಸಿದ್ದ ಸುಸಾನ್ ಚುಂಗ್ ಅವರೊಂದಿಗೆ






ಚೀನಾ ರಾಷ್ಟ್ರದ ಹಾಂಕಾಂಗ್ ನಿಂದ ಆಗಮಿಸಿದ್ದ ಸುಸಾನ್ ಚುಂಗ್ ಅವರೊಂದಿಗೆ ನನ್ನ ಕಾರ್ಯ ಚಟುವಟಿಕೆಗಳನ್ನು ಹಂಚಿಕೊಳ್ಲುತ್ತಿರುವುದು. aaa ( Asia art archive ) ಸಂಸ್ಥೆಯ ಮುಖ್ಯಸ್ಥರಾಗಿರುವ ಇವರು ರಾಜ್ಯದ ಬೆಂಗಳೂರು ನಗರಕ್ಕೆ ಆಗಮಿಸಿದ್ದಾಗ, ನಮ್ಮ ಶಾಲೆಯ ಚಟುವಟಿಕೆಗಳನ್ನು ಹಂಚಿಕೊಳ್ಳಲು ನನಗೆ ಅವಕಾಶ ಮಾಡಿಕೊಟ್ಟಿದ್ದ ಐ.ಎಫ್.ಎ ಸಂಸ್ಥೆ ಹಾಗೂ ಕೃಷ್ಣ ಅವರಿಗೆ ನಾನು ವಂದಿಸುತ್ತೇನೆ.

ಮಂಗಳವಾರ, ನವೆಂಬರ್ 10, 2015

ಸೋಮವಾರ, ನವೆಂಬರ್ 9, 2015

Kala Utsava 2015-16 ಕಲಾ ಉತ್ಸವ ೨೦೧೫ - ೧೬


Kala Utsava 2015 - 16 ಕಲಾ ಉತ್ಸವದ ತಯಾರಿ ಕಂಡರೇ ಅಶ್ಚರ್ಯವಾಗುತ್ತದೆ. ನಮ್ಮ ವ್ಯವಸ್ಥಾಪಕರ, ಅವರ ಗೊಂದಲಗಳಲ್ಲಿ ನಾವು ಕಳೆದುಹೋಗಿದ್ದೇ ಭಿನ್ನ ಸಂಕಟಕ್ಕೆ ಕಾರಣ, ಕಾರಣೀಭೂತವಾಗಿತ್ತು. ಅಕ್ಟೋಬರ್ ೧೫ ಎಂದು ದಿನಾಂಕವನ್ನು ತಿಳಿಸಿದ್ದರು. ಆದರೆ, ಅದು ಕಾರಣಾಂತರದಿಂದ ಬದಲಾಗಿ ಶಾಲೆ ಪ್ರಾರಂಭವಾದ ಮರುದಿನಕ್ಕೆ ಬಿತ್ತು. ಅಂತೂ ಇಂತೂ ಕೈಲಾದ ಮಟ್ಟಿಗೆ ನಮ್ಮ ತಂಡದೊಂದಿಗೆ  ನಾವು ಬೆಂಗಳೂರು ಕಡೇ ಮುಖ ಮಾಡಿದೆವು.




ಭಾನುವಾರ, ನವೆಂಬರ್ 8, 2015

ಕಲಾ ಉತ್ಸವ ೨೦೧೫-೧೬





ಸೋಮವಾರ, ನವೆಂಬರ್ 2, 2015

KALA UTSAVA

" ಕಲಾ ಉತ್ಸವ " 



ಕಳೆದ ದಿನಾಂಕ ೩೦ ನೇ ಅಕ್ಟೋಬರ್ ರಂದು ಕೊಪ್ಪಳದಲ್ಲಿ ನಡೆದ ಕಲಾ ಉತ್ಸವದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆ ಅಯ್ಕೆಯಾದ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪತ್ರಿಕೆ ಅಭಿನಂದನೆಯನ್ನು ತಿಳಿಸುತ್ತೇವೆ. 

ಗುರುವಾರ, ಅಕ್ಟೋಬರ್ 22, 2015

ಮಂಗಳವಾರ, ಸೆಪ್ಟೆಂಬರ್ 15, 2015

ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ

             

ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮ ದಿನವಾದ ಇಂದು ಜಿಲ್ಲೆಯ ಸ.ಹಿ.ಪ್ರಾ.ಶಾಲೆ, ರೈಲ್ವೆ ನಿಲ್ದಾಣ, ಕೊಪ್ಪಳ ಇಲ್ಲಿ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯ ವತಿಯಿಂದ ನಡೆದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸ್ಥಳೀಯ ಜಹಗೀರ ಗುಡದೂರ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಗಳಿಸಿ, ವಿಭಾಗ ಮಟ್ಟಕ್ಕೆ ಆಯ್ಕೆ ಹೊಂದಿದ್ದಾರೆ. ತಾಲೂಕಿನಿಂದ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿ ಆಯ್ಕೆಗೊಂಡ ನಾಟಕಗಳನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗಿತ್ತು. ನಾಲ್ಕು ತಾಲೂಕುಗಳಿಂದ ಒಟ್ಟು ಏಂಟು ತಂಡಗಳು ಇಂದು ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಉತ್ತಮ ನಟಿ ಗ್ಯಾನವ್ವ, ಮೊ.ವ.ನಿ.ಶಾಲೆ, ಕಾಟಪುರ ವಿದ್ಯಾರ್ಥಿನಿ ಪಡೆದರೆ, ಉತ್ತಮ ನಟ ಪ್ರಶಸ್ತಿಯನ್ನು ಲಕ್ಷ್ಮಣ ಗೊಲ್ಲರ, ಸ.ಪ್ರೌ.ಶಾಲೆ, ಜಹಗೀರಗುಡದೂರ ವಿದ್ಯಾರ್ಥಿ ಪಡೆದನು. ರಚನೆ, ನಿರ್ದೇಶನ ಈ ಎರಡು ಪ್ರಶಿಸ್ತಿಗಳನ್ನು ಶಿಕ್ಷಕರಾದ ಶ್ರೀ ಗುರುರಾಜ್ ಅವರು ಪಡೆದರು. ದ್ವಿತೀಯ ಬಹುಮಾನವನ್ನು ಮೊರಾರ್ಜಿ ಶಾಲೆ ಕಾಟಪುರ ಪಡೆದುಕೊಂಡಿದೆ.

ಮಂಗಳವಾರ, ಸೆಪ್ಟೆಂಬರ್ 1, 2015

ಪತ್ತಾರ ಮಾಸ್ತರರ ಬುತ್ತಿಯಿಂದ....


ಸುಮಾರು ೧೯೭೮ ರ ಕಥೆ. 

( ಅವಧಿಯಲ್ಲಿ  ಪ್ರಕಟಗೊಂಡಿದ್ದು )
ಶಿಕ್ಷಕರ ದಿನಾಚರಣೆ ಅಂಗವಾಗಿ ನನ್ನೊಂದಿಗೆ ಕಾರ್ಯ ನಿರ್ವಹಿಸುತ್ತಿರುವ, ನಿವೃತ್ತಿಯ ಅಂಚಿನಲ್ಲಿರುವ ದತ್ತಾತ್ರೇಯ ಶಾಮರಾವ್ ಪತ್ತಾರ್ ಗುರುಗಳು ನಾನು ಹುಟ್ಟುವ ಮುಂಚೆ ಪಾಠ ಮಾಡಲು ತೊಡಗಿಕೊಂಡವರು. ಅವರ ಒಂದೊಂದು ಅನುಭವಗಳನ್ನು ಕೇಳುತ್ತಾ ಇದ್ದರೆ ಕಾಣದ ಒಂದು ಪ್ರಪಂಚವೇ ಗೋಚರಿಸುತ್ತದೆ. ಕುಷ್ಟಗಿ ತಾಲೂಕಿನ ಪ್ರೌಢಶಾಲೆಯಲ್ಲಿ ತಮ್ಮ ಕೊನೆಯ ವರ್ಷದ ಸೇವೆಯಲ್ಲಿ ಅವರ್ ಮಾತುಗಳಲ್ಲಿಯೇ ಅವರನ್ನು ಕಾಣತೊಡಗಿದ್ದೇನೆ. ಶಿಕ್ಷಕನಿಗೊಂದು ಸಲಾಮು ಹೇಳುತ್ತಾ, ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭವನ್ನು ಕೋರುತ್ತೇನೆ.]
 
 4
ಒಂದು ದಿನ ಬೆಳಿಗ್ಗೆ ತೆಂತಂಡಿಗೆ ಅಂತ ನಾನು ಹೊರಟಿದ್ದೆ. ಅಲ್ಲೇ ಧಣೇರು ಒಂದು ನಾಯಿ ಕುನ್ನಿ ಹಿಡಕೊಂಡು ಮತ್ತೇ ರಾಜಸಾಬನ ಜೊತೆ ಹಂಗೇ ಅತ್ಲ ಕಡೇ ಬಂದ್ರೂ. ಅವರ ಕಂಪೋಂಡಿನ ಹತ್ತಿಲೇ ಹೋಗುತಿದ್ದ ನನ್ನ ನೋಡಿ, ರಾಜಸಾಬನಿಗೆ ” ಅಂವಾ ಮಾಸ್ತರಾಲ್ಲೇನು ? ” ಅಂತ ಅಂದ ಅದು ನನ್ ಕಿವಿಗೆ ಬಿದ್ದಿದ್ದೇ ನಾನು ” ಹೌದ್ರಿ ನಾನಾ ಮಾಸ್ತರ್, ದತ್ತಾತ್ರೇಯ ಮಾಸ್ತರಾ ” ಅಂತ ಅಲ್ಲೇ ಕೆಳಗೆ ಚರಗೀ ಇಟ್ಟು ನೆಲಕ್ಕೆ ಸಣ ಮಾಡ್ದೆ.
” ಹೇ ಮಾಸ್ತಾರ, ನೀ ಎಲ್ಲಿದಿಯಪ್ಪ….” ಅಂತ ಕೇಳಿದರು.
“ಇಲ್ಲರೀ ದಣೇರಾ, ಇಲ್ಲೇ ಪೋಸ್ಟ್ ಚನ್ನಯ್ಯನ್ ಮನೇಗಾ ಬಾಡಿಗಿ ಐದೀನ್ ರೀ…” ಅಂತಂದೆ..
” ಯಾಕಾ….? ನಾವಲ್ಲಿ ಸಾಲು ಹಿಡಿದು ಮಎ ಕಟ್ಟಿಸಿವಲ್ಲಾ, ನಮ್ಮ ದರ್ಬಾರ ಮುಂದೆ ಯಾರಿಗೆ ಕಟ್ಟಿಸಿವಿ ಅನ್ಕೋಂಡಿ ಅದು. ನೌಕರದಾರರಿಗೆ ಕಟಿಸಿದ್ದಪ್ಪ, ಅಲ್ಲಿರಬೇಕು.”
” ಆಯ್ತು ದಣೇರ. ದಣೇರಾ….. ಅಲ್ಲಿ ನೀರು ಪಾರು ಅನುಕೂಲ ಐತಿರೀ… ಸಾಲೀನು ಸನೇವು ಅಕ್ಕೇತಿ, ನಾನು ಒಬ್ನೇ ಬೇರೆ ಇರ್ತೀನಿ ಅದ್ಕ…… ಅಲ್ಲೇ……  ಚನ್ನಯ್ಯನ ಮನೇಗಾ ಇರ್ತೀನಿ ರೀ ” ಅಂದೆ
” ಏ ಇಲ್ಲ, ಇಲ್ಲ. ನಾನು ಅದನೆಲ್ಲ ಕೇಳೋದಿಲ್ಲ. ಸಿದಾ ಬಂದು ನಾವು ಕಟ್ಟಿಸಿದ್ದ ಮನೇಗಾ ಇರಬೇಕು.ಮತ್ತಾ ಯಾರಿಗೀ ಕಟ್ಟಿಸಿವಿ ಅದನ್ನ”
“ಅಯ್ತು ರೀ” ಅಂತಂದು ಅಲ್ಲಿಂದ ಹೊರಟೇ.
ಎರಡು ದಿನಗಳಾವರೆಗೆ ಅತ್ತ ಹೋಗೋದು ಬಿಟ್ಟೆ. ಮರೀತಾರೇನು ಅಂತ. ಶಾಲೆಗೆ ಇದ್ದ ಗಳಿಗೆಯಲಿ ಒಬ್ಬ ಆಳನ್ನ ಹೇಳಿ ಕಳುಹಿಸಿದರು.
” ಹಿಂಗರೀ ದಣೇರು ಕರಿಯಾಕುಂತಾರ ” ಅಂತ ಅಂದ ಬಂದ ಆಳು.
“ಇಲ್ಲಾಪ ನಾನು ಸಾಲೀ ಬಿಟ್ಟ ಮ್ಯಾಲೇ ಬರ್ತೀನಿ ಅಂತ ಹೇಳು ” ಅಂತಂದೆ
ಆಳು ” ಇಲ್ರೀ ಈಗಲೇ ಬರಬೇಕಂತೆ ” ಅಂತಂದ. ನಾನು ನೇರ ಹೆಡ್ ಮಾಸ್ತರರ ಬಳಿ ಹೋಗಿ ಕೇಳಿದೆ. ಅವರು ತಕ್ಷಣನೇ
” ಹೋಗು ತಡಮಾಡದೇ ಹೋಗಿ ಕಂಡು ಬಾ… ಹೋಗೂ ” ಅಂದ್ರು ನಾನು ಸೀದಾ ಆಳುವಿನ ಜೊತೆ ಹೊರಟೆ.
” ಯಾಕಪ ಮಾಸ್ತರ ಮೊನ್ನೆ ಹೇಳಿದ್ದು ಕಿವ್ಯಾಗ ಬೀಳಲಿಲ್ಲ ಏನು ನಿನಗಾ “
” ಇಲ್ಲರೀ ದಣೇರಾ… ಬರ್ತೀನಿ ರೀ..”
” ಎಂದು ಬರಾವ ನೀನು “
” ನಾಳೆ ಬರ್ತೀನಿ ರೀ “
” ಮಾಸ್ತರಾ… ಬಾಡಿಗೀ ಏಟು ಗೊತ್ತೈತೇನು ? ಅದ್ಕ ಎಲ್ಲ ಸೇರಿ ಎಂಟ್ರೂಪೈ ನೋಡು ಏಂಟ್ರೂಪೈ. ” ಅಂದ್ರು.
ನಾನು ” ಆಯ್ತ ರೀ  ದಣೇರಾ  ಅಂದೆ. “
” ನೋಡಾಪಾ ಮಾಸ್ತರಾ ಅದರಲ್ಲಿ ಲೈಟು-ಗೀಟೂ ಎಲ್ಲಾ ಬಂತೂ.  ಏನಾದ್ರೂ ಬೇಕಾದ್ರೆ ಕೇಳು. ಇಲ್ಲೇ ನಮ್ಮ ಹುಡುಗ್ರು ಇರ್ತಾವೇ..  ಮೊಸರು- ಪಸರು, ಮಜ್ಜಿಗಿ-ಪಜ್ಜಿಗಿ  ಯಾವುದಕ್ಕೂ ಸಂಕೋಚ ಪಡದೇ ಕೇಳು” ಅಂತಂದ್ರು.
ನನ್ನ ಜೊತೆ ಇದ್ದ ಒಂದು ಟ್ರಂಕ್,  ಚಾಪೆ, ಕೊಡಪಾನದ ಸಮೇತ ಬಂದು ದಣೇರು ಹೇಳಿದ್ದ ಕೊಣೆಯಲ್ಲಿ ವಾಸವಾದೆ.
ಇದು ನಾನು ೧೯೭೮ ರಲ್ಲಿ ನೌಕರಿಗೆ ಸೇರಿದಾಗ ಆದದ್ದು. ರಾಯಚೂರಿನ ಸಣ್ಣ ಹಳ್ಳಿಯಲ್ಲಿ ಯಾವುದೇ ಬಸ್ಸು ಸಂಚಾರವಿರದ ಜಾಗಕ್ಕೆ ನನ್ನ ನೇಮಕವಾಗಿತ್ತು. ಬಸ್ಸಿನ ಜಾಡು, ಊರಿಗೂ ಸರಿ ಸುಮಾರು ೪ ರಿಂದ ೫ ಕಿ.ಮೀ ನಡುಗೆಯಲ್ಲಿ ಸಾಗಬೇಕಿತ್ತು.

ಬುಧವಾರ, ಜುಲೈ 29, 2015

ಸಲಾಮ್ ಅಬ್ದುಲ್ ಕಲಾಂ


ನಮ್ಮೂರಿಗೇನು ಕಲಾಂ ಅವರು ಬರಲಿಲ್ಲ. ಆದರೆ ನಮ್ಮವರೇ ಆಗಿದ್ದರು ಕಲಾಂ ಅವರು.  ವಿದ್ಯಾರ್ಥಿಗಳ ಮನದಲ್ಲಿ ಬೇರೂರಿದ್ದಾರೆ. ಹೊಸತನಕ್ಕೆ ಹಾತೋರೆಯುವ ಈ ಹೊಸ ಕುಡಿಗಳು ಕಂಡಾಗ ಏನೆಲ್ಲ ಅವಕಾಶಗಳನ್ನು ಕಲ್ಪಿಸಿಕೊಡ ಬೇಕೆಂದು ನನ್ನ ಮನ ತುಡಿಯುತ್ತದೆ. ಕಲಾಂ ಅವರಿಗೊಂದು ಸಲಾಮ್ ಮಾಡುತ್ತಾ, ಮಕ್ಕಳಿಗಾಗಿಯೇ ಮತ್ತಷ್ಟು ಕೊಟ್ಟುಕೊಳ್ಳೋಣ. ಕಲಾಂ ಅವರಂತೆ. ಹೊಸ ಭವಿಷ್ಯಕ್ಕೆ ಹೊಸ ಹಾದಿಯನ್ನು ಸರಿಯಾಗಿಡೋಣ.

ಮಂಗಳವಾರ, ಜುಲೈ 21, 2015

ವಿಜ್ಞಾನ ನಾಟಕದ ತಯಾರಿಯಲ್ಲಿ ನಮ್ಮ ವಿದ್ಯಾರ್ಥಿಗಳು

ಆಗಷ್ಟ ೧೧, ೨೦೧೫ ರಂದು ನಮ್ಮ ಪ್ರೌಢಶಾಲೆಯಲ್ಲಿ ತಾಲುಕು ಮಟ್ಟದ ವಿಜ್ಞಾನ ನಾಟಕ ಸ್ಪರ್ದೆ ಇದೆ. ಅದಕ್ಕಾಗಿ ತಾಲಿಂ ಪ್ರಾರಂಭವಾಗಿದೆ. (ಪೋಟೋ ಹಿಂದಿನದು)




೨೦೧೫-೧೬ ನೇ ಸಾಲಿನ ಹನಮನಾಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಸರ್ವರಿಗೂ ಸ್ವಾಗತ.

ಬುಧವಾರ, ಜುಲೈ 15, 2015

ಒಂದು ಹಣತೆ : ಒಂದು ಸಣ್ಣ ಕಥೆ!

Girish T P

ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.

ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.


ಇದನ್ನು ಕೇಳಿದ ಬತ್ತಿ ” Hello! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ logically ಬೆಳಕು ನನ್ನದು “ಎಂದಿತು.


ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು.


ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಹೊಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !

-------------------------
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು. ” ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ ”

ಆ ಭರವಸೆಯ ಬೆಳಕು ನಿಮ್ಮದಾಗಲಿ


ಮಂಗಳವಾರ, ಜೂನ್ 16, 2015

POST CARD


ಭಾನುವಾರ, ಮೇ 17, 2015

ನಮ್ಮ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಶಶಿಧರ ಬಾದವಾಡಗಿ

ಶಶಿಧರ ಬಾದವಾಡಗಿ 
೨೦೧೪ - ೧೫ ನೇ ಸಾಲಿನ  ವರ್ಷ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ತೆಗೆದುಕೊಂಡು ( ಶೇ  87 % ) ಮೊದಲಿಗನಾಗಿದ್ದಾನೆ. ಶಶಿಧರ ಬಾದವಾಡಗಿ ವಿಧ್ಯಾರ್ಥಿಗೆ ಅಭಿನಂದನೆಗಳು. 

ಬುಧವಾರ, ಏಪ್ರಿಲ್ 29, 2015

ನಿನಗೆ ನೀನೇ !