ಗುರುವಾರ, ಡಿಸೆಂಬರ್ 27, 2012

ಶೈಕ್ಷಣಿಕ ಪ್ರವಾಸ


ಬನವಾಸಿ 
ಶಿರಸಿ 
ಇಡಗುಂಜಿ 
ಜೋಗ್ 
ಮುರ್ಡೆಶ್ವರ 
ಮರವಂತಿ 
ಮಲ್ಪೆ 
ಉಡುಪಿ 
ಮಣಿಪಾಲ 
ಶೃಂಗೇರಿ 

ದಿನಾಂಕ : ಡಿಸೆಂಬರ್ ೨೧ ರ ರಾತ್ರಿ ೧೦.೩೦ ಕ್ಕೆ ಹೊರಟು ಡಿಸೆಂಬರ್ ೨೪ ರ ಮುಂಜಾನೆ ಶಾಲೆಗೆ ಮರಳಿದ್ದು.




ರಾಘವೇಂದ್ರ ಟಿ.ವಿಶ್ವಕರ್ಮ  ಗಣಿತ ಗೌರವ ಶಿಕ್ಷಕರು 

                  ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಹಗೀರ ಗುಡದೂರ ಹೊರ ವಲಯದಲ್ಲಿ ಶಾಂತ ದೇಗುಲದಂತಿರುವ ಸರಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ ನಾನು ಕೂಡ ಶೈಕ್ಷಣಿಕ ಪ್ರವಾಸದಲ್ಲಿ ಭಾಗಿಯಾಗಿದ್ದೆ.

                      ಮುದುಡಿದ ಮನಸಿಗೆ ಅರಳುವ ಪರಿಸರದ ಆ ಎರಡು ದಿನದ ಪ್ರವಾಸ ತುಂಭಾ ಚೆನ್ನಾಗಿತ್ತು.ಮಕ್ಕಳೊಡನೆ ಮಕ್ಕಳಾಗಿ ಸಂತೋಷದಿಂದ  ಶಿಕ್ಷಕರು ಅಲ್ಲಿ ಭಾಗಿಯಾಗಿದ್ದೇವು. ಪ್ರತಿದಿನ ಶಾಲಾ ವಾತವರಣದಿಂದ ಬೇಸತ್ತ ಮಕ್ಕಳು ಆ ಎರಡು ದಿನದ ಹೊಸ ಪ್ರಪಂಚಕ್ಕೆ ಸಾಕ್ಷಿಯಾದರು.

                       ನಮ್ಮ ಪ್ರವಾಸಕ್ಕೆ ಒಟ್ಟು ಎರಡು ಬಸ್ಸುಗಳಿದ್ದವು. ಒಂದು ದೊಡ್ಡ ಬಸ್ಸು ಮತ್ತೊಂದು ಮಿನಿ ಬಸ್ಸು ಒಳ್ಳೆಯ ಡ್ರೈವರ್ ಗಳಲ್ಲದೆ ಅಡುಗೆ ಭಟ್ಟರ ಅದರ ಸಂಗಡ ಇದ್ದರು.ಮಕ್ಕಳಿಗೂ ಮತ್ತು ಶಿಕ್ಷಕರಿಗೂ ಹೊಂದುವ ರೀತಿಯಲ್ಲಿ ಆ ಎರಡು ಬಸ್ಸುಗಳು ಮದುವೆ ದಿಬ್ಬಣದಂತೆ ರೆಡಿ ಆಗಿದ್ದವು. ನಾವೆಲ್ಲರೂ ಸರಿಯಾದ ಸಮಯಕ್ಕೆ ನಮ್ಮೆಲ್ಲ ಲಗೇಜುಗಳನ್ನು ಹಿಡಿದು ಜೊತೆಗೆಂದು ಕ್ಯಾಮರ ತೆಗೆದುಕೊಂಡು ರಾತ್ರಿ ಪೂಜೆಯೊಂದಿಗೆ ದೇವರ ನೆನೆದು ಹೊರಟೆವು. ಮುಂಜಾನೆ ಚುಮು-ಚುಮು ಬೆಳಕು ಬೀಳುವ ಮುನ್ನ ಕದಂಬರ ನಾಡು ಬನವಾಸಿ ತಲುಪಿದೆವು. ಮುಂಜಾನೆ ಕಾರ್ಯಗಳನ್ನು ಮುಗಿಸಿ ಕೊಂಡು ದೇವಾಲಯವನ್ನು ಅಲ್ಲಿರುವ ಅರ್ಚಕರೊಬ್ಬರ ಮಾಹಿತಿಯಿಂದ ಅದರ ಹಿನ್ನಲೆಯನ್ನು ಅರಿತುಕೊಂಡು ಚೆನ್ನಾಗಿ ನೋಡತೊಡಗಿದೆವು.


                          ಅಲ್ಲಿಯ ಒಂದು ವಿಷೇಷವೆಂದರೇ ನಂದೀಶ. ಅಕ್ಕ-ಪಕ್ಕದಲ್ಲಿರುವ ಪಾರ್ವತಿ ಪರಮೇಶ್ವರರ ಗುಡಿಗಳನ್ನು ಆ ನಂದಿ ಒಂದು ಕಣ್ಣಿಂದ ಪರಮೇಶ್ವರ ಮೂರ್ತಿಯನ್ನು ಮತ್ತೊಂದು ಕಣ್ಣಿಂದ ಪಾರ್ವತಿ ವಿಗ್ರಹವನ್ನು ನೋಡುವ ಕೆತ್ತನೆ ತುಂಬಾ ಅಚ್ಚರಿ ಮೂಡಿಸಿತು. ಜೊತೆಗೊಂದಿಷ್ಟು ಪೋಟೋಗಳನ್ನು ತೆಗೆಸಿಕೊಂಡು ಟಿಫಿನ್ ಸಮಯಕ್ಕೆ ಬಿಟ್ಟರು. ಬಿಸಿ-ಬಿಸಿ ಉಪ್ಪಿಟ್ಟು ಮಾಡಿದ್ದರು ಎಲ್ಲರೂ ಟಿಫಿನ್ ಮುಗಿಸಿ ಮುಂದಿನ ಪಯಣಕ್ಕೆ ಅಣಿ ಆದೆವು. ನಂತರ ನಾವು ಅಲ್ಲಿಂದ ಶಿರಸಿ ಮಾರಿಕಾಂಬಕ್ಕೆ ತೆರಳಿದೆವು. 



                              ಸಾಲು ಸಾಲಾಗಿ ರೋಡು ದಾಟಿ ದೇವಾಲಯ ತಲುಪಿ ದರುಶನ ಪಡೆದೆವು. ಅಲ್ಲಿ ಕೂಡ ಒಂದು ವಿಶೇಷವಿತ್ತು. ಅದೇನೆಂದರೆ ಆ ದೇವಾಲಯದಲ್ಲಿ  ಎರಡು ಕೋಣಗಳನ್ನು ಸಾಕಿದ್ದರು. ಅಲ್ಲದೆ ಅವು ಸಕತ್ತಾಗಿ ತಿಂದು ಚೆನ್ನಾಗಿ ಕೊಬ್ಬಿದವು. ಅಂತು ಅಲ್ಲಿ ಸ್ವಲ್ಪ ಪೋಟೋ ಕಲೆಕ್ಟ್ ಮಾಡಿ ಅಲ್ಲಿಂದ ನಮ್ಮ ಪಯಣ ಜೋಗಕ್ಕೆ ಸಾಗಿತು. ಮಧ್ಯಾಹ್ನದ ಹೊತ್ತಿಗೆ ಜೋಗಕ್ಕೆ ತಲುಪಿದೆವು. ಪ್ರಕೃತಿಯ ಬಯಲಲ್ಲಿ ಅಚ್ಚರಿ ಮೂಡಿಸುವ ಹಾಗೆ ನಿಸರ್ಗದ ಮಡಿಲಲ್ಲಿ ನಿರ್ಮಾಣಗೊಂಡಿದ್ದ ಜೋಗವನ್ನು ಕಂಡು ನಮಗೆಲ್ಲರಿಗೂ ನಮ್ಮೂರಿನ ಪರಿವೆ ಮರೆತಿತ್ತು. ಮಕ್ಕಳೊಂದಿಗೆ ನಾವೆಲ್ಲರೂ ಸಾವಿರದ ನಾಲ್ಕು ನೂರು ಮೆಟ್ಟಿಲು ಕೆಳಗಿಳಿದು ಜೋಗದ ಗರ್ಭದಲ್ಲಿ ತುಸು ಹೊತ್ತು ನೆಲಸಿದೆವು. ಎಲ್ಲರಿಗೂ ಮರೆಯಲಾಗದ ಸಮಯವದು ಆ ನಿಸರ್ಗದ ಮಡಿಲಲ್ಲಿ ಕೆಲವಿಷ್ಟು ಪೋಟೋ ಸೆರೆ ಹಿಡಿದೆವು. ನಂತರ ಆ ಮೆಟ್ಟಿಲುಗಳನ್ನು ಏರಲು ನಾವೆಲ್ಲರೂ ಹರಸಾಸವನ್ನೇ ಮಾಡಬೇಕಾಯಿತು. ಅಂತು ಉಸ್ಸಪ್ಪ ಅಂತ ಏರಿದೆವು. ಅಷ್ಟರಲ್ಲಿ ನಮ್ಮ ಬಸ್ಸುಗಳು ಕಾಲುವೆಯೊಂದರ ಪಕ್ಕ ವಿಶ್ರಾಂತಿ ಪಡೆಯುತ್ತಿದ್ದವು. ಜೊತೆಗೆ ಭಟ್ಟರ ಕಾಯಕವು ನಡೆದಿತ್ತು. ನಾವೆಲ್ಲರೂ ನಿಸರ್ಗದ ಮಡಿಲಲ್ಲಿ ಕಾಲುವೆಯ ಪಕ್ಕ ಕೂತು ಸ್ನಾನ ಮಾಡಿದೆವು. ಭಟ್ಟರು ತಯಾರಿಸಿದ ಭೋಜನವನ್ನು ಹೊಟ್ಟೆ ತುಂಬಾ ಜಡಿದು ತುಸು ಹೊತ್ತು ಕಳೆದು ಪುನಃ  ನಮ್ಮ ಪಯಣ ಪ್ರಾರಂಭವಾಯಿತು.








ನಮ್ಮ ಮುಂದಿನ ಪಯಣ ಇಡಗುಂಜಿ ಗಣಪ ಅಲ್ಲಿಗೆ ತೆರಳಿ ದರ್ಶನ ಪಡೆದು ತಡ ಮಾಡದೇ ಮುರ್ಡೆಶ್ವರ ಕ್ಕೆ ತೆರಳಲು ಆತುರದಲ್ಲಿದ್ದೇವು. ಕಾರಣ ಅಲ್ಲಿಯ ಸೂರ್ಯಸ್ತ ವೀಕ್ಷಿಸಲು. 







ನಾವು ಮುರ್ಡೆಶ್ವರ ಮುಟ್ಟುವ ಹೊತ್ತಿಗೆ ಸೂರ್ಯಸ್ತ ಸ್ವಲ್ಪ ಭಾಗ ಉಳಿದಿತ್ತು ತುಂಬಾ ಬೇಸರಗೊಂಡು ಚಡಪಡಿಸುತ್ತಾ ಬೀಚ್ ಗೆ ಬಂದೇವು. ಅಲ್ಲಿ ಬೋಟಿನ ಸಾಹಸ ನೋಡುತ್ತಾ ನೀರಿನ ಅಲೆಗಳಿಗೆ ಕಾಲೊಡ್ಡಿ ಸುಂದರ ರಾತ್ರಿಯನ್ನು ಬರಮಾಡಿಕೊಂಡೆವು. ಕತ್ತಲು ಆವರಿಸುತ್ತಿದ್ದಂತೆ ವಿಶ್ರಾಂತಿ ನಿಲಯವೊಂದನ್ನು ತಲುಪಿ ಸ್ವಲ್ಪ ಫ್ರೆಶ್  ಆಗಿ ಹೊಟ್ಟೆ ತುಂಬಾ ಭಟ್ಟರ ಅಡುಗೆಯುಂಡು ಕಣ್ಣು ತುಂಬಾ ನಿದ್ರಿಸಲು ರೆಡಿಯಾದೆವು. ಎಲ್ಲರೂ ನೆಲ ಸಿಕ್ಕರೆ ಸಾಕಪ್ಪ ಅಂತ ಹೇಳಿ ಮಲಗಿ ಬಿಟ್ಟೆವು. ತಾಸಿನಲ್ಲಿ  ಸ್ಮಶಾನ ಮೌನ. ಎಲ್ಲರು ಸತ್ತ ಹೆಣದಂತೆ ಬಿದ್ದೆವು. ಕಾರಣ ಮುಂಜಾನೆ ೪ ಕ್ಕೆ ಏಳಬೇಕಾಗಿತ್ತು. 






ಮಂಗಳವಾರ, ಡಿಸೆಂಬರ್ 25, 2012

ಶುಕ್ರವಾರ, ಡಿಸೆಂಬರ್ 14, 2012

ಪತ್ರಿಕಾ ವರದಿಗಳು


ವಿಜಯವಾಣಿ 

ಪ್ರಜಾವಾಣಿ 

ಸಂಯುಕ್ತ ಕರ್ನಾಟಕ 

ಮಕ್ಕಳ ಹೆಜ್ಜೆಗಳು ಉದ್ಘಾಟನಾ ಕಾರ್ಯಕ್ರಮ



 ಹೆಜ್ಜೆಕುಣಿತ

 ಅನುಪಮಾ ಪ್ರಕಾಶ ಅವರಿಂದ ದೀಪ ಬೆಳಗುವಿಸುವಿಕೆ 

 ಎಸ.ಡಿ.ಎಂ.ಸಿ ಅಧ್ಯಕ್ಷರಿಂದ ಅವರಿಂದ ದೀಪ ಬೆಳಗುವಿಸುವಿಕೆ  

 ಯೋಜನೆಯ ನಿರ್ದೇಶಕರಿಂದ ಪ್ರಾಸ್ತಾವಿಕ ನುಡಿ 

ವೇದಿಕೆಯಲ್ಲಿ ಅತಿಥಿಗಳು 

ಈರಮ್ಮ/ಪಾರ್ವತಮ್ಮ ಹಾಗೂ ಸಂಗಡಿಗರಿಂದ ಸೋಬಾನೆಯ ಪ್ರಸ್ತುತಿ 

 ಸೋಬಾನೆಯ ಪ್ರಸ್ತುತಿ 

ಯಮನೂರಪ್ಪ ರಿವಾಯಿತ ಪದಗಳು  

 ಮಕ್ಕಳಿಂದ ಕೋಲಾಟ 

  ಮಕ್ಕಳಿಂದ ಜಾನಪದ ನೃತ್ಯ 

ಅನುಪಮಾ ಪ್ರಕಾಶ ಅವರಿಂದ ಯೋಜನೆ ಕುರಿತು ವಿವರಣೆ 

 ಹೆಜ್ಜೆ ಕುಣಿತದ ದೃಶ್ಯ 

 ಗೀಗೀ ಪದ ಅತ್ತರ್ ಸಾಬ್ ಹಾಗೂ ಸಂಗಡಿಗರಿಂದ 

 ಜಗದೀಶ್ ಅವರಿಂದ ವಂದನಾರ್ಪನೆಗಳು 







ಭಾನುವಾರ, ಡಿಸೆಂಬರ್ 9, 2012

ಪುಸ್ತಕ ಜೋಳಿಗೆ

 ರಾಜ್ಯಾದಂತ ತೆಗೆಯಿರಿ ಪುಸ್ತಕ ಹೊರಗೆ ಹಚ್ಚಿರಿ 
 ಜ್ಞಾನದ ದೀವಿಗೆ ಕಾರ್ಯಕ್ರಮದ 
ಕೆಲವು ಛಾಯ ಚಿತ್ರಗಳು.