ಸೋಮವಾರ, ಡಿಸೆಂಬರ್ 31, 2018

ರಂಗ ತಾಲೀಮು ವೀಕ್ಷಣೆ

ಇಂದು ಮುನಿರಾಬಾದ್ ಡಯಟ್ ನಿಂದ ಹಿರಿಯ ಉಪನ್ಯಾಸಕರಾದ ವಿಜಯಕುಮಾರ ಹಾಗೂ ಉಪನ್ಯಾಸಕಿ ಶ್ರೀಮತಿ ವಿಜಯಲಕ್ಷ್ಮಿ ಅವರು ನಮ್ಮ ಮಕ್ಕಳ ರಂಗ ತಾಲೀಮ್  ನೋಡಿದರು. ಶಾಲೆಯ ಅವಧಿಯ  ನಂತರವೂ ನಡೆಯುತ್ತಿರುವ ರಂಗತಾಲೀಮನ ಮಕ್ಕಳನ್ನು ಕಂಡು ತುಂಬಾ ಖುಷಿ ಪಟ್ಟು ನಮ್ಮ ಮಕ್ಕಳಿಗೆ ಬೆನ್ನು ತಟ್ಟಿ  ಮೆಚ್ಚುಗೆಯನ್ನು ಸೂಚಿಸಿ ನಡೆದರು.
 


























ಶಾಲಾ ಶೈಕ್ಷಣಿಕ ಪ್ರವಾಸದ ಮುಂದುವರಿದ ಭಾಗ

ಒಗ್ಗಟ್ಟಿನಲ್ಲಿ ಬಲ ಎಂಬ ಉಕ್ತಿಯಂತೆ ನಮ್ಮ ತಂಡ ಯಶಸ್ವಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿತು.ಮೊದಲನೆ ತಂಡದಲ್ಲಿ ಶ್ರೀ ಈಶಪ್ಪ ಬಿ ತಳವಾರ -ಮುಖ್ಯ ಗುರುಗಳು,ಜಗದೀಶ್ ಬಾಸಿಂಗದ,ಮರಿಯಪ್ಪ ಜರಕುಂಟಿಯವರು ಮೇಲ್ವಿಚಾರಣೆ ವಹಿಸಿದ್ದರು.
ಎರಡನೇ ತಂಡ-ಶಿವಪ್ಪ ಇಲಾಳ, ಸಂಗನಗೌಡ ಪಾಟೀಲ್, ಶ್ರೀದೇವಿ ಗುಳಬಾಳ ಮೇಡಮ್ ಇದ್ದರು.
ಮೂರನೇ ತಂಡ-ನಾನು ಅಂದರೆ ತಿಪ್ಪಣ್ಣ ರಾಮದುರ್ಗ ಮತ್ತು ಪ್ರಶಾಂತ ಕಟ್ಟಿ ಯವರಿದ್ದರು.
ಈ ರೀತಿಯಲ್ಲಿ  ಮೂರು ವಾಹನಗಳು ಶರವೇಗದಲ್ಲಿ ಹೋರಟು ಎಡೆಯೂರು ತಲುಪಿ  ಸಿದ್ಧಲಿಂಗೇಶ್ವರನ ದರ್ಶನ ಪಡೆದೆವು. ಧಾರ್ಮಿಕವಾಗಿ ಪ್ರಮುಖ ಶಕ್ತಿಕೇಂದ್ರ ಮತ್ತು ಭಕ್ತಿಕೇಂದ್ರ ಇದಾಗಿದೆ.
ಈ ಸ್ಥಳದಲ್ಲಿ ವಿದ್ಯಾರ್ಥಿಗಳು ತಿಂಡಿ ತಿನಿಸುಗಳನ್ನು  ಸವಿದರು.ಮುಂದಿನ ಪ್ರಯಾಣವನ್ನು ಮೇಲುಕೋಟೆಯ ಕಡೆಗೆ ಬೆಳೆಸಿದೆವು
ಮೇಲುಕೋಟೆಯಲ್ಲಿ ಚೆಲುವ ನಾರಾಯಣ ಸ್ವಾಮಿ ದರ್ಶನ ಪಡೆಯುವಲ್ಲಿ ಸಮಯದ ವಿಳಂಬತೆಯಾಯಿತು .ಈಗಾಗಲೇ ನಿರ್ದರಿಸಿದಂತೆ ಮೊದಲನೆಯ ದಿನದ ವಾಸ್ತವ್ಯದ ಸ್ಥಳವಾದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಕಡೆ ಪ್ರಯಾಣ ಬೆಳೆಯಿತು.
ಮುಂದುವರೆಯುವದು......

ಭಾನುವಾರ, ಡಿಸೆಂಬರ್ 30, 2018

ಸಾಹಿತ್ಯ ಸಮ್ಮೇಳನದಲ್ಲಿ ನಾಟಕಗಳು

ಶಾಲಾ ಶೈಕ್ಷಣಿಕ ಪ್ರವಾಸ


ಶ್ರೀ ತಿಪ್ಪಣ್ಣ  ರಾಮದುರ್ಗ
            ಸ ಶಿ(ಕಲಾ ಕನ್ನಡ)
ಸ ಪ್ರೌ ಶಾಲೆ ಜಹಗೀರ ಗುಡದೂರ
ಸೆಲ್ ನಂಬರ್-9480756727.


2018-19 ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರವಾಸ ನನ್ನ ಶಾಲಾ ಜೀವನದ ನೆನಪುಗಳನ್ನು ಮರುಕಳಿಸುವದರ ಜೊತೆಗೆ ಅಚ್ಚಳಿಯದೆ ಉಳಿದಿದ್ದು ಈಗ ಇತಿಹಾಸ.......
ನಾಲ್ಕು ದಿನಗಳ ಪ್ರವಾಸ ದಿನಾಂಕ ೨೪/೧೨/೨೦೧೮ ರಂದು ರಾತ್ರಿ ೯ಗಂಟೆಗೆ ಪ್ರಾರಂಭವಾಯಿತು. ೧೪೫ ವಿದ್ಯಾರ್ಥಿಗಳ ಜೊತೆಗೆ ೧೨ ಜನ ಶಾಲಾ ಸಿಬ್ಬಂಧಿಯನ್ನು ಕರೆದೊಯ್ಯಲು ಗಜೇಂದ್ರಗಡ ಘಟಕ ದಿಂದ ೨ ಬಸ್ಸುಗಳು ಮತ್ತು ಹನಮನಾಳದಿಂದ ಮಿನಿ ಬಸ್ ಬಂದವು.
ನಮಗೆ ವಹಿಸಿದ ಜವಾಬ್ದಾರಿಯಂತೆ ಊಟದ ಸಾಮಾಗ್ರಿಗಳನ್ನು ವಾಹನಗಳಲ್ಲಿಟ್ಟು ವಿದ್ಯಾರ್ಥಿಗಳನ್ನು ವಾಹನಗಳಲ್ಲೆರಿಸಿ ನನಗೆ ಹಂಚಿಕೊಟ್ಟ ಮಿನಿ ಬಸ್ಸನೇರಿ ವಿದ್ಯಾರ್ಥಿಗಳ ರಸಭರಿತ ಉತ್ಸಾಹದೊಂದಿಗೆ ಪ್ರಯಾಣ ಆರಂಭವಾಯಿತು.
ನಮ್ಮ ಪ್ರಯಾಣದಲ್ಲಿ ಚಿಕ್ಕನಾಯಕನಹಳ್ಳಿಯ ಹತ್ತಿರ ಬೆಳಗಿನ ಜಾವ ೪ಗಂಟೆಗೆ ಚಹ ಸೇವಿಸಿ ಪ್ರಯಾಣ ಮುಂದುವರೆಸಿದೆವು...
ಮಾರ್ಗ ಮದ್ಯದಲ್ಲಿ ನೀರಿನ ಅನುಕೂಲ ವಿರುವ ಕಡೆ ನಿಲ್ಲಿಸಿ ಬೆಳಗಿನ ಕರ್ಮಗಳನ್ನು ಮುಗಿಸಿಕೊಂಡು ಕಾಲ ಭೈರವೇಶ್ವರ ದರ್ಶನ ಪಡೆಯಲು ನಾಡಿನ ಪ್ರಮುಖ ದಾರ್ಮಿಕ, ಶೈಕ್ಷಣಿಕ ಶಕ್ತಿ ಕೇಂದ್ರವಾದ ಆದಿಚುಂಚನಗಿರಿ ತಲುಪಿದಾಗ ೭ಗಂಟೆ ೪೫ನಿಮಿಷವಾಗಿತ್ತು.
ಬೆಟ್ಟದ ಮೇಲಿರುವ ಕಾಲ ಬೈರವನ ದರ್ಶನ ನಮ್ಮೆಲ್ಲರನ್ನು ಮಂತ್ರ ಮುಗ್ದರನ್ನಾಗಿಸಿತು.....
   ದೇವಾಲಯದ ಇತಿಹಾಸವನ್ನು ಅಲ್ಲಿನ ಪ್ರಮುಖರು ಅಚ್ಚು ಕಟ್ಟಾಗಿ ತಿಳಿಸಿದರು. ನಮ್ಮ ವಿದ್ಯಾರ್ಥಿಗಳು ಆಸಕ್ತಿಯಿಂದ ತಿಳಿದುಕೊಂಡರು.ಅಷ್ಟೋತ್ತಿಗೆ ಉಪಹಾರದ ಸಮಯವಾಗಿದ್ದರಿಂದ ದೇವಾಲಯದ ಭೋಜನ ಮಂದಿರಕ್ಕೆ ತೆರಳಿ "ಪುಳಿಯೊಗರೆ" ಯನ್ನು ಸವಿದು, ನಾಡಿನ ಅಮೂಲ್ಯ ರತ್ನಗಳಾದ
ಸರ್ ಎಂ ವಿಶ್ವೇಶ್ವರಯ್ಯ
ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು ಮತ್ತು ಬಾಲ ಗಂಗಾಧರ ನಾಥ ಸ್ವಾಮಿಗಳ ಜೀವನ ಮತ್ತು ಸಾಧನೆಗಳನ್ನು ತಿಳಿದುಕೊಂಡು ಮುಂದಿನ ಸ್ಥಳ ಎಡೆಯೂರು ಸಿದ್ಧಲಿಂಗೇಶ್ವರನ ದರ್ಶನ ಪಡೆಯಲು ನಮ್ಮ  ,ನಮ್ಮ ವಾಹನಗಳನ್ನೇರಿ ಹೊರಟೆವು........
ಮುಂದುವರೆಯುವದು......

ಶನಿವಾರ, ಡಿಸೆಂಬರ್ 29, 2018

ಗುರುವಾರ, ಡಿಸೆಂಬರ್ 27, 2018

ನಾಟಕ ಸಾಹಿತ್ಯ ಹಾಗೂ ಪ್ರಯೋಗಗಳು







ಪಠ್ಯ ಸಾಹಿತ್ಯವನ್ನು ನಾಟಕೀಯಗೊಳಿಸಿಕೊಂಡು ಅಭ್ಯಾಸ ಮಾಡಿದರೇ ಅದು ಶಾಶ್ವತವಾಗಿ ನಮ್ಮಲ್ಲಿ ಉಳಿಯುತ್ತದೆ. ಪಾಠವನ್ನು ಕುರುಡು ರೀತಿಯಲ್ಲಿ ಓದಿದರೆ ಅದರ ವ್ಯಾಲಿಡಿಟಿ ಕಮ್ಮಿ ಅದೇ ನಾವು ಓದುವ ಯಾವುದೇ ಸಾಹಿತ್ಯವನ್ನು ಮನಸ್ಸಿನಿಂದ ಅನುಭವಿಸಿ ಅಭ್ಯಾಸ ಮಾಡಿದರೇ ಅದು ಅಚ್ಚಿನಂತೆ ಮನಸ್ಸಲ್ಲಿ ಕಾಯಂ ಆಗಿ ಉಳಿದಿರುತ್ತದೆ. ಸಾಹಿತ್ಯ ಪ್ರಕಾರದಲ್ಲಿ ನಾಟಕ ಸಾಹಿತ್ಯ ಓದುಗರ  ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ನಮ್ಮ ಪಠ್ಯಗಳನ್ನೇ ನಾವು ಅಭಿನಯ ಮೂಲಕ ಅಭ್ಯಾಸ ಮಾಡಿದರೆ ಅದು ಮಾಡುವವರ ಹಾಗು ನೋಡುವವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದು ಬಿಡುತ್ತದೆ. ಗಾಂಧೀಜಿ ಅವರಿಗೆ ಸತ್ಯ ಹರಿಶ್ಚಂದ್ರ ಹಾಗು ಶ್ರವಣ ಕುಮಾರ ನಾಟಕಗಳು ಅವರ ಇಡೀ ಜೀವನವನ್ನೇ ಬದಲಾಯಿಸಿ ಬಿಟ್ಟಿತು. ಹೀಗಾಗಿ ನಾಟಕ ಸಾಹಿತ್ಯ ಹಾಗೂ ಪ್ರಯೋಗಗಳು ಮಕ್ಕಳನ್ನು ತಮ್ಮೊಳಗೆ ತಮ್ಮನ್ನು ವಿಮರ್ಶಿಸಿ ಕೊಳ್ಳುವಂತೆ ಮಾಡುತ್ತದೆ. 

ಮಕ್ಕಳ ಹಕ್ಕುಗಳ ಗ್ರಾಮಸಭೆ - ಜಹಗೀರಗುಡದೂರ

ಬುಧವಾರ, ಡಿಸೆಂಬರ್ 26, 2018

ಭಾನುವಾರ, ಡಿಸೆಂಬರ್ 23, 2018

ಗಾಂಧೀಜಿಯವರ ಜೀವನ ಪಯಣ( ಶೈಕ್ಷಣಿಕ ಲೇಖನ)


                                                  -    ಶ್ರೀ ತಿಪ್ಪಣ್ಣ ರಾಮದುರ್ಗ

ಭಾಷೆ ನಿತ್ಯ ಜೀವನದ ಸಂಜೀವಿನಿ. ಮಾತೃ ಭಾಷೆಯ ಮೂಲಕ ಕಲಿತ ಕಲಿಕೆ ಸಂತಸದಾಯಕವೂ ಹೌದು, ಇಂತಹ ಸಂತಸದಾಯಕ, ಆಸಕ್ತಿಯುತ ಕಲಿಕೆಗೆ ಉತ್ತಮ ನಿದರ್ಶನವೇ, ನಮ್ಮ ಶಾಲೆಯಲ್ಲಿ ದಿನಾಂಕ ೧೭.೧೨.೨೦೧೮ ರಂದು ರಂಗಾಯಣ ತಂಡ ಧಾರವಾಡದವರಿಂದ ಬೊಳವಾರ ಮಹಮ್ಮದ ಕುಂಇ್ ರವರ ಪಾಪು ಗಾಂಧಿ ಬಾಪು ಗಾಂಧಿ ಕಾದಂಬರೊ ಆಧಾರಿತ ನಾಟಕ ನಮ್ಮೆಲ್ಲರನ್ನು ಬಾವುಕರನ್ನಾಗಿಸಿ ಅಂತಪ್ರಜ್ಞೆಯನ್ನು ಮೂಡಿಸಿ ದೇಶದ ನಾಡಿನ ಬಗ್ಗೆ ಗಾಂಧೀಜಿಯವರ ಹುಟ್ಟಿನಿಂದ ಜೀವನದ ಕೊನೆಯ ಕ್ಷಣದವರೆಗಿನ ಮಹತ್ವದ ಘಟನೆಗಳನ್ನು ಆಧಾರಿಸಿದ ಪಾಪು ಗಾಂಧಿ - ಬಾಪು ಗಾಂಧಿ ಕೃತಿಗೆ 'ಕೇಂದ್ರ ಸಾಹಿತ್ಯ ಅಕಾಡೆಮಿ' ಪ್ರಶಸ್ತಿ ಲಭಿಸಿದೆ.

ನಾಟಕದ ಹಿಂದಿನ ದಿನದಿಂದಲೂ ಬಹಳಷ್ಟು ಕುತೂಹಲ ಕೆರಳಿಸಿದ ನಾಟಕ ಇದಾಗಿತ್ತು. ೧೭/೧೨/೨೦೧೮ ರಂದು ಮಧ್ಯಾಹ್ನ ೨.೦೦ ಗಂಟೆಗೆ ನಮ್ಮ ಶಾಲೆಯನ್ನು ಪ್ರವೇಶಿಸಿದ ತಂಡದ ಎರಡು ವಾಹನಗಳನ್ನು ನೋಡಿದಾಗ ನಮ್ಮ ವಿದ್ಯಾರ್ಥಿ ವಿದ್ಯಾರ್ಥಿಯೆಲ್ಲರೂ ಸಂಭ್ರಮಿಸಿದರು. ಕಲಾವಿದರೆಲ್ಲರೂ ಊಟ ಮಾಡುವಷ್ಟರಲ್ಲಿ ನಮ್ಮ ಜಹಗೀರಗುಡದೂರ ಕ್ಲಸ್ಟರ್ ವ್ಯಾಪ್ತಿಯ ಬಹುತೇಕ ಶಾಲೆಗಳ ಆಸಕ್ತಿಯಿರುವಂತಹ ಶಿಕ್ಷಕರೆಲ್ಲರೂ ಸೇರಿಕೊಂಡರು. ಗ್ರಾಮದ ಜನತೆಯು ಪಾಲ್ಗೊಂಡಿತ್ತು.

ನಾಟಕ ಪ್ರಾರಂಭವಾದಾಗ ೩ ಗಂಟೆ ೪೦ ನಿಮಿಷ.... ಗಾಂಧೀಜಿಯವರ ಜನನದೊಂದಿಗೆ ಆರಂಭವಾದ ನಾಟಕ, ಗಾಂಧೀಜಿಯವರ ಬಾಲ್ಯ ಜೀವನದ ತುಂಟಾಟಗಳು, ವಿದ್ಯಭ್ಯಾಸದ ಕುರಿತು ಕಲಾವಿದರು ಮನೋಜ್ಞವಾದ ಅಭಿನಯವನ್ನು ನೀಡಿ ನಮ್ಮೆಲ್ಲರ ಮನಸ್ಸುನ್ನು ಪ್ರಫುಲ್ಲಗುಳಿಸಿದರು. ಗಾಂಧೀಜಿಯವರ ಬಾಲ್ಯಜೀವನದ ಕತೆ ಕೇಳಿ ಮಕ್ಕಳಂತೂ ಸಾಕಷ್ಟು ತಿಳಿದುಕೊಂಡರು.

ಗಾಂಧೀಜಿಯವರ ಬ್ಯಾರಿಸ್ಟರ್ ಪದವಿ ಪಡೆಯಲು ಇಂಗ್ಲೇಂಡಿಗೆ ಹೋದ ದಿನಗಳು ಅದ್ಬುತವಾಗಿ ಮರುಕಳಿಸುವಲ್ಲಿ ಕಲಾವಿಧರ ನಟನೆ ಮತ್ತು ಶ್ರಮ ಇತ್ತು. ಇಡೀ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದರ ಜೊತೆಗೆ ಸಮರ್ಪಕವಾದ ವಿಷಯದ ವಿವರಣೆಯನ್ನು ಅಚ್ಚುಕಟ್ಟಾಗಿ ತಿಳಿಸಿಕೊಟ್ಟರು.
ಗಾಂಧೀಜಿಯವರು ಬ್ಯಾರಿಸ್ಟರ್ ಪದವಿ ಪಡೆದು ಕೆಲಸಕ್ಕೆಂದು ದಕ್ಷಿಣ ಆಫ್ರೀಕಾಕ್ಕೆ ಹೋದ ದಿನಗಳನ್ನು ಕಲಾವಿದರು ರೀತಿ ಮತ್ತು ಅಭಿನಯ ನನ್ನ ಮನಸ್ಸನ್ನು ಸೊರೆಗೊಂಡಿತು. ದ.ಆಫ್ರಿಕಾದಲ್ಲಿ ಗಾಂಧೀಜಿಯವರು ಅನುಭವಿಸಿದ ಯಾತನೆ, ಅವಮಾನ ಭಾರತೀಯರಿಗಾಗುತ್ತಿದ್ದ ಕಿರುಕುಳ ತೊಂದರೆಗಳನ್ನು ವಿರೋಧಿಸಿ ಪ್ರಾರಂಭಿಸಿದ ಹೋರಾಟ ಮನಮುಟ್ಟುವಂತಿತ್ತು.



ನಮ್ಮ ಶಾಲೆಯಲ್ಲಿರುವ ನಾಟಕ ಶಿಕ್ಷಕರಾದ ಗುರುರಾಜ ಹೊಸಪೇಟೆ ಸಾರ್ ರವರು ತಮ್ಮ ಗುರುಗಳಾದ ಶ್ರೀಪಾದ ಭಟ್ಟರವರ ನಿರ್ದೇಶನದಲ್ಲಿ ನಾಟಕ ರಾಜ್ಯದಾದ್ಯಂತ ಪ್ರದರ್ಶನಗೊಳ್ಳತ್ತಿರುವುದರ ಕುರಿತು ತಿಳಿಸಿಕೊಟ್ಟರು. ಇದರಿಂದ ಗುರುವಿನ ಮಹತ್ವ ಮತ್ತು ಹಿರಿಮೆಯನ್ನು ನಮ್ಮ ವಿದ್ಯಾರ್ಥಿಗಳೆಲ್ಲರೂ ತಿಳಿದುಕೊಂಡರು.


ಆಕಸ್ಮಿಕವಾಗಿ ಗಾಂಧೀಜಿಯವರು ಭಾರತಕ್ಕೆ ಬರಬೇಕಾದ ಸಂದರ್ಭ ಬಂದಾಗ ಇಲ್ಲಿಯ ಜನರ ಪರಿಸ್ಥಿತಿ ಕಂಡು ಇಲ್ಲಿಯ ಜನರಿಗೆ ನ್ಯಾಯ ದೊರಕಿಸಿಕೊಡಲು ಭಾರತದಲ್ಲಿಯೇ ಉಳಿಯಲು ತೀರ್ಮಾನಿಸಿದರು. ಭಾರತದಲ್ಲಿ ಗಾಂಧೀಜಿಯವರ ನೇತೃತ್ವದ ಹೋರಾಟವನ್ನು 'ಗಾಂಧೀಯುಗ' ಎಂದು ಕರೆಯಲಾಗುತ್ತದೆ. ಗಾಂಧೀಜಿಯವರ ನಾಯಕತ್ವದಲ್ಲಿ ನಡೆದ ಹೋರಾಟಗಳಿಗೆ ರಾಜಕೀಯ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರ ಮಾರ್ಗದರ್ಶನವಿತ್ತು. ಗಾಂಧೀಜಿಯವರ ಹೋರಾಟದ ಸಾಧನಗಳೆಂದರೇ
ಸತ್ಯಾಗ್ರಹ
ಅಹಿಂಸೆ
ಹಿಂದೂ ಮುಸ್ಲಿಂ ಏಕತೆಯನ್ನು ನಾಟಕದಲ್ಲಿ ಚಿತ್ರಿಸಿದ ರೀತಿ ನಮ್ಮನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಯಿತು.
ಗಾಂಧೀಜಿಯವರ ಅಸಹಕಾರ ಚಳುವಳಿಯನ್ನು ಪ್ರೆರೇಪಿಸಿದ ಜಲಿಯನ್ ವಾಲಬಾಗ್ ಹತ್ಯಾಕಾಮಡ, ಖಿಲಾಫತ್ ಚಳುವಳಿ, ಗಾಂಧೀಜಿಯವರ ಕರೆಗೆ ಜನತೆಯು ಸ್ಪಂದಿಸದ ರೀತಿ ಮನಮುಟ್ಟುವಂತಿತ್ತು. ಸ್ವಾತಂತ್ರ ಬಂದಾಗ ದೇಶದ ಜನತೆ ಮತ್ತು ಹೋರಾಟಗಾರರೆಲ್ಲರು ಸಂಭ್ರಮಿಸುತ್ತಿದ್ದರೆ, ಗಾಂಧೀಜಿಯವರು ಕೊಲ್ಕತ್ತದ ಪ್ರದೇಶದಲ್ಲಿ ಸ್ವಚ್ಛತೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದು ಅವರ  "ಗ್ರಾಮೀಣ ಅಭಿವೃದ್ದಿಯೇ ದೇಶದ ಅಭಿವೃದ್ದಿ " ಎಂಬ ಮಾತಿಗೆ ಕನ್ನಡಿ ಇಡಿದಂತಿತ್ತು.


ನಮ್ಮ ಶಾಲೆಯ ಎಲ್ಲಾ ಶಿಕ್ಷಕ ಸಿಬ್ಬಂದಿ ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಜೊತೆಗೆ ನಮ್ಮ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ಜಹಗೀರಗುಡದೂರ ಮತ್ತು ಬಾದಿಮನಾಳ ಶಾಲೆಯ ಮಕ್ಕಳೆಲ್ಲರೂ ನಾಟಕದ ಕುರಿತು ಪ್ರಶಂಸೆಯ ಮಾತುಗಳನ್ನಾಡುತ್ತಿದ್ದುದು ಕಂಡು ಬಂತು.
ಒಟ್ಟಾರೆಯಾಗಿ ಗಾಂಧೀಜಿಯವರ ಹೋರಾಟದ 150 ನೇ ವರ್ಷಾಚರಣೆಯಲ್ಲಿ  ಗಾಂಧೀಜಿಯ ಬದುಕು ಮತ್ತು ಸೇವೆಯ ಜೊತೆ ಜೊತೆಗೆ ಹೋರಾಟವನ್ನು ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಷ್ಟೇ ಅಲ್ಲದೇ ಸಾರ್ವಜನಿಕವಾಗಿ ಈ ಪ್ರದರ್ಶನ ಯಶಸ್ವಿಯುತವಾಗಿ ಮೂಡಿಬಂತೆಂದು ಹೇಳಲು ಇಚ್ಛಿಸುತ್ತೇನೆ.