’ಪ್ರಥಮ’ ಎಂದು ನಮ್ಮ ಜಿಲ್ಲೆಯ ಹೆಸರನ್ನೇ ಕರೆಯುತ್ತಾರೆ ಎಂದು ಮನಸ್ಸಿನಲ್ಲಿ ಜಿಗುದು ಕುಣಿದಾಡೋಕೆ ತಯಾರಾದೆ.
ಆದರೆ......
ಪ್ರಥಮ ಸ್ಥಾನ...
ಉಡುಪಿ
................
ಎಂದಾಗ ನಮ್ಮ ಸಂತೋಷವೆಲ್ಲ ಅಲ್ಲೇ ಕಳಚಿ ಬಿತ್ತು. ಉಡುಪಿ ಜಿಲ್ಲೆಯವರ ಹಾರಾಟ, ಚಿರಾಟ ನೋಡಿ, ಚಿತ್ರದುರ್ಗದಲ್ಲಿ ನಮ್ಮ ನಾಟಕ ಪ್ರಥಮ ಎಂದಾಗ ಆದ ಸಂತೋಷದ ನೆನಪಾಯಿತು. ರಾಜ್ಯ ಮಟ್ಟದಲ್ಲಿಯೂ ನಮ್ಮ ನಾಟಕ ಪ್ರಥಮ ಸ್ಥಾನ ಪಡೆದಿದ್ದರೆ ನಾವು ಯಾವ ರೀತಿ ಆ ಸಂತೋಷವನ್ನು ಆಚರಿಸುತ್ತಿದ್ದೇವು ಎಂದೂ ಕಲ್ಪನೆ ಮಾಡಿಕೊಳ್ಳಲು ಆಗುತ್ತಿರಲಿಲ್ಲ ನನಗೆ. ನಾನು ಕುಳಿತಲ್ಲಿಯೇ ದುಃಖಿತಳಾದೆ. ನಾವು ಸಮಾದಾನದಿಂದ ಊರಿಗೆ ಹೋಗಲು ಸಮಾಧಾನಕರ ಬಹುಮಾನ ನೀಡಿದರು. ಪೊಂಪೈ ಪ್ರೌಢಶಾಲೆಯ ಆವರಣದಲ್ಲಿ ಒಂದು ಕ್ರೈಸ್ತ ಚರ್ಚ ಇತ್ತು. ನನಗೆ ತುಂಭಾ ಆಸೆ ಇತ್ತು. ಅಲ್ಲಿಗೆ ಹೋಗಿ ನಮಸ್ಕರಿಸಿ ಬರಬೇಕೆಂದು. ಆದರೆ ಅಲ್ಲಿಗೆ ಹೋಗಲು ಆಗಲಿಲ್ಲ. ಕೆಲವಷ್ಟು ವಿದ್ಯಾರ್ಥಿಗಳು ಫಲೀತಾಂಶ ತಿಳಿದ ಮೇಲೆ ರಂಗಮಂದಿರದಿಂದ ಹೊರಗೆ ಬಂದು ’ರಾಜಕೀಯ ಮಾಡಿದ್ದಾರೆ, ಮೋಸ ಮಾಡಿದರು’ ಎಂದು ಮಾತಾನಾಡುತ್ತಿದ್ದರು. ಅವರು ಹಾಗೇ ಮಾತನಾಡುವುದು ತಪ್ಪು. ’ಮೊದಲು ಇನ್ನೊಬ್ಬರಲ್ಲಿನ ದೋಷಗಳಿಗಿಂತ ನಮ್ಮಲ್ಲಿರುವ ದೋಷಗಳನ್ನು ತಿಳಿದುಕೊಳ್ಳಬೇಕು. ಅದು ನಿರ್ಣಾಯಕರ ತಪ್ಪಲ್ಲ. ಅದು ನಮ್ಮ ತಪ್ಪು. ನಾವು ಸರಿಯಾಗಿ ಅಭಿನಯಿಸಿದ್ದರೆ ನಮ್ಮ ತಂಡಕ್ಕೂ ದ್ವೀತಿಯನೋ, ಪ್ರಥಮ ಸ್ಥಾನವೋ ಬರುತ್ತಿತ್ತು.ನಾವು ಚೆನ್ನಾಗಿ ಅಭಿನಯಿಸಿದಿವಿ, ಆದರೆ ನಮಗಿಂತ ಒಂದು ಕೈ ಮೇಲೆ ಇತರೆ ತಂಡಗಳು ಚೆನ್ನಾಗಿ ಅಭಿನಯಿಸಿದವು.’ ನಾವು ಇನ್ನೋಂದು ತಪ್ಪು ಮಾಡಿದಿವಿ. ನಾವು ನಮ್ಮ ಮಾರ್ಗದರ್ಶಿ ಶಿಕ್ಷಕರು ಹೇಳಿದ ಕೆಲಸವನ್ನು ಮಾಡಲಿಲ್ಲ. ನಾವು ನಮ್ಮ ಕೆಲಸ ಮಾಡದಿದ್ದರಿಂದ ಹೀಗಾಯಿತು. ನಾವು ಮುಂದೆ ಇಂಥಹ ನಾಟಕದಲ್ಲಿ ಭಾಗವಹಿಸಬೇಕೆಂದರೆ ನಮಗೆ ಮತ್ತೇ ಆ ಅವಕಾಶ ಸಿಗುವುದಿಲ್ಲ. ಏಕೆಂದರೆ, ನಾನು ಈ ಶಾಲೆಯಲ್ಲಿ ಕೊನೆಯ ವರ್ಷ ವ್ಯಾಸಂಗ ಮಾಡುತ್ತಿರುವುದು.
ನನಗೆ ಆದ ಅನುಭವದ ಒಂದು ಮಾತು ಹೇಳುತ್ತೇನೆ
’ಯಾರು ಯಾವುದೇ ಕೆಲಸವಾಗಲಿ ಹೇಳಿದರೆ, ಇಂಥಹ ಕಾರ್ಯ, ಸ್ಪರ್ಧೆ, ಆಟ, ನಾಟಕ ಸೇರಿ ಎಂದು ಶಿಕ್ಷಕರು ಹೇಳಿದರೆ ಹಿಂಜರಿಯಬೇಡಿ. ನಾನು ಏಕೆ ಹೇಳುತ್ತೇನೆ ಅಂದರೇ ಮುಂದೆ ಇಂಥಹ ಅವಕಾಶ ಬೇಕು ಎಂದರು ಸಿಗುವುದಿಲ್ಲ. ಸಿಗುತ್ತೆ, ಆದರೆ ಇಂಥಹ ಮಾರ್ಗದರ್ಶಿ ಶಿಕ್ಷಕರು ಮುಂದೆ ನನಗೆ ಸಿಗುತ್ತಾರೆಯೋ ? ಇಲ್ಲವೋ ?.......
ಇಂಥಹ ಶಾಲೆ, ಮಾರ್ಗದರ್ಶಿ ಶಿಕ್ಷಕರು ಸಿಕ್ಕಿದ್ದು ನನ್ನ ಪುಣ್ಯ. ಇಂಥ ಅವಕಾಶ ಯಾರು ಕಳೆದುಕೊಳ್ಳಬೇಡಿ. ಮಿಂಚಿ ಹೋದ ಕಾಲ ಮರಳಿ ಬರುವುದಿಲ್ಲ.
ಜೀವನದಲ್ಲಿ ಸೋಲು - ಗೆಲುವು ಸಹಜ. ನಮ್ಮ ನಾಟಕ ಮಂಗಳೂರಿನಲ್ಲಿ ಪರಾಜಯ ಹೊಂದಿದರೂ, ಆ ಜನಗಳ ನಗು, ಮಾತು ಎಲ್ಲವನ್ನು ಮರೆಸಿತು. ಅಂಥಹ ಊರು, ವ್ಯವಸ್ಥಾಪಕರು ನಮಗೆ ಪರಿಚಯವಾದದ್ದು ನಮ್ಮ ಅದೃಷ್ಟ.
ಸಾವಿತ್ರಿ ಕಿನ್ನಾಳ
೧೦ ನೇ ತರಗತಿ
ಸರಕಾರಿ ಪ್ರೌಢಶಾಲೆ
ಜಹಗೀರ ಗುಡದೂರ.