ಗುರುವಾರ, ಮಾರ್ಚ್ 28, 2019

ಪ್ರಜಾವಾಣಿಯಲ್ಲಿ ವಿಶ್ವರಂಗಭೂಮಿ ದಿನಾಚರಣೆ ವರದಿ

ಪ್ರಜಾವಾಣಿಯಲ್ಲಿ ವಿಶ್ವರಂಗಭೂಮಿ ದಿನಾಚರಣೆ   ವರದಿ 

ಉದಯವಾಣಿಯಲ್ಲಿ ವಿಶ್ವರಂಗಭೂಮಿ ಅಂಗವಾಗಿ ಬಂದಂಥ ಲೇಖನ

ಉದಯವಾಣಿಯಲ್ಲಿ ವಿಶ್ವರಂಗಭೂಮಿ  ಅಂಗವಾಗಿ ಬಂದಂಥ ಲೇಖನ 


ವಿಶ್ವರಂಗಭೂಮಿ ದಿನಾಚರಣೆ








೨೭.೦೩.೨೦೧೯ ರಂದು ಸರ್ಕಾರಿ ಪ್ರೌಢಶಾಲೆ, ಜಹಗೀರ ಗುಡದೂರಿನಲ್ಲಿ ವಿಶ್ವರಂಗಭೂಮಿ
ದಿನಾಚರಣೆಯನ್ನು ಆಚರಿಸಲಾಯಿತು. ರಂಗಭೂಮಿ ಮನುಷ್ಯನನ್ನು ಸದಾ ಜೀವಂತವಾಗಿಡುತ್ತದೆ. ಕ್ರಿಯಾಶೀಲವಾಗಿ ಸದಾ ತೊಡಗುವ ಉತ್ಸಾಹ ಇಮ್ಮಡಿಯಾಗಿಸುತ್ತದೆ.
ಅಂಥಹ ರಂಗಭೂಮಿ ನಮ್ಮ ಶಾಲೆಯಲ್ಲಿ ಸದಾ ಹಸಿರಾಗಿರುವುದು ನಮ್ಮ ಹೆಮ್ಮೆಯಾಗಿದೆ - ಎಂದು
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಈಶಪ್ಪ ತಳವಾರ ಅವರು ಹೇಳಿದರು. ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ 'ಹೂವಾದಳು ಹುಡುಗಿ' ಪಾಠದ ಕಥಾ ವಾಚನವನ್ನು ಎಂಟನೇ ತರಗತಿಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.

 ಈ ವರ್ಷದ ರಂಗ ಸಂದೇಶವನ್ನು ಕ್ಯೂಬ್ ದೇಶದ ನಟ, ರಂಗಕರ್ಮಿ ಕಾರ್ಲೊಸ್ ಸೆಲ್ಡ್ರಾನ್ ಅವರು ನೀಡಿದ ಸಂದೇಶವನ್ನು ಶಿಕ್ಷಕರಾದ ಜಗದೀಶ ಬಾಸಿಂಗದ ಅವರು ಓದಿದರು.

ರಂಗಭೂಮಿ ಸಮಾಜದ ಕೈಗನ್ನಡಿ. ಸಮಾಜದ ಅಂಕು ಡೊಂಕುಗಳನ್ನು ಎತ್ತಿ ತೋರ್ಪಡಿಸುವುದು ಎಂದು ಶಿಕ್ಷಕರಾದ ಶಿವಪ್ಪ ಇಲಾಳ ಅವರು ತಮ್ಮ ಭಾಷಣದಲ್ಲಿ ತಿಳಿಯಪಡಿಸಿದರು.

 ರಂಗಭೂಮಿಯಲ್ಲಿ ಬದುಕುವುದೇ ಚೆಂದ. ನೆರೆಹೊರೆಯಯಲ್ಲಿಯೇ ಬದುಕಿನ ವಾಸ್ತವತೆ ಇರುತ್ತದೆ. ಅಂಥಹ ವಾಸ್ತವತೆಯ ಬದುಕನ್ನು ರಂಗಕ್ಕೆ ತಂದು ನಮ್ಮನ್ನು ನಾವು ಕಟ್ಟಿಕೊಳ್ಳುವುದು ಅತ್ಯಂತ ಸುಂದರ ಗಳಿಗೆಗಳು ಎಂದು ರಂಗಭೂಮಿ ದಿನಾಚರಣೆಯ ಶುಭಾಷಯಗಳನ್ನು ತಿಳಿಸುತ್ತಾ ಮುಖ್ಯೋಪಾಧ್ಯಾಯರಾದ ಶ್ರೀ ಈಶಪ್ಪ ತಳವಾರ ಮಾತನಾಡಿದರು.
ನಾಟಕ ಶಿಕ್ಷಕರಾದ ಗುರುರಾಜ ಅವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಕಳೆದ ಶೈಕ್ಷಣಿಕ ವರ್ಷದಲ್ಲಿ  ನಡೆಸಿದ ಕ್ಲಸ್ಟರ್ ನ ಎಲ್ಲ ಶಾಲೆಗಳು ಒಳಗೊಂಡಂತೆ ಹೆಜ್ಜೆಗಳು ನಾಟಕೋತ್ಸವ, ಪಾಪು ಬಾಪು ಹಾಗೂ ದೇವತಾಪುರದ ಮಕ್ಕಳು ಎಂಬ ಆಮಂತ್ರಿತ ತಂಡಗಳ ಪ್ರದರ್ಶನದಿಂದ ಮಕ್ಕಳು ಹಾಗೂ ನಮ್ಮೇಲ್ಲರ ಅತ್ಯಂತ ರಂಗ ಸಮೃದ್ದಿಯ ದಿನಗಳಾಗಿವೆ. ಇಂಥಹ ಪ್ರದರ್ಶನಗಳಿಂದ ಪ್ರತಿಯೊಬ್ಬರು ಸೂಕ್ಷ್ಮರಾಗುತ್ತಾ ಸಾಗಬೇಕಿದೆ. ನಮ್ಮನ್ನು ನಾವು ಹರಿತಗೊಳಿಸಿಕೊಳ್ಳುತ್ತಾ ನಮ್ಮ ತಿಳುವಳಿಕೆಯನ್ನು ಜಗತ್ತಿನ ಜೊತೆ ಹಂಚಿಕೊಳ್ಳಬೇಕಿದೆ. ನಮ್ಮತನವನ್ನು ಮರೆಮಾಚದೇ ಹೊಸ ಚಿಂತನೆಗೆ ತೆರೆದುಕೊಳ್ಳಬೇಕಿದೆ ಎಂದು ನಾಟಕ ಶಿಕ್ಷಕರಾದ ಗುರುರಾಜ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಗನಗೌಡಪಾಟೀಲ, ಶ್ರೀದೇವಿ ಗುಳಬಾಳ, ಮರಿಯಪ್ಪಜರಕುಂಟಿ, ಪ್ರಶಾಂತ ಕಟ್ಟಿ, ತಿಪ್ಪಣ್ಣರಾಮದುರ್ಗ ಹಾಗೂ ಹಳೇಯ ವಿದ್ಯಾರ್ಥಿಗಳು ಭಾಗವಹಿಸಿದ್ದರು

ವಿಶ್ವರಂಗ ಭೂಮಿ ದಿನಾಚರಣೆಯ ಅಂಗವಾಗಿ ವಿಜಯವಾಣಿ ಪತ್ರಿಕೆಯಲ್ಲಿ - ಜೀವನ ನಾಟಕ ರಂಗ

ವಿಶ್ವರಂಗ ಭೂಮಿ ದಿನಾಚರಣೆಯ ಅಂಗವಾಗಿ ವಿಜಯವಾಣಿ ಪತ್ರಿಕೆಯಲ್ಲಿ ಚನ್ನಮಲ್ಲಿಕಾರ್ಜುನ ಹದಡಿಯವರು ನನ್ನ ಬಗ್ಗೆ ಬರೆದ ಲೇಖನ. 

ಶನಿವಾರ, ಮಾರ್ಚ್ 23, 2019