ಅಭಿಪ್ರಾಯಗಳು


 ಇಂದಿನ ದಿನಗಳಲ್ಲಿ ಮಕ್ಕಳು ಕೇವಲ ಕಲಿಕೆಯಲ್ಲಿ ಮಾತ್ರ ಮುಂದುವರೆದರು ಸಾಲದು ಅದಕ್ಕೆ ಪೂರಕವೆಂಬಂತೆ ಸಹಪಠ್ಯ ಚಟುವಟಿಕೆಗಳಲ್ಲಿಯೂ ಮಕ್ಕಳು ಆಸಕ್ತಿಯನ್ನು ಹೊಂದಿರಬೇಕು ಮತ್ತು ಅವುಗಳಲ್ಲಿ ಭಾಗವಹಿಸುವ ಮೂಲಕ ಉತ್ತಮವಾದ ಜ್ಞಾನಾರ್ಜನೆಯನ್ನು ಪಡೆಯಬಹುದು ಇದಕ್ಕೆ ಪೂರಕವೆಂಬಂತೆ ಕುಷ್ಟಗಿ ತಾಲೂಕಿನ ವ್ಯಾಪ್ತಿಯ ಎಲ್ಲಾ ಶಾಲೆಗಳ ಪರಸಾಪುರ ಹಾಗೂ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಸರ್ಕಾರಿ ಪ್ರೌಢಶಾಲೆ ಇವರ ನೇತೃತ್ವದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಜ್ಜೆಗಳು ನಾಟಕೋತ್ಸವ ಎಂಬ ಕಾರ್ಯಕ್ರಮವನ್ನು ದಿನಾಂಕ 24.1.2019 ಹಮ್ಮಿಕೊಳ್ಳಲಾಗಿ

 ಈ ಕಾರ್ಯಕ್ರಮ ಸರಿಯಾಗಿ ಹತ್ತು ಮೂವತ್ತಕ್ಕೆ ಪ್ರಾರಂಭವಾಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕುಷ್ಟಗಿ ತಾಲೂಕಿನ ಜನಪ್ರಿಯ ಶಾಸಕರಾದ ಮಾನ್ಯ ಅಮರೇಗೌಡ ಶ್ರೀ ಬಯ್ಯಾಪುರ ರವರು ವಹಿಸಿಕೊಂಡಿದ್ದರು ಶಾಸಕರು ಮಾತನಾಡಿ ಮಕ್ಕಳು ಕೇವಲ ಪುಸ್ತಕದಿಂದ ಜ್ಞಾನವನ್ನು ಪಡೆಯದೆ ಪಡಿತರ ಚಟುವಟಿಕೆಗಳಿಂದಲೇ ಉತ್ತಮ ಜ್ಞಾನವನ್ನು ಪಡೆಯಬಹುದು ಎಂದು ತಿಳಿಸಿದರು ಇದಕ್ಕೆ ಇಂತಹ ಒಂದು ಕಾರ್ಯಕ್ರಮಗಳು ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಹನುಮವ್ವ ಮುಶಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ನೇಮಣ್ಣ ಮೇಲ್ ಸಕ್ರಿ, ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರ ಗಳಾದ ಶ್ರೀ ಚನ್ನಬಸಪ್ಪ ಎಂ ಹಾಗೂ ಸೋಮನಗೌಡ ಶಿಕ್ಷಣ ಸಂಯೋಜಕರು ಶರಣಗೌಡರ, ಪ್ರಕಾಶ್ ಕಮತರ್, ಭೀಮರಾವ್ ಸಾಳುಂಕೆ, ಹೈದರಾಲಿ ಜಾಲಿಹಾಳ್, ರಾಮಣ್ಣ ಹಾಗೂ ಈಶಪ್ಪ ತಳವಾರ ಮುಖ್ಯ ಗುರುಗಳು ಮತ್ತು ಸಿಬ್ಬಂದಿ ವರ್ಗದವರು ಕ್ಲಸ್ಟರಿನ ಎಲ್ಲಾ ಶಾಲೆಗಳ ಮುಖ್ಯ ಗುರುಗಳು ಶಿಕ್ಷಕರು ಹಾಗೂ ಮುದ್ದು ಮಕ್ಕಳು ಭಾಗವಹಿಸಿದ್ದರು

 ಪ್ರತಿಯೊಂದು ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಟಕಗಳ ಪ್ರದರ್ಶನವನ್ನು ನೀಡಿ ಮಕ್ಕಳು ನಾಟಕಗಳಲ್ಲಿ ಸಂಪೂರ್ಣ ತಲ್ಲೀನರಾಗಿ ಅಪಾತ್ರಗಳ ಜೀವತುಂಬಿ ನೆರೆದಿದ್ದವರಿಗೆಲ್ಲ ರಸದೌತಣವನ್ನು ಉಣಬಡಿಸಿದರು ದರ್ಶನದಿಂದ ಮಕ್ಕಳು ತಮ್ಮ ಪಠ್ಯಪುಸ್ತಕಗಳಲ್ಲಿ ಬರುವ ಪಾಠಗಳನ್ನು ಕೇವಲ ಓದುವುದರ ಮೂಲಕ ಮಾತ್ರವಲ್ಲದೆ ಕೇಳಿರುವುದರಿಂದ ಕಲಿಕೆಯು ಹೆಚ್ಚು ಪರಿಣಾಮಕಾರಿಯಾಗಲು ಸಹಾಯವಾಗುತ್ತದೆ ಮಕ್ಕಳು ಈ ಕಾರ್ಯಕ್ರಮದಲ್ಲಿ ಐತಿಹಾಸಿಕ ನಾಟಕಗಳು ಸ್ವಾತಂತ್ರ್ಯಹೋರಾಟಗಾರರ ನಾಟಕ ಮೂಢನಂಬಿಕೆ ನಿರ್ಮೂಲನೆ ಕುರಿತು ನಾಟಕ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಕುರಿತು ನಾಟಕ ಮತ್ತು ಮಾನವೀಯ ಮೌಲ್ಯಗಳಿಗೆ ಸಂಬಂಧಿಸಿದಂತಹ ನಾಟಕಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶನ ಮಾಡಿ ತೋರಿಸಿದರು ಸರ್ಕಾರಿ ಪ್ರೌಢಶಾಲೆ ಜಹಗೀರಗುಡದೂರ 9ನೇ ತರಗತಿಯ ಮಕ್ಕಳು ಊರುಭಂಗ ನಾಟಕವನ್ನು ಯತಾವತ್ತಾಗಿ ಮಹಾಭಾರತದ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದಂತಿತ್ತು ಎಲ್ಲಾ ಶಾಲೆಯ ಮಕ್ಕಳು ತಮ್ಮ ವಯಸ್ಸಿಗೂ ಮೀರಿದ ಮತ್ತು ಪ್ರತಿಭೆಗೆ ಮೀರಿದ ಹಾಗೂ ಉಪಲಬ್ಧವಿರುವ ಸಾಮಗ್ರಿಗಳನ್ನು ಬಳಸಿಕೊಂಡು ಅತ್ಯಂತ ಯಶಸ್ವಿಯಾಗಿ ನಾಟಕಗಳ ಪ್ರದರ್ಶನ ನೀಡಿದರು ಹಾಗೂ ಶಿಕ್ಷಕರು ಸಹ ತಮ್ಮ ಮಕ್ಕಳಿಗೆ ಅತ್ಯಂತ ಉತ್ಸಾಹದಿಂದ ಸ್ಪೂರ್ತಿಯಿಂದ ನಾಟಕದ ತರಬೇತಿ ನೀಡಿ ಮಕ್ಕಳನ್ನು ನಾಟಕಕ್ಕೆ ಅಣಿಗೊಳಿಸಿದರು.

 ನಾಟಕಗಳ ಮುಕ್ತಾಯದ ನಂತರ ಪ್ರತಿಯೊಂದು ಶಾಲೆಯ ಮಕ್ಕಳಿಗೂ ಹಾಗೂ ಶಿಕ್ಷಕರನ್ನು ಸನ್ಮಾನಿಸಿ ನಾಟಕೋತ್ಸವದ mom8 ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು ಒಟ್ಟಾರೆಯಾಗಿ ಹೆಜ್ಜೆಗಳು ನಾಟಕೋತ್ಸವ ಕಾರ್ಯಕ್ರಮ ಸುಸಜ್ಜಿತವಾಗಿ ಚಟುವಟಿಕ ಪೂರಕವಾಗಿ ಯಾವುದೇ ಅಡಚಣೆಯಿಲ್ಲದೆ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿತು ಎಂದು ಹೇಳಲು ತುಂಬಾ ಸಂತೋಷದಾಯಕವಾಗಿದೆ ವಂದನೆಗಳೊಂದಿಗೆ

 ಹನುಮಂತ ಗೋಡೆಕರ್ ಮತ್ತು ಮಹಾಂತೇಶ್ ಗುರಿಕಾರ್

 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಲಗಿತ್ತಿ 

.......................................................................

ಹೆಜ್ಜೆಗಳು ನಾಟಕೋತ್ಸವದ ಕುರಿತು 

* ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ದೇಶಭಕ್ತಿ ಹಾಗೂ ದೇಶದ ಮಹಾನ್ ನಾಯಕರ ಸ್ವಾತಂತ್ರ್ಯ ಹೋರಾಟಗಾರರ ವೀರ ನಾಯಕರ ಮತ್ತು ವೀರಮಹಿಳೆಯರ ನಿಜವಾದ ಹಿಂದಿನ ಇತಿಹಾಸವನ್ನು ಸ್ಮರಿಸುವಂತೆ ಆಗುತ್ತದೆ.
* ಸಾಕ್ಷ್ಯ ಪಾತ್ರಗಳನ್ನು ಹಾಗೂ ಇದ್ದುದನ್ನು ಇದ್ದ ಹಾಗೆ ಪ್ರತ್ಯಕ್ಷವಾಗಿ ಮಕ್ಕಳು ಪಠ್ಯದಲ್ಲಿರುವ ವಿಷಯವನ್ನು ಓದಿ ಅದರಂತೆ ಮಾಡಿ ಕಲಿಯುತ್ತಾರೆ.

* ಮಕ್ಕಳಲ್ಲಿ ದೇಶಭಕ್ತಿ ಕಿಚ್ಚು ಬೆಳೆಯಲು ಪಟ್ಟಿ ಆಧಾರಿತ ಸಹಪಠ್ಯ ಚಟುವಟಿಕೆಗಳು ಸಹಾಯಕವಾಗುತ್ತವೆ.
* ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ತಿಳಿಸುವಲ್ಲಿ ನಾವು ನಮ್ಮ ಶಾಲೆಯಲ್ಲಿ ಪಠ್ಯ ಪುಸ್ತಕದಲ್ಲಿ ಬರುವ ಅನೇಕ ಸಂತರು ಶರಣರು ಅನುಭವಗಳನ್ನು ಮಕ್ಕಳು ಶಾಲೆಯಲ್ಲಿ ತಿಳಿಯುತ್ತವೆ
* ಮಕ್ಕಳಲ್ಲಿ ಹುಡುಗಿ ದಾಖಲೆಯನ್ನು ಹೊರತೆಗೆಯಲು ಸೂಕ್ತ ವೇದಿಕೆಯಾಗಿದೆ.
* ವಿದ್ಯಾರ್ಥಿಗಳಲ್ಲಿ ಜಾತಿ-ಮತ ಮೂಢನಂಬಿಕೆಗಳನ್ನು ಹೊಡೆದೋಡಿಸಲು ಸಹಾಯವಾಗುತ್ತದೆ.
* ನಾಟಕದಂತಹ ಕಾರ್ಯಕ್ರಮದಿಂದ ಮಕ್ಕಳಲ್ಲಿ ಭಾಷಾ ಕೌಶಲ್ಯ ಅಭಿವೃದ್ಧಿಗಾಗಿ ಶಾಲೆ ಆಕರ್ಷಣೀಯ ತಾಣವಾಗುತ್ತದೆ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳು ಮುಂದೆ ಸಿನಿಮಾ ದಂತ ಕ್ಷೇತ್ರಗಳಿಗೆ ಪ್ರವೇಶಿಸಲು ಸ್ಪೂರ್ತಿಯಾಗುತ್ತದೆ ಸಾಹಿತ್ಯದ ಕಡೆಗೆ ಹೆಚ್ಚು ಒಲವು ಮೂಡಲು ಸಹಾಯವಾಗುತ್ತದೆ.

ಚನ್ನಪ್ಪ ಅಂಗಡಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾದಿಮನಾಳ 

.......................................................................................................

Siddhi Foundation ಸಂಸ್ಥೆಯಿಂದ ನಮ್ಮ ಮಕ್ಕಳಿಗೆ ಕಥಾ ಕಮ್ಮಟ ಕಾರ್ಯಕ್ರಮ ನೆಡೆಸಿಕೊಟ್ಟ ಅನಿಲ್ ಅವರ ಅಭಿಪ್ರಾಯ 

.......................................................................................................................................................


siraj bisaralli kannadanet@gmail.com


ನಿಮ್ಮದು ಅತ್ಯದ್ಬುತ ಪ್ರಯತ್ನ... ನಿಮ್ಮಂತಹ ಪ್ರತಿಭಾವಂತ ಶಿಕ್ಷಕರು ಈ ರೀತಿಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ
ನಿಮ್ಮಂತವರ ಕೈಯಲ್ಲಿ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪಗೊಳ್ಳುತ್ತದೆ. 
ನಿಮ್ಮಶಾಲಾ ಪತ್ರಿಕೆ ಬ್ಲಾಗ್ ಬಹಳ ಚೆನ್ನಾಗಿ ಮೂಡಿಬಂದಿದೆ...
ಕೊಪ್ಪಳಕ್ಕೆ ಬಂದರೆ ಖಂಡಿತ ಭೇಟಿ ಮಾಡಿ ನನ್ನ ನಂ 9880257488



.................................................................................................................................................................
ಸಂಗಣ್ಣ ಎಸ್.ಕೆ
ಸಹ ಶಿಕ್ಷಕರು
ಸ.ಹಿ.ಪ್ರಾ.ಶಾಲೆ
ಹಿರೇಗೊಣ್ಣಗರ

  ನಾಟಕದ ನಿರೂಪಣೆ, ಹಾಗೂ ಪಾತ್ರಗಳು ತುಂಭಾ ಮಾರ್ಮಿಕವಾಗಿ ಮೂಢಿಬಂದವು. ಮಕ್ಕಳು ತಮ್ಮ ವಯಸ್ಸಿಗೆ ಮೀರಿ ತುಂಭಾ ಚೆನ್ನಾಗಿ ಅಭಿನಯಿಸಿದರು.

...................................................................................................................................................................

ಅಧ್ಯಕ್ಷರು
ಎಸ್.ಡಿ.ಎಮ್.ಸಿ
ಸ.ಹಿ.ಪ್ರಾ.ಶಾಲೆ,
ತುಮರಿಕೊಪ್ಪ

   ಇಂದು ದಿನಾಂಕ ೧೯.೦೨.೨೦೧೦ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಮರಿಕೊಪ್ಪದಲ್ಲಿ ಪ್ರದರ್ಶನಗೊಂಡ "ಕನಸಿನೂರು" ನಾಟಕ ಪ್ರದರ್ಶನಗೊಂಡಿದ್ದು ಅತ್ಯಂತ ಖುಷಿ ತಂದಿದೆ. ಮಕ್ಕಳ ಮೂಲಕ ಸಮಾಜದಲ್ಲಿನ ಲೋಪ ದೋಷಗಳನ್ನು ಎತ್ತಿ ತೋರಿಸಿ ಸಮಾಜವನ್ನು ಸರಿ ದಿಕ್ಕಿನೆಡೆಗೆ ಸಾಗುವಲ್ಲಿ ಇಂಥಹ ಪ್ರದರ್ಶನ - ತಿರುಗಾಟ ಅತ್ಯಂತ ಅವಶ್ಯವಾಗಿದೆ. ಇವರಿಗೆ ಬೇಕಾದ ಪ್ರೋತ್ಸಾಹ, ಸಹಕಾರ ಎಲ್ಲರಿಂದ ಸಿಗಬೇಕೆಂದು ಆಶಿಸುತ್ತೇನೆ.

................................................................................................................................................................

ಚನ್ನಪ್ಪ ಭಾವಿಕಟ್ಟಿ 
ಶಿಕ್ಷಕರು
ಸ.ಹಿ.ಪ್ರಾ.ಶಾಲೆ
ಬಾದಿಮನಾಳ

     ನಾಟಕ ಶಿಕ್ಷಕರಾದ ಶ್ರೀ ಗುರುರಾಜ್.ಎಲ್ ರವರು ತಮ್ಮ ಶಾಲೆಯ ವಿದ್ಯಾರ್ಥಿಗಳಲ್ಲಿ ಹುದುಗಿರುವ ಅಭಿನಯ ಕಲೆಯನ್ನು ಮತ್ತು ಮಕ್ಕಳ ವಯುಕ್ತಿಕ ಪ್ರತಿಭೆಯನ್ನು ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಾಟಕದ ಮೂಲಕ ಸಮಾಜದಲ್ಲಿನ ಪ್ರತಿಯೊಬ್ಬ ನಾಗರಿಕರಿಗೂ ಸ್ಪೂರ್ತಿಯಾಗುತ್ತದೆ. ಮತ್ತು ಇದರ ಜೊತೆಗೆ ಗ್ರಾಮದಲ್ಲಿನ ಹವ್ಯಾಸಿ ಕಲಾವಿದರನ್ನು ಕರೆತಂದು ಜನಪದ ಗೀತೆಗಳನ್ನು ಹಾಡಿಸಿ ಮಕ್ಕಳ ಹಾಗೂ ಗ್ರಾಮಸ್ಥರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀ ಗುರುರಾಜ್ ಹಾಗೂ ಅವರ ವಿದ್ಯಾರ್ಥಿ ತಂಡಕ್ಕೂ ತುಂಭು ಹೃದಯದ ಧನ್ಯವಾದಗಳು.