ಮಂಗಳವಾರ, ಡಿಸೆಂಬರ್ 31, 2013

ಶಿಕ್ಷಣ

ಮಂಡನೆ : ಕುಮಾರ ಅಮರೇಶ
ವಿಷಯ : ಶಿಕ್ಷಣ
ತರಗತಿ ಗೋಷ್ಠಿ - ೦೫

                      ಮಂಗನಿಂದ ಮಾನವನಾದ ಎಂದು ನಾವು ಇಂದು ನಮ್ಮ ಪಠ್ಯಗಳಲ್ಲಿ ಸಾಕಷ್ಟು ಬಾರಿ ಓದಿ ಅದನ್ನೇ ಪರೀಕ್ಷೆಗಳಲ್ಲಿ ಬರೆದು ಇದ್ದೇವೆ. ಹೌದು ನಾವು ಈ ನಮ್ಮ ಶಿಕ್ಷಣ ಪಡೆಯುವುದರ ಮುಖಾಂತರ ಅಂದು ಮಂಗನಿಂದ ಪ್ರಾರಂಭವಾಗಿದ್ದು ಇಂದು ಮಂಗಳಯಾನಕ್ಕೆ ಸಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಶಿಕ್ಷಣ ಪ್ರತಿಯೊಬ್ಬರಿಗೂ ಮುಖ್ಯವಾಗಿ ಮೂಲವಾಗಿ ಬೇಕು. ಶಿಕ್ಷಣದಿಂದಾಗಿ ನಾವು ಎಲ್ಲರು ಒಂದೆಡೆ ಕುಳಿತು ಕಲಿಯುವುದರ ಜೊತೆಗೆ, ಬೇರೆ ಬೇರೆ ಭಾಷೆಗಳ ಕಲಿಯುವಿಕೆಯಿಂದಾಗಿ ಜಗತ್ತಿನೊಡನೆ ನಮ್ಮನ್ನು ನಾವು ಹಂಚಿಕೊಳ್ಳುವ ಪ್ರಸಂಗ ಒದಗಿ ಬಂದಿದೆ. ಶಿಕ್ಷಣ ಶಿಕ್ಷಣದ ಕುರಿತು ಇನ್ನೂ ಸಾಕಷ್ಟು ವಿಚಾರಗಳನ್ನು ನಾವು ನಮ್ಮ ಕಲಿಯುವಿಕೆಯಿಂದ ಪಡೆಯಬಹುದಾಗಿದೆ.