ಶನಿವಾರ, ಡಿಸೆಂಬರ್ 25, 2010

ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ - ಶಿಬಿರದ ದಿನಗಳಲ್ಲಿ



ಮಕ್ಕಳ ನಾಟಕ 
ಗುರುರಾಜ ಅವರ ನಿರ್ಧೆಶನದಲ್ಲಿ ಉತ್ತಮವಾಗಿ ಮೂಡಿಬಂದಿದೆ.

ಶರಣಪ್ಪ ವಡಿಗೇರಿ , ಜನಪದ ಕಲಾವಿದರು




























































  ಕರ್ನಾಟಕ ಸರ್ಕಾರ

      ಕರ್ನಾಟಕ ಬಾಲ ವಿಕಾಸ ಅಕಾಡೆಮಿ-ಧಾರವಾಡ
       ಇವರ ಆಶ್ರಯದಲ್ಲಿ

       “ಅರಳು ಮೊಗ್ಗು” ಮಕ್ಕಳ ರಂಗ ಶಿಬಿರ


          ಸಮಾರೋಪ ಸಮಾರಂಭ

    ಹಾಗೂ

         ನಾಟಕ "ಕತ್ತಲೆ ನಗರ ತಲೆಕೆಟ್ಟರಾಜ"
                                                              ನಿ : ಗುರುರಾಜ, ಹೊಸಪೇಟೆ




ಉದ್ಘಾಟನೆ :  ಝಾಕೀರ ಹುಸೇನ್ ತಾ.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ
ಅಧ್ಯಕ್ಷತೆ :   ಕುಮಾರಿ ರಶ್ಮೀ, ಪ್ರಾಂಶುಪಾಲರು ಮೊ.ದೇ.ವ.ಶಾಲೆ,ನಿಡಶೇಸಿ
ಅತಿಥಿಗಳು :  ಶ್ರೀ ಬಸವರಾಜ ಬಾಗಲಿ, ಶಿಕ್ಷಣ ಸಂಯೋಜಕರು
             ಶರಣಪ್ಪ ವಡಗೇರಿ, ಜಾನಪದ ಕಲಾವಿದ
             ಶ್ರೀ ಈಶಪ್ಪ ತಳವಾರ  ಮು.ಗು.ಸರ್ಕಾರಿಪ್ರೌಢಶಾಲೆ,ಜಾಹಗೀರಗುಡದೂರ
             ಶ್ರೀ ಶಿವಪುತ್ರಪ್ಪ 


ದಿನಾಂಕ 18.12.2010 ಬೆ : 11.00 ಕ್ಕೆ
ಸ್ಥಳ : ಗುರು ಭವನ, ಕುಷ್ಟಗಿ


ಸರ್ವರಿಗೂ ಸ್ವಾಗತ

ಕರ್ನಾಟಕ ಬಾಲ ವಿಕಾಸ ಅಕಾಡೆಮಿ-ಧಾರವಾಡ

ಶ್ರೀ ಮೊರಾರ್ಜ ದೇಸಾಯಿ ವಸತಿ ಶಾಲೆ,ನಿಡಶೇಸಿ, ಶಿಕ್ಷಕವರ್ಗ



ಅರಳು ಮೊಗ್ಗು - ರಂಗ ತರಬೇತಿ












ಅರಳುಮೊಗ್ಗು 

 ನಮ್ಮ ನಾಟಕ ಶಿಕ್ಷಕರಾದ ಗುರುರಾಜ್ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇವೆ ಏಕೆಂದರೆ ಇಡೀ ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಆರಿಸಿಕೊಂಡಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ. ಗುರುರಾಜ್ ಸರ್ ಅವರು ನಮಗೆ 15 ದಿನಗಳವರೆಗೆ ತರಬೇತಿ ಕೊಟ್ಟು 6 ಶಾಲೆಯಲ್ಲಿ ನಾಟಕವನ್ನು ಪ್ರದರ್ಶಿಸಿದೆವು. ಈ ನಾಟಕದ ಹೆಸರು ಕತ್ತಲೆ ನಗರಿ ತಲೆಕೆಟ್ಟ ರಾಜ ಇದು 9ನೇ ತರಗತಿಯ ಹಿಂದಿ ಪಾಠ ದಲ್ಲಿದೆ.
 ಗುರುರಾಜ್ ಸರ್ ಅವರು ನಮ್ಮಲ್ಲಿ 15 ದಿನಗಳ ತರಬೇತಿಯಲ್ಲಿ ನಮಗೆ ಬಲೂನಿನ ಮುಖವಾಡಗಳ ತಯಾರಿಕೆ ಮಣ್ಣಿನ ಮುಖವಾಡಗಳ ತಯಾರಿಕೆ ತಿಳಿಸಿದರು ನಂತರ ಅನೇಕ ರೀತಿಯ ಆಟಗಳನ್ನು ಇದರಿಂದ ನಮಗೆ ಕವಿಗಳ ಹೆಸರುಗಳು ತಿಳಿದವು. ನಮ್ಮ ಪಾಠ ಪುನರಾವರ್ತನೆಯಾಯಿತು. ಕೆಲವು ದಿನಗಳ ನಂತರ ಎಲ್ಲರಿಂದ ಅನೇಕ ಚಟುವಟಿಕೆಗಳನ್ನು ಮಾಡಿಸಿದರು. ಅದರಿಂದ ಧ್ವನಿಗಳ ಆಧಾರದ ಮೇಲೆ ಅವರಿಗೆ ಪಾತ್ರಗಳನ್ನು ಹಂಚಿದರು ನಮ್ಮ ಶಾಲೆಯಲ್ಲಿನ ವಸ್ತುಗಳನ್ನೇ ಬಳಸಿ ಅನೇಕ ನಾಟಕಕ್ಕೆ ಬೇಕಾಗುವ ಪೀಠೋಪಕರಣಗಳನ್ನು ಮಾಡಿಸಿದರು. ಕೆಲವು ದಿನಗಳ ನಂತರ ನಮ್ಮ ನಾಟಕದ ಅಭ್ಯಾಸವು ಪೂರ್ಣವಾಗಿ ಮುಗಿಸಿ 6 ಶಾಲೆಗಳಿಗೆ ಭೇಟಿ ನೀಡಿದೆವು. ಅವುಗಳೆಂದರೆ ಹನುಮಸಾಗರ, ತಳವಗೇರಾ, ಕೊರಡಕೆರ, ಮಾವಿನ ಇಟಗಿ ಮಕ್ಕಳಿಗೆ ನಮ್ಮ ಗುರುಗಳು ಕಲಿಸಿದ ಪಾಠಗಳನ್ನು ಕಲಿಸಿದ ನಂತರ ಕೊನೆಯದಾಗಿ ಕುಷ್ಟಗಿಯಲ್ಲಿ ನಮ್ಮ ಪ್ರದರ್ಶನದಲ್ಲಿ ಅನೇಕ ಶಾಲಾ ಕಾಲೇಜುಗಳಿಂದ ಬಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಮ್ಮ ನಾಟಕವನ್ನು ನೋಡಿ ಆನಂದಿಸಿದರು ಇದು ನಮ್ಮ ಅನಿಸಿಕೆಯಾಗಿದೆ. 

ಕಾವ್ಯ ಬಿ ಬಿಂಗಿ ಕೊಪ್ಪದ 
9ನೇ ತರಗತಿ 
ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ,
ನಿಡಶೇಸಿ.











ಜೀವಕಳೆ ನೀಡಿದ ನಾಟಕ ಪ್ರದರ್ಶನ


ಕರ್ನಾಟಕ ಬಾಲವಿಕಾಸ ಅಕಾಡೆಮಿಯ ವತಿಯಿಂದ ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದಲ್ಲಿರುವ ಶ್ರೀ ಮೊರಾರ್ಜಿ ದೇಸಾಯಿವಸತಿ ಶಾಲೆಯಲ್ಲಿ೧೫ ದಿನಗಳ "ಅರಳು ಮೊಗ್ಗು " ಮಕ್ಕಳ ರಂಗ ಶಿಬಿರ ವನ್ನು ನಡೆಸಿ ಬೇರೆ ಬೇರೆ ೫ ಊರಿನ ಶಾಲೆಗಳಲ್ಲಿನಾಟಕ ಪ್ರದರ್ಶನದ ಜೊತೆಗೆ ಅಲ್ಲಿಯ ಮಕ್ಕಳಿಗೆ ನಮ್ಮ ಶಿಬಿರಾರ್ಥಿಗಳು ರಂಗಾ ಟಗಳು, ರಂಗಾ ಗಿತೆಗಳನ್ನುಹೇಳಿಕೊಟ್ಟರು. ಇಲ್ಲಿನಾವು ೧೫ ದಿನಗಳ ರಂಗಾ ತರಬೇತಿಯ ಮಕ್ಕಳ ತರಬೇತಿಯ ಛಾಯಾ ಚಿತ್ರಗಳನ್ನು ಹಾಕಿದ್ದೇನೆ.



ಗುರುರಾಜ .ಎಲ್

























ಇಂದಿನ ನಾಟಕ ಪ್ರದರ್ಶನ "ಕತ್ತಲೆ ನಗರ ತಲೆಕೆಟ್ಟ ರಾಜ " ಚೆನ್ನಾಗಿ ಮುಡಿ ಬಂದಿದೆ. ಮಕ್ಕಳ ನೈಜ ಪ್ರತಿಭೆ- ನಾಟಕ ಪಾತ್ರಕ್ಕೆ ಜೀವ ತುಂಬಿ ಜೀವಕಳೆ ನೀಡಿ ನಾಟಕ ಪ್ರದರ್ಶನ ಮಾಡಿದ್ದು ತುಂಭಾ ಶ್ಲಾಘನೀಯ. ನಿರ್ಧೇಶನ ನೀಡಿದ ಶ್ರೀ ಗುರುರಾಜ ರವರಿಗೆ ಧನ್ಯಾವಾದಗಳು.

ಶ್ರೀ ಬಸವರಾಜ ಬಾಗಲಿ
ಶಿಕ್ಷಣ ಸಂಯೋಜಕರು , ಕುಷ್ಟಗಿ