ಶನಿವಾರ, ಫೆಬ್ರವರಿ 28, 2015

ಬಸವಣ್ಣನು ಚನ್ನಬಸವನ ಪೆನ್ಸಿಲ್, ಸ್ಕೆಚ್ ನಿಂದ

ವಿದ್ಯಾರ್ಥಿ ಚನ್ನಬಸವ ನೀಲಗುಂದ, ೯ ನೆ ತರಗತಿ

ಬುಧವಾರ, ಫೆಬ್ರವರಿ 25, 2015

ಮಂಗಳವಾರ, ಫೆಬ್ರವರಿ 24, 2015

ಪ್ರಾಣ ಉಳಿಸಿ ಅಭಿನಂದಕ್ಕೆ ಅರ್ಹರಾದ ಆನಂದಪ್ಪ ಕುರಿ

       ಮೊನ್ನೆಯ ದಿನ ಶಾಲೆಯ ಕಳವು ಪ್ರಕರಣದಿಂದ ಇಡೀ ಶಾಲಾ ಸಿಬ್ಬಂದಿ ವರ್ಗದಲ್ಲಿ ಅತ್ಯಂತ ಆತಂಕ ಹಾಗೂ ದುಃಖ ಮಡುಗಟ್ಟಿತ್ತು. kscst ರಾಜ್ಯ ಕಛೇರಿಯಿಂದ ನೀಡಲ್ಪಟ್ಟ ಮಕ್ಕಳ ಕಲಿಕೆಗಾಗಿ ೮,೯ ಹಾಗೂ ೧೦ ನೆ ತರಗತಿಯ ದೃಶ್ಯ ಪಾಠಗಳನ್ನು ಚಿಕ್ಕ ಲ್ಯಾಪ್ ಟಾಪ್ ನಲ್ಲಿ ತುಂಬಿ ನೀಡಲಾಗಿತ್ತು. ಅದು ವಿದ್ಯಾರ್ಥಿಗಳಿಗೆ ಬಿಟ್ಟರೆ ಮತ್ತಾರಿಗೂ ಉಪಯೋಗವಿಲ್ಲ. ಅಲ್ಲದೇ ಅದು ನಮ್ಮ virtual lab ಲ್ಲಿ ಮಾತ್ರ ಬಳಕೆಗೆ ಬರುವಂತೆ ಮಾಡಿದ್ದು, ಅದು ಎಲ್ಲಿಯು ಉಪಯೋಗಕ್ಕೆ ಬರುವುದೇ ಇಲ್ಲ. ಅಷ್ಟೇ ಅಲ್ಲದೇ LED ಟಿ.ವಿ, ಬ್ಯಾಟರಿ, ಇನ್ ವೇಟರ್ ಹಾಗೂ ಚರ್ಜಾರ್ ಗಳನ್ನು ಶಾಲೆಯ ಬೀಗಗಳನ್ನು ಮುರಿದು ಕದ್ದು ಒಯ್ದಿದ್ದಾರೆ. ಮಕ್ಕಳ ಅಭ್ಯಾಸಕ್ಕೆ ಪೂರಕವಾದವುಗಳನ್ನೇ ತೆಗೆದುಕೊಂಡು ಹೋದಾಗ ಅದರಿಂದ ತಮಗೇನು ಲಾಭ...? ಮಕ್ಕಳ ಅಭ್ಯಾಸಕ್ಕೂ ಹಾನಿ ಮಾಡುವ ಇಂಥಹ ನಮ್ಮ ನಡುವಿನವರಿಗೆ ಏನೆಂದು ಹೇಳಬೇಕು.

         ಆ ನೋವಿನಿಂದ ಹೊರ ಬರಲು ಆಗದೇ ನಮ್ಮ ಎಲ್ಲ ಶಿಕ್ಷಕ ವೃಂದ ಸಂಕಟಪಡುತ್ತಿದೆ. ಅದೇ ನಿನ್ನೆಯ ದಿನ ನಮ್ಮ ಶಾಲೆಯ ಆನಂದಪ್ಪ ಕುರಿಯವರು ಒಂದು ಚಿಕ್ಕ ಮಗುವಿನ ಪ್ರಾಣ ಉಳಿಸಿ ಅಭಿನಂದಕ್ಕೆ ಅರ್ಹರಾಗಿದ್ದರೆ. ಟಾಟಾ ಎ.ಸಿ ಯಲ್ಲಿ ಗಜೇಂದ್ರಗಡದಿಂದ ಶಾಲೆಗೆ ಬರುವಾಗ ಹಿರೇಗೊಣ್ಣಗರದ ಪ್ರಾಥಮಿಕ ಶಾಲೆಯ ಬಳಿ ಇರುವ ಹೊಲದಲ್ಲಿ ನಡೆದ ಘಟನೆ. ರಸ್ತೆಯ ಪಕ್ಕದಲ್ಲಿಯೇ ಹೊಲಕ್ಕಾಗಿ ನೀರು ನಿಲ್ಲಲು ನಿರ್ಮಿಸಿದ ತೊಟ್ಟಿ (ದೋಣಿ) ಯಲ್ಲಿ ಇರುವ ಬೋರ್ ಅದು. ೨ ರಿಂದ ೩ ಅಡಿ ಆಳವಿರುವ ತೊಟ್ಟಿಯಲ್ಲಿ ಕರೆಂಟ್ ಇದ್ದಾಗ ಹೊಲದವರು ಬೋರ್ ನ್ನು ಚಾಲೂ ಮಾಡೋರು. ಅಲ್ಲಿಯೇ ಪಕ್ಕದಲ್ಲಿರುವ ಪ್ರಾಥಮಿಕ ಶಾಲ ಮಕ್ಕಳು ಇತ್ತ ಹಾಯುವುದು ಕಡಿಮೆ.  ಶಾಲೆಯ ಮಕ್ಕಳಿಗೆ ಈ ನೀರು ಅಂಥಹ ಅಪಾಯದ ಸ್ಥಿತಿಯನ್ನೇನು ತಂದು ಒಡ್ಡುವಂಥದ್ದಲ್ಲ. ಆದರೆ ನಮ್ಮ ಪಾಲಕರ ಬೇಜಾವಬ್ದಾರಿಯಿಂದಾಗಿ ಕೆಲವು ಅನಾಹುತಗಳು ಜರುಗಿದ್ದವನ್ನು ಕಂಡಿದ್ದೇವೆ. ಅಂಥಹ ಕ್ಷಣ ಇದಾಗದಿದ್ದದೇ ಒಳ್ಳೆಯದು.

           ನಮ್ಮ ಶಾಲೆಯ ಧ್ವಿತೀಯ ದರ್ಜೆ ಸಹಾಯಕರಾದ ಆನಂದಪ್ಪ ಕುರಿಯವರು ಎಂದಿನಂತೆ ಶಾಲೆಗೆ ಹತ್ತಿರದ ಗಜೇಂದ್ರಗಡದಿಂದ ಬಿಸಿಯೂಟಕ್ಕಾಗಿ ತರಕಾರಿಯನ್ನು ತರುವುದು ದಿನನಿತ್ಯದ ಪದ್ಧತಿ. ಹಾಗೇ ಮೊನ್ನೆ ಟಾಟಾ ಎಸಿ ಯಲ್ಲಿ ಬರುವಾಗ ಒಂದು ೭-೮ ವರ್ಷದ ಮಗು  ಈ ತೊಟ್ಟಿಯ ಕಡೇ ಚಿಕ್ಕ ಬಿಂದಿಗೆಯನ್ನು ಹಿಡಿದು ನೀರು ತರಲು ಬಂದಿದೆ. ಆ ಮಗುವಿನ ಹಿಂದೆ ೨-೩ ವರ್ಷದ ಮಗು ಆಡುತ್ತಾ ಹಾಗೇ ಬಂದಿದೆ. ಬಿಂದಿಗೆಯನ್ನು ನೀರು ಬರುತ್ತಿರುವ ಕೊಳವೆ ಬಳಿ ಈ ಮಗು ತೆಗೆದುಕೊಂಡು ಹೋಗಿ ಬಿಂದಿಗೆ ತುಂಬಿಸುವ ಪ್ರಯತ್ನದಲ್ಲಿದ್ದಾಗ ಚಿಕ್ಕ ಮಗು ನೀರಿನೊಳಗೆ ಹಾಗೇ ಸಾಗುತ್ತಾ ಬಂದು ಬಿದ್ದು ಬಿಟ್ಟಿದೆ. ಇದನ್ನು ಕಂಡಾ ಮಗು ಬಿಂದಿಗೆ ಬಿಟ್ಟು ಏನು ಮಾಡಬೇಕು ಎಂದು ತಿಳಿಯದೇ ಜೋರಾಗಿ ಕಿರುಚಲು ಪ್ರಾರಂಭಿಸಿದೆ. ಸುತ್ತಾ ಮುತ್ತಾ ಯಾರು ಸ್ಥಳೀಯರು ಇಲ್ಲ. ಶಾಲೆ ತರಗತಿಗಳು ಪ್ರಾರಂಭವಾಗಿದ್ದರಿಂದ ಶಿಕ್ಷಕರು ಹಾಗೂ ವಿದ್ಯಾರ್ಹಿಗಳು ಕೋಣೆಯೊಳಗೆ ಸೇರಿದ್ದಾರೆ. ಅದೇ ಸಮಯಕ್ಕೆ ಗೊಣ್ಣಗರದ ಕಡೇಯಿಂದ ಬಾದಿಮನಾಳ ಕ್ರಾಸ್ ಕಡೇ ಸಾಗುತ್ತಿದ್ದ, ಗಾಡಿಯಲ್ಲಿ ನಮ್ಮ ಆನಂದಪ್ಪ ಕುರಿಯವರ ಗಮನ ಈ ಮಕ್ಕಳ ಮೇಲೆ ಬಿದ್ದಿದ್ದು. ತಕ್ಷಣವೇ ಗಾಡಿ ನಿಲ್ಲಿಸಿ ಓಡಿದ್ದಾರೆ. ಮಗುವಿ ಕೇವಲ ಕೈ  ಮಾತ್ರ  ಕಾಣತ್ತಿದ್ದು ತಕ್ಷಣವೇ ಆ ಮ್ಗುವನ್ನು ನೀರಿನಿಂದ ಎತ್ತಿ ರಕ್ಷಣೆ ಮಾಡಿದ್ದಾರೆ. ಇನ್ನೋಂದು ಗಳಿಗೆ ತಡವಾಗಿದ್ದರೆ ಇಡೀ ಕುಟುಂಬ ಊರು ದುಃಖದ ಮಡುವಿನಲ್ಲಿರಬೇಕಾಗಿತ್ತು. ಆದರೆ ಸಮಯ ಒಳ್ಳೆಯದಾಗಿದ್ದರಿಂದ ಆ ಮಗು ಉಳಿಯಿತು.

          ಇಂಥಹ ಒಳ್ಳೆಯ ಕಾರ್ಯ ಮಾಡಿದ ನಮ್ಮ ಆನಂದಪ್ಪ ಕುರಿಯವರಿಗೆ ನಾವು ನಮ್ಮ ಶಾಲೆ ಹಾಗೂ ಎಲ್ಲ ಶಿಕ್ಷಕ, ವಿದ್ಯಾರ್ಥಿಗಳಿಂದ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
ಆನಂದಪ್ಪ ಕುರಿ

ಶನಿವಾರ, ಫೆಬ್ರವರಿ 21, 2015

ಬಣ್ಣದ ತಗಡಿನ ತುತ್ತೂರಿ...

( ಶ್ರೀವತ್ಸ ಜೋಷಿ ಯವರು ತಮ್ಮ Facebook ನಲ್ಲಿ ಮೂಡಿಸಿದ್ದನ್ನು ಇಲ್ಲಿ ಹಂಚಿಕೊಂಡಿದ್ದೇವೆ. )



 ಜಿ.ಪಿ.ರಾಜರತ್ನಂ ಅವರ ಅತಿಪ್ರಖ್ಯಾತ ಪದ್ಯ "ಬಣ್ಣದ ತಗಡಿನ ತುತ್ತೂರಿ"!

ಇದು ಕೂಡ ನನಗೆ ’ಕಂದನ ಕಾವ್ಯ ಮಾಲೆ’ ಪುಸ್ತಕದಲ್ಲಿ ಸಿಕ್ಕಿತು. 1933ರಲ್ಲಿ ಮುದ್ರಿತವಾದ ಆ ದಿವ್ಯ ಅಕ್ಷರಗಳ ಡಿಜಿಟಲ್ ಪ್ರತಿಯನ್ನೇ ಇಲ್ಲಿ ಬಳಸಿದ್ದೇನೆ. ಆಮೇಲೆ ಬಹಳಷ್ಟು ಪಠ್ಯಪುಸ್ತಕಗಳಲ್ಲಿ, ಮತ್ತು ಬೊಳುವಾರರ ’ತಟ್ಟು ಚಪ್ಪಾಳೆ ಪುಟ್ಟ ಮಗು’ ಸಂಕಲನದಲ್ಲೂ ಈ ಪದ್ಯ ಸೇರಿಕೊಂಡಿದೆಯಾದರೂ, ಜಿ.ಪಿ.ರಾಜರತ್ನಂ ಅವರೇ ಸಂಪಾದಕರಾಗಿ ಪ್ರಕಟಿಸಿದ ಪುಸ್ತಕದಿಂದ ಆಯ್ದುಕೊಂಡಿದ್ದೇನೆ ಎಂಬ ಹೆಮ್ಮೆ 
smile emoticon
 ಅಲ್ಲದೇ, ಇದು ಜಿ.ಪಿ.ರಾಜರತ್ನಂ ಬರೆದ ಮೊತ್ತಮೊದಲ ಶಿಶುಗೀತೆಯೂ ಹೌದು.

’ಹಾಡು ಹುಟ್ಟಿದ ಸಮಯ’ ಅಂಕಣದಲ್ಲಿ ಕನ್ನಡ ಚಿತ್ರಗೀತೆಗಳ ಉಗಮದ ಬಗ್ಗೆ ಮಣಿಕಾಂತ್ ಅವರು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದಂತೆ ಈ ಪದ್ಯದ ಉಗಮದ ಕುರಿತು ವಿವರಿಸುವುದಾದರೆ ಹೀಗಿದೆ:

ರಾಜರತ್ನಂ ಅವರು 1932ರಲ್ಲಿ ಎಂ.ಎ ಪದವೀಧರರಾದರು. ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ತತ್‌ಕ್ಷಣ ಸಿಗಲಿಲ್ಲ. ಏತನ್ಮಧ್ಯೆ ಅವರ ತಂದೆಯವರ ಆರೋಗ್ಯ ಕೆಟ್ಟಿತು. ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು ತರಗತಿಗಳಿಗೆ ಹೋಗದಿರಲಾಗಿ ರಾಜರತ್ನಂ ಅವರೇ ಬದಲಿಶಿಕ್ಷಕರಾಗಿ ಹೋದರು. ಆದರೆ ಅಲ್ಲಿ ಪಠ್ಯವಿಷಯವಾಗಿ ಮಕ್ಕಳಿಗೆ ಅರ್ಥವಾಗದಂಥ, ಕಬ್ಬಿಣದ ಕಡಲೆಯಂಥ ಪದ್ಯಗಳಿದ್ದುದನ್ನು ಕಂಡು ಮರುಗಿದರು. ‘ಎಂಟು ಗೇಣಿನ ದೇಹ, ರೋಮಗಳೆಂಟು ಕೋಟಿಯು, ಮೂಳೆ ಅರವತ್ತೆಂಟು...’ ಎನ್ನುವ ಹರಿಭಕ್ತಿಸಾರದ ಪದ್ಯ, Winning of the golden fleece ಗ್ರೀಕ್ ಪುರಾಣವನ್ನು ’ಕನಕೋರ್ಣಾರ್ಜುನ’ ಎಂದು ಅನುವಾದ ಮಾಡಿದ್ದು- ಇದನ್ನೆಲ್ಲ ಈ ಪುಟ್ಟ ಮಕ್ಕಳು ಹೇಗೆ ತಾನೆ ಸವಿಯಬಲ್ಲವು ಎಂದು ಅವರಿಗೆ ಬೇಸರವಾಯಿತು. ಅವತ್ತು ಸಂಜೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸ್ನಾನಘಟ್ಟದಲ್ಲಿ ಕಾಲು ಚಾಚಿ ಕುಳಿತುಕೊಂಡಾಗಲೂ ರಾಜರತ್ನಂ ಅವರಿಗೆ ಒಂದೇ ಯೋಚನೆ- ಮಕ್ಕಳಿಗೆ ಇಷ್ಟವಾಗುವ ಹಾಗೆ ಏನಾದರು ಬರಿಯಬೇಕು ಎಂದು. ಅದೇ ಕ್ಷಣದಲ್ಲಿ ಅವರ ತಲೆಯಲ್ಲಿ ತುತ್ತೂರಿ ಧ್ವನಿಸಿತು! ಪದ್ಯ ಬರೆದೇಬಿಟ್ಟರು. ರಾಗ ಹಾಕಿದರು, ಇದನ್ನು ಕೇಳಿದರೆ ಮಕ್ಕಳು ಎಷ್ಟು ಸಂತೋಷ ಪಡಬಹುದೆಂಬ ಹುಮ್ಮಸ್ಸಿನಲ್ಲೇ ರಾತ್ರಿಯೆಲ್ಲ ಕಳೆದರು. ಮಾರನೇದಿನ ಶಾಲೆಯಲ್ಲಿ ಪಾಠ ಮುಗಿದ ಮೇಲೆ, ’ತುತ್ತೂರಿ’ಯನ್ನು ಕರಿಹಲಗೆಯ ಮೇಲೆ ಬರೆದರು. ಮಕ್ಕಳಿಂದ ಹಾಡಿಸಿದರು. ಮಕ್ಕಳ ಹಿಗ್ಗಿಗೆ ಪಾರವಿಲ್ಲ. ಆ ಕಂದಮ್ಮಗಳ ಮೊಗದಲ್ಲಿ ನಗು ಕಂಡ ರಾಜರತ್ನಂ ಅವರ ಖುಷಿಗೂ ಪಾರವಿಲ್ಲ!

ಹಾಗಂತ, "ಅರ್ಜೆಂಟಿಗೆ ಹಡೆದ ಕೂಸು" ಎಂಬಂಥ ರಚನೆಯೇನಲ್ಲ ಇದು. ಮಕ್ಕಳ ಪದ್ಯಕ್ಕೆ ಅತ್ಯಗತ್ಯವಾದ ಲಯಬದ್ಧತೆ ಇದರಲ್ಲಿದೆ. ಬಣ್ಣದ/ ತಗಡಿನ/ ತುತ್ತೂರಿ/... ಕಾಸಿಗೆ/ ಕೊಂಡನು/ ಕಸ್ತೂರಿ... - ಹೀಗೆ ಪ್ರತಿ ಪಂಕ್ತಿಯಲ್ಲಿ ಮೂರು ನಿಲುಗಡೆಗಳು, ಅನುಕ್ರಮವಾಗಿ ನಾಲ್ಕು, ನಾಲ್ಕು ಮತ್ತು ಐದು ಮಾತ್ರೆಗಳ ಮೂರು ಗಣಗಳು. ಲಾಲಲ/ಲಲಲಲ/ಲಾಲಾಲ... ಲಾಲಲ/ಲಾಲಲ/ಲಾಲಾಲ... ಎಂದು ಗುಣುಗುಣಿಸಿಕೊಳ್ಳುತ್ತಿರುವಾಗಲೇ ಕಂಠಪಾಠವಾಗುತ್ತದೆ. ಲಯವನ್ನು ಅದು ಎಲ್ಲಿಯೂ ಬಿಡುವುದಿಲ್ಲ. ಉದಾಹರಣೆಗೆ: ತುತ್ತೂರಿ ಮತ್ತು ಕಸ್ತೂರಿ - ಇವು ಐದು ಮಾತ್ರೆಗಳ ಪದಗಳು. ಆದರೆ ನಾಲ್ಕು ಮಾತ್ರೆಯ ಪದವಾಗಿ ಬಳಸಬೇಕಾದಲ್ಲೆಲ್ಲ ರಾಜರತ್ನಂ ಅವುಗಳನ್ನು ಮೊಟಕುಗೊಳಿಸುತ್ತಾರೆ. 'ತನಗೇ ತುತ್ತುರಿ ಇದೆಯೆಂದ' (ಗಮನಿಸಿ: ತುತ್ತೂರಿಯ ಬದಲು ತುತ್ತುರಿ); 'ಕಸ್ತುರಿ ನಡೆದನು ಬೀದಿಯಲಿ' (ಗಮನಿಸಿ: ಕಸ್ತೂರಿಯ ಬದಲು ಕಸ್ತುರಿ). ಪದ್ಯದ ಕೊನೆಯಲ್ಲಿ ನೀತಿಬೋಧೆಯಂತೂ ಇದ್ದೇಇದೆ. ಇನ್ನೇನು ಬೇಕು ಅತ್ಯಂತ ಜನಪ್ರಿಯ ಶಿಶುಗೀತೆಯಾಗಿ ಪ್ರಸಿದ್ಧಿ ಹೊಂದಲಿಕ್ಕೆ?

ರಾಜರತ್ನಂರವರ ಸಮಕಾಲೀನರಾಗಿದ್ದ ನಾ.ಕಸ್ತೂರಿ (’ಅನರ್ಥಕೋಶ’ದಿಂದ ಪ್ರಖ್ಯಾತ) ಅವರು ಒಮ್ಮೆ ರಾಜರತ್ನಂರನ್ನು ಕರೆದು, "ಲೋ, ರಾಜರತ್ನ, ಪದ್ಯ ಬರೆದು ನನಗೆ ಅವಮಾನ ಮಾಡಿದ್ದೀಯಲ್ಲೋ" ಎಂದು ತಮಾಷೆಗೆಂದೇ ತರಾಟೆಗೆ ತೆಗೆದುಕೊಂಡಿದ್ದರಂತೆ. ರಾಜರತ್ನಂ ಕಕ್ಕಾಬಿಕ್ಕಿಯಾಗಿ "ಇಲ್ಲವಲ್ಲ ಸಾರ್" ಎಂದರಂತೆ. ಅದಕ್ಕೆ ನಾ.ಕಸ್ತೂರಿಯವರು "ಯಾಕೋ ಇಲ್ಲ, ಬರೆದಿದ್ದೀಯ: ಬಣ್ಣದ ತಗಡಿನ ತುತ್ತೂರಿ. ಕಾಸಿಗೆ ಕೊಂಡನು ಕಸ್ತೂರಿ ಅಂತ ಬರೆದಿಲ್ವೇನಯ್ಯ? ಅಲ್ಲದೆ ಕೊನೇಲಿ 'ಜಂಬದ ಕೋಳಿಗೆ ಗೋಳಾಯ್ತು' ಅಂತ ಬೇರೆ ಹೇಳಿದೀಯ! ಹೇಳು, ನಾನು ಜಂಬದ ಕೋಳಿಯೇನೋ?" ಎಂದು ಕಿಚಾಯಿಸಿದರಂತೆ. ಅಂದರೆ, ಫೇಸ್‌ಬುಕ್‌ನಲ್ಲಿ tag ಮಾಡಿದ ಹಾಗೆ ರಾಜರತ್ನಂ ಪದ್ಯದಲ್ಲಿ ಟ್ಯಾಗ್ ಮಾಡಿದ್ದಾರೆ ಎಂದು ನಾ.ಕಸ್ತೂರಿಯವರ ತಕರಾರು 
smile emoticon
 ಆದರೆ ಅಂಥ ಸರಸ ಘಟನೆಗಳು ಆಗಿನ ಸಜ್ಜನರ ನಿರ್ಮಲತೆಯನ್ನೂ, ಸರಳತೆಯನ್ನೂ, ತಮ್ಮ ಸಮಕಾಲೀನರ ಪ್ರತಿಭೆ ಮತ್ತು ಯಶಸ್ಸನ್ನು ಸಂಭ್ರಮಿಸುವುದನ್ನೂ ತೋರಿಸುತ್ತವೆ.

ಕನ್ನಡ ಶಿಶುಸಾಹಿತ್ಯವನ್ನು ರಾಜರತ್ನಂ ಶ್ರೀಮಂತಗೊಳಿಸಿದರು. ಪ್ರಗತಿಶೀಲ ಮತ್ತು ನವ್ಯಸಾಹಿತ್ಯ ಸಂದರ್ಭದಲ್ಲಿ ಬಾಲಸಾಹಿತ್ಯ ಅಲಕ್ಷ್ಯಕ್ಕೆ ಒಳಗಾಗಿತ್ತು. ಮೊದಲನೆಯದಾಗಿ ಬಾಲಕ-ಬಾಲಕಿಯರು ಸಮಾಜದ ಭವಿಷ್ಯವನ್ನು ನಿರ್ಮಿಸುವವರು, ಅವರಲ್ಲಿ ಸಾಹಿತ್ಯಪ್ರೇಮ ಬೆಳೆಯದಿದ್ದರೆ ಅವರು ದೊಡ್ಡವರಾದ ಮೇಲೆ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟುವುದು ಕಷ್ಟ. ಎರಡನೆಯದಾಗಿ, ಸಾಹಿತ್ಯವು ಮಗುವಿನ ಬಾಲ್ಯಕ್ಕೆ ಬಾಹ್ಯಜಗತ್ತನ್ನೂ ಭಾಷೆಯ ಬಳಕೆಯನ್ನೂ ಏಕಕಾಲಕ್ಕೆ ಪರಿಚಯ ಮಾಡಿಕೊಡುವ ಒಂದು ವಿಶಿಷ್ಟ ಸಾಧನ. ಇದನ್ನು ಮನಗಂಡ ರಾಜರತ್ನಂರಂಥ ಸಾಹಿತಿಗಳು ಬಾಲಸಾಹಿತ್ಯದಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ರಾಜರತ್ನಂ ಅವರ ಮ್ಯಾಜಿಕ್ ಎಂದರೆ ಪರಿಚಿತ ಜಗತ್ತನ್ನೇ ಹೊಚ್ಚಹೊಸ ಜಗತ್ತನ್ನಾಗಿ- ಅಂದರೆ ಮಗು ಯಾರನ್ನಾದರೂ ಪ್ರಶ್ನಿಸಬಹುದಾದ ಅಥವಾ ಮಾತನಾಡಿಸಬಹುದಾದ ಜಗತ್ತನ್ನಾಗಿ- ಮಾರ್ಪಡಿಸುವುದು. ಮಗುವಿನ ಪದಸಂಪತ್ತಿಗೆ ಹೊಸ ಶಬ್ದಗಳನ್ನು ಸೇರಿಸುವುದು. ನಿತ್ಯಜೀವನದ ಮಾತುಕತೆಗೆ ಸಹಜವಾದ ಎಲ್ಲ ಬಗೆಯ ವಾಕ್ಯರಚನೆಗಳು ಪ್ರತ್ಯಕ್ಷವಾಗಿ ಮಗುವಿಗೆ ತನ್ನಿಂತಾನೇ ವಾಕ್ಯಗಳನ್ನು ಕಟ್ಟುವ ಶಕ್ತಿಯನ್ನು ಬೆಳೆಸುವುದು. ಕನ್ನಡ ಮಕ್ಕಳಿಗೆ ಕನ್ನಡ ಭಾಷೆಯ ಪದಸಂಪತ್ತು, ವಾಕ್ಯರಚನಾ ವಿಧಾನ, ಪ್ರಾಸಸಂಪತ್ತು, ನಾದಸಂಪತ್ತು ಇವೆಲ್ಲವನ್ನು ಖುಷಿಯಾಗಿ ಆಡುತ್ತಾ ಹಾಡುತ್ತಾ ಕಲಿಸುವ ಮಾರ್ಗವೆಂದರೆ ಅವರಿಗೆ ರಾಜರತ್ನಂರ ಶಿಶುಗೀತೆಗಳನ್ನು ಹೇಳಿಕೊಡುವುದು. ಮಕ್ಕಳು ಕನ್ನಡ ಭಾಷೆಯ ಸಂಪತ್ತನ್ನೂ ಸೊಗಸನ್ನೂ ಹೀರಿಕೊಳ್ಳುವಂತೆ ಮಾಡುವುದು.

ಶುಕ್ರವಾರ, ಫೆಬ್ರವರಿ 20, 2015

ಗುರುವಾರ, ಫೆಬ್ರವರಿ 19, 2015

ಒಳ್ಳೆಯ ದಿನಗಳು ಬರಲಿ

ಇಂದು ತುಂಭಾನೇ ಹಿಂಸೆಯಾಗಿದೆ. ಶಾಲೆಯ ಆರು ಕೋಣೆಯ ಬೀಗಗಳನ್ನು ಮುರಿದು ಕಳ್ಳತನ ನಡೆದು ಹೋಗಿದೆ. ಪೋಲೀಸ್ ಜೀಪುಗಳು ಮಕ್ಕಳು ಓಡಾಡುವ ಮೈದಾನದಲ್ಲಿ ಬಂದು ನಿಲ್ಲುವಂತಾಗಿದೆ. ದಿನ ಪೂರ್ತಿ ಮಕ್ಕಳು ಶಿಕ್ಷಕರು ಹೊರಗಡೆ ಇರಬೇಕಾದ ಸ್ಥಿತಿ. ಮಕ್ಕಳಿಗಾಗಿ ನೀಡಿದ್ದ ಲ್ಯಾಪ್ ಟಾಪ್, ಎಲ್.ಇ.ಡಿ,ಬ್ಯಾಟರಿ, ಇನ್ ವೇಟರ್ ಗಳನ್ನು ಕದ್ದು ಒಯ್ಯಲಾಗಿದೆ.. ಶಾಲೆಯ ತುಂಬಾ ಪೋಲಿಸ್ ಜೀಪು, ಊರ ಜನ, ನಾಯಿ  ಶೋಧನೆಯ ಕಾರ್ಯ ಬಿರುಸಿನಿಂದ ನಡೆದಿದೆ. ಮಕ್ಕಳಿಗೆ - ಶಿಕ್ಷಕರಿಗೆ ಆದ ಸಂಕಟ, ಹಿಂಸೆ ಅಷ್ಟಿಷ್ಟಲ್ಲ. ಸರಣಿ ಪರೀಕ್ಷೆ  ನಡೆಯುತಲಿದ್ದು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಆದ ದಿನದ ನಷ್ಟ, ಈ ಕಳುವಾದ ಸಾಮಾನುಗಳ ಬಳಕೆ ಮಕ್ಕಳಿಗಾಗಿಯೇ ಇರಬೇಕಾದದ್ದು, ಅದು ಯಾರ ಹೊಟ್ಟೆಗಾಗಿ ಅಲ್ಲ. ಸಮಸ್ಯ ಬಗೆ ಹರಿದು ಒಳ್ಳೆಯ ದಿನಗಳು ಬರಲಿ. ಮಕ್ಕಳ ಭವಿಷ್ಯದ ಜೊತೆ ಆಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ.

ಬುಧವಾರ, ಫೆಬ್ರವರಿ 18, 2015

Tatavapada

ಶುಕ್ರವಾರ, ಫೆಬ್ರವರಿ 13, 2015

ಮೇಕಪ್ ಕ್ಲಾಸ್




















ಪ್ರಸದಾನ ತರಗತಿಯಲ್ಲಿ ಮಕ್ಕಳು. ಶಾಲೆಯ ಎಲ್ಲ ಶಿಕ್ಷಕರೊಟ್ಟಿಗೆ  ಛಾಯಗ್ರಹಣಕ್ಕೆ ಪೋಸ್ ನೀಡಿದ್ದು.





ಹೈ.ಕ.ಪ್ರದೇಶದ ನಿವಾಸಿಗಳು ಅನುಚ್ಛೇದ 371 ಜೆ ಮೀಸಲಾತಿ ಪಡೆಯುವ ಬಗೆ

*   ಹೈದ್ರಾಬಾದ್ ಕರ್ನಾಟಕದ ಪ್ರದೇಶಕ್ಕೆ ಸಂಬಂಧಿಸಿದ ಆರೂ ಜಿಲ್ಲೆಗಳ, ಆಯಾ ಜಿಲ್ಲೆಯ ಕಂದಾಯ ಉಪ               
     ವಿಭಾಗಾಧಿಕಾರಿಗಳು (ಎ.ಸಿ) ಯವರು " ಅರ್ಹತಾ ಪ್ರಮಾಣ ಪತ್ರ " ವನ್ನು ನೀಡುವ ಸಕ್ಷಮ ಪ್ರಾಧೀಕಾರವಾಗಿದ್ದಾರೆ.

*   ಆರು ಜಿಲ್ಲೆಯನ್ನು ಹೊರತುಪಡಿಸಿ ಅನ್ಯರಿಗೆ ಈ ಪ್ರಮಾಣ ಪತ್ರ ಪಡೆಯುವ ಹಕ್ಕು ಇರುವುದಿಲ್ಲ.

*  ಸಕ್ಷಮ ಪ್ರಾಧಿಕಾರ ನಿಗದಿಪಡಿಸಿದ ನಿಯಮಾನುಸಾರ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿ ಸ್ಥಳೀಯರು ಈ "ಅರ್ಹತಾ ಪ್ರಮಾಣ ಪತ್ರ " ಪಡೆದುಕೊಂಡು ವಿಶೇಷ ಸೌಲಭ್ಯ ಪಡೆಯಲು ಹಕ್ಕನ್ನು ಹೊಂದಿದ್ದಾರೆ.

     ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ತುಂಬಾ ಪಾರದರ್ಶಕವಾಗಿ ಕಾರ್ಯ ನಡೆಯುತ್ತಾ ಇದೆ. ಶ್ರೀ ಮಂಜುನಾಥ ಕೊಪ್ಪಳದ ಸಕ್ಷಮ ಪ್ರಾಧಿತಾರಿ /AC ಸಾಹೇಬರು. ಚನಾಗಿ ಮತ್ತು ಕಟ್ಟು ನಿಟ್ಟಿನಿಂದ ಕೆಲಸ ನಿರ್ವಹಿಸುತ್ತಾ ಅರ್ಹರಿಗೆ ಮಾತ್ರ ಸಿಗುವಂತಾಗುತ್ತಿದೆ.

 ೧. ಅನುಬಂಧ - A     ಅರ್ಹತಾ ಪ್ರಮಾಣಪತ್ರ ಪಡೆಯುವುದು AC ಯಿಂದ.

 ೨. ಅನುಬಂಧ -  B     ವಾಸಸ್ಥಳ ಪ್ರಮಾಣಪತ್ರ ಪಡೆಯುವುದು ತಹಶೀಲ್ದಾರರಿಂದ.

 ೩. ಅನುಬಂಧ - C     ವ್ಯಾಸಂಗಪ್ರಮಾಣ ಪತ್ರ ಪಡೆಯುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ.

೪. ಅನುಬಂಧ - D     ಸ್ವಗ್ರಾಮ ಪ್ರಮಾಣಪತ್ರ - ಸರ್ಕಾರಿ ನೌಕರಿರಗೆ ಅವರ ನೇಮಕಾತಿ ಪ್ರಾಧಿಕಾರದಿಂದ (SR ನಂತೆ)

೫. ಅನುಬಂಧ - E    ಸಿಂಧುತ್ವ ಪ್ರಮಾಣಪತ್ರ ಜಿಲ್ಲಾ ತ್ರಿಸದಸ್ಯ ಕಮಿಟಿಯಿಂದ ( DC, CEO, SP )

         [ ಸಿಂಧುತ್ವ - ಅರ್ಹತಾ ಪ್ರಮಾಣ ಪತ್ರದ ಸರಿತನದ ಪರಿಶೀಲನೆಯೇ ಸಿಂಧುತ್ವ ]

* ಸರಕಾರಿ ನೌಕರರು 01.01.2013 ಕ್ಕಿಂತ ಮೊದಲು ಅಥಾವ 10 ವರ್ಷ ಆರೂ ಜಿಲ್ಲೆಯ ವ್ಯಾಪ್ತಿಯಲ್ಲಿ ವಾಸವಾಗಿದ್ದರೆ ಅವರು ಅರ್ಹರು ಎಂದು ಈ ಮೊದಲು ತಪ್ಪಾಗಿ ನಮೂದಾಗಿತ್ತು. ಆದರೆ ಅವರಿಗೆ ಈ ಅವಕಾಶ ಇಲ್ಲ ಮತ್ತು ಅವರು ಅರ್ಹರೂ ಅಲ್ಲ. ( ದಿ: 16.01.2015 & 18.01.2015 ರ ವಿಜಯ ಕರ್ನಾಟಕ ಪತ್ರಕೆ ನೋಡಬಹುದು.)

 ವ್ಯಾಪ್ತಿಗೆ ಒಳಪಡದವರು ಈಗಾಗಲೇ ಪ್ರಮಾಅಣಪತ್ರ ಪಡೆದುಕೊಂಡಿದ್ದರೆ ಮರಳಿ ಸಕ್ಷಮ ಪ್ರಾಧಿಕಾರಕ್ಕೆ ಹಿಂದುರುಗಿಸಬೇಕು. ಇಲ್ಲದಿದ್ದರೆ ಶಿಕ್ಷಾರ್ಹರು ಎಂದು ಆದೇಶ ಮಾಡಿದ್ದಾರೆ.

ಪ್ರಮಾಣ ಪತ್ರ ಪಡೆಯಲು ಅಗತ್ಯ ದಾಖಲೆಗಳು

1. ವರ್ಗಾವಣೆ ಪ್ರಮಾಣಪತ್ರ
2. ಚುನಾವಣಾ ಗುರುತಿನ ಪತ್ರ
3. ಆಧಾರ 
4. ವಂಶಾವಳಿ
5. ಪಹಣಿ/ಸ್ಥಿರಾಸ್ಥಿ/ಮನೆ ಉತಾರ
6. ವಾಸಸ್ಥಳ 
7. ವ್ಯಾಸಂಗ ಪ್ರಮಾಣಪತ್ರ

ಶಿವಪ್ಪ ಆರ್.ಇಲಾಳ
ಶಿಕ್ಷಕರು
ಸರಕಾರಿ ಪ್ರೌಡಶಾಲೆ
ಜಹಗೀರಗುಡದೂರ
ಕರೆಗಾಗಿ : 9731981167

ಗುರುವಾರ, ಫೆಬ್ರವರಿ 12, 2015

ಹದಿಹರೆಯದವರಿಗಾಗಿ ಆರೋಗ್ಯ ಶಿಕ್ಷಣ ಕಾರ್ಯಕ್ರಮ

ಇಂದು ಶಾಲಾ ಮಧ್ಯಾಹ್ನದ ಅವಧಿಯಲ್ಲಿ ಮಕ್ಕಳಿಗಾಗಿ " ಹದಿಹರೆಯ ಭವಿಷ್ಯದ ಅಡಿಪಾಯ " ರಾಜ್ಯ ಸರ್ಕಾರದ ಕಾರ್ಯಕ್ರಮದಡಿಯಲ್ಲಿ  ವಿದ್ಯಾರ್ಥಿಗಳಿಗಾಗಿ ಆರೋಗ್ಯದ ಕುರಿತು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಬುಧವಾರ, ಫೆಬ್ರವರಿ 11, 2015

ಹೈ.ಕ.ಪ್ರದೇಶಕ್ಕೆ ಅನುಚ್ಛೇದ 371 ಜೆ ಮೀಸಲಾತಿ ಸೌಲಭ್ಯದ ವಿವರ

ಏನಿದು 371 ನೇ ಕಲಂ ? :
                                      ಬುಡಕಟ್ಟು ಜನಾಂಗದ ಮತ್ತು ಶೋಷಿತ ವರ್ಗದ ಪ್ರದೇಶಕ್ಕೆ ವಿಶೇಷವಾದ ಮೀಸಲಾತಿ ಸೌಲಭ್ಯ ನೀಡುವುದು. ಜನ ಜೀವನವನ್ನು ಅಭಿವೃದ್ಧಿಪಥದತ್ತ ಸಾಗಿಸುವುದು.

371 ನೇ (ಜೆ) ಎಂದರೇನು ? :
                                      ಸಂವಿಧಾನದ 371 ನೇ ನಿಯಮಕ್ಕೆ  ತಿದ್ದುಪಡಿ ಮಾಡಿಸಿದ ಉಪನಿಯಮ "ಜೆ" ಎಂಬುದನ್ನು ಜಾರಿಗೊಳಿಸಲಾಯಿತು.
                                                                   
                                     ಈಗಾಗಲೇ 371 ನೇ ಕಲಂ ನ್ನು ತಿದ್ದು ಪಡೆ ಮಾಡಿಸಿ ಇಂಥಹ ಸೌಲಭ್ಯ ಪಡೆದ ರಾಜ್ಯಗಳೆಂದರೆ 

371 - ಎ  ನಿಯಮದಡಿ "ನಾಗಾಲ್ಯಾಂಡ್ " ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಬಿ  ನಿಯಮದಡಿ  "ಅಸ್ಸಾಂ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಸಿ  ನಿಯಮದಡಿ  " ಮಣಿಪುರ " ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಡಿ  ನಿಯಮದಡಿ  " ಆಂದ್ರಪ್ರದೇಶ"  ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಈ  ನಿಯಮದಡಿ  " ಮಹಾರಾಷ್ಟ್ರ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಎಫ್  ನಿಯಮದಡಿ  "ಸಿಕ್ಕೀಂ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಜಿ  ನಿಯಮದಡಿ  "ಮಿಜೋರಾಮ್" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಎಚ್  ನಿಯಮದಡಿ  "ಅರುಣಾಚಲ ಪ್ರದೇಶ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಐ  ನಿಯಮದಡಿ  "ಗೋವಾ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ. 
371 - ಜೆ  ನಿಯಮದಡಿ ನಮ್ಮ "ಕರ್ನಾಟಕ" ರಾಜ್ಯಕ್ಕೆ ಮೀಸಲಾತಿ ಸೌಲಭ್ಯ ದೊರಕಿದೆ.

                                     ಈ 371 ಜೆ ಕಲಂ ನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎಲ್ಲರೂ ಪಕ್ಷಬೇದ ಮರೆತು ಸರ್ವಾನುಮತದಿಂದ ಅಂಗೀಕಾರ ಮಾಡಿದರು. ದಿನಾಂಕ 01.01.2013 ರಂದು ಸನ್ಮಾನ್ಯ ರಾಷ್ಟ್ರಪತಿಗಳಿಂದ ಅನುಮೋದನೆಯಾಯಿತು. ಇದರಿಂದ ನಮ್ಮ ಸಂವಿಧಾನದ 98 ನೇ ತಿದ್ದುಪಡಿಯಾಯಿತು.

                                             ಕರ್ನಾಟಕ ಸರ್ಕಾರದಿಂದ ಈ ಪ್ರದೇಶ ಭಾಗಕ್ಕೆ ಸಾರ್ವಜನಿಕ ಉಧ್ಯೋಗದಲ್ಲಿ ಮೀಸಲಾತಿ ಹಾಗೂ ಶೈಕ್ಷಣಿಕವಾಗಿ ವೃತ್ತಿಪರ ಕೋರ್ಸ ಗಳ ಪ್ರವೇಶಾತಿಯಲ್ಲಿ ಈ 371 ನೇ ಜೆ ಕಲಂ ಅನ್ವಯವಾಗುತ್ತದೆ. ಸಾರ್ವಜನಿಕ ಉದ್ಯೋಗದಲ್ಲಿ ಖಾಲಿ ಇರುವಂತೆ 

    *  ಹುದ್ದೆಗಳಲ್ಲಿ ಶೇ 85 % ರಷ್ಟು ಮೀಸಲಾತಿಯನ್ನು ಗ್ರೂಪ್ " ಡಿ " ದರ್ಜೆಗೆ ನೀಡಲಾಗಿದೆ.

   *  ಹುದ್ದೆಗಳಲ್ಲಿ ಶೇಕಡಾ 80% ರಷ್ಟು ಮೀಸಲಾತಿಯನ್ನು ಗ್ರೂಪ್ " ಸಿ " ದರ್ಜೆಯ ನೌಕರರಿಗೆ ನೀಡಲಾಗಿದೆ.

   *  ಹುದ್ದೆಗಳಲ್ಲಿ ಶೇಕಡಾ 75 % ರಷ್ಟು ಮೀಸಲಾತಿಯನ್ನು ಗ್ರೂಪ್ " ಬಿ " ಹಾಗೂ " ಎ " ದರ್ಜೆಗೆ ನೀಡಲಾಗಿದೆ.

ಸರ್ಕಾರಿ ನೌಕರರಿಗೆ  ರಾಜ್ಯ ಸರ್ಕಾರ ನಿಗದಿ ಪಡಿಸಿದ ನಿಯಮವು ಈ ಬಡ್ತಿಗೆ ಅನ್ವಯವಾಗುತ್ತದೆ.

( ಮುಂದುವರಿಯುವುದು )
ಶಿವಪ್ಪ ಆರ್.ಇಲಾಳ
ಶಿಕ್ಷಕರು
ಸರಕಾರಿ ಪ್ರೌಢಶಾಲೆ
ಜಹಗೀರಗುಡದೂರ
ಕರೆಗಾಗಿ  : 9731981167


ಮಂಗಳವಾರ, ಫೆಬ್ರವರಿ 10, 2015

ಹೈ.ಕ.ಪ್ರದೇಶಕ್ಕೆ ಅನುಚ್ಛೇದ ೩೭೧ ಜೆ ಮೀಸಲಾತಿ ಸೌಲಭ್ಯ


                ೧೯೪೭ ಆಗಷ್ಟ ೧೫ ರಂದು ನಮ್ಮ ಭಾರತ ದೇಶಕ್ಕೆ ಸ್ವತಂತ್ರ ಸಿಕ್ಕಿತು ನಿಜ, ಆದರೆ ಹೈದ್ರಾಬಾದ್ ನಿಜಾಮನ ಅರಸೊತ್ತಿಗೆ ವ್ಯಾಪ್ತಿಗೆ ಒಳಪಟ್ಟಂತ ೧೬ ಜಿಲ್ಲೆಗಳಿಗೆ ಸ್ವತಂತ್ರದ ಅನುಭವ, ಹರ್ಷೋದ್ಘಾರ ಕೇವಲ ಕನಸಿನ ಮಾತಾಗಿ ಹೋಯಿತು. ನಿಜಾಮನ ಹೆಸರಿನಲ್ಲಿ ಅರಾಜಕತೆಯು ತಾಂಡವಾಡುತ್ತಿತ್ತು. ಹಿಂಸಾತ್ಮಕವಾದ ಆಡಳಿತದ ಕಪಿಮುಷ್ಠಿಯಲ್ಲಿ ಜನಸಾಮಾನ್ಯರೆಲ್ಲರೂ ತತ್ತರಿಸಿ ಹೋದರು. ಆಗಬಾರದ ಅನಾಹುತಗಳಾದವು. ಮತಾಂಧರ ದೌರ್ಜನ್ಯದಿಂದ ಮುಗ್ಧರ ಉಸಿರುಗಟ್ಟಿ ಹೋಗಿತ್ತು. ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿ ದಾರಿಕಾಣದ ಅನಾಥ ಬದುಕಿನಂತೆ ಅನಿವಾರ್ಯದ ಜೀವನ ನಡೆಸಬೇಕಾಯಿತು. 

              ದುಷ್ಟರ ದೌರ್ಜನ್ಯವನ್ನು ಮಟ್ಟಹಾಕಲು ಹಲವಾರು ಹೋರಾಟ ಸಮೀತಿಗಳ, ಸಂಘಟನೆಗಳು ಮತ್ತು ಸ್ವಯಂ ಸೇವಕ ಸಂಸ್ಥೆಗಳು ಹೈದ್ರಾಬಾದ್ ಸಂಸ್ಥಾನದ ವಿರುದ್ಧ ಅನೇಕ ಚಳುವಳಿಗಳು, ಹೋರಾಟಗಳು ಮತ್ತು ಉಗ್ರ ಪ್ರತಿಭಟನೆಗಳು ಪ್ರಾರಂಭಗೊಂಡವು. ಹೋರಾಟಗಳೆಲ್ಲವು ಹಿಂಸಾತ್ಮಕ ರೂಪ ತಾಳಿ ಅನೇಕ ತ್ಯಾಗ ಬಲಿದಾನಗಳಾದವು. ಇದನೆಲ್ಲ ಸೂಕ್ಷ್ಮ ರೀತಿಯಲ್ಲಿ ತಿಳಿದುಕೊಂಡ ಆಗಿನ ಕೇಂದ್ರ ಸರ್ಕಾರದ ಉಪ ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿಗಳಾಗಿದ್ದ ಉಕ್ಕಿನ ಮನುಷ್ಯರೆಂದೇ ಪ್ರಖ್ಯಾತರಾದ ಸನ್ಮಾನ್ಯಸರ್ದಾರ ವಲ್ಲಭಬಾಯಿ ಪಾಟೇಲರು ೧೩ ನೇ ಸೆಪ್ಟಂಬರ್ ೧೯೪೮ ರಿಂದ ೧೭ ಸೆಪ್ತೆಂಬರ್ ೧೯೪೮ ರವರೆಗೆ ಮಿಲಿಟರಿ ಕಾರ್ಯಚಾರಣೆ ಮಾಡಿಸಿದರು. ಈ ಕಾರ್ಯಚರಣೆಯಿಂದ ಮತಾಂಧರ ಅಟ್ಟಹಾಸದ ಆಡಳಿತಕ್ಕೆ ಅಂತ್ಯ ಹಾಡಿತು.

                   ನಮ್ಮ ಕರ್ನಾಟಕದ ಆಗಿನ ಅವಿಭಜಿತ ಜಿಲ್ಲೆಗಳಾದ ಬೀದರ, ಗುಲ್ಬರ್ಗಾ ಮತ್ತು ರಾಯಚೂರು ನಿಜಾಮನ ಆಡಳಿತಕ್ಕೋಳಾಪಟ್ಟಿದ್ದವು. ಇವೇ ಈಗಿನ ಬೀದರ್, ಗುಲ್ಬರ್ಗಾ,ಯಾದಗಿರಿ, ರಾಯಚೂರ, ಕೊಪ್ಪಳ ಮತ್ತು ಬಳ್ಳಾರಿ ಈ ಆರೂ ಜಿಲ್ಲೆಗಳು ಅರಸೊತ್ತಿಗೆಯ ಆಡಳಿತಕ್ಕೆ ಸಿಕ್ಕು ವಿಲ-ವಿಲನೇ ಒದ್ದಾಡಿಡ ನತದೃಷ್ಟ ತೀರಾ ಹಿಂದುಳಿದ ಜಿಲ್ಲೆಗಳು. ಈ ಜಿಲ್ಲೆಗಳಿಗೆ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸಿ ನಾಗರೀಕ ಪ್ರಗತಿಗಾಗಿ ಪ್ರಯತ್ನಿಸಿ ಸಂವಿಧಾನದ ೩೭೧ ನೇ ಕಲಂ ನ್ನು ಜಾರಿಗೊಳಿಸಿದ ಸರ್ಕಾರಕ್ಕೆ ಕನ್ನಡಿಗರ ಅನಂತ ವಂದನೆಗಳು.


ಶಿವಪ್ಪ ಆರ್. ಇಲಾಳ


(ಮುಂದುವರಿಯುವುದು)

ಶಿವಪ್ಪ ಆರ್. ಇಲಾಳ
ಶಿಕ್ಷಕರು
ಸರಕಾರಿ ಪ್ರೌಢಶಾಲೆ,
ಜಹಗೀರಗುಡದೂರ
ಕರೆಗಾಗಿ : 9731981167

ಸೋಮವಾರ, ಫೆಬ್ರವರಿ 9, 2015

ಸಾಂಸ್ಕೃತಿಕ ಅಧ್ಯಾಪಕರು

ಕಲಿಕೆ ನಮ್ಮ ಭವಿಷ್ಯವನ್ನು ರೂಪಿಸುತ್ತದೆ. ಚಿಕ್ಕವನಿಂದ ಹಿಡಿಸು ನಮ್ಮ ಅರಿವಿಗೆ ಬಂದು ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಲು ಹೆಣಗುವ ಸ್ಥಿತಿ ಇದೆಯಲ್ಲ ಅದು ಪ್ರತಿಯೊಬ್ಬನು ತನ್ನನ್ನು ತಾನು ಕಂಡುಕೊಳ್ಳುವ ಹಾದಿ. ನಾನು ನೀನಾಸಂನಲ್ಲಿ ಇದ್ದಾಗ ನಾಟಕದ ಒಂದು ಮಾತು. "ಪಾಡು ಪಟ್ಟು ಅರಿವು ಮೂಢಬೇಕು" ಸದಾ ಕಟುಕುತ್ತಿರುತ್ತದೆ. ಆದರೆ ಎಂಥ ಪಾಡು? ಹೇಗೆ ಎಂಬ ಸಾವಿರ ಪ್ರಶ್ನೇಗಳು ಸುಳಿದು ಹೋಗುತ್ತಿರುತ್ತವೆ. ಅದು ಇರಲಿ ನಾನು ಕಲಿಕೆಯ ವಿಚಾರಕ್ಕೆ ಮತ್ತೇ ಬರುತ್ತೇನೆ. ಇಂದಿನ ಶಿಕ್ಷಣ ತಜ್ಞರು ಮಕ್ಕಳಿಗೆ ಸುಲುಭ ರೀತಿಯಲ್ಲಿ ಬೋಧಿಸಲು ಹಲವಾರು ಮಾರ್ಗಗಳನ್ನು ಹುಡುಕಿ ನೀಡಿದ್ದಾರೆ. ಆದ್ರೆ ಅದು ಎಷ್ಟರ ಮಟ್ಟಿಗೆ ಮುಟ್ಟುತ್ತಿವೆ ? ಭಯವಾಗುತ್ತೆ. ಮಕ್ಕಳ ಕಲಿಕೆಯಲ್ಲಿ ನಾವು ಸೃಜನಶೀಲತೆಯನ್ನು ನೀಡದೇ ಕೇವಲ ನೋಟ್ಸ್, ಹೋಂ ವರ್ಕ್, ಎಕ್ಸ್ಂ ಅಂತನೇ ಇದ್ರೆ, ಮಕ್ಕಳನ್ನು ನಾವೇ ಹಿಂದಕ್ಕೆ ತಳ್ಳುತ್ತಿದ್ದೇವೆ ಎಂದೆನಿಸುತ್ತದೆ. ಶಿಕ್ಷಣ ತಜ್ಞರ ಯೋಜನೆಗಳನ್ನು ನಾವು ಸರಿಯಾದ ರೀತಿಯಲ್ಲಿ ಪ್ರಯೋಗಿಸಿದರೆ ಅದು ಸಂಪೂರ್ಣವಾಗಿ ಅಭಿವೃದ್ಧಿಯತ್ತ ಸಾಗಬಹುದು. ಸಣ್ಣ ಪುಟ್ಟ ಸಮಸ್ಯಗಳನ್ನು ಅಲ್ಲಿಯೇ ಬಗೆಹರಿಸಿಕೊಂಡು ಸೃಜನಶೀಲವಾದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು, ಮಕ್ಕಳ ಮನೋಭಿವೃದ್ಧಿಯತ್ತ ಚಿತ್ತ ಹರಿಸಬೇಕು. 

               ನಾನೊಬ್ಬ ನಾಟಕ ಶಿಕ್ಷಕನಾಗಿ ಕೇವಲ ನಾಟಕವನ್ನೇ ಬೋಧಿಸದೇ ಇತರೆ ವಿಚಾರ, ವಿಷಯಗಳತ್ತನು ಗಮನ ನೀಡಬೇಕಾದ ಅನಿವಾರ್ಯತೆ ಇದೆ ಹಾಗೂ ಅದನ್ನು ನಾವು ಗಮನಿಸಲೇ ಬೇಕಾಗಿದೆ. ನಾಟಕ ಕಲಿಕೆಯಿಂದ ವಿದ್ಯಾರ್ಥಿ ತನ್ನ ಗುಣ ಅವಗುಣಗಳನ್ನು ಕಂಡುಕೊಂಡು ತಿದ್ದಿಕೊಳ್ಳುವ ಅವಕಾಶವನ್ನು ರಂಗಮಂಚದಲ್ಲಿ ಕಲ್ಪಿಸಿಕೊಡಲಾಗುತ್ತದೆ. ಅದು ಪ್ರತಿ ಹೈಸ್ಕೂಲ್ ಮಕ್ಕಳಿಗೆ ಇಂದು ಬೇಕಾಗಿದೆ.

ಭಾನುವಾರ, ಫೆಬ್ರವರಿ 8, 2015

ಕೇರಳದ ಭಿನಾಲೆ ಉತ್ಸವದಲ್ಲಿ - Biennale 2014



ಕೇರಳದ ಸರ್ಕಾರಿ ಶಾಲೆಯಲ್ಲಿ

ಶನಿವಾರ, ಫೆಬ್ರವರಿ 7, 2015

ಮನೋವಿಕಾಸದತ್ತ

ಇಂದಿನ ದಿನಗಳಲ್ಲಿ ಶಿಕ್ಷಣ, ಮಕ್ಕಳ ಮುಂದಿನ ಭವಿಷ್ಯದ ಕುರಿತು ನಾವು ತುಂಭ ಗಂಭೀರವಾಗಿ ಆಲೋಚಿಸುವ ಪ್ರಸಂಗ ಬಂದೊದಗಿದೆ. ಸಿ.ಸಿ.ಇ ಗೊಂದಲಗಳಲ್ಲಿ ಎಲ್ಲ ಶಿಕ್ಷಕರು ಕಾಣಿಸಿಕೊಳ್ಳುತ್ತಿದ್ದಾರೆ. ಯಾರ ಹತ್ತಿರ ಮಾತಾಡಿದರು ಯಾಕಾದರು ಬಂತೇನು ಈ ಸಿ.ಸಿ.ಇ ಎಂದು ಮಾತನಾಡುತ್ತಲೇ ವಿಚಾರಗಳನ್ನು  ಸರಳ ರೀತಿಯಲ್ಲಿ ಬಗೆಹರಿಸುವುದನ್ನು ಬಿಟ್ಟು ಸಾಕಷ್ಟು ತಮ್ಮನ್ನು ಹಾಗೂ ವ್ಯವಸ್ಥೆಯನ್ನು ಹಳಿಯುವುದರಲ್ಲಿಯೇ ಕಾಲ ನೂಕೂತ್ತಾರೆ. ದಾರಿಯಲ್ಲಿ ಒಬ್ಬ ಶಿಕ್ಷಕರು ನನ್ನನ್ನು ಕಂಡು "ಇನ್ನೂ ಮುಂದೆ ಶಾಲೆಯಲ್ಲಿ ಬರೀ ನಿಮ್ಮ ನಾಟಕಗಳೇ ನಡೆಯುತ್ತೇ ನೋಡ್ರಿ, ಈ ಸಿ.ಸಿ.ಇ ಅದೇ ಹೇಳೋದು. ಪಾಠವನ್ನು ನಾಟಕ ಮಾಡಿ ಅಂತ" ಹೇಳುತ್ತಿದ್ದರು. ಆ ಶಿಕ್ಷಕರು ತಾವು ಏನನ್ನು ಮಾತನಾಡುತ್ತಿದ್ದಾರೆ ಎಂದು ಸಣ್ಣ ಆಲೋಚನೆಯು ಅವರಿಗೆ ಹೊಳೆಯದೇ ಮಾತನಾಡುವುದನ್ನು ಕಂಡಾಗ ನನಗೆ ಭಯ ಹಾಗೂ ಆತಂಕ ಶುರುವಾಯಿತು. ಶಿಕ್ಷಕರೇ ಹೀಗೆ ಗೊಂದಲದ ಮಾತು, ವಿಚಾರ ಮಾಡುವಾಗ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಈ ಪರಿಸ್ಥಿತಿಯನ್ನು ಏದುರಿಸಬೇಕು. ವಿದ್ಯಾರ್ಥಿಗಳಿಗೆ ಯೋಜನೆಗಳನ್ನೇ ಮಾಡಿಕೊಂಡು ಬರಲು ನೀಡಿ ಕಳುಹಿಸಿದ ಮಕ್ಕಳು ಗೊಂದಲಗಳಲ್ಲಿ ಬಿದ್ದು , ಕೆಲವು ದಿನ ಶಾಲೆ ಬಿಟ್ಟು ಮನೆ ಇಲ್ಲವೇ ಹೊಲ ಕೊನೆಗೆ ದುಡಿಯಲಿಕ್ಕೆ ಎಲ್ಲಿಗಾದರೂ ಕೂಲಿಗೂ ಪಲಾಯನ ಮಾಡುವ ಪರಿಸ್ಥಿತಿ ತನ್ನಿಂದ ತಾನೇ ಸೃಷ್ಟಿಯಾಗಿದೆ.

ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಹೆಚ್ಚು ಒತ್ತು ನೀಡುವ ಸ್ಥಿತಿಯಲ್ಲಿ ನಾವಿಂದು ಇಲ್ಲ. ಕಾರಣ ನಮ್ಮ ಶಿಕ್ಷಕರ ಒತ್ತಡಗಳು. ಪ್ರಾಥಾಮಿಕತೆಯಿಂದ ಬರುವಾಗ ಇರಬೇಕಾದ ಸಣ್ನ ತಯಾರಿಯು ಮಕ್ಕಳಲ್ಲಿ ಇಲ್ಲದಾಗ ಪ್ರೌಢಶಾಲಾ ಶಿಕ್ಷಕರ ಬೋಧನೆ ವಿದ್ಯಾರ್ಥಿಗಳಿಗೆ ತಲುಪುವುದು ಕಠಿಣ. ಇನ್ನೂ ಮಕ್ಕಳ ಪ್ರಜ್ಞೆಯ ಕುರಿತು ವಿಚಾರ ಮಾಡುವಾಗ ಸಾಕಷ್ಟು ಗೊಂದಲಗಳು ಪ್ರಾರಂಭವಾಗುತ್ತವೆ. ನಮಗೆ ದೊರಕುವ ಕಡಿಮೆ ಅವಧಿ ಇಂದು ಸಾಕಾಗುತ್ತಿಲ್ಲ. ಇದ್ದ ಅವಧಿಯಲ್ಲಿ  ನಾನು ಮಾಡಬೇಕಾದ ಕಾರ್ಯ ಅತ್ಯಂತ ಸೂಕ್ಷ್ಮದಾಗಿದೆ. ನನ್ನ ಸಮಯ ಹೊಂದಣಿಕೆಯಲ್ಲಿಯೇ ಎಷ್ಟೋ ಮಕ್ಕಳು ಮುಂದೆ ಸಾಗಿ ಹೋಗಿ ಕಳೆದಾಗ ನನ್ನನ್ನು ನಾನು ಜರಿದುಕೊಳ್ಳುವುದೇ ಉಳಿದ ದಾರಿ.

ಶುಕ್ರವಾರ, ಫೆಬ್ರವರಿ 6, 2015

IFA Annul Report - Our Children s Kolata performing




ಗುರುವಾರ, ಫೆಬ್ರವರಿ 5, 2015

Exploring Education through the Arts



ಹಳತೇ ಆದರೂ ಹೊಸ ಪ್ರಯತ್ನ