ಸೋಮವಾರ, ನವೆಂಬರ್ 25, 2019

ಕೊಪ್ಪಳ ಜಿಲ್ಲೆಯಾದ್ಯಂತ ಜನ -ಜಲ ಕ್ರಾಂತಿ


ರಂಗಭೂಮಿ ನೆಲೆಯಲ್ಲಿ ನೆಲೆ ನಿಂತ ನಾವು ಸಮಾಜ ಮುಖಿಯಾಗಿ ಸಂದೇಶಗಳನ್ನು ಜನ ಮನಗಳಲ್ಲಿ ಎಚ್ಚರಿಸುವ ಕಾಯಕ ಮಾಡುವುದು ಅತೀ ಜರೂರಿನ ಕೆಲಸವಾಗಿದೆ. ಕಳೆದ ೫-೬ ವರುಷಗಳಿಂದ ನಾನು ನೀರು, ಪರಿಸರದ ನೆಲೆಯಲ್ಲಿಯೇ ನಾಟಕಗಳನ್ನು ರಚಿಸಿ, ನಿರ್ದೇಶಿಸಿರುವೆ. ಶಾಲೆ, ಗ್ರಾಮ ಹಾಗೂ ವಿವಿಧ ನಗರಗಳಲ್ಲಿ ಪ್ರದರ್ಶನಗಳನ್ನು ಮಕ್ಕಳಿಂದ ಪ್ರಸ್ತುತ ಪಡಿಸಿರುವೆ.


ರಾಜೇಂದ್ರಸಿಂಗ್ ಅವರ ಕಾರ್ಯಗಳು, ಮಹಾರಾಷ್ಟ್ರದಲ್ಲಿ ಕೆರೆಗಳ ಪುನಶ್ಚೇತನಕ್ಕಾಗಿ ಪಾನಿ ಫೌಂಡೇಶನ್ ನಡೆಸುತ್ತಿರುವ ಕಾರ್ಯಕ್ರಮಗಳು ಹೀಗೆ ವಿವಿಧ ರಾಜ್ಯ ಜಿಲ್ಲೆಗಳಲ್ಲಿ ನಡೆಸುತ್ತಿರುವ ನೀರಿಗಾಗಿ ನಡೆಸುತ್ತಿರುವ ಚಳುವಳಿಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ನಾಟಕ ಕಟ್ಟುವ ಕಾರ್ಯ ನಿರಂತರವಾಗಿ ಸಾಗಿದೆ. 




ಕಳೆದ ಫೇಬ್ರವರಿ ೭ ನೇ ತಾರೀಖಿನಿಂದ ಪ್ರಾರಂಭವಾದ ಈ ಆಭಿಯಾನ ಇಂದು ತೆರೆ ಬೀಳುತ್ತಿದೆ. ಇದಕ್ಕಾಗಿ ದುಡಿದ ಹಲವಾರು ಕಣ್ಣುಗಳಲ್ಲಿ ಆನಂದವೇ ತುಂಬಿರುತ್ತದೆ. ಕೆರೆಯ ಉಳುವಿಗಾಗಿ ಕೈ ಜೋಡಿಸಿ ಹಣ, ಆಹಾರ ನೀಡಿದ ಅಪಾರ ಶುದ್ಧ ಮನಸ್ಸುಗಳಿಗೆ ಇನ್ನೂ ಹೆಚ್ಚಿನದನ್ನು ದೇವರು ಅವರಿಗೆ ನೀಡಲಿ. ಮಳೆಯು ಬಂದು ಕೆರೆ ತುಂಬಿ ಈ ಭಾಗದ ಎಲ್ಲರೂ ಮತ್ತೋಮ್ಮೆ ಸಂಭ್ರಮಿಸುವ ಕ್ಷಣಗಳು ಬೇಗ ಬರಲಿ. ನಮ್ಮ ಗವಿಮಠದ ಜಾತ್ರೆಯಲ್ಲಿ ರಾಜೇಂದ್ರಸಿಂಗ ಅವರನ್ನು ಕರೆಯಿಸಿದ್ದ ನಮ್ಮ ಶ್ರೀಗಳು ಇಂಥಹ ಹೊಸತೊಂದು ಕಾಯಕಕ್ಕೆ ಕೈ ಹಾಕಿದ್ದು ನಾಡಿನ ಉಳ್ಳವರೆಲ್ಲರೂ ಇನ್ನಷ್ಟೂ ಕೈ ಜೋಡಿಸಿದರೆ ಶ್ರೀಗಳ ನೇತೃತ್ವದಲ್ಲಿ ಜಲಕ್ರಾಂತಿಯನ್ನೇ ಮಾಡಬಹುದು.






ಪೆದ್ದನಕೆರೆ, ಭಾಗೀರಥಿ, ನಮ್ಮೂರಕೆರೆ, ನಮ್ಮ ಕೂಗು ಹೀಗೆ ಪ್ರತಿ ವರುಷವು ನೀರು ನೀರಿನ ನೆಲೆಗಳ ಹುಡುಕಾಟದ ನಾಟಕಗಳನ್ನು ಪ್ರದರ್ಶಿಸಿದ್ದೇವೆ. ಇಲ್ಲಿ ಮಕ್ಕಳೊಂದಿಗೆ ಇನ್ನೂ ಹಲವರಿಗೆ ಎಚ್ಚರಿಕೆ ಮೂಡಿಸುವಂಥ ಕಾರ್ಯವನ್ನು ಮಾಡಲೇಬೇಕಿದೆ. 

ಕೆರೆಯ ಉಳುವಿಗಾಗಿ ನಮ್ಮ ಗವಿ ಮಠದ ಶ್ರೀಗಳು ಆಶೀರ್ವಾದ ನೀಡಿ ಸುತ್ತ ಮುತ್ತಲಿನ ಜನರ ಹೃದಯಕ್ಕೆ ಬೇಕಾದ ಕಾರ್ಯಕ್ಕೆ ಚಾಲನೆ ನೀಡಿದರು. ಮಳೆಗಾಲದಲ್ಲಿ ನಾನು ಕುಷ್ಟಗಿಯಿಂದ ಗಜೇಂದ್ರಗಡಕ್ಕೆ ಸಾಗುವಾಗ ಕೆರೆಯ ಒಂದಿಷ್ಟು ಕುರೂಹ ಕಾಣುತ್ತಿರಲಿಲ್ಲ. ಅದು ರಸ್ತೆಯಷ್ಟೇ ಸಮವಾಗಿ ಅಂಗಳ ಕಾಣಿಸುತ್ತಿತ್ತು. ಹಿಂದೊಮ್ಮೆ ನಿಡಶೇಸಿ  ಮುರಾರ್ಜಿ ಶಾಲೆಗೆ ನಾಟಕ ಮಾಡಿಸಲು ತೆರಳಿದ್ದ ಸಮಯದಲ್ಲಿ ಮುಖವಾಡ ಮಾಡಿಸಲು ಮಣ್ಣು ಬೇಕಿತ್ತು ಆಗ ಇದೆ ಕೆರೆಗೆ ಸಾಗಿದ್ದಾಗ ನನಗೆ ಇದೊಂದು ಕೆರೆನಾ ...? ಎಂಬುವುದು ಆಗ ಕಾಡಿತ್ತು. ಆದರೆ ಇಂದು ಆದ ಕಾರ್ಯ ಅತ್ಯಂತ ಶ್ಲಾಘನೀಯ. 



ಹೆಜ್ಜೆಗಳು

ಸರಕಾರಿ ಪ್ರೌಢಶಾಲೆ ಜಹಗೀರಗುಡದೂರಿನಲ್ಲಿ ಶಿಕ್ಷಣದ ಜೊತೆಗೆ ಸಾಂಸ್ಕøತಿಕ ಹೊಸ ಆಯಾಮವನ್ನೇ ಸೃಷ್ಟಿಯಾಗುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಕಳೆದ ಹತ್ತು ವರುಷಗಳಿಂದ ರಂಗಭೂಮಿಯ ಹಲವು ಪ್ರಯೋಗಗಳ ಜೊತೆಗೆ ಕಲಿಕೆಯಲ್ಲಿ ಹೊಸ ಸಾಧ್ಯತೆಗಳನ್ನು ಹೊರ ತರುತ್ತಿರುವ ನಮ್ಮ ಶಾಲೆ ಕಳೆದ ಜನವರಿಯಲ್ಲಿ ನಮ್ಮ ಕ್ಲಸ್ಟರಿನ ಎಲ್ಲ ಶಾಲೆಗಳನ್ನು ಒಟ್ಟುಗೂಡಿಸಿ ಪಠ್ಯ ನಾಟಕೋತ್ಸವವನ್ನು ನಡೆಸಿ ಮಾದರಿ ಎನಿಸಿದೆ.
ಸರ್ಕಾರ ರಂಗ ಶಿಕ್ಷಕರನ್ನು ನೇಮಕ ಮಾಡಿದಾಗ ಇಂಥಹದೊಂದು ಹುದ್ದೆ ಶಾಲೆಗೆ ಬೇಕಾ ಎಂಬ ಪ್ರಶ್ನೇ ಕಾಡಿದ್ದು ಹಲವರಿಗೆ. ನಾಟಕ ಮಾಡಿಸಿಕೊಂಡು ಹೋದರೆ ಎಲ್ಲಿ ಮಕ್ಕಳು ದಾರಿ ತಪ್ಪುವರೋ ಎಂಬ ಹಲವರ ಅಭಿಪ್ರಾಯಗಳು ಇಂದಿಗೂ ಬದಲಾದಂತಿಲ್ಲ. ಎಲ್ಲವುದಕ್ಕೂ ಒಂದು ಮಾತು ಆಡೇ ಆಡುತ್ತಾರೆ ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಗೆಲುವು ನಮ್ಮದೇ ಎಂಬ ಆಶಯದೊಂದಿಗೆ ನಮ್ಮ ಕೆಲಸ ಸಾಗಿತು. ಮಕ್ಕಳ ರಂಗಭೂಮಿಯ ಒಂದು ಝಲಕ್ ನ್ನು ಸೃಷ್ಟಿಸಿದ್ದ ಬಿ.ವಿ.ಕಾರಂತರು, ಜಗತ್ತೇ ತಮ್ಮ ಹಳ್ಳಿಯ ಕಡೇ ನೋಡುವಂಥೆ ಮಾಡಿದ ಕೆ.ವಿ.ಸುಬ್ಬಣ್ಣನಂಥವರ ಕಾರ್ಯ-ಕನಸುಗಳನ್ನು ನಮ್ಮ ಶಾಲೆಯಲ್ಲಿ ತರುವ ಪ್ರಯತ್ನ ಸಾಗಿದೆ.
ಮೊದಲಿಗೆ ಹೆಜ್ಜೆಗಳು ಎಂಬ ಕೈ ಬರಹದ ಪತ್ರಿಕೆಯನ್ನು ತಂದು ಮಕ್ಕಳು ಬರೆಯುವುದರ ಜೊತೆಗೆ ರಂಗಭೂಮಿಯ ಪರಿಚಯವನ್ನು ಮಾಡುವ ಪ್ರಯತ್ನ ಸಾಗಿತು. ನಂತರದಲ್ಲಿ ಬ್ಲಾಗ್ (http://hejjegalushalapatrike.blogspot.com/ )ಮೂಲಕ ನಮ್ಮ ಕಾರ್ಯಗಳನ್ನೆಲ್ಲ ಒಂದೆಡೆ ಸೇರಿಸುವ ಪ್ರಯತ್ನವನ್ನು 2010 ರಿಂದಲೇ ಸಾಗಿದೆ.
ನಮ್ಮ ಪ್ರಯೋಗಗಳಿಂದ ಹೊಸ ಹುಡುಕಾಟಗಳು ಸಾಗಿದಂತೆ  ವಿದ್ಯಾರ್ಥಿಗಳ ಮನೆಯಿಂದ ಹೊಸ ಹೊಸ ಕಥೆಗಳು, ಹಾಡುಗಳು ಹೊತ್ತು ತಂದರು. ಸೋಬಾನೆ, ಬಿಸೋ, ಕುಟ್ಟೋಪದಗಳನ್ನು ತಂದು ನಮ್ಮ ಪಠ್ಯ ಪದ್ಯಗಳಿಗೆ ಹೊಂದಿಸಿ ಹಾಡಿದರು. ಇಂಡಿಯಾ ಫೌಂಡೇಶನ್ ಫಾರ್ ದಿ ಆಟ್ರ್ಸ ಸಂಸ್ಥೆಯ ಸಹಭಾಗಿತ್ವದಲ್ಲಿ ಎರಡು ವರ್ಷಗಳ ಕಾಲ ಮಕ್ಕಳಿಗೆ ಮೊಹರಂನ ಹೆಜ್ಜೆಕುಣಿತ, ರಿವಾಯತ್ ಪದಗಳು, ಸೋಬಾನೆಯ ಪದಗಳನ್ನು ಕೇಳುವುದರ ಜೊತೆಗೆ ಆ ಹಿರಿಯರ ಕಥೆಗಳನ್ನು ಕೇಳಿ ದಾಖಲಿಸುವ ಕಾರ್ಯದ ಜೊತೆಗೆ ಹಲವು ನಾಟಕಗಳನ್ನು ಸ್ಥಳೀಯತೆಯ ಹಿನ್ನಲೆಯಲ್ಲೇ ಕಟ್ಟಿ ನಾಟಕಗಳನ್ನು ಪ್ರದರ್ಶನ ನೀಡಲಾಗಿದೆ. ಈ ನಡುವೆ  ಸ್ಥಳೀಯ ವಿಷಯ ವಸ್ತುವನ್ನಿಟ್ಟುಕೊಂಡು ತರಗತಿ ಗೋಷ್ಠಿಗಳನ್ನು ಮಕ್ಕಳೇ ಮಾಡಲು ಪ್ರಾರಂಭಿಸಿದ್ದರು. ತೆಗೆದುಕೊಂಡ ವಿಷಯಗಳ ಮೇಲೆ ಮಕ್ಕಳು ಮಾತನಾಡಿದ ನಂತರ ಆ ಕುರಿತು ಇತರೇ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರಿಂದ ಅವರ ಮಾತಾನಾಡುವ ಕಲೆ, ರಂಗಭಯ, ಭಾಷ ಶುದ್ದೀಕರಣ, ವಿಷಯ ವಸ್ತುಗಳ ಹೆಚ್ಚಿನ ಜ್ಞಾನ, ಹುಡುಕಾಟ ಹೀಗೆ ಅವರ ಕಲಿಕೆಯ ನಿರಂತರತೆ ಸಾಗಿದ್ದು ರಂಗಭೂಮಿಯ ತೊಡಗುವಿಕೆಯಿಂದ.
ರಂಗಕಲಿಕೆಯನ್ನು ನಾನು ನನ್ನ ಶಾಲೆಗೆ ಸೀಮಿತಗೊಳಿಸಿಕೊಳ್ಳಲು ಸಿದ್ದನಿರಲಿಲ್ಲ. ಹೀಗಾಗಿ ಸಮುದಾಯದತ್ತ ಕಾರ್ಯಕ್ರಮಗಳಿಗೆ ತೆರೆಳಿದಾಗ ಪ್ರಾಥಮಿಕ ಶಾಲಾ ಮಕ್ಕಳಿಗೆ ರಂಗಾಟಗಳನ್ನು ಆಡಿಸಿ ಬರುವಾಗ ಮಕ್ಕಳ ಚುರುಕುತನವನ್ನು ಕಂಡು ನಾನು ಶಿಕ್ಷಕರ ಜೊತೆ ಪಠ್ಯ ರಂಗ ಪ್ರದರ್ಶನಗಳನ್ನು ಮಾಡಿದರೆ ಚಂದ ಎಂದು ಹಂಚಿಕೊಳ್ಳತ್ತಿದ್ದೆ. ಅದರಂತೆ ಕ್ಲಸ್ಟರ್‍ನ ಎಲ್ಲ ಶಾಲೆಗಳು ತಮ್ಮ ಪಠ್ಯ ಪಾಠಗಳನ್ನು ನಾಟಕ ರೂಪಕ್ಕೆ ತಂದು ಪ್ರದರ್ಶನ ನೀಡಲು ಅಣಿಯಾದಾಗ ನಮ್ಮ ಶಾಲೆಯಲ್ಲಿ ವೇದಿಕೆಯನ್ನು ಸಿದ್ದಮಾಡಿಕೊಂಡೆವು. ಶಿಕ್ಷಕರಿಗೆ ನಮ್ಮ ಹಲವು ನಾಟಕಗಳನ್ನು ತೋರಿಸಿ ಸರಳವಾದ ರೀತಿಯ ಪರಿಕರಗಳನ್ನು ಬಳಸಿಕೊಂಡು ನಾಟಕ ಕಟ್ಟಿಕೊಳ್ಳುವುದನ್ನು  ಮೊದಲ ಹಂತದ ತರಬೇತಿ ನೀಡಿ ಅವರು ತೆಗೆದು ಕೊಂಡ ಪಾಠಗಳ ಕುರಿತು ಅವರಿಂದಲೇ ಟಿಪ್ಪಣಿ ಮಾಡಿಸಿ, ಅವುಗಳಿಗೆ ಪೂರಕವಾಗಿ ಬೇಕಾದ ಸಲಹೆ ಮಾಹಿತಿಗಳನ್ನು ನೀಡಿದೆ. ಕೊನೆಗೆ “ಹೆಜ್ಜೆಗಳು ನಾಟಕೋತ್ಸವ” ಒಂದು ಸಂಪೂರ್ಣವಾದ ಪಠ್ಯ ನಾಟಕಗಳದ್ದೇ ಉತ್ಸವ ಏರ್ಪಟ್ಟಿತು. ಅಂದಿನಿಂದ ನಮ್ಮ ಕ್ಲಸ್ಟರಿನ ಹಲವು ಶಾಲೆಗಳು ಪ್ರತಿ ವಿಷಯವಾರು ನಾಟಕಗಳನ್ನು ಮಾಡಲು ಉತ್ಸುಕರಾಗಿದ್ದಾರೆ. ಆ ಕುರಿತು ಸಲಹೆ ಸಹಕಾರ ಕೋರಿದಾಗ ನನಗೆ ರಂಗಭೂಮಿಯ ಸಾಧ್ಯತೆಗಳ ಬಗ್ಗೆ ಖುಷಿ ಎನಿಸುತ್ತದೆ.
ವೈಜ್ಞಾನಿಕ ವಿಚಾರಗಳನ್ನಿಟ್ಟುಕೊಂಡು ನಡೆಯುವ ವಿಜ್ಞಾನ ನಾಟಕಗಳನ್ನು ಸಿದ್ದ ಮಾಡಿಕೊಂಡು ಹಲವು ಬಾರಿ ವಿಭಾಗ ಹಾಗೂ ರಾಜ್ಯ ಮಟ್ಟದವರೆಗೂ ಪ್ರದರ್ಶನಗಳನ್ನು ನೀಡಿಲಾಗಿದೆ. ನೀರಿನ ಸಮಸ್ಯೆಯ ಕುರಿತು ನಾಟಕ ಸಿದ್ದಮಾಡುವಾಗ ನಾವು ರಾಜಸ್ಥಾನದ ಜಲತಜ್ಞ ರಾಜೇಂದ್ರಸಿಂಗ ಅವರ ಕೆಲಸ ಕಾರ್ಯಗಳ ಕುರಿತು ಚರ್ಚಿಸುತ್ತಾ, ಮಹಾರಾಷ್ಟ್ರದಲ್ಲಿ ನಡೆಯುವ “ವಾಟರ್ ಕಪ್” ಹಿಂದಿನ ಕಾರ್ಯಗಳನ್ನು ಹುಡುಕುವ ಮನಸ್ಥಿತಿ ನಮ್ಮ ಮಕ್ಕಳಲ್ಲಿ ಬೆಳೆದು ಬಂದಿದೆ. ಪಕ್ಷಿಗಳು ವಲಸೆ ಬರುವಾಗ ಕಂಡು ಬರುವ ಪರಿಸರದ ಹೀನಾ ಸ್ಥಿತಿಯನ್ನು ವಿಷಯವಸ್ತುವಾಗಿ ಕಟ್ಟುವಾಗು ನಮ್ಮ ವಿದ್ಯಾರ್ಥಿಗಳ ಹುಡುಕಾಡುವ ಪ್ರಯತ್ನ ತುಂಬಾ ಖುಷಿ ಕೊಡುತ್ತದೆ.
ಶಿಕ್ಷಣ ಎಂದರೇ ಬರೀ ಪಠ್ಯ ಪುಸ್ತಕಗಳ ಓದು, ಅಂಕಗಳೇ ಅಂತಿಮ ಅಲ್ಲ. ಅದರಾಚೆ ಇರುವ ಸೂಕ್ಷ್ಮತೆಯನ್ನು ನೋಡುವ ದೃಷ್ಟಿ ನಮ್ಮ ವಿದ್ಯಾರ್ಥಿಗಳಲ್ಲಿ ಒಡಮೂಡಿದೆ. ಅದು ರಂಗಕಲಿಕೆಯಿಂದ ಎಂದೇ ಹೇಳಬಹುದು. ನಮ್ಮ ಕಾರ್ಯಗಳು ಹಲವು ಶಾಲೆಗಳಲ್ಲೂ ಕಾಣಬೇಕು ಹೊಸತನದ ನೋಟಗಳು ಮಕ್ಕಳಲ್ಲಿ ಬರಬೇಕಾಗಿದೆ. ರಂಗಭೂಮಿಯ ಕಲಿಕೆ ಅತ್ಯಂತ ಪರಿಣಾಮಕಾರಿ. ಕ್ರಿಯಾಶೀಲ ರಂಗಶಿಕ್ಷಕರು ನಮ್ಮ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾದರೆ ಮುಂದೊಂದು ದಿನ ಮಾನವೀಯ ಮೌಲ್ಯಗಳ ಹೆಚ್ಚಿರುವ ಪ್ರತಿಭೆಗಳನ್ನು ಕಾಣಬಹುದು.

ಗುರುರಾಜ ಎಲ್  ನಾಟಕ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಜಹಗೀರಗುಡದೂರ. ತಾ/ಕುಷ್ಟಗಿ



ಭಾನುವಾರ, ನವೆಂಬರ್ 24, 2019

Thogire Thogire...

ಗುರುವಾರ, ನವೆಂಬರ್ 21, 2019

ಮಂಗಳವಾರ, ನವೆಂಬರ್ 19, 2019

"ಮಕ್ಕಳ ಹಕ್ಕುಗಳ" ಗ್ರಾಮಸಭೆ











ಆಗಷ್ಟ ೧೫ ರಂದು ಕಾವ್ಯ ಹಿರೇಮಠ ಆಗಷ್ಟ ೧೫ ರಂದು ಸನ್ಮಾನಿಸಲಾಯಿತು.

ನಮ್ಮ ಶಾಲೆಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಕಾವ್ಯ ಹಿರೇಮಠ ಅವರನ್ನು ಆಗಷ್ಟ ೧೫ ರಂದು ಸನ್ಮಾನಿಸಲಾಯಿತು. 

















ಭಾನುವಾರ, ನವೆಂಬರ್ 17, 2019

ಶನಿವಾರ, ನವೆಂಬರ್ 16, 2019

ಭಾನುವಾರ, ನವೆಂಬರ್ 10, 2019

Shivamandiradali....

ಗುರುವಾರ, ನವೆಂಬರ್ 7, 2019

ಡಯಟ್ ಪ್ರಾಂಶುಪಾಲರಾದ ಶ್ಯಾಮಸುಂದರ ಸಾರ್ ಅವರ ಭೇಟಿ





ಡಯಟ್ ಪ್ರಾಂಶುಪಾಲರಾದ ಶ್ಯಾಮಸುಂದರ ಸಾರ್ ಅವರು ನಮ್ಮ ಶಾಲೆಗೆ ಭೇಟಿ ನೀಡಿ ಎಸ.ಎಸ.ಎಲ್.ಸಿ  ಬಗ್ಗೆ ಸಲಹೆ ಮಾರ್ಗದರ್ಶನ ನೀಡಿದರು. 

ಹೆಜ್ಜೆಗಳು ನಾಟಕೋತ್ಸವ - ಜ್ಞಾನ ತುಂಗಾ - ಜಿಲ್ಲಾ ಶೈಕ್ಷಣಿಕ ವಾರ್ತಾ ಪತ್ರಿಕೆ






ಅವಕಾಶ ನೀಡಿದ ಡಯಟ್ ನ ಉಪನ್ಯಾಸಕರು ಹಾಗು ಪತ್ರಿಕೆಯ ಸಂಪಾದಕರಾದ ಬಸವತಯ್ಯ ಸಾರ್ ಹಾಗೂ ಪ್ರಾಂಶುಪಾಲರಾದ ಶ್ಯಾಮಸುಂದರ ಸಾರ್ ಅವರಿಗೆ ಧನ್ಯವಾದಗಳು 

ಬುಧವಾರ, ನವೆಂಬರ್ 6, 2019

ಮನೆಯಂಗಳದಲ್ಲಿ ಸಾಹಿತ್ಯ

ಕನ್ನಡ ಸಾಹಿತ್ಯ ಪರಿಷತ್ತು ಗಜೇಂದ್ರಗಡದ ವತಿಯಿಂದ ವಾರದ ಚಿಂತನಾ ಗೋಷ್ಠಿಯನ್ನು ಪ್ರತಿ ಶನಿವಾರ ಸಂಜೆ ಚೌಕಿ ಮಠದಲ್ಲಿ ನಡೆಸಲಾಗುತ್ತಿತ್ತು. ಈಗ ಇನ್ನು ಸಾಹಿತ್ಯವನ್ನು ಪ್ರತಿ ಮನೆ ಮನೆಯಲ್ಲಿ ಚರ್ಚಿತವಾಗಬೇಕು ಎಂಬ ಆಶಯದಲ್ಲಿ ಒಬ್ಬ ಕವಿ, ಕಲಾವಿದ ಅಥಾವ ಕ್ರಿಯಾಶೀಲ ವ್ಯಕ್ತಿಯ ಕುರಿತು ಅವರ ಮನೆಗಳಲ್ಲೇ 

ಶನಿವಾರ, ನವೆಂಬರ್ 2, 2019

ವಿಭಾಗ ಮಟ್ಟದ ವಿಜ್ಞಾನ ನಾಟಕ ಪ್ರದರ್ಶನ










ವಿಭಾಗ ಮಟ್ಟದ ವಿಜ್ಞಾನ ನಾಟಕ ಪ್ರದರ್ಶನ ದಲ್ಲಿ ನಮ್ಮ ಮಕ್ಕಳು ಗುಡದೂರ ಕೆರೆ ಎಂಬ ನಾಟಕ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದುಕೊಂಡರು. ಜೊತೆಗೆ ನಮ್ಮ ವಿದ್ಯಾರ್ಥಿ ದೇವರಾಜ ಗೋಡೆಕರ ನಿಗೆ  ಅತ್ತ್ಯುತ್ತಮ ನಟ ಎಂದು ಪ್ರಶಸ್ತಿಯನ್ನು ಪಡೆದನು