ಶುಕ್ರವಾರ, ಜುಲೈ 31, 2020

ಚಟುವಟಿಕೆ - 4


ಚಟುವಟಿಕೆ - ೩



ಚಟುವಟಿಕೆ - ೮


ಚಟುವಟಿಕೆ - ೦೧

ಚಟುವಟಿಕೆ ೦೧


ಚಟುವಟಿಕೆ - ೦೬








ಗುರುವಾರ, ಜುಲೈ 30, 2020

ಮಂಗಳವಾರ, ಜುಲೈ 28, 2020

ಸೋಮವಾರ, ಜುಲೈ 27, 2020

Assignment - 10


Assignment - 09


Assignment - 2


Assignment - 02


ಗುರುವಾರ, ಜುಲೈ 23, 2020

ಮಂಗಳವಾರ, ಜುಲೈ 21, 2020

10 th standard social science (ECONOMICS ) MODEL QUESTIONS.

                         ರಚನೆ:ಶ್ರೀ ತಿಪ್ಪಣ್ಣ ರಾಮದುರ್ಗ,   , ಸ ಶಿ( ಕಲಾ ಕನ್ನಢ)  .ಸೆಲ್-9480756727  

                                             ಸ ಪ್ರೌ ಶಾಲೆ ಜಹಗೀರ ಗುಡದೂರ ತಾ:ಕುಷ್ಟಗಿ ಜಿ:ಕೊಪ್ಪಳ

                         10ನೇ ತರಗತಿ, ಸಮಾಜವಿಜ್ಙಾನ.  ಅಧ್ಯಾಯ-1 ಅಭಿವೃದ್ಧಿ .(ಅರ್ಥಶಾಸ್ತ್ರ)

*  ಬಹು ಆಯ್ಕೆ ಪ್ರಶ್ನೆಗಳು                         

1.ಭಾರತವು ಈ ರಾಷ್ಟ್ರಗಳ ಗುಂಪಿಗೆ ಸೇರಿದೆ

ಎ)ಬಡರಾಷ್ಟ್ರ       ಬಿ)ಮುಂದುವರೆದ ರಾಷ್ಟ್ರ     ಸಿ)ಅಭಿವೃದ್ಧಿಶೀಲ ರಾಷ್ಟ್ರ  ಡಿ)ಹಿಂದುಳಿದ ರಾಷ್ಟ್ರ

2.ಒಂದು ರಾಷ್ಟ್ರದ ನೈಜ ವರಮಾನವು ದೀರ್ಘಾವಧಿಯವರೆಗೆ ಹೆಚ್ಚಳವಾಗುವ ಪ್ರಕ್ರಿಯೆಯೇ ಆರ್ಥಿಕ ಅಭಿವೃಧ್ಧಿ ಎಂದವರು

ಎ)ಪ್ರೋ ಕೋಲಿನ್ ಕ್ಲಾರ್ಕ  ಬಿ)ಪ್ರೋ ಮೇಯರ್ ಮತ್ತು ಬಾಲ್ಡವಿನ್  ಸಿ)ಆ್ಯಡಂಸ್ಮಿತ್   ಡಿ)ಕಾರ್ಲ ಲೂಯಿಸ್

3.ಅಭಿವೃದ್ಧಿ ಹೊಂದದೇ ಇರುವ ನಿಶ್ಚಲ ಸ್ಥಿತಿಯನ್ನು -------ಎನ್ನುವರು

ಎ)ಆರ್ಥಿಕ ಅಭಿವೃದ್ಧಿ   ಬಿ)ಅನಾಭಿವೃದ್ಧಿ    ಸಿ) ಅಭಿವೃದ್ಧಿ  ಡಿ)ಹಿಂದುಳಿದ ಅಭಿವೃದ್ಧಿ

4.ನಿರೀಕ್ಷಿತ ಜೀವಿತಾವಧಿಯನ್ನು ನಿರ್ಧರಿಸುವ ಅಂಶಗಳು

ಎ)ಪೌಷ್ಠಿಕ ಆಹಾರ  ಬಿ) ಆರೋಗ್ಯ ಮತ್ತು ನೈರ್ಮಲ್ಯ  ಸಿ)ಸ್ವಚ್ಛ ಪರಿಸರ   ಡಿ)ಈ ಮೇಲಿನ ಎಲ್ಲವೂ

5.2011ರ ಜನಗಣತಿಯ ಪ್ರಕಾರ ಲಿಂಗಾನುಪಾತದ ದರ

ಎ)960   ಬಿ)945  ಸಿ)975  ಡಿ)955

6.2014 ರ ಪ್ರಕಾರ ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹೊಂದಿದ್ದ ಸ್ಥಾನ

ಎ)185ನೇ  ಬಿ)197ನೇ  ಸಿ)137ನೇ  ಡಿ) 135ನೇ

7.ಮಾನವ ಅಭಿವೃದ್ಧಿ ಸೂಚ್ಯಂಕದ ಮಾನದಂಡಗಳನ್ನು ರಚಿಸಿದ್ದು

ಎ)ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ವಿಭಾಗ     ಬಿ)ವಿಶ್ವ ಆರೋಗ್ಯ ಸಂಸ್ಥೆ ಸಿ)ಅಂತರಾಷ್ಟ್ರೀಯ ಕಾರ್ಮಿಕ ಸಂಘ ಡಿ) ವಿಶ್ವಬ್ಯಾಂಕ್.

8.ಆರ್ಥಿಕ ಅಭಿವೃದ್ಧಿಯು ಜನರ ಆರ್ಥಿಕ ಕಲ್ಯಾಣದ ಹೆಚ್ಚಳ ಎಂದವರು

ಎ)ಪ್ರೋ ಕೋಲಿನ್ ಕ್ಲಾರ್ಕ  ಬಿ) ಎ ಸಿ ಪಿಗೂ  ಸಿ)ಪ್ರೋ ಮೇಯರ್  ಡಿ)ಬಾರ್ಬರ್ ವೋಟನ್

9.ಅಭಿವೃದ್ಧಿಯ ಅರ್ಥ

ಎ) ಗ್ರಾಮೀಣ ಅಭಿವೃದ್ಧಿ   ಬಿ)ಸಾಮಾಜಿಕ ಅಭಿವೃದ್ಧಿ   ಸಿ) ಶೈಕ್ಷಣಿಕ ಅಭಿವೃದ್ಧಿ   ಡಿ)ಈ ಮೇಲಿನ ಎಲ್ಲವೂ

10.ಮಾನವ ಅಭಿವೃದ್ಧಿ ಕುರಿತು ಅಧ್ಯಯನ ನೆಡೆಸಿದ ಪ್ರಮುಖ  ಅರ್ಥಶಾಸ್ತ್ರಜ್ಞರು

ಎ)ಅಮರ್ತ್ಯ ಸೇನ್ ಮತ್ತು ಮೆಹಬೂಬ ಉಲ್ ಹಕ್        ಬಿ) ಅಮರ್ತ್ಯ ಸೇನ್ ಮತ್ತು ಮಹ್ಮದ್ ಯೂನಸ್

ಸಿ)ಜೆ ಎಂ ಕೇನ್ಸ ಮತ್ತು ಮೆಹಬೂಬ ಉಲ್ ಹಕ್           ಡಿ) ಜೆ ಎಂ ಕೇನ್ಸ ಮತ್ತು ಮಹ್ಮದ್ ಯೂನಸ್

 * ಒಂದು  ವಾಕ್ಯದಲ್ಲಿ ಉತ್ತರಿಸಿರಿ (ಒಂದು ಅಂಕದ ಪ್ರಶ್ನೆಗಳು)

11.ಅಭಿವೃದ್ಧಿಯ ಅರ್ಥವೇನು?

12.ಅನಾಭಿವೃದ್ಧಿ ಎಂದರೇನು?

13.ಮಾನವ ಅಭಿವೃದ್ಧಿ ಸೂಚಕಗಳಾವವು?

14.ಮಾನವ ಅಭಿವೃದ್ಧಿ ಸೂಚಕಗಳನ್ನು ಏಕೆ ಬಳಸಲಾಗುತ್ತಿದೆ.

15.ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶವೆಂದು ಹೇಗೆ ಹೇಳುವಿರಿ.

16.ಮಹಿಳಾ ಸಬಲೀಕರಣ ಎಂದರೇನು?

17.ಸ್ವ ಸಹಾಯ ಗುಂಪುಗಳೆಂದರೇನು?

18.ತಲಾ ಆದಾಯವನ್ನು ಹೇಗೆ ಪಡೆಯಬಹುದು.

19.ಮಾನವ ಅಭಿವೃದ್ಧಿಯ ಅರ್ಥ ತಿಳಿಸಿ.

20.ಒಂದು ದೇಶದ ಶೈಕ್ಷಣಿಕ ಸಾಧನೆಯನ್ನು ಹೇಗೆ ಅಳೆಯಬಹುದು.

21.ಸ್ವ ಸಹಾಯ ಗುಂಪುಗಳನ್ನು ಏಕೆ ಸ್ಥಾಪಿಸಲಾಗಿದೆ.

22.ಆರ್ಥಿಕ ಅಭಿವೃದ್ಧಿ ಎಂದರೇನು?

23.ಪ್ರೋ ಮೆಯರ್ ಮತ್ತು ಬಾಲ್ಡವಿನ್ ಪ್ರಕಾರ ಆರ್ಥಿಕ ಅಭಿವೃದ್ಧಿಯ ಅರ್ಥ ತಿಳಿಸಿ.

24.ಪ್ರಕ್ರಿಯೆ ಎಂದರೇನು?

25.ರಾಷ್ಟ್ರೀಯ ವರಮಾನ ಎಂದರೇನು?

26.ಜಾಗತಿಕ ಮಾನವ ಅಭಿವೃದ್ದಿ ವರದಿಗಳ ಪ್ರಕಟಣೆಯ ಹೊಣೆ ಹೊತ್ತಿರುವ ಸಂಸ್ಥೆ ಯಾವದು?

27.ಅನಾಭಿವೃದ್ಧಿ ಎಂಬ ಶಬ್ದವು ಏನನ್ನು ಸೂಚಿಸುತ್ತದೆ.

28.ಲಿಂಗಾನಿಪಾತ ಎಂದರೇನು?

29.2011ರ ಜನಗಣತಿಯ ಪ್ರಕಾರ ಪುರುಷ ಮತ್ತು ಮಹಿಳೆಯರ ಸಾಕ್ಷರತಾ ಪ್ರಮಾಣ ತಿಳಿಸಿ.

30.ಭಾರತದಲ್ಲಿ ಲಿಂಗಾನುಪಾತ ಕುಸಿಯುತ್ತಿದೆ ಏಕೆ?

31.ವಿಶ್ವಸಂಸ್ಥೆ ಪ್ರಕಾರ ಆನಾಭಿವೃದ್ಧಿ ರಾಷ್ಟ್ರಗಳು ಎಂದರೇನು?

*ಮೂರು –ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ (2ಅಂಕದ ಪ್ರಶ್ನೆಗಳು)

32.ತಲಾ ವರಮಾನವು ಅಭಿವೃದ್ಧಿಯ ನೈಜ ಮಾಪಕವಲ್ಲ ಏಕೆ?

33.ಆರ್ಥಿಕಾಭಿವೃದ್ಧಿಯ ಗುರಿಗಳೇನು?

34.ಲಿಂಗ ಸಮಾನತೆಯನ್ನು ಹೇಗೆ ಸಾಧಿಸಬಹುದು.

35.ಭಾರತದಲ್ಲಿ ಮಹಿಳೆಯರು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಪಾಲುದಾರರಾಗಿಲ್ಲ.ಏಕೆ?

36.ಅಭಿವೃದ್ಧಿಯ ಉದ್ದೇಶಗಳಾವವು?

37.ಅಭಿವೃದ್ಧಿ ಪ್ರಕ್ರಿಯೆಯ ವಿವರಣೆ ಕೊಡಿ.

38.ಅನಾಭಿವೃದ್ಧಿಯ ಲಕ್ಷಣಗಳಾವವು?

39.ಭಾರತದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಕಡಿಮೆ ಇರುವದಕ್ಕೆ ಕಾರಣ ನೀಡಿರಿ.

40.ರಾಷ್ಟ್ರೀಯ ವರಮಾನದ ಮೂಲಕ ಅಭಿವೃದ್ಧಿಯನ್ನು ಅಳೆಯುವದು ಅಸಮಂಜಸ, ಏಕೆ?

41.ಕೇವಲ ರಾಷ್ಟ್ರೀಯ ಆದಾಯ ಮತ್ತು ತಲಾ ಆದಾಯಗಳು ದೇಶದ ಅಭಿವೃದ್ಧಿಯ ನೈಜ ಮಾಪಕವಾಗಲಾರವು ಏಕೆ?

42.ಭಾರತದ ಸಂವಿಧಾನವು ಮಹಿಳೆಯರಿಗೆ ಪುರುಷನಷ್ಟೆ ಸ್ವಾತಂತ್ರ್ಯ ಸಮಾನತೆ ನೀಡಿದ್ದರು ತಾರತಮ್ಯತೆ ಇನ್ನೂ ಕಡಿಮೆಯಾಗಿಲ್ಲ ಏಕೆ?

43.ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಯಾವವು?

44.ಗರ್ಭದಲ್ಲಿರುವ ಬ್ರೂಣದ ಲಿಂಗ ಕಂಡುಕೊಳ್ಳುವದು ಕಾನೂನು ಬಾಹಿರ ಏಕೆ?

45.ಮಾನವ ಅಭಿವೃದ್ಧಿ ಕುರಿತು ಅಮರ್ತ್ಯ ಸೇನರು ಏನೆಂದು ಹೇಳಿದ್ಧಾರೆ?

*ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ  (3ಅಂಕದ ಪ್ರಶ್ನೆಗಳು)

46.ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವವಾದುದು ,ವಿವರಿಸಿರಿ.

47.ಮಹಿಳಾ ಸ್ವಸಹಾಯ ಸಂಘಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿವೆ, ಸಮರ್ಥಿಸಿ.

48.ಭಾರತದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಕಡಿಮೆ ಇರುವದಕ್ಕೆ ಕಾರಣಗಳೇನು?

49.ಲಿಂಗತಾರತಮ್ಯ ಸಮಾಜದ ಪ್ರಗತಿಗೆ ಮಾರಕ , ವಿಶ್ಲೇಷಿಸಿರಿ.

ಅಧ್ಯಾಯ-2 ಗ್ರಾಮೀಣಾಭಿವೃದ್ಧಿ.

*ಬಹು ಆಯ್ಕೆ ಪ್ರಶ್ನೆಗಳು

1.ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಕಟ್ಟಿಕೊಟ್ಟವರು

ಎ)ಮಹಾತ್ಮ ಗಾಂಧೀಜಿ   ಬಿ) ಜವಹರಲಾಲ್ ನೆಹರೂ  ಸಿ) ಡಾ// ಬಿ ಆರ್ ಅಂಬೇಡ್ಕರ್   ಡಿ)ಲಾಲ್ ಬಹದ್ದೂರ ಶಾಸ್ತ್ರೀ

2.2011ರ ಜನಗಣತಿ ಪ್ರಕಾರ ಹಳ್ಳಿಗಳಲ್ಲಿ ವಾಸಿಸುವ ಜನರ ಪ್ರಮಾಣ

ಎ)ಶೇ68%    ಬಿ)ಶೇ68.84%   ಸಿ)ಶೇ69.84%   ಡಿ)ಶೇ70%

3.ಭಾರತದ ನೈಜ  ಅಭಿವೃದ್ಧಿ ಎಂದರೆ ಅದು ಗ್ರಾಮಗಳ ಅಭಿವೃದ್ದಿ ಎಂದವರು

ಎ)ಜವಹರಲಾಲ್ ನೆಹರೂ    ಬಿ) ಮಹಾತ್ಮ ಗಾಂಧೀಜಿ      ಸಿ) ಸರ್ ಎಂ ವಿಶ್ವೇಶ್ವರಯ್ಯ    ಡಿ) ನರೇಂದ್ರ ಮೋದಿ

4.ಏಕರೂಪದ ಪಂಚಾಯತ್ ರಾಜ್ ಸಂಸ್ಥೆಗಳು ಆಸ್ತಿತ್ವಕ್ಕೆ ಬಂದ ವರ್ಷ

ಎ)1992   ಬಿ) 1994   ಸಿ)1993   ಡಿ)1995

5.ಗ್ರಾಮೀಣ ಉತ್ಪಾದಕ ಚಟುವಟಿಕೆಗಳು

ಎ)ಕೃಷಿ ಮತ್ತು ಪಶುಪಾಲನೆ  ಬಿ)ಮೀನುಗಾರಿಕೆ ಮತ್ತು ಕೋಳಿಸಾಕಾಣಿಕೆ  ಸಿ)ಸಾಮಾಜಿಕ ಅರಣ್ಯ  ಡಿ) ಈ ಮೇಲಿನ ಎಲ್ಲವೂ

6.ಗ್ರಾಮೀಣ ಹಿಂದುಳಿಯುವಿಕೆ ಮತ್ತು ಗ್ರಾಮೀಣ ಬಡತನಕ್ಕೆ ಅತ್ಯಂತ ಪ್ರಮುಖ ಕಾರಣ

ಎ)ನಗರ ವಲಸೆ   ಬಿ)ಜಾಗತೀಕರಣ   ಸಿ)ಗೃಹ ಕೈಗಾರಿಕೆ   ಡಿ)ಕೃಷಿಯ ಸ್ಥಗಿತತೆ ಮತ್ತು ನಿದಾನಗತಿಯ ಬೆಳವಣಿಗೆ

7.ಪಂಚಾಯತ್ ರಾಜ್ ಸಂಸ್ಥೆಗಳು ಈ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ

ಎ)ಕೇಂದ್ರಿಕರಣ  ಬಿ)ವಿಕೇಂದ್ರಿಕರಣ   ಸಿ)ಸುಖೀರಾಜ್ಯ  ಡಿ) ಉದಾರೀಕರಣ

8.ಉದ್ಯೋಗ ನಿರ್ಮಾಣ ಮತ್ತು ಬಡತನ ನಿರ್ಮೂಲನೆಯ ಯೋಜನೆ

ಎ)ಪ್ರಧಾನಮಂತ್ರಿ ಆವಾಸ ಯೋಜನೆ                     ಬಿ) ಅಂಬೇಡ್ಕರ್-ವಾಲ್ಮೀಕಿ ವಸತಿ ಯೋಜನೆ

ಸಿ)ಆಶ್ರಯ ಯೋಜನೆ                           ಡಿ) ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

9.ಮಹಿಳಾ ಸ್ವಸಹಾಯ ಸಂಘಗಳು

ಎ) ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸುತ್ತವೆ,      ಬಿ) ಗ್ರಾಮೀಣ ಜನರನ್ನು ಆರ್ಥಿಕ ಸ್ವಾವಲಂಬಿಗಳಾಗಿ ಮಾಡುತ್ತವೆ,

ಸಿ)ಉತ್ಪಾದಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತವೆ      ಡಿ) ಈ ಮೇಲಿನ ಎಲ್ಲವೂ

10.ಅಧಿಕಾರ ವಿಕೇಂದ್ರಿಕರಣವು

ಎ)ಎಲ್ಲಾ ರೀತಿಯ ಶೋಷಣೆಗಳನ್ನು ತಡೆಯುತ್ತದೆ.           ಬಿ) ಮಾನವನ ಸ್ವಾತಂತ್ರ್ಯ ಮತ್ತು ಘನತೆಯನ್ನು ಸಂರಕ್ಷಿಸುತ್ತದೆ.

ಸಿ)ಸಹಾನುಭೂತಿ ಮತ್ತು ಸಹಕಾರದಂತಹ ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತವೆ            . ಡಿ) ಈ ಮೇಲಿನ ಎಲ್ಲವೂ.

* ಒಂದು ವಾಕ್ಯದಲ್ಲಿ ಉತ್ತರಿಸಿರಿ (ಒಂದು ಅಂಕದ ಪ್ರಶ್ನೆಗಳು)

11.ಗ್ರಾಮೀಣ ಅಭಿವೃದ್ಧಿ ಎಂದರೇನು?

12.ವಿಕೇಂದ್ರಿಕರಣ ಎಂದರೇನು?

13.ಗ್ರಾಮಸಭೆಯ ಸದಸ್ಯರು ಯಾರಾಗಿರುತ್ತಾರೆ?

14.ಗ್ರಾಮಸಭೆ ಎಷ್ಟು ತಿಂಗಳಿಗೊಮ್ಮೆ ಸಭೆ ಸೇರಬೇಕು?

15.ಮಹಿಳಾ ಸ್ವಸಹಾಯ ಸಂಘಗಳನ್ನು ಏಕೆ ಸ್ಥಾಪಿಸಲಾಗಿದೆ?

16.ಗ್ರಾಮೀಣ ಪ್ರದೇಶದಲ್ಲಿ ಪಡಿತರ ವ್ಯವಸ್ಥೆಯನ್ನು ಏಕೆ ಬಲಪಡಿಸಲಾಗಿದೆ?

17.ಕರ್ನಾಟಕದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳಾ ಸದಸ್ಯರಿದ್ದಾರೆ, ಏಕೆ?

18.ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹೆಸರಿಸಿರಿ.

19.ವಸತಿ ಯೋಜನೆಗಳ ಅನುಷ್ಟಾನದ ಉದ್ದೇಶವೇನು?

20.ಗ್ರಾಮೀಣ ಉತ್ಪಾದಕ ಚಟುವಟಿಕೆಗಳ ಅಭಿವೃದ್ಧಿಯ ಮಹತ್ವವೇನು?

21.ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯನ್ನು ಹೇಗೆ ಶ್ರೀಮಂತಗೊಳಿಸಬಹುದು.

22.ಭಾರತ ಹಳ್ಳಿಗಳ ದೇಶ ಹೇಗೆ?

*ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ(2 ಅಂಕದ ಪ್ರಶ್ನೆಗಳು)

23.ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಸಭೆಯ ಪಾತ್ರವೇನು?

24.ಸ್ವಾತಂತ್ರ್ಯ ನಂತರ ಗ್ರಾಮೀಣ ಪ್ರದೇಶಗಳು ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ, ಏಕೆ?

25.ವಸತಿ ಹೀನರಿಗೆ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಗಳನ್ನು ಹೆಸರಿಸಿರಿ?

26.ಇಂದು ಗ್ರಾಮೀಣ ಪ್ರಧೇಶಗಳನ್ನು ಅಭಿವೃದ್ಧಿಪಡಿಸುವದು ಅತ್ಯವಶ್ಯಕವಾಗಿದೆ, ಸಮರ್ಥಿಸಿರಿ.
27,ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಮುಖ ಲಕ್ಷಣಗಳೇನು?

28.ಮೂರು ಹಂತದ ಪಂಚಾಯತ್ ಸಂಸ್ಥೆಗಳನ್ನು ಹೆಸರಿಸಿರಿ?

29.ಪ್ರಸ್ತುತ ಸಮಾಜದಲ್ಲಿ ಜೀವಂತವಾಗಿರುವ ಸಾಮಾಜಿಕ ಪಿಡುಗುಗಳಾವವು?

30. ಮಹಿಳೆಯರು ಇಂದು ಯಾವ ಯಾವ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ?

31.ಗ್ರಾಮೀಣ ಉತ್ಪಾದಕ ಚಟುವಟಿಕೆಗಳ್ಯಾವವು?

*ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ ( 3ಅಂಕದ ಪ್ರಶ್ನೆಗಳು)

32.ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವೇನು?

33.ಗ್ರಾಮೀಣ ಅಭಿವೃದ್ಧಿಗೆ ನಿಮ್ಮ ಸಲಹೆಗಳೇನು?

34.ಗ್ರಾಮೀಣಾಭಿವೃದ್ಧಿಯು ಗ್ರಾಮೀಣ ಪರಿವರ್ತನೆಗೆ ಕಾರಣವಾಗುತ್ತದೆ-ಈ ಹೇಳಿಕೆಯನ್ನು ಸ್ಪಷ್ಟೀಕರಿಸಿರಿ.

35.ವಿಕೇಂದ್ರಿಕರಣದ ಹಿನ್ನಲೆಯಲ್ಲಿ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ವಿವರಿಸಿರಿ.

36.ಗ್ರಾಮೀಣಾಭಿವೃದ್ಧಿಯ ಮಹತ್ವವನ್ನು ವಿವರಿಸಿರಿ.

37.ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿರಿ.

38.ಗ್ರಾಮೀಣಾಭಿವೃದ್ಧಿಯಲ್ಲಿ ಸ್ತ್ರೀಶಕ್ತಿ ಸಂಘಗಳ ಪಾತ್ರವನ್ನು ವಿವಿಸಿರಿ.

39.ಗ್ರಾಮೀಣ ಭಾಗದ ಬಡಜನರ ಜೀವನ ಸ್ಥಿತಿಯನ್ನು ಸುಧಾರಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ?

ಅಧ್ಯಾಯ-3 ಹಣ ಮತ್ತು ಸಾಲ

*ಬಹು ಆಯ್ಕೆ ಪ್ರಶ್ನೆಗಳು

1.ಭಾರತೀಯ ರಿಜರ್ವ ಬ್ಯಾಂಕ್ ಸ್ಥಾಪನೆಯಾದ ವರ್ಷ

ಎ)1935  ಬಿ) 1936  ಸಿ)1948 ಡಿ) 1949

2.ಭಾರತ ಸರ್ಕಾರ 14 ಬ್ಯಾಂಕಗಳನ್ನು ರಾಷ್ಟ್ರೀಕರಣಗೊಳಿಸಿದ್ದು

ಎ)1976   ಬಿ)1980   ಸಿ) 1969    ಡಿ) 1979

3.ಅಮೇರಿಕಾದ ಹಣದ ಹೆಸರು

ಎ) ಪೌಂಡ್   ಬಿ)ಡಾಲರ್    ಸಿ)ರೂಪಾಯಿ    ಡಿ) ಯೆನ್

4.ಆರ್ ಬಿ ಐ ರಾಷ್ಟ್ರೀಕರಣಗೊಂಡ ವರ್ಷ

ಎ)1939  ಬಿ)1949   ಸಿ)1959   ಡಿ)1969

5.ಬ್ಯಾಂಕುಗಳ ಬ್ಯಾಂಕು ಎಂದು ಹೆಸರಾಗಿದೆ.

ಎ)ಎಸ್ ಬಿ ಐ  ಬಿ) ವಿಜಯಾ ಬ್ಯಾಂಕ್  ಸಿ) ಆರ್ ಬಿ ಐ   ಡಿ) ಸಿಂಡಿಕೇಟ್ ಬ್ಯಾಂಕ್

6.ಚೆಕ್ ಬುಕ್ ಎಂತಹ ಹಣಕ್ಕೆ ಉತ್ತಮ ಉದಾಹರಣೆ

ಎ)ಲೋಹದ ಹಣ   ಬಿ)ಬ್ಯಾಂಕ್ ಹಣ    ಸಿ) ಕಾಗದದ ಹಣ   ಡಿ) ಪ್ಲಾಸ್ಟಿಕ್ ಹಣ

7.ಸರಕುಗಳಿಗಾಗಿ ಸಂದಾಯ ಮಾಡುವಲ್ಲಿ ಅಥವಾ ಇತರೆ ವಾಣಿಜ್ಯ ಸಾಲಗಳನ್ನು ತೀರಿಸುವಲ್ಲಿ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಯಾವದೇ ವಸ್ತು ಹಣವಾಗಿದೆ ಎಂದವರು.

ಎ)ರಾಬರ್ಟಸನ್    ಬಿ)ಜಾಫರ್ ಕ್ರೌಥರ್    ಸಿ) ಜೆ ಬಿ ಸೇ     ಡಿ) ಆ್ಯಡಂಸ್ಮಿತ್

8.ಹಣದ ವಿಕಾಸದ ಮೊದಲ ಹಂತ

ಎ) ವಸ್ತುರೂಪದ ಹಣ   ಬಿ) ಸಾಟಿ(ವಸ್ತು) ವಿನಿಮಯ ಹಂತ    ಸಿ) ಕಾಗದದ ಹಣ   ಡಿ) ಲೋಹದ ಹಣ

9.ಈ ಕೆಳಗಿನವುಗಳಲ್ಲಿ ಯಾವದು ಹಣದ ಪೂರಕ ಕಾರ್ಯವಲ್ಲ.

ಎ)ವಿಳಂಬಿತ ಸಂದಾಯದ ಪ್ರಮಾಣ                               ಬಿ) ಮೌಲ್ಯ ಅಥವಾ ಖರೀದಿ ಶಕ್ತಿಯ ಸಂಗ್ರಹ

ಸಿ)ಮೌಲ್ಯ ವರ್ಗಾವಣೆ ಅಥವಾ ಖರೀದಿ ಶಕ್ತಿಯ ವರ್ಗಾವಣೆ       ಡಿ) ವಿನಿಮಯದ ಮಾದ್ಯಮ ಅಥವಾ ಸಂದಾಯದ ಸಾಧನ

10.ಭಾರತ ಸರ್ಕಾರ 1980ರಲ್ಲಿ ರಾಷ್ಟ್ರೀಕರಣಗೊಳಿಸಿದ ಬ್ಯಾಂಕುಗಳ ಸಂಖ್ಯೆ

ಎ)8 ವಾಣಿಜ್ಯ ಬ್ಯಾಂಕುಗಳು    ಬಿ) 7ವಾಣಿಜ್ಯ ಬ್ಯಾಂಕುಗಳು  ಸಿ) 6ವಾಣಿಜ್ಯ ಬ್ಯಾಂಕುಗಳು   ಡಿ) 10 ವಾಣಿಜ್ಯ ಬ್ಯಾಂಕುಗಳು

*ಒಂದು ವಾಕ್ಯದಲ್ಲಿ ಉತ್ತರಿಸಿರಿ (ಒಂದು ಅಂಕದ ಪ್ರಶ್ನೆಗಳು)

11.ಹಣದ ಅರ್ಥ ತಿಳಿಸಿ.

12.ಇ ಹಣ ಎಂದರೇನು?

13 ಸಾಟಿ ವಿನಿಮಯ ಪದ್ಧತಿ ಎಂದರೇನು?

14.ಬ್ಯಾಂಕ್ ಹಣಕ್ಕೆ ಉದಾಹರಣೆ ನೀಡಿ.

15.ಬ್ಯಾಂಕ್ ದರ ಎಂದರೇನು?

16.ಬೇಡಿಕೆ ಅಥವಾ ಡಿಮ್ಯಾಂಡ್ ಠೇವಣಿಗಳೆಂದರೇನು?

17.ಹಣದುಬ್ಬರವು ಹೇಗೆ ಸಂಭವಿಸುತ್ತದೆ.

18.ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಎಂದರೇನು?

19.ಉಳಿತಾಯ ಮತ್ತು ಚಾಲ್ತಿ ಖಾತೆಯನ್ನು ಬೇಡಿಕೆ ಅಥವಾ ಡಿಮ್ಯಾಂಡ್ ಠೇವಣಿಗಳೆಂದು ಕರೆಯಲು ಕಾರಣವೇನು?

20.ಕಿರಿದಾದ ಹಣದ ಪೂರೈಕೆ ಯಾವುದು?

21.ವಸ್ತು ರೂಪದ ಹಣಕ್ಕೆ ಉದಾಹರಣೆ ಕೊಡಿ.

22.ಪ್ಲಾಸ್ಟಿಕ್ ಹಣಕ್ಕೆ ಉದಾಹರಣೆ ನೀಡಿ.

23.ಬ್ಯಾಂಕಿಂಗ್ ಎಂದರೇನು?

24.ಭಾರತದಲ್ಲಿ ಒಂದು ರೂಪಾಯಿ ನೋಟನ್ನು ಯಾರು ಮುದ್ರಿಸಿ ಚಲಾಯಿಸುತ್ತಾರೆ.

25.ಮುದ್ದತ್ತು ಠೇವಣೆ ಎಂದರೇನು?

26.ಹಣಕಾಸು ನೀತಿ ಎಂದರೇನು?

27.ನಗದು ಮೀಸಲು ಅನುಪಾತ ಎಂದರೇನು?

28.ಶಾಸನಬದ್ಧ ದ್ರವ್ಯತೆ ಅನುಪಾತ ಎಂದರೇನು?

29.ಹಣ ವಿನಿಮಯ ಮಾದ್ಯಮ ಹೇಗೆ?

30. ಬ್ಯಾಂಕ್ ಹಣ ಆಸ್ತಿತ್ವಕ್ಕೆ ಬರಲು ಕಾರಣವೇನು?

31.ಲೋಹದ ಹಣ ಬಳಕೆ ದೋಷಪೂರಿತವಾಗಿತ್ತು ಹೇಗೆ?

32.ಹಣದ ಕುರಿತು ರಾಬರ್ಟಸನ್ ರವರ ವ್ಯಾಖ್ಯಾನವೇನು?

*ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ  ( 2ಅಂಕದ ಪ್ರಶ್ನೆಗಳು)

33.ಹಣದ ವಿಕಾಸದ ಯಾವುದಾದರೂ ನಾಲ್ಕು ಹಂತಗಳನ್ನು ತಿಳಿಸಿರಿ.

34.ಭಾರತದಲ್ಲಿ ಬಳಸಲಾಗುತ್ತಿರುವ ಹಣದ ಪೂರೈಕೆಯ ವಿವಿಧ ಪರಿಕಲ್ಪನೆಗಳನ್ನು ತಿಳಿಸಿರಿ.

35.ಹಣದ ಪೂರಕ ಕಾರ್ಯಗಳಾವವು?

36.ಪ್ಲಾಸ್ಟಿಕ್ ಹಣದ ಮಹತ್ವವೇನು?
37.ಪುರಾತನ ಕಾಲದಲ್ಲಿ ಜನರು ಸಾಟಿ ವಿನಿಮಯ ಪದ್ದತಿಯನ್ನು ಬಳಸುತ್ತಿದ್ದರು. ವಿಶ್ಲೇಷಿಸಿ.

38.ಲೋಹದ ಹಣ ಮತ್ತು ಕಾಗದದ ಹಣದ ನಡುವಿನ ವ್ಯತ್ಯಾಸಗಳೇನು?

*ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ (3ಅಂಕದ ಪ್ರಶ್ನೆಗಳು)

39.ಹಣದ ಕಾರ್ಯಗಳನ್ನು ಪಟ್ಟಿ ಮಾಡಿ.

40.ಹಣದ ವಿಕಾಸದ ಹಂತಗಳನ್ನು ಬರೆಯಿರಿ.

41.ಆರ್ ಬಿ ಐ ದ ಕಾರ್ಯಗಳೇನು?

42.ಆರ್ ಬಿ ಐ ಸರ್ಕಾರದ ಬ್ಯಾಂಕಾಗಿ ಕಾರ್ಯನಿರ್ವಹಿಸುತ್ತದೆ, ಸಮರ್ಥಿಸಿರಿ.

43.ಆರ್ ಬಿ ಐ ಬಳಸುವ ಸಾಲ ನಿಯಂತ್ರಣ ಕ್ರಮಗಳನ್ನು ವಿವರಿಸಿರಿ.
44.ಧೇಶವೊಂದರ ಪ್ರಗತಿಯಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ, ವಿಶ್ಲೇಷಿಸಿರಿ.

45.ಭಾರತದಲ್ಲಿ ಬಳಸಲ್ಪಡುವ ಹಣದ ಪೂರೈಕೆಯ ವಿವಿಧ ಪರಿಕಲ್ಪನೆಗಳನ್ನು ವಿವರಿಸಿರಿ.

46.ಬ್ಯಾಂಕುಗಳ ಪ್ರಾಮುಖ್ಯತೆಯನ್ನು ವಿವರಿಸಿ.

47.ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಹಣ ಕ್ಕೆ ಹೆಚ್ಚಿನ ಮಹತ್ವವಿದೆ, ಸಮರ್ಥಿಸಿ.

48 ಆರ್ ಬಿ ಐ ಬ್ಯಾಂಕುಗಳ ಬ್ಯಾಂಕ್ ಆಗಿ ಕಾರ್ಯ ಮಾಡುತ್ತಿದೆ, ವಿವರಿಸಿರಿ.

ಅಧ್ಯಾಯ-4  ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ

*ಬಹುಆಯ್ಕೆ ಪ್ರಶ್ನೆಗಳು

1.ಪ್ರಸ್ತುತ ಭಾರತದ ಹಣಕಾಸು ಮಂತ್ರಿ

ಎ)ಸುರೇಶ ಅಂಗಡಿ     ಬಿ) ರಾಜನಾಥ ಸಿಂಗ್  ಸಿ) ನಿರ್ಮಲಾ ಸೀತಾರಾಮನ್   ಡಿ) ಅಮಿತ್ ಶಾ

2.ಭಾರತದಲ್ಲಿ ಹಣಕಾಸು ವರ್ಷದ ಅವಧಿ

ಎ) ಜನೇವರಿ 01-ಡಿಸೆಂಬರ್31                  ಬಿ) ಜನೇವರಿ 01-ಜುಲೈ31

ಸಿ)ಏಪ್ರೀಲ್ 01-ಮಾರ್ಚ31                       ಡಿ) ಏಪ್ರೀಲ್ 01- ಡಿಸೆಂಬರ್ 31

3.ಕೋಶಿಯ(ವಿತ್ತೀಯ) ನೀತಿ ಯಾವುದಕ್ಕೆ ಸಂಬಂಧಿಸಿದೆ.

ಎ) ಸರಕಾರದ ವರಮಾನ  ಬಿ) ಸರಕಾರದ ವೆಚ್ಚ    ಸಿ) ಸರಕಾರದ ಸಾಲ   ಡಿ) ಈ ಮೇಲಿನ ಎಲ್ಲವೂ

4.ಸರಕಾರದ ಬಹುಮುಖ್ಯ ವರಮಾನದ ಮೂಲ

ಎ)ತೆರಿಗೆ     ಬಿ)ವಿದೇಶಿ ವ್ಯಾಪಾರ    ಸಿ) ಸಾರಿಗೆ ಸಂಪರ್ಕ   ಡಿ) ಕೈಗಾರಿಕೆಯ ವರಮಾನ

5.ಆಯವ್ಯಯ ಕೊರತೆಯ ಸರಿಯಾದ ಸೂತ್ರ

ಎ)ವಿತ್ತೀಯ ಕೊರತೆ-ಬಡ್ಡಿ ಪಾವತಿ   ಬಿ) ಕಂದಾಯ ಖಾತೆಯ ವರಮಾನ ಸಿ) ಒಟ್ಟು ವರಮಾನ-ಒಟ್ಟು ವೆಚ್ಚ ಡಿ) ಒಟ್ಟು          ವರಮಾನ+ಒಟ್ಟು ವೆಚ್ಚ.

6.ಭಾರತ ಸರಕಾರ ಕೋಶಿಯ ಹೊಣೆಗಾರಿಕೆ ಮತ್ತು ಮುಂಗಡ ಪತ್ರ ನಿರ್ವಹಣೆ ಕಾಯ್ದೆಯನ್ನು ಜಾರಿಗೆ ತಂದ ವರ್ಷ

ಎ)2005     ಬಿ) 2002   ಸಿ) 2003    ಡಿ)2004

7.ಕೇಂದ್ರ ಸರಕಾರದ ಮುಂಗಡ ಪತ್ರ(ಆಯವ್ಯಯ ಪತ್ರ)ವನ್ನು ಲೋಕಸಭೆಯಲ್ಲಿ ಮಂಡಿಸುವವರು

ಎ)ಪ್ರಧಾನಮಂತ್ರಿ   ಬಿ) ಹಣಕಾಸು ಮಂತ್ರಿ   ಸಿ) ರಾಷ್ಟ್ರಪತಿ  ಡಿ) ಸಭಾಪತಿ

8.ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ಜಾರಿಗೆಯಾದ ವರ್ಷ

ಎ)ಜುಲೈ01, 2017.     ಬಿ)ಏಪ್ರೀಲ್01, 2017    ಸಿ) ಜನೇವರಿ01, 2017  ಡಿ) ಜೂನ್01, 2017

9.ಪ್ರತ್ಯಕ್ಷ ತೆರಿಗೆಗೆ ಉದಾಹರಣೆ

ಎ) ಸರಕು ಮತ್ತು ಸೇವಾ ತೆರಿಗೆ ಬಿ)ಆಮದು ಮತ್ತು ರಪ್ತು ಸುಂಕ ಸಿ) ಮೌಲ್ಯವರ್ಧಿತ ತೆರಿಗೆ ಡಿ)ಕಂಪನಿ ತೆರಿಗೆ

10.ಸಾರ್ವಜನಿಕ ವೆಚ್ಚದ ಪ್ರಮುಖ ಉದ್ದೇಶ

ಎ) ಆರ್ಥಿಕ ಬೆಳವಣಿಗೆ ತೀವ್ರಗೊಳಿಸುವದು               ಬಿ)ಸಂಪೂರ್ಣ ಉದ್ಯೋಗ ಸಾಧಿಸುವದು

ಸಿ) ಸಾಮಾಜಿಕ ಕಲ್ಯಾಣವನ್ನು ಅಧಿಕಗೊಳಿಸುವದು       ಡಿ) ಈ ಮೇಲಿನ ಎಲ್ಲವೂ

* ಒಂದು ವಾಕ್ಯದಲ್ಲಿ ಉತ್ತರಿಸಿರಿ  (ಒಂದು ಅಂಕದ ಪ್ರಶ್ನೆಗಳು)

11.ಸಾರ್ವಜನಿಕ ಹಣಕಾಸು ಎಂದರೇನು?

12.ವೈಯಕ್ತಿಕ ಹಣಕಾಸು ಎಂದರೇನು?

13.ಮುಂಗಡ ಪತ್ರದ(ಆಯವ್ಯಯ) ಅರ್ಥ ತಿಳಿಸಿ.

14.ಸರಕಾರವು ಸಾರ್ವಜನಿಕ ಹಣಕಾಸನ್ನು ಯಾವ ನೀತಿಯ ಮೂಲಕ ನಿರ್ವಹಿಸುತ್ತದೆ.

15.ಪ್ರತ್ಯಕ್ಷ ತೆರಿಗೆ ಎಂದರೇನು?

16.ಪರೋಕ್ಷ ತೆರಿಗೆ ಎಂದರೇನು?

17.ಕೊರತೆ ಹಣಕಾಸು ಎಂದರೇನು?

18.ಸರಕಾರದ ಪ್ರಗತಿಪರ ತೆರಿಗೆ ನೀತಿಯು ಬಡವರಿಗೆ ಹೇಗೆ ಸಹಕಾರಿಯಾಗಿದೆ.

19.ಸಾರ್ವಜನಿಕ ಹಣಕಾಸು ಕುರಿತು ಡಾಲ್ಟನ್ ರವರ ವ್ಯಾಖ್ಯಾನವೇನು?

20.ಕೋಶಿಯ ನೀತಿ ಎಂದರೇನು?

21.ಸರಕಾರದ ಆಯವ್ಯಯಕ್ಕೆ ಯಾವುದರ ಅನುಮೋದನೆ ಅಗತ್ಯವಾಗಿದೆ.

22.ಮುಂಗಡ ಪತ್ರಕ್ಕೆ ಯಾವ ಅವಧಿಯೊಳಗೆ ಅನುಮೋದನೆ ಪಡೆಯಬೇಕು.

23.ಉಳಿತಾಯ ಮುಂಗಡ ಪತ್ರ ಎಂದರೇನು?

24 ಕೊರತೆಯ ಮುಂಗಡ ಪತ್ರ ಎಂದರೇನು?

25 ಸಮತೋಲನ ಮುಂಗಡ ಪತ್ರ ಎಂದರೇನು?

26, ಸಾರ್ವಜನಿಕ ವೆಚ್ಚ ಎಂದರೇನು?

27.ಸಾರ್ವಜನಿಕ ವೆಚ್ಚ ಏರಿಕೆಯಾಗಲು ಕಾರಣವೇನು?

28,ಕಂದಾಯ ವರಮಾನ ಎಂದರೇನು?

29.ಕಂದಾಯ ವರಮಾನದ ಎರಡು ವಿಧಗಳು ಯಾವವು?

30.ತೆರಿಗೆ ವರಮಾನ ಎಂದರೇನು?

31.ಪ್ರಗತಿಪರ ತೆರಿಗೆ ನೀತಿ ಎಂದರೇನು?

32.ತೆರಿಗೆಯ ಎರಡು ವಿಧಗಳು ಯಾವವು?

33.ಜಿ ಎಸ್ ಟಿ ಯಾವಾಗ ಜಾರಿಗೆ ಬಂದಿದೆ?

34.ತೆರಿಗೆಯೇತರ ಆದಾಯದ ಮೂಲ ಎಂದರೇನು?

35.ಸಾರ್ವಜನಿಕ ಸಾಲ ಎಂದರೇನು?

36.ಆಂತರಿಕ ಸಾಲ ಎಂದರೇನು?

37.ವಿದೇಶಿ ಸಾಲ ಎಂದರೇನು?

38.ಹೂಡಿಕೆ ಹಿಂತೆಗೆತ ಎಂದರೇನು?

39.ಸಾಲೇತರ ಬಂಡವಾಳ ಎಂದರೇನು?

40.ಕೊರತೆಯ ಹಣಕಾಸು ಎಂದರೇನು?

41.ವಿತ್ತೀಯ (ಕೋಶಿಯ) ಕೊರತೆ ಎಂದರೇನು?

42.ಮುಂಗಡ ಪತ್ರದ ಕೊರತೆಯ ಸೂತ್ರವನ್ನು ಹೆಸರಿಸಿರಿ.

43.ಪ್ರಾಥಮಿಕ ಕೊರತೆಯನ್ನು ಸೂತ್ರ ರೂಪದಲ್ಲಿ ಬರೆಯಿರಿ.

44.ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಸರಕಾರವು ಕೊರತೆಯ ಆಯವ್ಯಯವನ್ನೇ ಮಂಡಿಸುತ್ತದೆ, ಏಕೆ?

45. ಜಿ ಎಸ್ ಟಿ ವಿಸ್ತರಿಸಿ ಬರೆಯಿರಿ.

*ಮೂರು –ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ  (2ಅಂಕದ ಪ್ರಶ್ನೆಗಳು)

46.ಕೇಂದ್ರ ಸರಕಾರವು ತನ್ನ ವೆಚ್ಚ ಮತ್ತು ವರಮಾನಗಳ ನಡುವಿನ ವ್ಯತ್ಯಾಸವನ್ನು ಹೇಗೆ ಸರಿದೂಗಿಸುತ್ತದೆ?

47.ಕೋಶಿಯ ಹೊಣೆಗಾರಿಕೆ ಮತ್ತು ಮುಂಗಡ ಪತ್ರ ನಿರ್ವಹಣೆ ಕಾಯ್ದೆಯ ಉದ್ಧೇಶಗಳು ಯಾವವು?

48.ಕೊರತೆ ಹಣಕಾಸಿನ ವಿಧಗಳು ಯಾವವು?

47.ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ನಡುವಿನ ವ್ಯತ್ಯಾಸಗಳೇನು.

48.ಮುಂಗಡ ಪತ್ರ ಎಂದರೇನು? ಮುಂಗಡಪತ್ರದ ವಿಧಗಳನ್ನು ತಿಳಿಸಿ.

49.ಕೇಂದ್ರ ಸರಕಾರದ ತೆರಿಗೆಯೇತರ ವರಮಾನದ ಮೂಲಗಳು ಯಾವವು?

50.ಪ್ರಗತಿಪರ ತೆರಿಗೆಯು ಬಡವರಿಗೆ ಹೇಗೆ ಸಹಕಾರಿಯಾಗಿದೆ.

51.ಸರಕಾರವು ಯಾವ ಚಟುವಟಿಕೆಗಳ ಮೇಲೆ ವೆಚ್ಚ ಮಾಡುತ್ತದೆ?

52.ಆಂತರಿಕ ಸಾಲದ ಬಗೆಗಳಾವವು?

53.ಕೋಶಿಯ ನೀತಿಯ ಉದ್ಧೇಶಗಳೇನು?

54.ಸಾರ್ವಜನಿಕ ಹಣಕಾಸಿನ ಅಧ್ಯಯನವು ಆಯವ್ಯಯಗಳ ವಿಶ್ಲೇಷಣೆಗೆ ಹೇಗೆ ಸಹಾಯಕಾರಿಯಾಗುತ್ತದೆ?
*ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ  (3ಅಂಕದ ಪ್ರಶ್ನೆಗಳು)

55.ಸಾರ್ವಜನಿಕ ಹಣಕಾಸಿನ ಮಹತ್ವವನ್ನು ವಿವರಿಸಿರಿ.

56.ಸಾರ್ವಜನಿಕ ವೆಚ್ಚದ ಪ್ರಮುಖ ಉದ್ದೇಶಗಳೇನು?

57.ಸಾರ್ವಜನಿಕ ವೆಚ್ಚದ ಏರಿಕೆಗೆ ಕಾರಣಗಳನ್ನು ವಿವರಿಸಿರಿ.
58. ತೆರಿಗೆಯೇತರ ವರಮಾನದ ಮೂಲಗಳನ್ನು ವಿವರಿಸಿರಿ.

59.ಅಧಿಕ ಪ್ರಮಾಣದ ಕೊರತೆಗಳು ಆರ್ಥಿಕ ವ್ಯವಸ್ಥೆಗೆ ಉತ್ತಮವಲ್ಲ ಏಕೆ?

60.ಕಂದಾಯ ವರಮಾನ ಎಂದರೇನು? ಅದರ ವಿಧಗಳು ಯಾವವು?

61.ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ನಡುವಿನ ಭಿನ್ನತೆಗಳನ್ನು ತಿಳಿಸಿರಿ.

62.ಆಯವ್ಯಯ ಪತ್ರದ ಅರ್ಥ ತಿಳಿಸಿ?ವಿಧಗಳನ್ನು ವಿವರಿಸಿ.

63.ಪ್ರತಿಸಲವೂ ನಮ್ಮ ಕೇಂದ್ರ ಸರಕಾರವು ಕೊರತೆ ಮುಂಗಡ ಪತ್ರ ಮಂಡಿಸುತ್ತಿದೆ,ಸಮರ್ಥಿಸಿ.

                                                   --ಮುಕ್ತಾಯ--

 

.