ಭಾನುವಾರ, ಜನವರಿ 17, 2010

ನಾನು ಶಾಲೆ ಬಿಡಲು ಕಾರಣ



ನಾನು ಶಾಲೆಯನ್ನು ಬಿಡಲು ಕಾರಣ ನಮ್ಮ ತಂದೆ ತಾಯಿ ಊರಿಗೆ

ಹೋಗಿದ್ದರು, ನಮ್ಮ ಹೊಲದಲ್ಲಿ ಕೆಲಸ ಮಾಡಲು ಯಾರು ಇಲ್ಲದ

ಕಾರಣ ನಾನು ನಮ್ಮ ಒಲದಲ್ಲಿಹತ್ತಿ ಪ್ಲಾಟ ಮಗ್ಗಿಯನ್ನು ಮುರಿಯಲು

ಹೋಗಲೆಬೇಕಾಗಿದ್ದರಿಂದ ನಾನು ಹೋದೆ. ಆದರೆ ಶಾಲೆಬಿಡುವುದು

ತಪ್ಪು. ನಮ್ಮ ತಂದೆ ತಾಯಿ ಊರಿನಿಂದ ಬಂದರು ನಾನು ಶಾಲೆಗೇ

ಮತ್ತೆ ಬಂದೆ.


ನೀಲಪ್ಪ . ಸಿ . ಪರಮನಟ್ಟಿ
೯ ನೇ ತರಗತಿ
ಜಾ . ಗುಡದೂರ

ನರಿಯ ಆತ್ಮ ವಿಶ್ವಾಸ



ಒಂದು ನರಿ ಹಾಗು ಒಂದು ಕಾಡು ಬೆಕ್ಕು ಹಳ್ಳಿಯ ಹೊರ ಭಾಗದಲ್ಲಿ ಸಂಧಿಸಿದವು. ಇದು ತುಂಭಾ ಆಪಾಯಕಾರಿ ಸ್ಥಳ. ನಾಯಿಗಳ ಕಾಟ ಇಲ್ಲಿ ವಿಪರೀತವಾಗಿ ಇದೆ ಎಂದು ಬೆಕ್ಕು ಹೇಳಿತು.ನಾಯಿಗಳು ನನ್ನನ್ನು ಏನು ಮಾಡಲಾರವು ಎಂದು ನಿರ್ಲಕ್ಷ್ಯ್ತೋರಿದ ನರಿ ಆ ಮೂರ್ಖಪ್ರಾಣಿಗಳಿಂದ ಪಾರಾಗಲು ತನ್ನಲ್ಲಿ ನೂರಾರು ತಂತ್ರಗಳಿವೆ ಎಂದು ಕೊಚ್ಚಿಕೊಂಡಿತು. ಅಷ್ಟರಲ್ಲಿಯೇ ನಾಯಿಯ ಗುಂಪೊಂದು ಅತ್ತ ಕಡೆ ಬರುತ್ತಿರುವುದನ್ನು ಅವು ನೋಡಿದವು. ಬರುತ್ತೇನೆ ಗೆಳೆಯ ಇಲ್ಲಿಂದ ನಾನು ಕಾಲು ಕೀಳುವುದು
ಮೇಲು ನಿನ್ನಂತೆ ನೂರಾರು ಉಪಾಯಾಗಳು ನನ್ನ ಬಳಿ ಇಲ್ಲ. ನಾಯಿಗಳಿಂದ ಪಾರಾಗಲು ಮರ ಏರುವುದು ಒಂದೇ ನನ್ನ ಬಳಿ ಇರುವ ಉಪಾಯ. ಎಂದು ಹೇಳಿ ಬೆಕ್ಕು ಓಡಿ ಹೋಗಿ ಎತ್ತರದ ಮರವನ್ನು ಏರಿತು. ನರಿ ತನ್ನ ಬಳಿ ಇರುವ ನೂರಾರು ತಂತ್ರಗಳಲ್ಲಿಯಾವುದನ್ನು ಬಳಸಿದರೆ ನಾಯಿಗಳಿಂದ ಪಾರಾಗಬಹುದು ಎಂದು ಯೋಚಿಸುವಷ್ಟರಲ್ಲಿಯೇ ನಾಯಿಗಳು ನರಿಯನ್ನು ಆಕ್ರಮಿಸಿ ಬಿಟ್ಟವು.



ಭೀಮಪ್ಪ. ಬಿ. ಕಲ್ಲೂರು
೮ ನೇ ತರಗತಿ, ಜಹಾಗಿರ ಗುಡದೂರ.

ಗುರುವಾರ, ಜನವರಿ 14, 2010

ಮನಸ್ಸು


ಮನುಷ್ಯನಿಗೆ ಎರಡು ಮನಸ್ಸುಗಳು. ಒಂದು ಕೆಟ್ಟ ಮನಸ್ಸು ಮತ್ತು ಒಂದು ಒಳ್ಳೆಯ ಮನಸ್ಸು. ಮನುಷ್ಯರು ಒಳ್ಳೆಯ ಮನಸ್ಸಿನ ಮೇಲೆ ಅವಲಂಬನೆ ಹೊಂದಿರಬೇಕು. ಏಕೆಂದರೆ ಒಳ್ಳೆಯ ಮನಸ್ಸು ನಮ್ಮನ್ನು ಒಳ್ಳೆಯ ದಾರಿಯ ಕಡೆ ಕರೆದುಕೊಂಡು ಹೋಗುತ್ತದೆ. ಕೆಟ್ಟ ಮನಸ್ಸು ಕೆಟ್ಟ ವಿಚಾರಗಳೆಡೆ ಕರೆದುಕೊಂಡು ಹೋಗುತ್ತದೆ. ಅದ್ದರಿಂದ ನಾವು ಒಳ್ಳೆ ಮನಸ್ಸಿನ ಕಡೆ ಗಮನ ಕೊಡಬೇಕು. ಒಳ್ಳೆಯ ವಿಚಾರಗಳನ್ನು ಬೆಳಸಿಕೊಳ್ಳಬೇಕು. ನಾವು ಒಳ್ಳೆಯ ವಿಚಾರಗಳನ್ನು ಬೆಳಸಿಕೋಳ್ಳ ವುದು ಒಳ್ಳೆಯ ಪ್ರಜೆಗಳಾಗ ಬೇಕಾಗಿದೆ.

ಸವಿತಾ.ಸ. ಬಾಗೂರ
೮ ನೇತರಗತಿ
ಜಹಾಗೀರ್ ಗುಡದೂರ