ಸೋಮವಾರ, ಡಿಸೆಂಬರ್ 29, 2014

ಭಾನುವಾರ, ಡಿಸೆಂಬರ್ 28, 2014

ಕಲಾ ಶಿಕ್ಷಣ ವಿಚಾರ ಸಂಕಿರಣ - ಗೋಷ್ಟಿ ೨

ಬದಲಾವಣೆಯ ಪ್ರತಿನಿಧಿಗಳಾಗಿ ಕಲಾವಿದರು ಹಾಗೂ ಶಿಕ್ಷಕರು




ರಾಜ್ಯ ಮಟ್ಟದ ಕಲಾಶಿಕ್ಷಣ ವಿಚಾರ ಸಂಕಿರಣ





ಶುಕ್ರವಾರ, ಡಿಸೆಂಬರ್ 26, 2014

ನಾಟಕ - ಹೆಜ್ಜೆಗಳು

ಶಿವನಾಯ್ಕ್ ದೊರೆ ಅವರು ನಾಟಕ ನಿರ್ದೇಶಿಸಿದ ಕೆಲವು ಚಿತ್ರಗಳು.

ಸತ್ರು ಅಂದ್ರೆ ಸಾಯ್ತಾರೆ

 ಶೂದ್ರ ತಪಸ್ವಿ

 ಸತ್ರು ಅಂದ್ರೆ ಸಾಯ್ತಾರೆ

 ಶುದ್ರ ತಪಸ್ವಿ

ಶೂದ್ರ ತಪಸ್ವಿ

kali kalisu ending function


ಗುರುವಾರ, ಡಿಸೆಂಬರ್ 18, 2014

ಪಾಕಿಸ್ತಾನದ ಆ ಕಂದಗಳು


          
      ಇಂದು ತಡೆಯಲಾರದಷ್ಟು ನೋವಾಗಿದೆ. ಆ ಮುದ್ದು ಕಂದಗಳು ಕಟುಕರಿಗೇನು ಮಾಡಿದ್ದರು. ಕೊಂದವನು ಒಬ್ಬ ಮಗುವಾಗಿಯೇ ಬಂದವನಲ್ಲವೇ? 

ರಾಕ್ಷಸ...!

      ನಿಜವಾಗಲೂ ಇಂಥವರನ್ನು ರಾಕ್ಷಸ ಎಂಬ ಶಬ್ದವೂ ಸಣ್ಣದಾಯಿತೆಂದು ತಿಳಿಯುತ್ತೇನೆ. ಆ ರಕ್ತ ದ ಮಡುವಿನಲ್ಲಿ ಮಿಂದು ಭವಿಷ್ಯವನ್ನೇ ಕಾಣದೇ ದೂರಾದ ಮಕ್ಕಳು. ಆ ಸ್ಥಿತಿಗೆ ಕಾರಣನಾದವನಿಗೆ ನನ್ನ ದಿಕ್ಕಾರ. ನಾನು ನನ್ನ ವಿದ್ಯಾರ್ಥಿ - ಶಿಕ್ಷಕರೊಡಗೂಡಿ ಆ ಮಕ್ಕಳಿಗಾಗಿ ೨ ನಿಮಿಷ ಮೌನಚಾರಣೆ ಮಾಡುವಾಗ ಎದೆ ನಡುಗಿ ಗದ್ಗದಿತನಾಗಿ ಮಾತೇ ಹೊರಡಲಿಲ್ಲ. ನನ್ನ ಮುಂದಿರುವ ಈ ಮಕ್ಕಳೇ ಅಲ್ಲಿನ ಮಕ್ಕಳೆಂದು ಊಹಿಸಿಕೊಂಡು ನಿಲ್ಲಲೂ ಆಗಲಿಲ್ಲ. ನಾನು ಆಲೋಚಿಸುತ್ತಿರುವುದು ಸರಿಯೋ ತಪ್ಪೋ ತಿಳಿದಿಲ್ಲ. ಆದರೆ ಆ ಮಕ್ಕಳಿಗೂ ನಾನು ಬೋಧಿಸುತ್ತಿದ್ದೆ, ನಾಟಕವಾಡಿಸುತ್ತಿದ್ದೆ, ರಂಗಗೀತೆಗಳನ್ನು ಹೇಳಿಕೊಡುತ್ತಿದ್ದೆ. ಎಂದು ನನ್ನೊಳಗೆ ಭಾಸವಾಗಿ ದೇಶ ದೇಶಗಳ ಕಿತ್ತಾಟ, ಧರ್ಮಗಳ ಸಂಘರ್ಷ ನನಗೆ ಯಾವುದು ತಲೆಗೆ ತೋಚದೆ ಕಂಡ ಮಕ್ಕಳೆಲ್ಲ ಆ ಬಲಿಯಾದ ಮಕ್ಕಳೇ ಎಂದೆನಿಸಿ ಜೀವ ಜೀವದೊಳಗೆ ನಿಲ್ಲದೆ ಒದ್ದಾಡುತ್ತಿರುವುದು ಯಾರಿಗೆ ಹೇಳಲಿ? ಆ ಮಕ್ಕಳು ಬದುಕಬಾರದಿತ್ತೇ... ರಾಜಕೀಯದ ಆ ಸಣ್ಣತನ ಜಗತ್ತನ್ನೇ ಬೆಚ್ಚಿಬೀಳಿಸಿತು. ಯಾಕಾಗಿ-ಯಾವುದಾಕ್ಕಾಗಿ ಜೀವವನ್ನು ತೆಗೆದು ಕೊಂಡರೋ ಆ ಮುರ್ಖರಿಗೇ ತಿಳಿಯದೇ ಹೋದರು. 

ದಿಕ್ಕಾರ

ದಿಕ್ಕಾರ.
        ನನಗೂ ಅನಿಸುತ್ತದೆ, ಆ ಕಟುಕರ ಗುಂಪೊಳಗೆ ಸೇರಬೇಕು ಎಂದು. ಸೇರಿ ಅವರ ಬಂದೂಕುಗಳಿಂದ ಅವರನ್ನೇ ಸುಡಬೇಕು ಎಂದು. ಮಕ್ಕಳನ್ನು ಬಲಿ ತೆಗೆದುಕೊಂಡ ಪ್ರತಿಯೊಬ್ಬ ಉಗ್ರಗಾಮಿಗೂ ಮನುಷ್ಯತ್ವನೇ ಇಲ್ಲದೇ ಹೋಗುವಾಗ ಭಾರತ, ಅಮೆರಿಕಾ, ಚೀನಾ, ರಷ್ಯಾ ದೇಶಗಳು ಮರುಗಿ ಸಂತಾಪ ಸೂಚಿಸುವುದರಲ್ಲಿಯೋ ಮೌನಾಚರಣೆ ಆಚರಿಸಿ ಸುಮ್ಮನಿರುವುದಲ್ಲ, ನಾಳೆ ಮತ್ತೋಂದಿಷ್ಟು ಮಕ್ಕಳು ಬಲಿಯಾಗದೇ ಇರುವ ಹಾಗೇ ಉಗ್ರವಾದಿಗಳನ್ನು ನಿರ್ಮೂಲನೆ ಮಾಡಬೇಕಾಗಿದೆ. ಮಲಾಲಳಿಗೆ ನೊಬೆಲ್ ಪ್ರಶಸ್ತಿ ಕೊಟ್ಟರಷ್ಟೇ ಅಲ್ಲ, ಅಂಥಹ ಪ್ರತಿಭಾವಂಥ ಮಕ್ಕಳ ರಕ್ಷಣೆಯು ನಮ್ಮ ಹೊಣೆಯಾಗಿದೆ. 

      ನಮ್ಮ ಮನೆಯಲ್ಲಿ, ನಮ್ಮ ಹಳ್ಳಿಯಲ್ಲಿ ಕುಳಿತು ನಾವು ಒಂದಿಷ್ಟು ಮಾತನಾಡಿ, ಹರಟೆ ಹೊಡೆದು ಮುಗಿಸಿದರಾಯಿತೇ... ಸರ್ಕಾರ ಸಂಬಳ ನೀಡುತ್ತದೆ ನಾನು ನನ್ನ ಕುಟುಂಬ ಎಂದು ಸೀಮಿತವಾಗದೇ ಇಡೀ ಮನು ಕುಲವೇ ನನ್ನ ಕುಟುಂಬ - ಬಳಗವೆಂದುಕೊಂಡು ಪ್ರತಿಕ್ರಿಯಿಸಬೇಕಾಗಿದೆ. ವಿದ್ಯಾರ್ಥಿಯೊಬ್ಬ ನನ್ನಲ್ಲಿ ಬಂದು "ಸಾರ್ ಅವರು ಅವರ ಮಕ್ಕಳನ್ನೇ ಕೊಂದುಕೊಳ್ಳುತ್ತಾರಲ್ಲ ಸಾರ್” ಎಂದು. ಮಕ್ಕಳಲ್ಲಿರುವ ಪ್ರಜ್ಞೆ ಆ ಯುವಕನಲ್ಲೋ ಜಿಹಾದ್ ಎಂದು ಬೊಬ್ಬೆ ಹಾಕುವ ಯಾವೊಬ್ಬನಲ್ಲೂ ಮಕ್ಕಳಲ್ಲಿರುವ ಮಾನವೀಯತೆ ಇಲ್ಲದಾಗಿದೆ.

ಸೋಮವಾರ, ಡಿಸೆಂಬರ್ 1, 2014

’ತಪ್ಪು ತಿದ್ದಿಕೊಳ್ಳೂವುದು ತಡವಾಯಿತು’ - ಮಂಗಳೂರಿನಿಂದ ಸಾವಿತ್ರಿ ಕಿನ್ನಾಳ


’ಪ್ರಥಮ’ ಎಂದು ನಮ್ಮ ಜಿಲ್ಲೆಯ ಹೆಸರನ್ನೇ ಕರೆಯುತ್ತಾರೆ ಎಂದು ಮನಸ್ಸಿನಲ್ಲಿ ಜಿಗುದು ಕುಣಿದಾಡೋಕೆ ತಯಾರಾದೆ.

ಆದರೆ......
ಪ್ರಥಮ ಸ್ಥಾನ...

ಉಡುಪಿ
................

ಎಂದಾಗ ನಮ್ಮ ಸಂತೋಷವೆಲ್ಲ ಅಲ್ಲೇ ಕಳಚಿ ಬಿತ್ತು. ಉಡುಪಿ ಜಿಲ್ಲೆಯವರ ಹಾರಾಟ, ಚಿರಾಟ ನೋಡಿ, ಚಿತ್ರದುರ್ಗದಲ್ಲಿ ನಮ್ಮ  ನಾಟಕ ಪ್ರಥಮ ಎಂದಾಗ ಆದ ಸಂತೋಷದ ನೆನಪಾಯಿತು. ರಾಜ್ಯ ಮಟ್ಟದಲ್ಲಿಯೂ ನಮ್ಮ ನಾಟಕ ಪ್ರಥಮ ಸ್ಥಾನ ಪಡೆದಿದ್ದರೆ ನಾವು ಯಾವ ರೀತಿ ಆ ಸಂತೋಷವನ್ನು ಆಚರಿಸುತ್ತಿದ್ದೇವು ಎಂದೂ ಕಲ್ಪನೆ ಮಾಡಿಕೊಳ್ಳಲು ಆಗುತ್ತಿರಲಿಲ್ಲ ನನಗೆ. ನಾನು ಕುಳಿತಲ್ಲಿಯೇ ದುಃಖಿತಳಾದೆ. ನಾವು ಸಮಾದಾನದಿಂದ ಊರಿಗೆ ಹೋಗಲು ಸಮಾಧಾನಕರ ಬಹುಮಾನ ನೀಡಿದರು. ಪೊಂಪೈ ಪ್ರೌಢಶಾಲೆಯ ಆವರಣದಲ್ಲಿ ಒಂದು ಕ್ರೈಸ್ತ  ಚರ್ಚ ಇತ್ತು. ನನಗೆ ತುಂಭಾ ಆಸೆ ಇತ್ತು. ಅಲ್ಲಿಗೆ ಹೋಗಿ ನಮಸ್ಕರಿಸಿ ಬರಬೇಕೆಂದು. ಆದರೆ ಅಲ್ಲಿಗೆ ಹೋಗಲು ಆಗಲಿಲ್ಲ. ಕೆಲವಷ್ಟು ವಿದ್ಯಾರ್ಥಿಗಳು ಫಲೀತಾಂಶ ತಿಳಿದ ಮೇಲೆ ರಂಗಮಂದಿರದಿಂದ ಹೊರಗೆ ಬಂದು ’ರಾಜಕೀಯ ಮಾಡಿದ್ದಾರೆ, ಮೋಸ ಮಾಡಿದರು’ ಎಂದು ಮಾತಾನಾಡುತ್ತಿದ್ದರು. ಅವರು ಹಾಗೇ ಮಾತನಾಡುವುದು ತಪ್ಪು. ’ಮೊದಲು ಇನ್ನೊಬ್ಬರಲ್ಲಿನ ದೋಷಗಳಿಗಿಂತ ನಮ್ಮಲ್ಲಿರುವ ದೋಷಗಳನ್ನು ತಿಳಿದುಕೊಳ್ಳಬೇಕು. ಅದು ನಿರ್ಣಾಯಕರ ತಪ್ಪಲ್ಲ. ಅದು ನಮ್ಮ ತಪ್ಪು. ನಾವು ಸರಿಯಾಗಿ ಅಭಿನಯಿಸಿದ್ದರೆ ನಮ್ಮ ತಂಡಕ್ಕೂ ದ್ವೀತಿಯನೋ, ಪ್ರಥಮ ಸ್ಥಾನವೋ ಬರುತ್ತಿತ್ತು.ನಾವು ಚೆನ್ನಾಗಿ ಅಭಿನಯಿಸಿದಿವಿ, ಆದರೆ ನಮಗಿಂತ ಒಂದು ಕೈ ಮೇಲೆ ಇತರೆ ತಂಡಗಳು ಚೆನ್ನಾಗಿ ಅಭಿನಯಿಸಿದವು.’ ನಾವು ಇನ್ನೋಂದು ತಪ್ಪು ಮಾಡಿದಿವಿ. ನಾವು ನಮ್ಮ ಮಾರ್ಗದರ್ಶಿ ಶಿಕ್ಷಕರು ಹೇಳಿದ ಕೆಲಸವನ್ನು ಮಾಡಲಿಲ್ಲ. ನಾವು ನಮ್ಮ ಕೆಲಸ ಮಾಡದಿದ್ದರಿಂದ ಹೀಗಾಯಿತು. ನಾವು ಮುಂದೆ ಇಂಥಹ ನಾಟಕದಲ್ಲಿ ಭಾಗವಹಿಸಬೇಕೆಂದರೆ ನಮಗೆ ಮತ್ತೇ ಆ ಅವಕಾಶ ಸಿಗುವುದಿಲ್ಲ. ಏಕೆಂದರೆ, ನಾನು ಈ ಶಾಲೆಯಲ್ಲಿ ಕೊನೆಯ ವರ್ಷ ವ್ಯಾಸಂಗ ಮಾಡುತ್ತಿರುವುದು.




ನನಗೆ ಆದ ಅನುಭವದ ಒಂದು ಮಾತು ಹೇಳುತ್ತೇನೆ

’ಯಾರು ಯಾವುದೇ ಕೆಲಸವಾಗಲಿ ಹೇಳಿದರೆ, ಇಂಥಹ ಕಾರ್ಯ, ಸ್ಪರ್ಧೆ, ಆಟ, ನಾಟಕ ಸೇರಿ ಎಂದು ಶಿಕ್ಷಕರು ಹೇಳಿದರೆ ಹಿಂಜರಿಯಬೇಡಿ. ನಾನು ಏಕೆ ಹೇಳುತ್ತೇನೆ ಅಂದರೇ ಮುಂದೆ ಇಂಥಹ ಅವಕಾಶ ಬೇಕು ಎಂದರು ಸಿಗುವುದಿಲ್ಲ. ಸಿಗುತ್ತೆ, ಆದರೆ ಇಂಥಹ ಮಾರ್ಗದರ್ಶಿ ಶಿಕ್ಷಕರು ಮುಂದೆ ನನಗೆ ಸಿಗುತ್ತಾರೆಯೋ ? ಇಲ್ಲವೋ ?.......
ಇಂಥಹ ಶಾಲೆ, ಮಾರ್ಗದರ್ಶಿ ಶಿಕ್ಷಕರು ಸಿಕ್ಕಿದ್ದು ನನ್ನ ಪುಣ್ಯ. ಇಂಥ ಅವಕಾಶ ಯಾರು ಕಳೆದುಕೊಳ್ಳಬೇಡಿ. ಮಿಂಚಿ ಹೋದ ಕಾಲ ಮರಳಿ ಬರುವುದಿಲ್ಲ.

ಜೀವನದಲ್ಲಿ ಸೋಲು - ಗೆಲುವು ಸಹಜ. ನಮ್ಮ ನಾಟಕ ಮಂಗಳೂರಿನಲ್ಲಿ ಪರಾಜಯ ಹೊಂದಿದರೂ, ಆ ಜನಗಳ ನಗು, ಮಾತು ಎಲ್ಲವನ್ನು ಮರೆಸಿತು. ಅಂಥಹ ಊರು, ವ್ಯವಸ್ಥಾಪಕರು ನಮಗೆ ಪರಿಚಯವಾದದ್ದು ನಮ್ಮ ಅದೃಷ್ಟ.

ಸಾವಿತ್ರಿ ಕಿನ್ನಾಳ
೧೦ ನೇ ತರಗತಿ
ಸರಕಾರಿ ಪ್ರೌಢಶಾಲೆ
ಜಹಗೀರ ಗುಡದೂರ.

ಗುರುವಾರ, ನವೆಂಬರ್ 27, 2014



ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ದೆಯಲ್ಲಿ ನಾಟಕ







ನಮ್ಮ ಶಾಲೆಯ ನಾಟಕದಿಂದಾಗಿ ಬಹುಮಾನವೇನು ಬರಲಿಲ್ಲ. ಆದರೆ ರಾಜ್ಯ ಮಟ್ಟದವರೆಗೆ ಭಾಗವಹಿಸಿದ ತೃಪ್ತಿ. ನಮ್ಮ ಶಾಲೆಯ ಮಕ್ಕಳು ಚೆನ್ನಾಗಿ ಅಭಿನಯಿಸಿದರು. ಆದರೆ ಅದಕ್ಕಿಂತ ಚೆನಾಗಿ ಇತರೆ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿ ಪ್ರಶಸ್ತಿ ಪಡೆದರು. ಮಕ್ಕಳು ಭಾಗವಹಿಸುವುದು ಮುಖ್ಯ. ಅದಕ್ಕೆ ಅನುವು ಮಾಡಿಕೊಟ್ಟ ಎಲ್ಲಾ ಶಾಲಾ ವೃಂದ ಹಾಗೂ ಪಾಲಕರಿಗೆ ಅಭಿನಂದನೆಗಳನ್ನು ತಿಳಿಸಲೇಬೇಕು. ಆತಿಥ್ಯ ನೀಡಿ ನೆನೆಪಲ್ಲಿ ಉಳಿಯುವಂತೆ ಮಾಡಿದ ಮಂಗಳೂರಿನ DIET ನ ಪ್ರಾಂಶುಪಾಲರಿಗೂ, ದಯಾವತಿ ಹಿರಿಯ ಉಪನ್ಯಾಸಕರಿಗೂ, ಕೊಪ್ಪಳದ ಉಮಾದೇವಿ ಉಪನ್ಯಾಸಕರಿಗೂ ಹಾಗೂ ಕುಷ್ಟಗಿಯ ವೆಂಕಟೇಶ ಉಪನ್ಯಾಸಕರಿಗೂ ಧನ್ಯಾವಾದಗಳನ್ನು ತಿಳಿಸುತ್ತೇನೆ.

ಬೇಲಿ ಹೂ


ಕಲಿಸು ಗುರುವೆ ಕಲಿಸು


ಬುಧವಾರ, ನವೆಂಬರ್ 12, 2014

ವಿಜ್ಜಾನ ನಾಟಕ ಸ್ಪರ್ದೆಯಲ್ಲಿ ರಾಜ್ಯ ಮಟ್ಟಕ್ಕೆ

   




  ನಮ್ಮ  ಪ್ರೌಢಶಾಲೆ ಮಕ್ಕಳು ವಿಜ್ಜಾನ ನಾಟಕ ಸ್ಪರ್ದೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಚಿತ್ರದುರ್ಗದಲ್ಲಿ ದಿನಾಂಕ ೧೧.೧೧.೨೦೧೪ ನಡೆದ ವಿಭಾಗ ಮಟ್ಟದ ವಿಜ್ಜಾನ ನಾಟಕ ಸ್ಪರ್ದೆಯಲ್ಲಿ ಪಾಲ್ಗೊಂಡಿದ್ದ ತಾಲೂಕಿನ ಜಹಗೀರ ಗುಡದೂರ ಪ್ರೌಡಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ನಾಟಕ ಶಿಕ್ಷಕರಾದ ಗುರುರಾಜ್ ಅವರಿಗೆ ಉತ್ತಮ ನಿರ್ಡೇಶಕ ಪ್ರಶಸ್ತಿಯು ಲಭಿಸಿದೆ.  ಶಾಲೆಯ ಸಿಬ್ಬಂದಿ ವರ್ಗ, ಎಸ್.ಡಿ.ಎಂ.ಸಿ, ಉಪನ್ಯಾಸಕರಾದ ವೆಂಕಟೇಶ, ಹಾಗೂ ಕ್ಷೇತ್ರ ಶಿಕ್ಷಣ ಇಲಾಖೆ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಅಭಿನಂದಿಸಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಪ್ರಶಸ್ತಿ ಪಡೆದು ರಾಷ್ಟ್ರ ಮಟ್ಟಕ್ಕೆ ಸಾಗಲಿ ಎಂದು ಹರಸಿದ್ದಾರೆ.

ಸೋಮವಾರ, ನವೆಂಬರ್ 3, 2014

ಕವಿತೆ

ಓ ಬಾನಾಡಿಗಳೆ ಎಲ್ಲಿ ಓಡುವಿರಿ
ಮುಸ್ಸಂಜೆಯಾಯಿತೆಂದು 
ಸೂರ್ಯಕಿರಣಗಳು ಸಾರಿದವೇ
ನಿಮಗೆ
ಹೊಂಗಿರಣಗಳಲಿ ಅರಳಿದ ಕುಸುಮವೇ
ಸುವಾಸನೆಯ ನಿನ್ನೊಳಗೆ ನೀ ಹೀರಿ
ಮುದುಡಿರುವೆ..... ರಾತ್ರಿಯಾಯಿತೆಂದು
ತಾ ಬರುವೆನೆಂದು ಆ ಶಶಿಯು ಹೇಳಿದನೇ
ನಿನಗೆ
ನಿಮ್ಮನೆಲ್ಲ ನೋಡುತಾ ಈ ಶುಭದಿನದ 
ಶುಭರಾತ್ರಿಗೆ ಶುಭ ಆಶಯವ ನಾ
ಸುರಿಸುವೆ ನಿಮಗೆಲ್ಲ ಓ ನನ್ನ
ಒಡನಾಡಿಗಳೇ.............!!!!!



Shreesamadarshi Honnavara ಅವರ ಕವಿತೆ

ಶುಕ್ರವಾರ, ಅಕ್ಟೋಬರ್ 31, 2014

Moharam




ಮಂಗಳವಾರ, ಅಕ್ಟೋಬರ್ 14, 2014

ನಮ್ಮೂರಿನ ಗುಬ್ಬಚ್ಚಿಗಳು

ನಾನು ಇನ್ನೂ ಚಿಕ್ಕವಳಿದ್ದಾಗಿನ ಮಾತು. ನಮ್ಮ ಮನೆಯ ಮುಂದೆ ಶಾಲೆ ಇದೆ. ಶಾಲೆ ತುಂಭಾ ಹಳೇದು. ಆ ಶಾಲೆಯಲ್ಲಿ ಸಾಕಷ್ಟು ಗುಬ್ಬಚ್ಚಿಗಳು. ದಿನಾಲೂ ಮುಂಜಾನೇನೆ ನಮ್ಮ ಮನೆಯ ಮುಂದೆ ಇರುವ ಲೈಟ್ ಕಂಬದ ಕರೆಂಟ್ ವೈರ್ ಮೇಲೆ ಸಾಲಾಗಿ ಕುಳಿತುಕೊಳ್ಳಾವು. ಆ ಗುಬ್ಬಚ್ಚಿಗಳು ಚಿಂವ್.... ಚಿಂವ್.... ಚಿಂವ್..... ಅಂತ ಕೂಗುತ್ತಿದ್ದವು. ನಾನು ಮುಂಜಾನೇ ಎಚ್ಚರಾಗುವುದು ಅವುಗಳ ಧನಿ ಕೇಳಿಯೇ. ನಾನು ದಿನಾಲೂ ಎದ್ದ ಹೊರ ಬಂದ ತಕ್ಷಣ ಅವುಗಳನ್ನೇ ನೋಡುತ್ತಾ ನಿಂತಿರುತ್ತಿದ್ದೆ. ಗುಬ್ಬಚ್ಚಿಗಳ ಚಿಂವ್ ಚಿಂವ್ ನನಗೆ ಸುಪ್ರಭಾತವೇ ಆಗಿತ್ತು. ನನಗೆ ಆ ಬೆಳಗಿನ ಕ್ಷಣಗಳು ಸಂತೋಷವೇ ಸಂತೋಷ.

            ನಾನು ಹಾಗೇ ಬೆಳೆಯುತ್ತಲೇ ಹೊಸ ಶಾಲೆ ಹೊಸ ಪರಿಸರ. ಆದರೆ ನಮ್ಮ ಮನೆಯ ಮುಂದಿನ ಆ ಲೈಟ್ ಕಂಬ ನನ್ನ ಶಾಲೆಯಲ್ಲಿ ಸದ್ದು ಮಾಡುತ್ತಿದ್ದ ಗುಬ್ಬಚ್ಚಿಗಳು ಕ್ರಮೇಣ ಕಡಿಮೆಯಾಗುತ್ತಾಲೇ ಹೋದವು. ಮತ್ತೇ ಮೊಬೈಲ್ ಪೋನ್ ಗಳು ಬಂದು ಗುಬ್ಬಚ್ಚಿಗಳು ಮತ್ತೂ ಕಡಿಮೆಯಾದವು. ಆದರೆ ಏನು ಮಾಡಲಿ ಆಗ ಇದ್ದ ಗುಬ್ಬಚ್ಚಿಗಳು ಈಗ ಇಲ್ಲ. ಅಂಥಹ ಸುಮಧುರವಾದ ದನಿಗಳನ್ನು ಕೇಳಿ ಎಷ್ಟೋ ದಿನಗಳಾದವು. ಈಗ ನನಗೆ ತುಂಭಾನೇ ದುಖಃವಾಗುತ್ತಿದೆ.

ಜ್ಯೋತಿ ಗೊಲ್ಲರ
೯ ನೇ ತರಗತಿ
ಸ.ಪ್ರೌ.ಶಾಲೆ
ಜಹಗೀರಗುಡದೂರ.




ಚಿತ್ರ : ಮಾರುತಿ. ಪಿ
ಸ್ನೇಹ ಕಂಪ್ಯೂಟರ್
ಹೊಸಪೇಟೆ
9448183776

ಶನಿವಾರ, ಸೆಪ್ಟೆಂಬರ್ 27, 2014

ನನ್ನಯ ಚಿತ್ರಗಳಿವು





ವಿದ್ಯಾರ್ಥಿನಿ ಸಾವಿತ್ರಿ ಕಿನ್ನಾಳ ರಚಿಸಿದ ಚಿತ್ರಗಳಿವು. ನಿರಂತರ ಓದು ನಂತರ ವಿಶ್ರಾಂತಿಗಾಗಿ ಚಿತ್ರ ರಚಿಸುವ ಅಭ್ಯಾಸ ಹಾಕಿಕೊಂಡಿರುವ ಮಗು ತನ್ನನ್ನು ತಾನು ಉನ್ನತ ಶಿಕ್ಷಣಕ್ಕೆ ಸಾಗುವ ಕನಸು ಕಾಣುವ ಸಾವಿತ್ರಿಯ ಹಾದಿಗೆ ಅಡ್ಡಿಯಾಗದೇ ಎಲ್ಲರ ಸಹಾಯ ದೊರಕಲಿ ಎಂದು ಆಶಿಸುವೆ.

ಶನಿವಾರ, ಸೆಪ್ಟೆಂಬರ್ 20, 2014

ಕಥಾ ಕಮ್ಮಟದ - ಪತ್ರಿಕಾ ವರದಿ



ಗುರುವಾರ, ಸೆಪ್ಟೆಂಬರ್ 18, 2014

ಜಿಲ್ಲಾ ಮಟ್ಟದ ವಿಜ್ಣಾನ ನಾಟಕ ಸ್ಪರ್ದೆಯಲ್ಲಿ ಪ್ರಥಮ



ಜಿಲ್ಲಾ ಮಟ್ಟದಲ್ಲಿ ವಿಜ್ನಾನ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಲ್ಲದೇ ಶಾಲೆಗೆ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಿರ್ದೆಶನ ಸಮ್ಮಾನ ದೊರಕಿದೆ. ಸಮಯ, ತಾಲೀಂ ಎಲ್ಲರೊಂದಿಗೆ ಹೊಂದಾಣಿಕೆ ಹೀಗೆ ನಾನಾ ರೀತಿಯ ಸೂಕ್ಷ್ಮ ಕಾರ್ಯಗಳು ಜರಗಬೇಕಾಗಿದೆ. ನಾವೇಲ್ಲರೂ ಮಕ್ಕಳೊಂದಿಗೆ ಸ್ವಲ್ಪ ಬಲೂನಿನಂತೆ ಉಬ್ಬಿದ್ದೇವೆ. ಆದರೆ ಸಾಗಬೇಕಾದ ಹಾದಿ ಸುಲಭದ್ದಲ್ಲ. ಮಕ್ಕಳ ಭರವಸೆ ಇದೆ ಆದರೆ ನನಗೆ ಭರವಸೆಯಲ್ಲ ಪರಿಶ್ರಮ ಬೇಕಾಗಿದೆ. ಅದು ಸಾಧ್ಯವೂ ಇದೆ ಎಂಬ ನಂಬಿಕೆ ಇದೆ.
ಭಾಗವಹಿಸಿದ ವಿದ್ಯಾರ್ಥಿಗಳು

ಪ್ರಶಾಂತ ಸುಳ್ಳದ
ಭೀಮವ್ವ ಡೊಳ್ಳಿನ
ಅಮರೇಶ ಚಿಕನಾಳ
ಸಾವಿತ್ರಿ ಕಿನ್ನಾಳ
ಮುರ್ತುಜಾಖಾದ್ರಿ
ದಾನೇಶ್ ಮಲ್ಲಾಡದ
ನಿಂಗಮ್ಮ ಮುಶಿಗೇರಿ
ರಫಿಯಾ ಜಾಲಿಹಾಳ

ತಂಡದ ವ್ಯವಸ್ಥಾಪಕರು : ಎಸ್.ಬಿ.ಮಾಲೀಪಾಟೀಲ್          ನಾಟಕ ನಿರ್ದೇಶಕರು : ಗುರುರಾಜ್. ಹೊಸಪೇಟೆ

ಕಥಾ ಕಮ್ಮಟದ ಕೆಲವು ಚಿತ್ರಗಳು

ಛಾಯಚಿತ್ರಗಳು : ಮೇಘಶ್ಯಾಮ್ ಹಾಗೂ ಅನಿಲ್ ಕುಮಾರ - ಸಿದ್ಧಿ ಫೌಂಡೇಶನ್, ಬೆಂಗಳೂರು