ಮಂಗಳವಾರ, ಡಿಸೆಂಬರ್ 10, 2013

ಮಕ್ಕಳ ಕಾವ್ಯ

ಮಂಡ ನೆ : ಕುಮಾರ ಮಂಜುನಾಥ
ವಿಷಯ : ಮಕ್ಕಳ ಕಾವ್ಯ
ತರಗತಿ ಗೋಷ್ಠಿ - ೦೨

ಮಕ್ಕಳ ಕಾವ್ಯದ ಕುರಿತು ನಾನು ತಿಳೀಯಲು ಬಯಸಿದಾಗ ನಮ್ಮ ಕನ್ನಡದಲ್ಲಿ ಎಷ್ಟೇ ಪುರತನದಿಂದಲೂ ಸಾಹಿತ್ಯ ಬೆಳೆದು ಬಂದರು ಮಕ್ಕಳ ಕಾವ್ಯದ ಮೇಲೆ ಬರೆದಿದ್ದು ಅತ್ಯಂತ ಕಡಿಮೆಯೇ ಎಂದು ಹೇಳಬೇಕಾಗಿ ಬಂದಿದೆ. ಕಾರಣ ಹಿರಿಯರು ಹೇಳುತ್ತಿದ್ದ ಲಾಲಿ ಹಾಡು, ಜೋಗಳಪದಗಳನ್ನು ತಾಯಿಂದರು ತತ್ ಕ್ಷಣಕ್ಕೆ ಹಾಡುತ್ತಿದ್ದರು ಆದರೆ ಅದನ್ನು ರಚಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಎಂಥೆಥ ಹಾಡಗಳನ್ನು ಕಟ್ಟಿ ಹಾಡಿದ ನಮ್ಮ ಹಿರಿಯರು ಮೌಖಿಕಕ್ಕೆ ಮಾತ್ರ ಕಾವ್ಯವನ್ನು ನಿಲ್ಲಿಸಿದರು. ಇದ್ದ ಕೆಲವು ಮಕ್ಕಳ ಕಾವ್ಯಗಳು ಅದ್ಭುತವಾದದ್ದನ್ನು ನಾವು ನಮ್ಮ ಹಿಂದಿನ ಪ್ರಾಥಮಿಕ ಪಠ್ಯಗಳಲ್ಲಿ ಕಾಣುತ್ತೇವೆ. ಗೋವಿನ ಹಾಡು ಎಂದೆಂದು ಮರೆಯುವುದಕ್ಕೆ ಸಾದ್ಯವೇ ಇಲ್ಲ.