ಗುರುವಾರ, ಅಕ್ಟೋಬರ್ 25, 2018

ಅರುಂಧತಿ ಹಾದಿಮನಿ

ನಮ್ಮವ್ವ ನಮ್ಮನ್ನು ಹಡೆದು ತುಂಭಾ ಜಾಗೃತಿಯಿಂದ ಆರೈಕೆ ಮಾಡುತ್ತಾಳೆ. ಹುಟ್ಟಿದಾಗಿನಿಂದ ನಮಗೆ ಬುದ್ಧಿ ತಿಳಿಯುವವರೆಗೂ ನಮ್ಮ ಎಲ್ಲಾ ಬೇಕು ಬೇಡಗಳನ್ನು ಪೂರೈಸುತ್ತಾ ಬೆಳಸುವಳು. ಚಿಕ್ಕವರಿದ್ದಾಗ ನಮ್ಮ ಬುದ್ಧಿಶಕ್ತಿ ಹೆಚ್ಚಿರುತ್ತದೆ ಅಂತೆ. ಬೆಳೀತಾ ನಮ್ಮ ಬುದ್ದಿಶಕ್ತಿ ಕಮ್ಮಿ ಆಗುತ್ತಂತೇ. ನಮ್ಮ ಮನೆಯಲ್ಲಿ ಅಜ್ಜ-ಅಜ್ಜಿಯವರಿಗೆ ಬುದ್ಧಿ ಅಥಾವ ತಿಳುವಳಿಕೆ ಕಡಿಮೆ ಇರುತ್ತದೆ. ನಮ್ಮ ಅಮ್ಮನಿಗೆ ವಯಸ್ಸಾಗಿದೆ ಅವರಿಗೆ ಅರುವು ಮರುವು ಆಗ್ತಾ ಇರ್ತಾದೆ. ಎಷ್ಟೋ ಮಾತುಗಳು ನೆನಪೇ ಇರೋದಿಲ್ಲ.


ನಾನು ಅರುಂಧತಿ ಈಗ ೮ ನೇ ತರಗತಿ. ನಮ್ಮ ಮನೆಯಲ್ಲಿ ಒಟ್ಟು ಹದಿನೆಂಟು ಜನ ಇರ್ತೇವೆ. ನಮ್ಮ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುತ್ತೇವೆ. ನನ್ನ ತಂಗಿ ಸಣ್ಣೋಳು ಒಮ್ಮೇ ನನ್ನ ಮೇಲೆ ಚಾ ಚೆಲ್ಲಿದಳು ಆದ್ರೆ ನಮ್ಮವ್ವ ಅವಳು ಚಿಕ್ಕೋಳು ಅವಳಿಗೆ ಗೊತ್ತಾಗೋದಿಲ್ಲ ಅಂತ ನಮ್ಮನ್ನೇ ಬೈತಾಳೆ. ನಮ್ಮ ಮನೆ ಮುಂದೆ ಹೂ ಗಿಡಗಳನ್ನಾ ಹಾಕಿವಿ. ಬೆಳಬೆಳಗ್ಗೆ ಗಮ್ಮ ಅಂತಾ ವಾಸ್ನಿ ಬರ್ತಾದೆ. ಆದ್ರೇ ಯಾಕೋ ನನಗೆ ಅವುಗಳನ್ನಾ ಕಿತ್ತು ಮುಡಿಬೇಕು ಅಂತ ಅನಿಸೋದಿಲ್ಲ. ನಮ್ಮ ಮನೆಯಲ್ಲಿ ಬೆಕ್ಕು ಮತ್ತೇ ನಾಯಿಮರಿಯನ್ನಾ ಸಾಕಿವೀ. ಅಂದ್ರೇ ಅವು ಬೀದಿಯಲ್ಲೇ ಓಡಾಡಿಕೊಂಡಿರುವಂಥ ಸಾಕು ಪ್ರಾಣಿಗಳು. ಸಾವುಕಾರರ ಮನೆಯಲ್ಲಿ ಇರೋ ನಾಯಿಗಳು ದೊಡ್ಡಿಗೆ ತಂದಿರ್ತಾರೆ. ನಾವು ಹಾಗೇ ಮಾಡಿರಲಿಲ್ಲ. ನಾನು ಶಾಲೆ ಬಿಟ್ಟು ಮನೆಗೆ ಹೋದ ತಕ್ಷಣ ಕಾಲ್ ಕಾಲಿಗೆ ಅಡ್ಡ ಬರ್ತಾವೇ. ಯಾಕಂದ್ರೇ ಅವು ನಮ್ಮನ್ನಾ ಬಹಳ ಪ್ರೀತಿ ಮಾಡ್ತಾವೇ.
(ಮುಂದುವರೆಯುವುದು.....)

ಶನಿವಾರ, ಅಕ್ಟೋಬರ್ 20, 2018

ಸ್ವಗತಗಳು

ಹೈದ್ರಾಬಾದ್ ಕರ್ನಾಟಕ ದಿನಾಚರಣೆ

ಹೈದ್ರಾಬಾದ್ ಕರ್ನಾಟಕ ದಿನಾಚರಣೆ ಅಂಗವಾಗಿ ನಮ್ಮ ಶಾಲೆಯ ಹತ್ತಿರದಲ್ಲಿರುವ ಎರಡು ಸ್ಮಾರಕಗಳಿಗೆ ಪುಷ್ಪಗಳನ್ನ ಅರ್ಪಿಸಿ ಧ್ವಜಾರೋಹಣವನ್ನು ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ನೇಮಣ್ಣ ಮೇಲಸಕ್ರಿಯವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ನಡೆಸಲಾಯಿತು.

chitr