ಸೋಮವಾರ, ಜುಲೈ 29, 2013

ಎಚ್.ಎ. ಅನಿಲ್ ಕುಮಾರ ಬೇಟಿ

H.A.Anil Kumar
              
ಎಚ್.ಎ. ಅನಿಲ್  ಕುಮಾರ  ಚಿತ್ರಾಕಲಾ ಪರಿಷತ್ ನ ಪ್ರಾಧ್ಯಾಪಕರು ನಮ್ಮ ಮಕ್ಕಳ ಕಾರ್ಯ ಚಟುವಟಿಕೆಗಳನ್ನು ಗಮನಿಸಲು ಆಗಮಿಸಿದ್ದರು.  ಅನುಪಮಾ ಪ್ರಕಾಶ ನಮ್ಮ ಯೋಜನೆಯ ಯೋಜನಾಧಿಕಾರಿಗಳು ತಿಳಿಸಿದಂತೆ ಅನಿಲ್ ಬರ್ತಾರೆ, ನೀನು ಮಾಡಿದ ಕಾರ್ಯಗಳ ಕುರಿತು ತಿಳಿಸು ಜೊತೆಗೆ ಏನೇನು ತೋರಿಸಲಿಕ್ಕೆ ಆಗುತ್ತದೆ ಅವುಗಳೆಲ್ಲವನ್ನು ಅವರಿಗೆ ತೋರಿಸು. ಎಂದಾಗ ನಾನು ಅನಿಲ್ ಕುಮಾರ ಅವರ ಕುರಿತು ತಿಳಿಯಲು ಪ್ರಯತ್ನಿಸಿದೆ. ಪ್ರಜ್ಞಾ ಹೇಳಿದ್ದು  "ಅಲ್ಲಾ ಕಣೋ ಅವರಿಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ ಬಂದಿದೆಯೋ" ಎಂದಾಗ ನನ್ನ ಎದೆ ಧಸಕ್ಕೆಂದಂತಾಯಿತು. ಯಾಕೆಂದರೆ ಇಷ್ಟೆಲ್ಲ ಖ್ಯಾತ ವ್ಯಕ್ತಿಗಳು ನಮ್ಮ ಸಣ್ಣ ಹಳ್ಳಿಯ ಶಾಲೆಗೆ ಬೆಂಗಳೂರಿನಿಂದ ಬರುವಂಥಹ ವ್ಯಕ್ತಿಗೆ ಯಾವ ತರಹದಲ್ಲಿ ಉಪಚರಿಸಬೇಕು ಎಂದು ಸಂಕಷ್ಟದಲ್ಲಿ ಬಿದ್ದೆ. ಅವರ ಬರುವ ದಿನಗಳ ಲೆಕ್ಕ ಸಾಗುತ್ತಲೇ ಇತ್ತು. ಈ ಕಡೇ ನಮ್ಮ ಮಕ್ಕಳ ತಾಲೀಮು ನಡೆದಿದ್ದೆ. ಮಳೆ-ಗಾಳಿಗೆ ತಲೆ ಕೊಡದೇ ದಿನಾಲೂ ಮಧ್ಯಾಹ್ನದ ಒಂದು ಅವಧಿಯನ್ನು ಮುಗಿಸಿಕೊಂಡು ನಾಟಕದ ಅಭ್ಯಾಸ ನಡದೇ ಇತ್ತು. ಕುತೂಹಲವು ಇಲ್ಲಿ ಇದ್ದದ್ದು ಕಾಣುತ್ತಿತ್ತು ಕಾರಣ ನಾಟಕ ಅಂತ್ಯ ಹೇಗೆ ಎನ್ನುವುದು. ಶಿಕ್ಷಕರು ಕೊನೆ ಹೇಗೆ ಮಾಡುತ್ತೀರಿ ಮತ್ತು  

ಯಾವಾಗ ಎಂಬ ಪ್ರಶ್ನೆಗಳು ಸದಾ ನನ್ನ ಕಿವಿಯಲ್ಲಿ ಕೇಳುತ್ತಿದ್ದನ್ನು ಅಷ್ಟೇ ಆನಂದದಿಂದ ಆಲಿಸುವ ಕಾರ್ಯವನ್ನು ಮಾಡುತ್ತಿದ್ದೆ. ನನಗೆ ಅನಿಲ್ ಅವರು ಬಂದಾಗ ಈ ಮಕ್ಕಳ ತಾಲೀಮು ಇಷ್ಟ ಆಗಬಹುದೇ ಎಂಬುವ ಮತ್ತು ಅವರು ಬಂದ ಸಮಯದಲ್ಲಿ ಮಳೆ ಬರದೇ ಇರಲಿ ಎನ್ನುವುದು. ತಾಲೀಮನ್ನು ಕೋಣೆಯಲ್ಲಿ ತೋರಿಸಲಿಕ್ಕೆ ಆಗೋದೇ ಇಲ್ಲ. ಇರೋ ವೇದಿಕೆಯ ಕಟ್ಟೆಯ ಮೇಲೆ ನಮ್ಮ ಮಕ್ಕಳ ತಾಲೀಮಿನ ಆಯ್ದ ಭಾಗವನ್ನು ಇಡೋದು. ಸದಾ ಧಾರವಾಡದಿಂದ ಯಾರೇ ಅತಿಥಿಗಳನ್ನು ಕರೆದುಕೊಂಡು ಬರುವ ಸಾರಥಿ ರಾಮುವಿಗೆ ಬೆಳಿಗ್ಗೆನೆ ಪೋನಾಯಿಸಿದೆ. ರಾಮು ನಾನು ಇಲ್ಲಿಂದ ಬಿಡುವಾಗ ಮಿಸ್ ಕಾಲ್ ಕೊಡ್ತೀನಿ ಸಾರ್ ಅಂದ. ಇದು ನಮ್ಮ ಸಂಕೇತ ಸಿದ್ಧತೆಯಲ್ಲಿ ಇರಲು. ಗಡ ದಿಂದ ಹಿಡಿದು ಶಾಲೆಗೆ ಹೋಗುವ ವರೆವಿಗೂ ಮಳೆಯ ಹನಿ ಸುರಿಯುತ್ತಲೇ ಇತ್ತು. 




ಬಿಸಿಲೇ ಸದಾ ಇರುವ ನಮ್ಮ ಪ್ರದೇಶಗಳಲ್ಲಿ ಯಾರೋ ಬರುವ ಸಮಯಗಳಲ್ಲಿ ಮಳೆ ಅನಿರೀಕ್ಷಿತ ಎಂಬಂತೆ ಬರುವುದು ಶಿಕ್ಷಕರೆಲ್ಲರಲ್ಲೂ  ಚಿಂತೆಗೆ ಕಾರಣವಾಗಿತ್ತು. ಅನಿಲ್ ಸಾರ್ ಬಂದಾಕ್ಷಣ ನಮ್ಮ ಮಕ್ಕಳ ನೋಟವೆಲ್ಲ ಅವರತ್ತಲೇ ನೆಟ್ಟಿರುತ್ತದೆ. ಶಿಕ್ಷಕರೆಲ್ಲ ಪರಿಚಯ ಚಹಾ ಆದ ತಕ್ಷಣ ನಾವು ಕಂಪ್ಯೋಟರ್ ಕೋಣೆಗೆ ತೆರೆಳಿ ಅಲ್ಲಿ ಈಗಾಗಲೇ ಸಿದ್ಧ ಪಡಿಸಿದ್ದ ನಮ್ಮ ಇಲ್ಲಿನವರೆಗಿನ ಚಟುವಟಿಕೆಗಳ ಕುರಿತು ಅಪೂರ್ಣವಾದ ಸಾಕ್ಷ್ಯಚಿತ್ರವನ್ನು ವಿಕ್ಷಿಸಲು ಮತ್ತು ಅದು ನಮ್ಮ ವಿಕ್ಷಕರ ಇಂದಿನ  ಒಂದು ಕಾರ್ಯವೆಂದೇ ತೆರಳಿದೆವು. ಹತ್ತು ನಿಮಿಷದ ಚಿತ್ರವನ್ನು ವಿಕ್ಷೀಸಿದ ನಂತರ ಆದ ಚಟುವಟಿಕೆಗಳನ್ನು ವಿವರವಾಗಿ ಕೇಳುತ್ತಾ ನಮ್ಮ ಕೋಣೆಯ ಹಿಂಬಾಗದಿಂದ ಸಾಗಿದೆವು. ಇಲ್ಲಿ ನಮ್ಮ ಮಾತುಗಳನ್ನು ಕ್ಯಾಮರದಲ್ಲಿ ಸೆರೆ ಹಿಡಿಯುತ್ತಿದಿದ್ದು ಹತ್ತನೆಯ ತರಗತಿಯ ವಿದ್ಯಾರ್ಥಿ ಮಲ್ಲಿಕಾರ್ಜುನ ತೆಂಗಿನಕಾಯಿ. ತರಗತಿ ಕೋಣೆಯ ಹಿಂಬಾಗದಿಂದ ಸಾಗೋಣವೆಂದು ಅನಿಲ್ ಅವರು ಮಾತಾನಾಡುತ್ತಾ ತೆರಳಿದಾಗ ವಿದ್ಯಾರ್ಥಿ ಮಲ್ಲಿಕಾರ್ಜುನ ಹಾಗೂ ರುದ್ರಯ್ಯ ನಿಗೆ ಹಿಡಿಸಲಾರದಾಗಿತ್ತು. ಕಾರಣ ಅವರೇ ಹೇಳುವಂತೆ 'ಸಾರ್ ಕಸ,ಪೇಪರ್,ಎಲ್ಲವನ್ನಾ ನಾವು ಕಿಟಕಿಯಿಂದ ಹೊರ ಹಾಕ್ತೀವಿ. ಈ ಸಾರ್ ಅದೇ 






ಗುರುವಾರ, ಜುಲೈ 25, 2013

ಪತ್ರಿಕೆ



                          ಸಂತೋಷ ಗುಡ್ಡಿಯಂಗಡಿಯ ಹೊಸ ಶಾಲೆಯ ಹೊಸ ಮಕ್ಕಳ ಪತ್ರಿಕೆ ರಾಜ್ಯದ ಎಲ್ಲ  ಶಾಲೆಯ ಮಕ್ಕಳ ಬರವಣಿಗೆಗಳನ್ನು ದಾಖಲಿಸುವ ಹೊಸ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಿ  ಮಕ್ಕಳ  ಹಿತವನ್ನು ಸೃಜನಶೀಲತೆಯ ಪ್ರಯತ್ನಕ್ಕೆ ಅಣಿ ಮಾಡಬೇಕಾಗಿದೆ.   

ರಂಗ ತಾಲೀಂ ಅವಧಿಯಲ್ಲಿ ತೆಗೆದ ಚಿತ್ರಗಳು













ರಂಗ ತಾಲೀಂ ಅವಧಿಯಲ್ಲಿ ತೆಗೆದ ಚಿತ್ರಗಳು 

ಸೋಮವಾರ, ಜುಲೈ 1, 2013

ಚಿಲ್ ಜರಿ ಗ್ರಾಮದ ಹಾಡುಗಳ

ಜಾನಪದದ ಹುಡುಕಾಟದಲ್ಲಿ ನಾವು ಸ್ಥಳೀಯ ಗ್ರಾಮಕ್ಕೆ  ಬೇಟಿ ನೀಡಿ ಅವರಲ್ಲಿ ಜಾನಪದ ಕುರಿತು ನಾವು ಮಾಡುವ ದಾಖಲೀಕರಣ ಕುರಿತು ಹೇಳಿದ  ಮಾತುಗಳು ಅಂಥಹ ಆಸಕ್ತಿಯನ್ನನೇನು  ಮೂಡಿಸುತ್ತಿರಲಿಲ್ಲ ಇದು ಕೇವಲ ತಮ್ಮ ಮನೆಯ ಶಾಸ್ತ್ರದ ಕಾರ್ಯಕ್ರಮಗಳಲ್ಲಿ ಹಾಡುವಂಥ ಹಾಡುಗಳನ್ನು ಇವರು ಚಿತ್ರೀಕರಣ ಮಾಡಿಕೊಂಡು ಏನನ್ನು ಮಾಡುತ್ತಾರೆ ಎಂಬ ಪ್ರಶ್ನೆಗಳು  ಊರಿನವರಲ್ಲಿ ಎಲ್ಲರಿಗೂ ಮೂಡುತ್ತಲೇ ಇದ್ದವು. ಆದರೆ ಆ ಹಳ್ಳಿಯ ಮುಗ್ಧ ಜನರಿಗೆ ತಿಳಿದಿಲ್ಲ ಜನಪದ ಹಿಂದಿನಿಂದಲೂ ಜನರ ಬದುಕನ್ನು ಕಟ್ಟುತ್ತಾ ಬಂದಿದ್ದು ಅವುಗಳ ಜ್ಞಾನ ಹೊಂದಿದ್ದ ತಲೆಮಾರು ಮುಂದಿನ ಹಂತಕ್ಕೆ ಸಾಗದೇ ಕೊನೆಗೊಳ್ಳುವ ಸ್ಥಿತಿಯು ನಿರ್ಮಾಣವಾಗಿರುವ ಈ ಸಂರ್ಧಭದಲ್ಲಿ ಹಿರಿಯರಿಂದ ಹಾಡುಗಳ ಜೊತೆಗೆ ಅನುಭವಗಳನ್ನು ಕೇಳಿ ತಿಳಿದುಕೊಂಡು ಅವನ್ನು ದಾಖಲೀಕರಣ ಮಾಡುವುದರೊಂದಿಗೆ ಇಂದಿನ  ಮಕ್ಕಳಿಗೆ ಶಿಕ್ಷಣದ ಜೊತೆಗೆ ಜಾನಪದದ ಹಲವು ಪ್ರಕಾರಗಳನ್ನು ವಿದ್ಯಾರ್ಥಿಗಳೊಂದಿಗೆ ಅವರ ಮನೆಗಳಿಗೆ ತೆರೆಳಿ ಕಲೆತುಕೊಳ್ಳಬೇಕಾಗಿದೆ. ವೇದಿಕೆ, ಸಮಾರಂಭ ಎಂದರೆ ಆ ಜೀವಗಳು ಮುಜುಗರ ಪಟ್ಟು ಹಾಡಲು ಹಿಂಜರಿಯುತ್ತಾರೆ. ಮಕ್ಕಳೊಂದಿಗೆ ಅವರನ್ನು ಮಾತಿಗೆ ಹಚ್ಚಿದರೆ ಆ ಪಾಲಕರು ತುಂಬಾ ಸಹಜವಾದ ಮಾತುಗಳನ್ನು ಹೊರ ಹಾಕಲು ಸಾಧ್ಯತೆಗಳು ಹೆಚ್ಚು. ಮನೆಯ ಕಾರ್ಯಕ್ರಮದ ಜೊತೆಗೆ ಸ್ತಳೀಯ ಊರಿನ ಆಚರಣೆಗಳಲ್ಲಿ, ಹಬ್ಬದ ಸಂಭ್ರಮದಲ್ಲಿ ಹಾಡುವ ಇವರು ಮಕ್ಕಳಿಗೆ ಕಲಿಯುವ - ಕಲಿಸುವ ವಾತಾವರಣವನ್ನು ಪಾಲಕರೊಂದಿಗೆ, ಶಿಕ್ಷಕರು ಒದಗಿಸಿ ಕೊಡಬೇಕಾಗಿದೆ. ಜೊತೆಗೆ ಮಕ್ಕಳು ಜಾನಪದದ ಕುರಿತು ಹಿರಿಯರಿಂದ ಅನುಭವಗಳನ್ನು ಪಡೆದು ಭವಿಷ್ಯತ್ ಗಾಗಿ ಕಟ್ಟಬೇಕಾಗಿದೆ. ನಮ್ಮ ಹತ್ತಿರದ   ಚಿಲ್ ಜರಿ   ಗ್ರಾಮ ದಲ್ಲಿ ಶ್ರೀಮತಿ ಪಾರ್ವತಿ , ಶ್ರೀಮತಿ ಶಾಂತಮ್ಮ , ಶ್ರೀಮತಿ  ಪಾರವ್ವ , ಶ್ರೀಮತಿ ಪದ್ಮವ್ವ ಹಾಗೂ ನಿರ್ಮಲ ಅವರು ನಮ್ಮ ವಿದ್ಯಾರ್ಥಿನಿಯ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಕಾಯಕದಲ್ಲಿ ಪ್ರತಿ ನಿತ್ಯ ಹಾಡುಗಳನ್ನು ಹಾಡುವುದು.  ತಮ್ಮ ಕಾಯಕ ನಿರಾತಂಕವಾಗಿ ಸಾಗಲು ಯಾವುದೇ ಒತ್ತಡ ಇರುವುದಿಲ್ಲ. ಎಂಬ ಮಾತುಗಳು ನಮ್ಮ ಮಕ್ಕಳಿಗೆ ಹಾಡುಗಳನ್ನು ಕೇಳಿಸುತ್ತಾ ಅನುಭವಗಳನ್ನು ಅಂಚಿಕೊಂಡರು. 
                          'ಎಷ್ಟು ಮಕ್ಕಳು ಇಂದು ಹಾಡುಗಳನ್ನು ಕಲಿಯಲು ನಮ್ಮ ಹತ್ತಿರ ಬರುತ್ತಿದ್ದಾರೆ.... ' ಎಂಬ ನಮ್ಮ ಹಿರಿಯರ ಪ್ರಶ್ನೆಗಳು ಮಕ್ಕಳಿಗೆ ಮೈಮೇಲೆ ಬಂದು ಎರಗಿದಂತಿತ್ತು.