ಸಂಪಾದಕರು

ಗುರುರಾಜ ಹೊಸಪೇಟೆ

                   ನೀನಾಸಂ ಪದವೀಧರರು. ರಾಜ್ಯದ ಬೇರೆ ಬೇರೆ ರಂಗತಂಡಗಳೊಂದಿಗೆ ನಟ, ನಿರ್ದೇಶಕ ಹಾಗೂ ಸಂಘಟಕನಾಗಿ ತೊಡಗಿಕೊಂಡಿದ್ದು, 28 ವರ್ಷಗಳಿಂದ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡು ಕಳೆದ 15 ವರುಷಗಳಿಂದ ನಾಟಕ ಶಿಕ್ಷಕರಾಗಿ  ಕೊಪ್ಪಳ ಜಿಲ್ಲೆಯ ಜಹಗೀರ ಗುಡದೂರ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಮಕ್ಕಳ ಕ್ರಿಯಾಶೀಲ ಚಟುವಟಿಕೆಗಳನ್ನು ಹೊರ ಹಾಕುವ ಕಾರ್ಯ ನಿರಂತರವಾಗಿ ಮಾಡುತಲಿದ್ದಾರೆ. ಮಕ್ಕಳ ರಂಗಭೂಮಿಗೆ ಹೊಸ  ಚೈತನ್ಯ ತುಂಬುವ ಕಾಯಕ ಮಾಡುತ್ತಿರುವ ನಿರ್ದೇಶಕರು ಮಕ್ಕಳ ರಂಗಭೂಮಿ ಪ್ರತಿಯೊಂದು ಮಗುವಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

           ಕಿಂಗ್ ಲಿಯರ್, ಮರಣವೇ ಮಹಾನವಮಿ, ನಿಸರ್ಗ ವತಿ, ವೊಯೇಜಾಕ್, ಗಿಲ್ಗಮೀಷ್, ಜಿ ಕೆ ಮಾಸ್ತರ ರ ಪ್ರಣಯ ಪ್ರಸಂಗ, ಅಗಮೇಮ್ನೋನ್, ಮಹಾರಾತ್ರಿ, ಎನಿಮಿ ಆಫ್ ದಿ ಪೀಪಲ್ ಇನ್ನೂ ಹಲವು ನಾಟಕಗಳಲ್ಲಿ ಪಾತ್ರ ವಹಿಸಿದ್ದಾರೆ. ಸತ್ರು ಅಂದ್ರೇ ಸಾಯ್ತಾರಾ?, ಬಿಲ್ಲಹಬ್ಬ, ಮನ್ಹಪರಿವರ್ತನೆ, ನಮ್ಮ ಕೂಗು, ನಮ್ಮೂರ ಹಬ್ಬ, ಅಳಿಲು ರಾಮಾಯಣ ಹೀಗೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ.



ರಂಗಾನುಭವ :

ಹೊಸಪೇಟೆಯ ಭಾವೈಕ್ಯತಾ ವೇದಿಕೆಯಲ್ಲಿ 7 ನೇ ತರಗತಿಯಿಂದ ಪದವಿ ಶಿಕ್ಷಣದ ವರೆಗೂ 1000 ಕ್ಕೂ ಹೆಚ್ಚು ಬೀದಿನಾಟಕಗಳಲ್ಲಿ ಅಭಿನಯ, ನಿರ್ದೇಶನ, ತಂತ್ರಜ್ಞ ಹಾಗೂ ಸಂಘಟಕನಾಗಿ ತೊಡಗಿಸಿಕೊಂಡಿದ್ದು.

1999 ರಲ್ಲಿ ನಾಡಿನ ಪ್ರತಿಷ್ಟಿತ ಸಂಸ್ಥೆಯೊಳಗೊಂದಾದ ಸಾಣೇಹಳ್ಳಿಯ ಶಿವಸಂಚಾರದಲ್ಲಿ ಅಭ್ಯಾಸ ಮಾಡಿ ವರ್ಷ ಪೂರ್ತಿ ರಾಜ್ಯದಾದ್ಯಂತ ನಾಟಕಗಳ ಪ್ರದರ್ಶನದಲ್ಲಿ ನಟ ಹಾಗೂ ತಂತ್ರಜ್ಞನಾಗಿ ಭಾಗವಹಿಸಿದ್ದು.
2004-05 ರಲ್ಲಿ ನೀನಾಸಂ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಯಾಗಿ ದೇಶ ವಿದೇಶದ ರಂಗ ತಜ್ಞರಡಿಯಲ್ಲಿ ರಂಗಾನುಭವವನ್ನು ಪಡೆದುಕೊಂಡಿದ್ದು.
2008 ರಲ್ಲಿ ನಾಟಕ ಶಿಕ್ಷಕನಾಗಿ ಸರ್ಕಾರಿ ಸೇವೆಗೆ ಸೇರಿ, ಹಲವಾರು ಬಾರಿ ರಾಜ್ಯದ ಮಟ್ಟದವರೆಗೆ ನಾಟಕಗಳ ಪ್ರದರ್ಶನ ನೀಡಿದ್ದು.
ವಿದ್ಯಾರ್ಥಿ ಹಾಗೂ ಪಾಲಕರನ್ನು ಒಳಗೊಂಡಂತೆ ಮೊಹರಂ ಹಾಗೂ ಸ್ಥಳೀಯ ಜನಪದದ ಕುರಿತು ಸಾಕ್ಷ್ಯಚಿತ್ರವನ್ನು ತಯಾರಿಸಿ ಹಲವು ಸೆಮಿನಾರ್ ಗಳಲ್ಲಿ ಹಂಚಿಕೊಂಡಿದ್ದೇವೆ. 
ವರ್ಷದಲ್ಲಿ ಒಮ್ಮೆ ಗ್ರಾಮದಲ್ಲಿ ರಂಗೋತ್ಸವವನ್ನು ನಡೆಸುತ್ತಿರುವುದು. ನಮ್ಮ ಶಾಲಾ ನಾಟಕಗಳ ಜೊತೆಗೆ ಹಲವು ತಂಡಗಳ ರಂಗಪ್ರದರ್ಶನಗಳನ್ನು ಗ್ರಾಮದಲ್ಲಿ ಆಯೋಜನೆ ಮಾಡುತ್ತಿದ್ದೇವೆ.
ಹೆಜ್ಜೆಗಳು ನಾಟಕೋತ್ಸವ ಸ್ಥಳೀಯ 14 ಶಾಲೆಗಳ ಪಟ್ಯ ನಾಟಕಗಳ ಪ್ರದರ್ಶನವನ್ನು  ನಮ್ಮ ಶಾಲೆಯಲ್ಲಿ ಏರ್ಪಡಿಸಿ ರಂಗಕರ್ಮಿ, ಶಿಕ್ಷಣ ಇಲಾಖೆ ಹಾಗೂ ನಾಟಕ ಅಕಾಡೆಮಿಯ ಗಮನ ಸೆಳೆದಿದ್ದು.
ಶಾಲಾ ಪತ್ರಿಕೆ, ಯುಟ್ಯೂಬ್ ಹಾಗೂ ಬ್ಲಾಗ್ ನಲ್ಲಿ ನಮ್ಮ ಚಟುವಟಿಕೆಗಳನ್ನು ದಾಖಲಿಸುತ್ತಿದ್ದೇವೆ.
ನಾಡಿನ ಖ್ಯಾತ ನಿರ್ದೇಶಕರೊಂದಿಗೆ ರಂಗ ಶಿಬಿರ, ಕಾರ್ಯಗಾರಗಳಲ್ಲಿ ತೊಡಗಿಕೊಂಡ ಅನುಭವದ ಜೊತೆಗೆ ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದು ವಿಶೇಷ.
ಕೋಟಿಗನಹಳ್ಳಿ ರಾಮಯ್ಯ 

ರಾಜಪ್ಪ ದಳವಾಯಿ 






ಯಾದಗಿರಿ ಶಿಕ್ಷಕರ ಕಾರ್ಯಾಗಾರದಲ್ಲಿ 


ಬಾಗಲಕೋಟೆ ಶಿಕ್ಷಕರ ಶಿಬಿರದಲ್ಲಿ