ಶನಿವಾರ, ಡಿಸೆಂಬರ್ 30, 2017

ಬುಧವಾರ, ಅಕ್ಟೋಬರ್ 18, 2017

ನಮ್ಮ ಕೂಗು

ನಮಗೆ ನಮ್ಮದೇ ಕೂಗು ಬೇಕು. ನಮ್ಮ ಕೂಗು ಕೇಳಿಸಿಕೊಳ್ಳದ ಹಲವು ಕಿವಿಗಳು ನಮ್ಮ ಮಧ್ಯ ಇವೆ. ಮನೆಯಲ್ಲಿ ಪಾಲಕರಿಗೇ ನಮ್ಮ ಕೂಗು ಮುಟ್ಟೋಲ್ಲ‌. ಶಾಲೆಯಲ್ಲಿ ಶಿಕ್ಷಕರಿಗೆ ನಮ್ಮ ಕೂಗು ಮುಟ್ಟೋಲ್ಲ. ಓಟ್ ಹಾರಿಸಿಕೊಂಡ ರಾಜಕಾರಣಿಗಳ ಕಿವಿಗೆ ನಮ್ಮ ಕೂಗು ಮುಟ್ಟೋಲ್ಲ ಹೀಗೆ ನಮ್ಮದೇ ಕಂಠದ ಧ್ವನಿ ಯಾರಿಗೂ ಮುಟ್ಟದ ಪರಿಸ್ಥಿತಿ ಬಂದೊದಗಿದೆ. ಕೇಳುವ ಕಿವಿಗಳೇ ಇಲ್ಲದಿರುವ ಈ ಸ್ಥಿತಿಯಲ್ಲಿ ನಾವು ನಮಗಾಗಿ ಕಿವಿಗಳ ಕೊಡುವವರ ಹುಡುಕಾಟ ನಡೆಸಿದ್ದೇವೆ. ಅಥಾವ ಆಲಿಸುವ ವರ್ಗವನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದೇವೆ. ಅಂತಹ ಒಂದು ಪ್ರಯತ್ನ ನಮ್ಮ ಕೂಗು ನಾಟಕ.

ಭಾನುವಾರ, ಆಗಸ್ಟ್ 6, 2017

ಗುರುವಾರ, ಆಗಸ್ಟ್ 3, 2017

ಮುತ್ತಣ್ಣನ ಬರಹ

ನನ್ನ ಪ್ರೀತಿಯ ರಂಗಕಲಾ ಶಿಕ್ಷಕರಾದ ಗುರುರಾಜ L
ಹಜ್ಜೆಗಳಲ್ಲಿ ಸಂಗ್ರಹಿಸಿದ ಚಿತ್ರ .  9ನೇ ತರಗತಿ ಇದ್ದಾಗ ಪಾತ್ರಗಳನ್ನು ಹಂಚುತಿರುವಾಗ ಯಾವ ಯಾವ ಪಾತ್ರಗಳು ಎಂದು ಚರ್ಚೆ ಮಾಡುತ್ತಿರುವಾಗ ಕೋನೆಯದಾಗಿ ಆಯ್ಕೆ ಯಾದವನು ನಾನು.

     ಅಂದು ನಾನು ಗುರುಗಳ ಮಾತಿನಂತೆ ರಂಗಕಲೆಗೆ ಸೇರದಿದ್ದರೆ ಇನ್ನೆಂದು ನಿರ್ಭಯವಾಗಿ ವೇದಿಕೆಯ ಮೇಲೆ ಮಾತನಾಡುತ್ತಿರಲಿಲ್ಲವೇನೋ ಎಂದನಿಸುತ್ತಿದೆ.
      
        ಆ ದಿನಗಳಲ್ಲಿ  ನಾವು ನಾಟಕದ ರಿಹರ್ಷಲ್ಗಳಲ್ಲಿಯೇ ಕಾಲ ಕಳೆದೆವು. ಕನಸಿನೂರು, ವಿಜ್ಞಾನದ ಬಗ್ಗೆ ನಾಟಕಗಳ ರಿಹರ್ಷಲ್ ನಲ್ಲಿ ತೊಡಗಿರುತಿದ್ದೆವು.ಇಂತಹ ನಾಟಕಗಳ ಪಾತ್ರಗಳನ್ನು ಹೋತ್ತು ಊರೂರಿಗೆ ಆ ದಿನಗಳಲ್ಲಿ ಬಂಡೆಗಳನ್ನು ಏರಿ ಹೋಗುತಿದ್ದ ಕ್ಷಣಗಳು,ನಟನೆಯಲ್ಲಿ ಪಾತ್ರಕ್ಕೆ ತಕ್ಕ  ಬಟ್ಟೆಗಳನ್ನು  ಹೊತ್ತು ಹೋಗಿ ನಾಟಕ ಮಾಡಿ ಬರುತ್ತಿದ್ದೇವು.ಹಾಬಲಕಟ್ಟ, ಬಾದಿಮನಾಳ, ತುಮರಿಕೊಪ್ಪ , ಜ.ಗುಡದೂರ, ಮತ್ತು ತಾಲೂಕು ಹಂತದಲ್ಲಿ ನಿಡಶೇಸಿಗೆ ಮೊದಲ ಬಾರಿಗೆ ಹೋಗಿ ಬಂದ ಶಾಲೆಯ ಮಕ್ಕಳಾಗಿದ್ದೇವು.  ಮತ್ತು ನಮ್ಮ ಮೊದಲ ಹೆಜ್ಜೆಗಳೆ ಸರಿ.

ಮತ್ತೋಮ್ಮ ಶಾಲಾದಿನಗಳನ್ನು  ಹೆಜ್ಜೆಗಳಲ್ಲಿ ಸಂಗ್ರಹಿಸಿ  ನೆನಪಿಸಿದ ಗುರುರಾಜ ಗುರುಗಳಿಗೆ  ಧನ್ಯವಾದಗಳು.

ಶನಿವಾರ, ಜೂನ್ 3, 2017

ಶಾಲಾ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ

೨೦೧೭-೧೮ ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಆರಂಭದಲ್ಲಿ ಜನಪ್ರತಿನಿಧಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ  ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಗಳನ್ನು ವಿತರಿಸಲಾಯಿತು.

ಮಂಗಳವಾರ, ಏಪ್ರಿಲ್ 18, 2017

ಆದರ್ಶ ವಿದ್ಯಾರ್ಥಿಗಳು

೨೦೧೬-೧೭ ನೇ ಸಾಲಿನಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಲ್ಲಿ ಇಬ್ಬರ (ಬಾಲಕ+ಬಾಲಕಿ) ನ್ನು ಆದರ್ಶ ವಿದ್ಯಾರ್ಥಿಗಳೆಂದು ಆಯ್ಕೆ ಮಾಡಿ ಗೌರವಿಸುವ ಹೊಸ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಕ್ಕಳನ್ನು ಈ ರೀತಿ ಪ್ರೋತ್ಸಾಹಿಸುವುದರಿಂದ ಅವರ ಭವಿಷ್ಯಕ್ಕೆ ಉತ್ತಮವಾದ ವಾತಾವರಣವನ್ನು ಸೃಷ್ಟಿಸಿದಂತೆ ಆಗುತ್ತದೆ ಎಂಬ ದೃಷ್ಟಿಯಲ್ಲಿ ನಮ್ಮೆಲ್ಲ ಶಿಕ್ಷಕ ವೃ೦ದ ನಿರ್ಧರಿಸಿ ಆಯ್ಕೆ ಮಾಡಲಾಗುತ್ತದೆ. ಮಕ್ಕಳು ಎಲ್ಲ ರೀತಿಯ ಶೈಕ್ಷಣಿಕ ಹಂತದಿಂದ ತೊಡಗಿಸಿಕೊಳ್ಳುವಿಕೆಯಲ್ಲಿ ಧನಾತ್ಮಕವಾಗಿ ಇರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲು ಶಾಲೆಯ  ಆದರ್ಶ ವಿದ್ಯಾರ್ಥಿಗಳಾಗಿ 
ಕುಮಾರಿ ಭೀಮಾಂಬಿಕಾ ಸಣ್ಣಡೋಣಿ 
ಕುಮಾರ ಶಿವರಾಜ್ ತುಗ್ಗಲಡೋಣಿ 
ಈ ಎರಡು ಮಕ್ಕಳನ್ನು ಎಲ್ಲ ಶಿಕ್ಷಕ ಬಳಗ ಆಯ್ಕೆ ಮಾಡಿ ಅಭಿನಂದಿಸುತ್ತಿದ್ದಾರೆ.  



ಭಾನುವಾರ, ಏಪ್ರಿಲ್ 2, 2017

"ಜೀವ ಜಲ ಜೀವ ಸಂಪತ್ತು " ಮಕ್ಕಳ ಶಿಬಿರ

ಒಂದು ಬೇಸಿಗೆ ಶಿಬಿರ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆ ನಡೆಸಿದ್ದಾರೆ ವಿಸ್ತಾರ ಅಡಿಯಲ್ಲಿ.ತುಂಬಾ ಸಂತೋಷ ಕೊಡುತ್ತದೆ ಅವರ ಚಟುವಟಿಕೆಗಳನ್ನು ಕಂಡು.

ಶುಕ್ರವಾರ, ಮಾರ್ಚ್ 31, 2017

ಸೋಮವಾರ, ಮಾರ್ಚ್ 27, 2017

ಆದರ್ಶ ವಿದ್ಯಾರ್ಥಿಗಳು

ಶೈಕ್ಷಣಿಕ ವರ್ಷದಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಲ್ಲಿ ಇಬ್ಬರಿಗೆ "ಆದರ್ಶ ವಿದ್ಯಾರ್ಥಿ" ಎಂದು ಅಭಿನಂದಿಸಲಾಯಿತು.

ಶನಿವಾರ, ಮಾರ್ಚ್ 18, 2017

ಮಕ್ಕಳ ಹೆಜ್ಜೆಗಳು ಉದಯವಾಣಿ ದಿನಪತ್ರಿಕೆಯಲ್ಲಿ

ಉದಯವಾಣಿ ದಿನಪತ್ರಿಕೆಯಲ್ಲಿ