ಮಂಡನೆ : ಕುಮಾರಿ ಶಶಿಕಲಾ
ವಿಷಯ : ಕನ್ನಡದಲ್ಲಿ ಮಕ್ಕಳ ಸಾಹಿತ್ಯ
ತರಗತಿ ಗೋಷ್ಠಿ -೦೧
ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಕುರಿತು ಹೇಳುವುದಾದರೆ ನಮ್ಮ ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಸುಮಾರು ೨೦೦೦ ವರ್ಷಗಳ ಹಿಂದಿನಿಂದಲೂ ಬೆಳೆದು ಬಂದಿದ್ದೆ ಎಂದು ಇತಿಹಾಸಕಾರರು ಹೇಳುತ್ತಾರೆ. ನಾನು ಓದಿದ , ಕೇಳಿದ್ದು ಸ್ವಲ್ಪನೇ ಆದರೆ ಮಕ್ಕಳ ಸಾಹಿತ್ಯವನ್ನು ಕುರಿತು ಹೇಳುವಾಗ ನಾವು ನಮ್ಮ ಮನೆಯಿಂದ ಹಿಡಿದು ಯಾವುದೇ ಮನೆಯನ್ನು ಗಮನಿಸಬಹುದು ಮಕ್ಕಳೀಗೆ ಉಟ ಮಾಡಿಸುವಾಗ ಮಗು ಅಳುವಾಗ ತಾಯಿ ಕಥೆಯನ್ನ್ ತನ್ನದೇ ಕಲ್ಪ್ನೆಯಲ್ಲಿ ಕಟ್ಟುತ್ತಾ ಹೋಗುತ್ತಾಳೆ ಅದು ರಂಜನೀಯವಾಗಿ ಮಗುವಿನ ಗಮನವನ್ನು ಸೆಳೆಯಲು ಅದು ಆ ಕಾಲ್ಪನಿಕ ಭಾವದಲ್ಲಿಯೇ ತೇಲಿಸುತ್ತಾ ತನ್ನ ಉಣ್ಣಿಸುವ ಕೆಲಸವನ್ನು ಪೂರೈಸುತ್ತಾಳೆ. ತಾಯಿ ಎಲ್ಲಿ ಕೇಳಿದ್ದಳು, ಕಥೆಗಳನ್ನು ಹೇಗೆ ಸೃಷ್ಟಿದಳು ಎಂದು ನಾವೆಲ್ಲಿಯೂ ಯೋಚಿಸಿಲ್ಲ ಹಾಗೇಯೇ ಅಜ್ಜ-ಅಜ್ಜಿ ಕಥೆಗಳನ್ನು ಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಇವರೆಲ್ಲರೂ ಶಾಲೆಯೇ ಓದಿರದಿದ್ದಾಗ ಹೇಗೆ ಕಥೆಗಳನ್ನೆಲ್ಲ ಹೇಳುತ್ತಿದ್ದಾರೆ ಎಂಬ ಯೋಚನೆಗಳು ಸಹಜವಾಗಿ ಮೂಡುತ್ತವೆ.