ಗುರುವಾರ, ಡಿಸೆಂಬರ್ 22, 2011

ಕೊಪ್ಪಳ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಾ ಕೆಲವು ಛಾಯಚಿತ್ರಗಳು









ಕೊಪ್ಪಳ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಾ ಕೆಲವು ಛಾಯಚಿತ್ರಗಳು

ಶರಣಪ್ಪ ವಡಗೇರಿ-ಜಾನಪದ





               ಶರಣಪ್ಪ ವಡಗೇರಿ  ಅವರು ನಮ್ಮ ಶಾಲೆಯಲ್ಲಿ ಜನಪದ ಹಾಗೂ ಸ್ವಚ್ಛತ ಕುರಿತು ಹಾಡುಗಳನ್ನು ಮಕ್ಕಳ ಮುಂದೆ ಪ್ರದರ್ಶಿಸಿದರು. ಜಾನಪದವನ್ನು ಇಂದು ಜಾಗೃತಿಗಾಗಿ ಹಳ್ಳಿ ಹಳ್ಳಿಯಲ್ಲಿ ಪ್ರದರ್ಶನವನ್ನು ನೀಡುತ್ತಿರುವ ಶರಣಪ್ಪ ವಡಗೇರಿ ಹಳ್ಳಿಗರ ಮನಸ್ಸನ್ನು ಸೆರೆ ಹಿಡಿಯುವಲ್ಲಿ ಮುಂಚುಣಿಯಲ್ಲಿದ್ದಾರೆ. ತಮ್ಮ ಮಾತಿನ - ಹಾಡಿನಲ್ಲಿ ಎಚ್ಚರ ಆಗು ಇಲ್ಲದಿದ್ದರೆ ಹಾಳಾಗಿ ಹೋಗ್ತೀಯಾ ಎಂದು ಬಡೆದಂತೆ ಓದು ಬಾರದ, ಮಕ್ಕಳು-ಹಿರಿಯರು-ತಿಳಿದವರಿಗೂ ತಮ್ಮ ಜಾನಪದದ ಹಾಡುಗಳ ಮುಖಾಂತರ ಜಾಗೃತಿಯನ್ನು ಮೂಡಿಸುವಲ್ಲಿ ಮುಂದಿದ್ದಾರೆ ಎಂದು ಹೇಳಬೇಕು. ನನಗೆ ನನ್ನ ಪ್ರೌಧಶಾಲೆಯಲ್ಲಿ  ಅಭ್ಯಾಸ ಮಾಡುವ ದಿನಗಳು ನೆನಪಿಗೆ ಬರುತ್ತವೆ. ಅಬ್ದುಲ್ ಸಾಬ್ ನನ್ನ  ಗೆಳೆಯರನೆಲ್ಲ  ಬೀದಿನಾಟಕ ಮಾಡಲಿಕ್ಕೆ ಕರೆದುಕೊಂಡು ಹೋಗುವ ಸಮಯ, ಸಂಗೀತ ಮತ್ತು ನಾಟಕ ವಿಭಾಗದಿಂದ ಆಯ್ಕೆಗೊಂಡು ಜಿಲ್ಲೆಯಿಂದ ಜಿಲ್ಲೆಗೆ, ಹಳ್ಳಿಯಿಂದ ಹಳ್ಳಿಗೆ ಸಾಗುತ್ತಾ  ಜನರ ಪ್ರೀತಿ ವಿಶ್ವಾಸ ...... ಹೇಳಲಾರದಷ್ಟು ಅನುಭವಗಳು ನನ್ನ ವಿದ್ಯಾಭ್ಯಾಸದ ದಿನಗಳಲ್ಲಿಯೇ ದೊರಕುತ್ತಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. 

      ಜಾನಪದದಲ್ಲಿಯೇ ತೊಡಗಿಸಿಕೊಂಡಿರುವ ಶಂಕ್ರಣ್ಣ ಸಂಕಣ್ಣನವರು ಹಾಗೂ ಶರಣಪ್ಪ ವಡಗೇರಿಯವರು ನನಗೆ ಬೆಂಗಳೂರಿನಲ್ಲಿಯೇ ಪರಿಚತರಾಗಿದ್ದರು ಇಂದು ಅವರು ಗುರುತಿಸದಂತೆ ಆಗಿದ್ದೇನೆ.  ಅವರು ಹಳ್ಳಿಯ ಜನರ ಜಾಗೃತಿಯ ಕಾರ್ಯಕ್ರಮದ ನಡುವೆ ನಮ್ಮ ಶಾಲೆಗೂ ಬೇಟಿ ನೀಡಿ, ನಮ್ಮ ಮಕ್ಕಳು ನಾಟಕಗಳಲ್ಲಿ ಜಾನಪದದ ಕುರಿತು ಆಲೋಚಿಸುವಂಥ ಅವಕಾಶವನ್ನು ತೆರೆದಿಟ್ಟಿದ್ದಾರೆ. ಅವರ ಹಾಗೂ ತಂಡದವರೆಲ್ಲರಿಗೂ ನಮ್ಮ ಶಾಲೆಯ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ. 


ಭಾನುವಾರ, ಡಿಸೆಂಬರ್ 18, 2011

ಕಳೆದ ದಿನಗಳು

ಕಳೆದ ದಿನಗಳು ಆ ದಿನ ಈ ದಿನವೆಂದು ಹುಡುಕುತ್ತಲೇ
ನಾನು ಇಲ್ಲಿವರೆಗೂ ಸಾಗಿದ್ದಾಯಿತು. ಆದರೆ ಆ ದಿನಗಳೆಂದು ಮರಲಿಬರದಾಗಿದೆ
ಬರಿ ಹೊಸ ದಿನಗಳೇ

ಗುರುವಾರ, ಡಿಸೆಂಬರ್ 15, 2011

ಇಂದಿನ ವಿದ್ಯಾಭ್ಯಾಸ

ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ಅತ್ಯವಶ್ಯಕವಾಗಿದೆ. ಮಗುವಿಗೆ ಒಳ್ಳೆಯ ಸಂಸ್ಕಾರ ಸಿಗಲು ಶಿಕ್ಷಣವು ಬೇಕಾಗುತ್ತದೆ. ಪ್ರಾಚಿನ ಕಾಲಕ್ಕೆ ನಮ್ಮ ಇಂದಿನ ಶಿಕ್ಷಣವನ್ನು ಹೋಲಿಸಿದರೆ .... ಇತ್ತಿಚಿಗೆ ಜಾರಿಗೆ ಬಂದ ತ್ರೈ ಮಾಸಿಕ ಶಿಕ್ಷಣ ಪದ್ಧತಿಯಂತು ಮಕ್ಕಳಿಗೆ ಹೆಚ್ಚಿನ ಜ್ಞಾನವನ್ನು ಒದಗಿಸುವುದಿಲ್ಲ . ವಿದ್ಯಾರ್ಥಿಗಳಿಗೆ ಉತ್ತಿರ್ಣರಾಗಲು ಸುಲುಭ ಮಾರ್ಗವಾಗಿದೆ. ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳಿಗೆ ಇದು ಸುಲುಭವಾಗುತ್ತದೆ








ಭೀಮಪ್ಪ ಕಲ್ಲೂರ, ೧೦ನೇ ತರಗತಿ

ಸೋಮವಾರ, ಡಿಸೆಂಬರ್ 12, 2011

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ











ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ (ಕುಷ್ಟಗಿ) ೧೦ ಶಾಲೆಗಳಿಂದ ನಾಟಕಗಳು ಭಾಗವಹಿಸಿದ್ದವು.

ಶುಕ್ರವಾರ, ಡಿಸೆಂಬರ್ 2, 2011

ಭಿತ್ತಿ ಚಿತ್ರಗಳ ತಯಾರಿಕೆ

ನಾಟಕದ ಭಿತ್ತಿ ಚಿತ್ರಗಳ ತಯಾರಿಕೆಯಲ್ಲಿ ನಮ್ಮ
ಮಕ್ಕಳು ತರತರಹದ ವಿನ್ಯಾಸಗಳನ್ನು ರಚಿಸಿ
ಇಲ್ಲಿ ಪ್ರದರ್ಶಿಸಿದ್ದಾರೆ.
 ಅದರ ಕೆಲವು ಛಾಯ ಚಿತ್ರಗಳು ಇಲ್ಲಿವೆ.
ಇದು ವೈದೇಹಿ ಯವರ "ಅಳಿಲು ರಾಮಾಯಣ" ನಾಟಕಕ್ಕೆ
ರಚಿಸಿರುವುದು.