ಗುರುವಾರ, ಡಿಸೆಂಬರ್ 22, 2011

ಕೊಪ್ಪಳ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಾ ಕೆಲವು ಛಾಯಚಿತ್ರಗಳು









ಕೊಪ್ಪಳ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಾ ಕೆಲವು ಛಾಯಚಿತ್ರಗಳು

ಶರಣಪ್ಪ ವಡಗೇರಿ-ಜಾನಪದ





               ಶರಣಪ್ಪ ವಡಗೇರಿ  ಅವರು ನಮ್ಮ ಶಾಲೆಯಲ್ಲಿ ಜನಪದ ಹಾಗೂ ಸ್ವಚ್ಛತ ಕುರಿತು ಹಾಡುಗಳನ್ನು ಮಕ್ಕಳ ಮುಂದೆ ಪ್ರದರ್ಶಿಸಿದರು. ಜಾನಪದವನ್ನು ಇಂದು ಜಾಗೃತಿಗಾಗಿ ಹಳ್ಳಿ ಹಳ್ಳಿಯಲ್ಲಿ ಪ್ರದರ್ಶನವನ್ನು ನೀಡುತ್ತಿರುವ ಶರಣಪ್ಪ ವಡಗೇರಿ ಹಳ್ಳಿಗರ ಮನಸ್ಸನ್ನು ಸೆರೆ ಹಿಡಿಯುವಲ್ಲಿ ಮುಂಚುಣಿಯಲ್ಲಿದ್ದಾರೆ. ತಮ್ಮ ಮಾತಿನ - ಹಾಡಿನಲ್ಲಿ ಎಚ್ಚರ ಆಗು ಇಲ್ಲದಿದ್ದರೆ ಹಾಳಾಗಿ ಹೋಗ್ತೀಯಾ ಎಂದು ಬಡೆದಂತೆ ಓದು ಬಾರದ, ಮಕ್ಕಳು-ಹಿರಿಯರು-ತಿಳಿದವರಿಗೂ ತಮ್ಮ ಜಾನಪದದ ಹಾಡುಗಳ ಮುಖಾಂತರ ಜಾಗೃತಿಯನ್ನು ಮೂಡಿಸುವಲ್ಲಿ ಮುಂದಿದ್ದಾರೆ ಎಂದು ಹೇಳಬೇಕು. ನನಗೆ ನನ್ನ ಪ್ರೌಧಶಾಲೆಯಲ್ಲಿ  ಅಭ್ಯಾಸ ಮಾಡುವ ದಿನಗಳು ನೆನಪಿಗೆ ಬರುತ್ತವೆ. ಅಬ್ದುಲ್ ಸಾಬ್ ನನ್ನ  ಗೆಳೆಯರನೆಲ್ಲ  ಬೀದಿನಾಟಕ ಮಾಡಲಿಕ್ಕೆ ಕರೆದುಕೊಂಡು ಹೋಗುವ ಸಮಯ, ಸಂಗೀತ ಮತ್ತು ನಾಟಕ ವಿಭಾಗದಿಂದ ಆಯ್ಕೆಗೊಂಡು ಜಿಲ್ಲೆಯಿಂದ ಜಿಲ್ಲೆಗೆ, ಹಳ್ಳಿಯಿಂದ ಹಳ್ಳಿಗೆ ಸಾಗುತ್ತಾ  ಜನರ ಪ್ರೀತಿ ವಿಶ್ವಾಸ ...... ಹೇಳಲಾರದಷ್ಟು ಅನುಭವಗಳು ನನ್ನ ವಿದ್ಯಾಭ್ಯಾಸದ ದಿನಗಳಲ್ಲಿಯೇ ದೊರಕುತ್ತಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. 

      ಜಾನಪದದಲ್ಲಿಯೇ ತೊಡಗಿಸಿಕೊಂಡಿರುವ ಶಂಕ್ರಣ್ಣ ಸಂಕಣ್ಣನವರು ಹಾಗೂ ಶರಣಪ್ಪ ವಡಗೇರಿಯವರು ನನಗೆ ಬೆಂಗಳೂರಿನಲ್ಲಿಯೇ ಪರಿಚತರಾಗಿದ್ದರು ಇಂದು ಅವರು ಗುರುತಿಸದಂತೆ ಆಗಿದ್ದೇನೆ.  ಅವರು ಹಳ್ಳಿಯ ಜನರ ಜಾಗೃತಿಯ ಕಾರ್ಯಕ್ರಮದ ನಡುವೆ ನಮ್ಮ ಶಾಲೆಗೂ ಬೇಟಿ ನೀಡಿ, ನಮ್ಮ ಮಕ್ಕಳು ನಾಟಕಗಳಲ್ಲಿ ಜಾನಪದದ ಕುರಿತು ಆಲೋಚಿಸುವಂಥ ಅವಕಾಶವನ್ನು ತೆರೆದಿಟ್ಟಿದ್ದಾರೆ. ಅವರ ಹಾಗೂ ತಂಡದವರೆಲ್ಲರಿಗೂ ನಮ್ಮ ಶಾಲೆಯ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ. 


ಭಾನುವಾರ, ಡಿಸೆಂಬರ್ 18, 2011

ಕಳೆದ ದಿನಗಳು

ಕಳೆದ ದಿನಗಳು ಆ ದಿನ ಈ ದಿನವೆಂದು ಹುಡುಕುತ್ತಲೇ
ನಾನು ಇಲ್ಲಿವರೆಗೂ ಸಾಗಿದ್ದಾಯಿತು. ಆದರೆ ಆ ದಿನಗಳೆಂದು ಮರಲಿಬರದಾಗಿದೆ
ಬರಿ ಹೊಸ ದಿನಗಳೇ

ಗುರುವಾರ, ಡಿಸೆಂಬರ್ 15, 2011

ಇಂದಿನ ವಿದ್ಯಾಭ್ಯಾಸ

ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ಅತ್ಯವಶ್ಯಕವಾಗಿದೆ. ಮಗುವಿಗೆ ಒಳ್ಳೆಯ ಸಂಸ್ಕಾರ ಸಿಗಲು ಶಿಕ್ಷಣವು ಬೇಕಾಗುತ್ತದೆ. ಪ್ರಾಚಿನ ಕಾಲಕ್ಕೆ ನಮ್ಮ ಇಂದಿನ ಶಿಕ್ಷಣವನ್ನು ಹೋಲಿಸಿದರೆ .... ಇತ್ತಿಚಿಗೆ ಜಾರಿಗೆ ಬಂದ ತ್ರೈ ಮಾಸಿಕ ಶಿಕ್ಷಣ ಪದ್ಧತಿಯಂತು ಮಕ್ಕಳಿಗೆ ಹೆಚ್ಚಿನ ಜ್ಞಾನವನ್ನು ಒದಗಿಸುವುದಿಲ್ಲ . ವಿದ್ಯಾರ್ಥಿಗಳಿಗೆ ಉತ್ತಿರ್ಣರಾಗಲು ಸುಲುಭ ಮಾರ್ಗವಾಗಿದೆ. ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳಿಗೆ ಇದು ಸುಲುಭವಾಗುತ್ತದೆ








ಭೀಮಪ್ಪ ಕಲ್ಲೂರ, ೧೦ನೇ ತರಗತಿ

ಸೋಮವಾರ, ಡಿಸೆಂಬರ್ 12, 2011

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ











ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ (ಕುಷ್ಟಗಿ) ೧೦ ಶಾಲೆಗಳಿಂದ ನಾಟಕಗಳು ಭಾಗವಹಿಸಿದ್ದವು.

ಶುಕ್ರವಾರ, ಡಿಸೆಂಬರ್ 2, 2011

ಭಿತ್ತಿ ಚಿತ್ರಗಳ ತಯಾರಿಕೆ

ನಾಟಕದ ಭಿತ್ತಿ ಚಿತ್ರಗಳ ತಯಾರಿಕೆಯಲ್ಲಿ ನಮ್ಮ
ಮಕ್ಕಳು ತರತರಹದ ವಿನ್ಯಾಸಗಳನ್ನು ರಚಿಸಿ
ಇಲ್ಲಿ ಪ್ರದರ್ಶಿಸಿದ್ದಾರೆ.
 ಅದರ ಕೆಲವು ಛಾಯ ಚಿತ್ರಗಳು ಇಲ್ಲಿವೆ.
ಇದು ವೈದೇಹಿ ಯವರ "ಅಳಿಲು ರಾಮಾಯಣ" ನಾಟಕಕ್ಕೆ
ರಚಿಸಿರುವುದು.





 

ಸೋಮವಾರ, ನವೆಂಬರ್ 28, 2011

ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ




ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ  ಮಕ್ಕಳ ಉತ್ಸಾಹವನ್ನು ಗಮನಿಸಿದರೆ ನಮಗೆ ನಮ್ಮ0ಥಹ  ಶಿಕ್ಷಕರಿಗೆ ಮುಜುಗರ ಪಡುವ ಸ್ಥಿತಿ ಬಂದು ಎರಗುತ್ತದೆ. ಕಾರಣ ನಮ್ಮ ಮಕ್ಕಳಿಗೆ ನಾವು ಮುಕ್ತವಾಗಿ ಕಲಿಯಲು ಭಾಗವಹಿಸಲು ಬಿದುತ್ತಲಿದ್ದೆವೆಯೇ ಎಂಬ ವಿಚಾರ ಮಾಡಲೇ ಬೇಕಾಗುತ್ತಾದೆ. ಮಕ್ಕಳ ವಿಚಾರದಲ್ಲಿ ನಮ್ಮ ಕಾರ್ಯ ಸಾಲಲ್ಲ ಎಂಬುವುದನ್ನು ಮನಗಂಡು ನಾವು ಕಾರ್ಯ ಪ್ರವೃತ್ತರಾಗಬೇಕಾಗಿದೆ.


ಬುಧವಾರ, ಅಕ್ಟೋಬರ್ 12, 2011

ಮನಃ ಪರಿವರ್ತನೆ ನಾಟಕದ ಪ್ರದರ್ಶನ














ಧೃಡ ಮನಸ್ಸು


ಏನಾದರೂ ಸಾಧಿಸಲು ಛಲಬೇಕು. ಕಾರ್ಯ ಮಾಡುವ ಮನಸ್ಸಿರಬೇಕು, ಧೃಡ ಮನಸ್ಸಿರಬೇಕು. ಎಂದಾಗ ಮಾತ್ರ ಕಾರ್ಯ ಸಾಧಿಸಲು ಸಾಧ್ಯವಾಗುವುದು. ರೂಡಿಯಂತೆ ಮುಂದೆ ಗುರಿ ಇರಬೇಕು ಹಿಂದೆ ಗುರಿ ಇರಬೇಕು ಎಂದು ಹೇಳುತ್ತಾರೆ. ಮುಂದೆ ಗುರಿ ಇದ್ದರೆ ಮಾತ್ರ ಆಗುವುದಿಲ್ಲ ಹಿಂದೆ ಗುರುವು ಬೇಕು. ಗುರುಗಳು ಪ್ರೋತ್ಸಾಹ ನೀಡುವರು. ಪ್ರೋತ್ಸಾಹನೆ ಇಲ್ಲದಿದ್ದರೆ ಅವನ ಧೃಡಮನಸ್ಸು , ಪಟ್ಟ ಶ್ರಮ ವ್ಯರ್ಥವಾಗುವುದು . ಕಲಿಯಲು ಮನಸ್ಸು ಬೇಕು. ಮನಸ್ಸಿದ್ದರೆ ಮಾರ್ಗ ಎನ್ನವುದು ನಿಜಕ್ಕೂ ಸತ್ಯ ಎನಿಸಿದೆ. ಆದ್ದರಿಂದ ನನಗೂ ಸೇರಿ " ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು".


---- ಸವಿತಾ.ಎಸ್ .ಬಾಗೂರ, ೧೦ ನೇ ತರಗತಿ.

ಕವನ

ಶಾಲೆಯೊಂದು ಸುಂದರ ಆಗರ

ಶಿಕ್ಷಕರು ಅಲ್ಲಿ ಜ್ಞಾನದ ಸರೋವರ

ವಿದ್ಯಾರ್ಥಿಗಳಿರಬೇಕು ಸದಾ ವಿದ್ಯಾದರ

**********************************

ಇದು ನನ್ನ ಕವನ

ಸೋಡಿಯಂ ಲವಣ

ಮೇಲಿದೆ ಗಗನ

ಕೆಳಗಿದೆ ಭುವನ

ಹೇಗಿದೆ ನನ್ನ ಕವನ
..............................................
ವಚನ
.ಎಸ್ .ಬಂಡಿ , ೮ ನೆತರಗತಿ

ಬುಧವಾರ, ಅಕ್ಟೋಬರ್ 5, 2011

ತಿಂಗಳ ಸಂಜೆ


ಪ್ರತಿ ತಿಂಗಳು "ತಿಂಗಳ ಸಂಜೆ" ಕಾರ್ಯಾಕ್ರಮದಲ್ಲಿ ಜಾಕನಪಲ್ಲಿ ಊರಿನ ಹಿರಿಯರ ಸಂಗಡ ಶಾಲೆಯ ಎಲ್ಲ ಸಿಬ್ಬಂದಿ ಯವರೊಂದಿಗೆ ತಮ್ಮ ಹೊಸ ಹೊಸ ಕಾರ್ಯಕ್ರಮಗಳು ಎಲ್ಲರ ಮನ ಸೆಳೆದಿವೆ. ತಮ್ಮ ಪ್ರಯತ್ನ ಸದಾ ಕ್ರಿಯಾಶೀಲಾವಾಗಿರಲಿ ಎಂದು ನಮ್ಮ ಪತ್ರಿಕಾ ಬಳಗ ಆಶಿಸುತ್ತದೆ.

ಶನಿವಾರ, ಅಕ್ಟೋಬರ್ 1, 2011

ಹೆಮ್ಮರಗಾಲದ ಪತ್ರಿಕೆಗೆ ನಮ್ಮ ಹೆಜ್ಜೆಗಳು ಪತ್ರಿಕೆಯಿಂದ ಶುಭ ಕೊರುತ್ತಲಿದ್ದೇವೆ.



ಗೆಳೆಯ ಸಂತೋಷನ ಪ್ರಯತ್ನ ನಮಗೂ ಸ್ಪೂರ್ತಿ,

ಮಕ್ಕಳ ಬರವಣಿಗೆಯ ಜೊತೆಗೆ ಗಣ್ಯರ ಸಲಹೆಗಳು

ಸದಾ ಸಿಗಲೆಂದು ಆಶಿಸುವೆವು.



ಮಂಗಳವಾರ, ಸೆಪ್ಟೆಂಬರ್ 27, 2011

ರಂಗಶಿಕ್ಷಣ



ರಂಗ ಅಧ್ಯಯನ ನಮಗೆ ಯಾಕೆ ಬೇಕು ? ಅದರಿಂದ ಉಪಯೋಗವೇನು ? ಹೀಗೆ ಎಲ್ಲ ಶಿಕ್ಷಕ ವರ್ಗದಲ್ಲಿ ಸಹಜವಾದ ಚರ್ಚೆ ಇದ್ದೆ ಇರುತ್ತದೆ. ನಾವು ಮಕ್ಕಳಲ್ಲಿ ಕಾಣಬೇಕಾಗಿರುವುದು ಹೊಸತನವನ್ನು , ಮುಕ್ತತೆಯನ್ನು . ಆದರೆ ಈಗಿರುವ ವ್ಯವಸ್ಥೆಯಲ್ಲಿ ಅಥಾವ ನಮ್ಮದೇ ತಪ್ಪು ನಿರ್ಧಾರಗಳಿಂದ ಮಕ್ಕಳಿಗೆ ನಾವು ಕಲಿತ ಶಿಕ್ಷಣವನ್ನೂ , ನಡಾವಳಿಕೆಯನ್ನೂ ಕೇವಲ ಕಂಠಪಾಠ ಹಾಕುವಂತೆ ಮಕ್ಕಳನ್ನು ಹೆದರಿಸಿ, ಬೆದರಿಸಿ ಅವರ ಮುಕ್ತತೆಯನ್ನು ನಾವೇ ನಾಸಾ ಮಾಡಿದ್ದೇವೆ. ಹಿರಿಯರ ಅನುಕರಣೆಯನ್ನು ಮಾಡುತ್ತಲೇ ಸಾಗುತ್ತಿರುವ ಈಗಿನ ಮಕ್ಕಳು ಸೂಪ್ತ ಪ್ರತಿಭೆ ಹೊರ ಹಾಕುವುದಕ್ಕಿಂತ ಕೇವಲ ಹಿರಿಯರ ಕನ್ನಡಿಯಾಗಿ ಸಾಗುತ್ತಿರುವುದು ದುರಂತವೆಂದು ಹೇಳಬೇಕಾಗಿದೆ.

ನನ್ನ ಅನುಭವದ ಒಂದು ಮಾತು. ಶಿಕ್ಷಣ ಪಡೆಯುತ್ತಲೇ ಅಬ್ದುಲ್ ಸಾಬ್ ಒಡನಾಟದಲ್ಲಿ ಬೀದಿನಾಟಕ ಮಾಡುತ್ತಾ ಅದು ಯಾಕೆ ? ತಮಾಷೆಗಾಗಿಯೋ ....., ಮನರಂಜನೆಗಾಗಿಯೋ........,ಇಲ್ಲ ಹೋರಾಟದ ಧೃಷ್ಟಿಯಿಂದಲೋ ಎಂಬುವುದನ್ನು ತಿಳಿಯದೆ ದುಮುಕಿದ್ದು. ಇಲ್ಲಿ ಯಾರು ಹೀಗೆ ಮಾಡಿ ... ಎಂದು ತೋರಿಸಿ ಕೊಡುವಂತಹ ಬುದ್ಧಿವಂತರಿರಲಿಲ್ಲ . ಆಗ ಸಹಜವಾಗಿ ನಮ್ಮ ಕಲಿಕೆಯ ತೀವ್ರತೆ ಹುಡುಕುತ್ತಾ ಹೊಸದರತ್ತ ತುಡಿತ ಸೆಳೆಯುತ್ತಿತ್ತು . ಇಲ್ಲಿ ಅಬ್ದುಲ್ ಕೇವಲ ಮಾರ್ಗದರ್ಶಕರಾಗಿ ನಮ್ಮನ್ನು ಮುಂದಕ್ಕೆ ದೂಡುತ್ತಿದ್ದರು. ಹೊಸತನಕ್ಕೆ ನಾವೇ ಅಣಿಯಾಗುತ್ತ ಸಾಗಿದ್ದು .

ಇಲ್ಲಿ
ನಾವು ಮಕ್ಕಳನ್ನು ಶಾಲೆಯಲ್ಲಿ ಅಥಾವ ಮನೆಯಲ್ಲಿ ಹೇಳಿಕೊಡುವಾಗ ಸ್ವತಂತ್ರ್ಯವಾಗಿ ಬದುಕುವ ಹಾಗೂ ತಮ್ಮ ಪ್ರಶ್ನೇ ಗಳನ್ನು ಬಗೆಹರಿಸಿಕೊಳ್ಳು ವಂಥಹ ವಾತಾವರಣವನ್ನು ನಾವು ಕಲ್ಪಿಸಿಕೊಡಬೇಕಾಗಿದೆ. ಮಕ್ಕಳಿಗೆ ಹೊಸತನದ ದಾರಿಗಳನ್ನು ಹೊರಹಾಕಬೇಕೆ ಹೊರತು ಹೀಗೆಯೇ ಆಗಬೇಕೆಂಬುವುದು ಬಯಸಬಾರದು . ಮೊದಲಿಗೆ ನಾವು (ಶಿಕ್ಷಕರು/ಪಾಲಕರು ) ಮುಕ್ತವಾಗಿದ್ದರೆ , ಸಹಜವಾಗಿ ಮಕ್ಕಳಿಂದ ಸೃಜನಶೀಲವಾದ ಚಿಂತನೆ ಹೊರಬರಲು ಸಾಧ್ಯ . ಅದು ಯಾವುದೇ ಕ್ಷೆತ್ರದಲ್ಲಿದ್ದರು ಒಂದು ಸ್ಥಳವಕಾಶವನ್ನು ಮಾಡಿಕೊಡಬೇಕಾದದ್ದು ಮುಖ್ಯವೆಂದೆನಿಸುತ್ತದೆ.

ಮಕ್ಕಳು ಮಾಡಿದ್ದನ್ನು ಸರಿಯಲ್ಲ ಎನ್ನುವುದಕ್ಕಿಂತ , ದಾರಿಯಲ್ಲಿ ತರಹದ ಸಮಸ್ಯಗಳು ಬರುತ್ತವೆ ... ಹೀಗೆ ಹೋದರೆ ಹೊಸ ಸವಾಲಗಳು ಹುಟ್ಟಿ ಕೊಳ್ಳುತ್ತವೆ ಎಂದು ಅರ್ಥೈಸಬೇಕು , ಹೇರಬಾರದು. ರಂಗಭೂಮಿ ವೃತ್ತಿ ಪರತೆಗೋ , ಹವ್ಯಾಸಕ್ಕೋ ಎಂಬ ಗೊಂದಲಗಳ ನಡುವೆ ಮಕ್ಕಳು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅವರಿಗೆ ಬಿಡಬೇಕು. ಆಯ್ಕೆ ಎಂದಾಕ್ಷಣ ಕೊನೆ ಎಂತಲ್ಲ ಅವರವರ ಯೋಚನೆಗಳಿಂದ ಆಯ್ಕೆಗಳು ಬದಲಾಗುತ್ತವೆ. ರಂಗಶಿಕ್ಷಣ ಎಂಥಹ ಸಮಸ್ಯಗಳನ್ನು ನಿಭಾಯಿಸುವ ಸಾಮರ್ಥ್ಯ ಹೆಚ್ಚುತ್ತದೆ ಎನ್ನುವುದು ನನ್ನ ಆಲೋಚನೆ .

ಗುರುರಾಜ

ಭಾನುವಾರ, ಸೆಪ್ಟೆಂಬರ್ 11, 2011