ಗುರುವಾರ, ಮೇ 31, 2012

ಶಾಲಾ ಪ್ರಾರಂಭ ಪ್ರಚಾರ


 ನಾನು ನಮ್ಮೂರು  ಮಕ್ಕಳ ವೇದಿಕೆಯಿಂದ ಶಾಲೆ ಪ್ರಾರಂಭವಾಗಿದೆ 
ಶಾಲೆಗೆ ಬನ್ನಿ ಎಂಬ ಪ್ರಚಾರವನ್ನ ಮಕ್ಕಳೊಂದಿಗೆ 
ನಾಟಕ ಶಿಕ್ಷಕರಾದ ಅಶೋಕ ತೊಟ್ನಳ್ಳಿ ಯವರು
 ದಿನಾಂಕ 31.5.2012 ರಂದು ತಮ್ಮ ಗ್ರಾಮದಲ್ಲಿ 
ವಿಶಿಷ್ಟ ರೀತಿಯಲ್ಲಿ ಗೊಂಬೆಗಳೊಂದಿಗೆ  
ಜನರ ಗಮನ ಸೆಳೆದಿದ್ದು 



ಸ್ಥಳ : ಜಾಕನಪಲ್ಲಿ, ಸೇಡಂ || ತಾ, ಗುಲ್ಬರ್ಗ 

ಸೋಮವಾರ, ಮೇ 28, 2012


2011-12 ನೇ  ಸಾಲಿನ ಎಸ್.ಎಸ್.ಎಲ್.ಸಿ  ಯಲ್ಲಿ  
ಉತ್ತೀರ್ಣರಾದ ಎಲ್ಲಾ ವಿಧ್ಯಾರ್ಥಿಗಳಿಗೆ 
ನಮ್ಮ ಪತ್ರಿಕೆ ಹಾಗೂ ಶಿಕ್ಷಕ ವೃಂದದಿಂದ 
ಶುಭ ಹಾರೈಕೆಗಳು.

ಭಾನುವಾರ, ಮೇ 13, 2012

ಕುವೆಂಪು ಅವರ ಹಸ್ತಪ್ರತಿಗಳನ್ನು 
 ಮುದ್ದಿನ ವಿದ್ಯಾರ್ಥಿಗಳಿಗೋಸ್ಕರ ಇಲ್ಲಿ 
ಕುವೆಂಪು.com ನಿಂದ  ತೆಗೆದುಕೊಂಡಿದ್ದೇವೆ. 
ಮಕ್ಕಳಿಗೆ ಹೊಸ ಹೊಸ ಆಲೋಚನೆ ಈ 
ಹಸ್ತ ಪ್ರತಿಗಳಿಂದ ದೊರಕುತ್ತದೆ ಎಂದು 
ನಂಬಿದ್ದೇನೆ.












ಕೃಪೆ : ಕುವೆಂಪು.com

ಸೋಮವಾರ, ಮೇ 7, 2012

World Theater Day

ವಿಶ್ವ  ರಂಗಭೂಮಿ  ದಿನ 























                   ವಿಶ್ವ  ರಂಗಭೂಮಿ ಅಂಗವಾಗಿ ಶಾಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಕ್ಕಳಿಗೆ ರಂಗಭೂಮಿಯ ಕುರಿತು ಶಾಲೆಯಲ್ಲಿ ವಿವರವಾಗಿ ಮತ್ತು ನಮ್ಮ ಗ್ರಾಮೀಣ  ಪ್ರದೇಶದಲ್ಲಿ  ಇರುವ ಜನಪದ ರಂಗಭೂಮಿಗೆ ಸಾಕಷ್ಟು ಸಂಪನ್ಮೂಲವನ್ನು ನೀಡಿರುವ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿ ಹೇಳಿದ್ದು ತುಂಬಾ ವಿಶೇಷವಾಗಿತ್ತು. ಮಕ್ಕಳೂ  ರಂಗಭೂಮಿಯ ದಿನಾಚರಣೆಯ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವಲ್ಲಿ ಹೆಚ್ಚಿನ ಕಾರ್ಯ ಈ ಕಾರ್ಯಕ್ರಮದಿಂದ  ಸಹಾಯವಾಯಿತು. ನಂತರದಲ್ಲಿ ಊರಲ್ಲಿ  ರಂಗಭೂಮಿ ದಿನಾಚರಣೆ ಕುರಿತು ಕಲಾವಿದರು ಹಾಗು ಶಿಕ್ಷಕರು  ಆದ ಶ್ರೀ ರಾಮಚಂದ್ರ ಬಡಿಗೇರ ಅವರು ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು . ಜನರ  ನಡುವೆ ಮಕ್ಕಳು ಪ್ರದರ್ಶಿಸಿದ ನಾಟಕ ಅಳಿಲು ರಾಮಾಯಣ ಒಂದು ಘಂಟೆಗಳ ಕಾಲ ಪ್ರದರ್ಶನ ನೀಡಿದ್ದು, ಪಾಲಕರ ಮನಸೆಳೆಯಿತು .