ಮಂಗಳವಾರ, ಸೆಪ್ಟೆಂಬರ್ 27, 2011

ರಂಗಶಿಕ್ಷಣ



ರಂಗ ಅಧ್ಯಯನ ನಮಗೆ ಯಾಕೆ ಬೇಕು ? ಅದರಿಂದ ಉಪಯೋಗವೇನು ? ಹೀಗೆ ಎಲ್ಲ ಶಿಕ್ಷಕ ವರ್ಗದಲ್ಲಿ ಸಹಜವಾದ ಚರ್ಚೆ ಇದ್ದೆ ಇರುತ್ತದೆ. ನಾವು ಮಕ್ಕಳಲ್ಲಿ ಕಾಣಬೇಕಾಗಿರುವುದು ಹೊಸತನವನ್ನು , ಮುಕ್ತತೆಯನ್ನು . ಆದರೆ ಈಗಿರುವ ವ್ಯವಸ್ಥೆಯಲ್ಲಿ ಅಥಾವ ನಮ್ಮದೇ ತಪ್ಪು ನಿರ್ಧಾರಗಳಿಂದ ಮಕ್ಕಳಿಗೆ ನಾವು ಕಲಿತ ಶಿಕ್ಷಣವನ್ನೂ , ನಡಾವಳಿಕೆಯನ್ನೂ ಕೇವಲ ಕಂಠಪಾಠ ಹಾಕುವಂತೆ ಮಕ್ಕಳನ್ನು ಹೆದರಿಸಿ, ಬೆದರಿಸಿ ಅವರ ಮುಕ್ತತೆಯನ್ನು ನಾವೇ ನಾಸಾ ಮಾಡಿದ್ದೇವೆ. ಹಿರಿಯರ ಅನುಕರಣೆಯನ್ನು ಮಾಡುತ್ತಲೇ ಸಾಗುತ್ತಿರುವ ಈಗಿನ ಮಕ್ಕಳು ಸೂಪ್ತ ಪ್ರತಿಭೆ ಹೊರ ಹಾಕುವುದಕ್ಕಿಂತ ಕೇವಲ ಹಿರಿಯರ ಕನ್ನಡಿಯಾಗಿ ಸಾಗುತ್ತಿರುವುದು ದುರಂತವೆಂದು ಹೇಳಬೇಕಾಗಿದೆ.

ನನ್ನ ಅನುಭವದ ಒಂದು ಮಾತು. ಶಿಕ್ಷಣ ಪಡೆಯುತ್ತಲೇ ಅಬ್ದುಲ್ ಸಾಬ್ ಒಡನಾಟದಲ್ಲಿ ಬೀದಿನಾಟಕ ಮಾಡುತ್ತಾ ಅದು ಯಾಕೆ ? ತಮಾಷೆಗಾಗಿಯೋ ....., ಮನರಂಜನೆಗಾಗಿಯೋ........,ಇಲ್ಲ ಹೋರಾಟದ ಧೃಷ್ಟಿಯಿಂದಲೋ ಎಂಬುವುದನ್ನು ತಿಳಿಯದೆ ದುಮುಕಿದ್ದು. ಇಲ್ಲಿ ಯಾರು ಹೀಗೆ ಮಾಡಿ ... ಎಂದು ತೋರಿಸಿ ಕೊಡುವಂತಹ ಬುದ್ಧಿವಂತರಿರಲಿಲ್ಲ . ಆಗ ಸಹಜವಾಗಿ ನಮ್ಮ ಕಲಿಕೆಯ ತೀವ್ರತೆ ಹುಡುಕುತ್ತಾ ಹೊಸದರತ್ತ ತುಡಿತ ಸೆಳೆಯುತ್ತಿತ್ತು . ಇಲ್ಲಿ ಅಬ್ದುಲ್ ಕೇವಲ ಮಾರ್ಗದರ್ಶಕರಾಗಿ ನಮ್ಮನ್ನು ಮುಂದಕ್ಕೆ ದೂಡುತ್ತಿದ್ದರು. ಹೊಸತನಕ್ಕೆ ನಾವೇ ಅಣಿಯಾಗುತ್ತ ಸಾಗಿದ್ದು .

ಇಲ್ಲಿ
ನಾವು ಮಕ್ಕಳನ್ನು ಶಾಲೆಯಲ್ಲಿ ಅಥಾವ ಮನೆಯಲ್ಲಿ ಹೇಳಿಕೊಡುವಾಗ ಸ್ವತಂತ್ರ್ಯವಾಗಿ ಬದುಕುವ ಹಾಗೂ ತಮ್ಮ ಪ್ರಶ್ನೇ ಗಳನ್ನು ಬಗೆಹರಿಸಿಕೊಳ್ಳು ವಂಥಹ ವಾತಾವರಣವನ್ನು ನಾವು ಕಲ್ಪಿಸಿಕೊಡಬೇಕಾಗಿದೆ. ಮಕ್ಕಳಿಗೆ ಹೊಸತನದ ದಾರಿಗಳನ್ನು ಹೊರಹಾಕಬೇಕೆ ಹೊರತು ಹೀಗೆಯೇ ಆಗಬೇಕೆಂಬುವುದು ಬಯಸಬಾರದು . ಮೊದಲಿಗೆ ನಾವು (ಶಿಕ್ಷಕರು/ಪಾಲಕರು ) ಮುಕ್ತವಾಗಿದ್ದರೆ , ಸಹಜವಾಗಿ ಮಕ್ಕಳಿಂದ ಸೃಜನಶೀಲವಾದ ಚಿಂತನೆ ಹೊರಬರಲು ಸಾಧ್ಯ . ಅದು ಯಾವುದೇ ಕ್ಷೆತ್ರದಲ್ಲಿದ್ದರು ಒಂದು ಸ್ಥಳವಕಾಶವನ್ನು ಮಾಡಿಕೊಡಬೇಕಾದದ್ದು ಮುಖ್ಯವೆಂದೆನಿಸುತ್ತದೆ.

ಮಕ್ಕಳು ಮಾಡಿದ್ದನ್ನು ಸರಿಯಲ್ಲ ಎನ್ನುವುದಕ್ಕಿಂತ , ದಾರಿಯಲ್ಲಿ ತರಹದ ಸಮಸ್ಯಗಳು ಬರುತ್ತವೆ ... ಹೀಗೆ ಹೋದರೆ ಹೊಸ ಸವಾಲಗಳು ಹುಟ್ಟಿ ಕೊಳ್ಳುತ್ತವೆ ಎಂದು ಅರ್ಥೈಸಬೇಕು , ಹೇರಬಾರದು. ರಂಗಭೂಮಿ ವೃತ್ತಿ ಪರತೆಗೋ , ಹವ್ಯಾಸಕ್ಕೋ ಎಂಬ ಗೊಂದಲಗಳ ನಡುವೆ ಮಕ್ಕಳು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅವರಿಗೆ ಬಿಡಬೇಕು. ಆಯ್ಕೆ ಎಂದಾಕ್ಷಣ ಕೊನೆ ಎಂತಲ್ಲ ಅವರವರ ಯೋಚನೆಗಳಿಂದ ಆಯ್ಕೆಗಳು ಬದಲಾಗುತ್ತವೆ. ರಂಗಶಿಕ್ಷಣ ಎಂಥಹ ಸಮಸ್ಯಗಳನ್ನು ನಿಭಾಯಿಸುವ ಸಾಮರ್ಥ್ಯ ಹೆಚ್ಚುತ್ತದೆ ಎನ್ನುವುದು ನನ್ನ ಆಲೋಚನೆ .

ಗುರುರಾಜ

ಭಾನುವಾರ, ಸೆಪ್ಟೆಂಬರ್ 11, 2011