ಮಂಗಳವಾರ, ಡಿಸೆಂಬರ್ 31, 2019

ನಾನೇನು ತಪ್ಪಾ ಮಾಡಿದೆ ?

ಅಮ್ಮ
ಯಾಕಮ್ಮ ?
ನಾನೇನು ತಪ್ಪಾ ಮಾಡಿದೆ ?
ನನ್ನನ್ನು ದೂಡಿದೆ
ಕಾನ್ವೆಂಟ್ ಗೆ
ಅಲ್ಲಿ
ನಿನ್ನನ್ನು
ಅಮ್ಮ ಎನಬಾರದಂತೆ.
ತಿಳಿಯದ ಭಾಷೆಯಲಿ
ಕರೆದರೆ
ನನ್ನ ಗುರುತಿಸುವೇನಮ್ಮ ?
ಮಣ ಬಾರದ
ಚೀಲದೊರೆಯನ್ನು
ಹೊರೆಸಿ
ನಾನು
ಮಾಡಬೇಕಾದುದ್ದದಾರು
ಏನು ?
ಗೋಲಿ
ಕುಂಟಬಿಲ್ಲೆ
ಆಡಲೇ ಬಾರದಂತೆ
ಮರಕೋತಿಯಾಟ
ಮರತೇ ಬಿಡಬೇಕಂತೆ.
ಅಮ್ಮ
ಬೇಡಮ್ಮ
ನನಗೀ ಕಾನ್ವೆಂಟ್
ನಗುವಿಲ್ಲದಾ ಶಾಲೆ
ನನಗೇಕಮ್ಮ ?

Reharsal

















ವೈದೇಹಿ ಅಮ್ಮ ನೊಂದಿಗೆ

2019 oct

2004 oct

Nenapu




MAke Up Class


ಸೋಮವಾರ, ಡಿಸೆಂಬರ್ 30, 2019

ವರ್ಗಗೊಂಡಿರುವ ಶಿಕ್ಷಕರಿಗೆ ಗೌರವ


















ಶಾಲೆಯಿಂದ ವರ್ಗಾವಣೆಗೊಂಡಿರುವ ನಮ್ಮ ಕನ್ನಡ ಶಿಕ್ಷಕರಾದ ಶ್ರೀ ಮರಿಯಪ್ಪ ಜರಕುಂಟಿ ಹಾಗೂ  ಹಿಂದಿ ಶಿಕ್ಷಕಿ ಶ್ರೀಮತಿ ಶ್ರೀದೇವಿ ಗುಳಬಾಳ ಅವರಿಗೆ ಸನ್ಮಾನಿಸಿದ ಕ್ಷಣ.


Jogula pada-Hejjegalu - jahagir gudadur

ಭಾನುವಾರ, ಡಿಸೆಂಬರ್ 29, 2019

ಕಿನ್ನೂರಿ ಕಿರು ಗೆಜ್ಜೆ ....



ವಿಶ್ವ ಮಾನವ ದಿನಾಚರಣೆ ( ಕುವೆಂಪು ಅವರ ಜನುಮ ದಿನಾಚರಣೆ ) 

ವಿಶ್ವ ಮಾನವ ದಿನಾಚರಣೆ

ಶನಿವಾರ, ಡಿಸೆಂಬರ್ 28, 2019

ರಾಷ್ಟ್ರೀಯ ಗಣಿತ ದಿನಾಚರಣೆಯ ಪತ್ರಿಕಾ ವರದಿ


ರಾಷ್ಟ್ರೀಯ ಗಣಿತ ದಿನಾಚರಣೆ

ದಿನಾಂಕ ೨೪ ರಂದು ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ ಕೊಪ್ಪಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾ ಮಂಡಳಿ (KSCST) ಬೆಂಗಳೂರು ಇವರ ಸಹಯೋಗದಲ್ಲಿ ನಮ್ಮ ಸರಕಾರಿ ಪ್ರೌಢಶಾಲೆ, ಜಹಗೀರಗುಡದೂರಿನಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು KSCST ಹಾಗೂ ಜಿಲ್ಲಾ ಪಂಚಾಯಿತಿ ಕೊಪ್ಪಳದ NRDMS ನ ಆಧಿಕಾರಿಗಳಾದ  ಗುರುಸ್ವಾಮಿ ಯವರು ಸಸಿಗೆ ನೀರೆರಿಯುವುದರ ಮೂಲಕ ಉದ್ಘಾಟಿಸಿ KSCSTಯಿಂದ ಕರ್ನಾಟಕದ ಕೆಲವೇ ಶಾಲೆಗಳಲ್ಲಿ ಇಂಥ ಪ್ರಯೋಗಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದು ಕಳೆದ ಐದು ವರುಷಗಳಿಂದ ಹಲವು ಚಟುವಟಿಕೆಗಳಿಂದ ನಿಮ್ಮ ಶಾಲೆ ಸೃಜನಾತ್ಮಕವಾಗಿ ತೊಡಗಿಸಿಕೊಂಡಿರುವುದಕ್ಕೆ ಸಂತೋಷವಾಗುತ್ತದೆ. ಮಕ್ಕಳು ಹೀಗೆ ನಿರಂತರವಾಗಿ ಅಭ್ಯಾಸದಿಂದ ಹೊರ ಬಾರದಂತೆ ತೊಡಗಿಸಿಕೊಂಡಿದ್ದರೆ ನಿಮ್ಮ ಭವಿಷ್ಯದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯಬಹುದು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಬಂದಿದ್ದ ನಿವೃತ್ತ ಅಧ್ಯಾಪಕರಾದ ಶ್ಯಾಮರಾವ್ ಕುಲಕರ್ಣಿರವರು ಮಕ್ಕಳೊಂದಿಗೆ ಸರಳ ಗಣಿತ ಪ್ರಯೋಗಗಳನ್ನು ಮಾಡಿ ಆಸಕ್ತಿದಾಯಕವಾಗಿ ಮಕ್ಕಳನ್ನು ಸೆಳೆದು, ಗಣಿತದ ಪ್ರಯೋಗಗಳಿಂದ ಹೊರ ಬಾರದಂತೆ ಮಾಡಿ ಇಡೀ ಶಾಲೆಯ ಮಕ್ಕಳನ್ನು ಹಿಡಿದಿಟ್ಟುಕೊಂಡಿದ್ದು ವಿಶೇಷ. ಗಣಿತದ ಪಾಠೋಪಕರಣಗಳನ್ನು ಬಳಸಿ ಕ್ರಿಯಾಶೀಲವಾಗಿ ಗಣಿತವನ್ನು ಅರ್ಥೈಸಿದರು. ಮಕ್ಕಳಿಗೂ ಸಣ್ಣ ಸಣ್ಣ ಚಟುವಟಿಕೆಗಳನ್ನು ನೀಡಿ ಮಕ್ಕಳೇ ಗಣಿತವನ್ನು ಅರ್ಥೈಸಿಕೊಂಡು ಎಲ್ಲರೊಂದಿಗೆ ಹಂಚಿಕೊಳ್ಳುವಂತೆ ಮಾಡಿದ್ದು ನೆನೆಯುವಂಥದ್ದು.
ಶಾಲೆಯ ಕ್ರಿಯಾಶೀಲ ಗಣಿತ ಶಿಕ್ಷಕರಾದ ಪ್ರಶಾಂತ ಕಟ್ಟಿಯವರು ಮಕ್ಕಳಿಗೆ ವೇದಗಣಿತದ ಮೂಲಕ ವೇಗ ಗುಣಕಾರವನ್ನು ಮತ್ತು ಸಂಖ್ಯೆಗಳ ವರ್ಗಗಳನ್ನು ಸುಲುಭವಾಗಿ ಕಂಡುಹಿಡಿಯುವುದನ್ನು ವಿವರಿಸಿದರು.
ಸಮಾರೋಪದ ಕಾರ್ಯಕ್ರಮದಲ್ಲಿ  ಮುಖ್ಯ ಶಿಕ್ಷಕರಾದ ಈಶಪ್ಪ ತಳವಾರ ಅವರು ಮಾತನಾಡಿ ರಾಮಾನುಜನ್ ಅವರ ಜೀವನ ಹಾಗೂ ಅವರ ಶೋಧನೆ ಗಳಿಂದ ನಾವು  ನಮ್ಮ ಮಕ್ಕಳು ಕಲಿಯಬೇಕಾಗಿದೆ. ಅವರ ಚಿಂತನೆಗಳು ನಮ್ಮ ವಿದ್ಯಾರ್ಥಿಗಳಲ್ಲಿ ಹರಿಯಬೇಕಾಗಿದೆ ಎಂದು ತಮ್ಮ ಮಾತುಗಳಲ್ಲಿ ತಿಳಿಸಿದರು. ಇಡೀ ಕಾರ್ಯಕ್ರಮದ ನಿರ್ವಹಣೆಯನ್ನು ಶಿವಪ್ಪ ಇಲಾಳ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಭೀಮರಾವ್ ಸಾಳುಂಕಿ, ಶಾಲೆಯ ವರ್ಚ್ಯುಲ್ ಲ್ಯಾಬ್ ನ ಸಂಯೋಜಕರಾದ ಎಸ್ ಬಿ ಪಾಟೀಲ್ ರು, ಶಿವಪ್ಪ ಇಲಾಳ, ಜಗದೀಶ ಬಾಸಿಂಗದ, ಗುರುರಾಜ ಎಲ್, ತಿಪ್ಪಣ್ಣ ರಾಮದುರ್ಗ, ಇಮಾಂಬಿ ಯಲಬುರ್ಗಿ ಹಾಗೂ ಹುಲಿಗೆಮ್ಮ ಅವರು ಉಪಸ್ಥಿತರಿದ್ದರು.

ಬುಧವಾರ, ಡಿಸೆಂಬರ್ 25, 2019

Kolata



ಶಾಂತಮಣಿ ಅವರ ಶಾಲೆಯ ಕೋಲಾಟ 

ಶನಿವಾರ, ಡಿಸೆಂಬರ್ 21, 2019

ಬುಧವಾರ, ಡಿಸೆಂಬರ್ 18, 2019

Moharamadolaga

ಭಾನುವಾರ, ಡಿಸೆಂಬರ್ 15, 2019

ರಂಗ ಜಂಗಮರು ಪುಸ್ತಕ ಬಿಡುಗಡೆ




ಈಡಿಗರ ವೆಂಕಟೇಶ ರಂಗಶಿಕ್ಷಕರು ರಚಿಸಿದ 
"ರಂಗ ಜಂಗಮರು" ಕೃತಿ ಬಿಡುಗಡೆಯ ಕಾರ್ಯಕ್ರಮ

ಸೋಮವಾರ, ಡಿಸೆಂಬರ್ 9, 2019

ಭಾನುವಾರ, ಡಿಸೆಂಬರ್ 1, 2019

ಸೋಮವಾರ, ನವೆಂಬರ್ 25, 2019

ಕೊಪ್ಪಳ ಜಿಲ್ಲೆಯಾದ್ಯಂತ ಜನ -ಜಲ ಕ್ರಾಂತಿ


ರಂಗಭೂಮಿ ನೆಲೆಯಲ್ಲಿ ನೆಲೆ ನಿಂತ ನಾವು ಸಮಾಜ ಮುಖಿಯಾಗಿ ಸಂದೇಶಗಳನ್ನು ಜನ ಮನಗಳಲ್ಲಿ ಎಚ್ಚರಿಸುವ ಕಾಯಕ ಮಾಡುವುದು ಅತೀ ಜರೂರಿನ ಕೆಲಸವಾಗಿದೆ. ಕಳೆದ ೫-೬ ವರುಷಗಳಿಂದ ನಾನು ನೀರು, ಪರಿಸರದ ನೆಲೆಯಲ್ಲಿಯೇ ನಾಟಕಗಳನ್ನು ರಚಿಸಿ, ನಿರ್ದೇಶಿಸಿರುವೆ. ಶಾಲೆ, ಗ್ರಾಮ ಹಾಗೂ ವಿವಿಧ ನಗರಗಳಲ್ಲಿ ಪ್ರದರ್ಶನಗಳನ್ನು ಮಕ್ಕಳಿಂದ ಪ್ರಸ್ತುತ ಪಡಿಸಿರುವೆ.


ರಾಜೇಂದ್ರಸಿಂಗ್ ಅವರ ಕಾರ್ಯಗಳು, ಮಹಾರಾಷ್ಟ್ರದಲ್ಲಿ ಕೆರೆಗಳ ಪುನಶ್ಚೇತನಕ್ಕಾಗಿ ಪಾನಿ ಫೌಂಡೇಶನ್ ನಡೆಸುತ್ತಿರುವ ಕಾರ್ಯಕ್ರಮಗಳು ಹೀಗೆ ವಿವಿಧ ರಾಜ್ಯ ಜಿಲ್ಲೆಗಳಲ್ಲಿ ನಡೆಸುತ್ತಿರುವ ನೀರಿಗಾಗಿ ನಡೆಸುತ್ತಿರುವ ಚಳುವಳಿಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ನಾಟಕ ಕಟ್ಟುವ ಕಾರ್ಯ ನಿರಂತರವಾಗಿ ಸಾಗಿದೆ. 




ಕಳೆದ ಫೇಬ್ರವರಿ ೭ ನೇ ತಾರೀಖಿನಿಂದ ಪ್ರಾರಂಭವಾದ ಈ ಆಭಿಯಾನ ಇಂದು ತೆರೆ ಬೀಳುತ್ತಿದೆ. ಇದಕ್ಕಾಗಿ ದುಡಿದ ಹಲವಾರು ಕಣ್ಣುಗಳಲ್ಲಿ ಆನಂದವೇ ತುಂಬಿರುತ್ತದೆ. ಕೆರೆಯ ಉಳುವಿಗಾಗಿ ಕೈ ಜೋಡಿಸಿ ಹಣ, ಆಹಾರ ನೀಡಿದ ಅಪಾರ ಶುದ್ಧ ಮನಸ್ಸುಗಳಿಗೆ ಇನ್ನೂ ಹೆಚ್ಚಿನದನ್ನು ದೇವರು ಅವರಿಗೆ ನೀಡಲಿ. ಮಳೆಯು ಬಂದು ಕೆರೆ ತುಂಬಿ ಈ ಭಾಗದ ಎಲ್ಲರೂ ಮತ್ತೋಮ್ಮೆ ಸಂಭ್ರಮಿಸುವ ಕ್ಷಣಗಳು ಬೇಗ ಬರಲಿ. ನಮ್ಮ ಗವಿಮಠದ ಜಾತ್ರೆಯಲ್ಲಿ ರಾಜೇಂದ್ರಸಿಂಗ ಅವರನ್ನು ಕರೆಯಿಸಿದ್ದ ನಮ್ಮ ಶ್ರೀಗಳು ಇಂಥಹ ಹೊಸತೊಂದು ಕಾಯಕಕ್ಕೆ ಕೈ ಹಾಕಿದ್ದು ನಾಡಿನ ಉಳ್ಳವರೆಲ್ಲರೂ ಇನ್ನಷ್ಟೂ ಕೈ ಜೋಡಿಸಿದರೆ ಶ್ರೀಗಳ ನೇತೃತ್ವದಲ್ಲಿ ಜಲಕ್ರಾಂತಿಯನ್ನೇ ಮಾಡಬಹುದು.






ಪೆದ್ದನಕೆರೆ, ಭಾಗೀರಥಿ, ನಮ್ಮೂರಕೆರೆ, ನಮ್ಮ ಕೂಗು ಹೀಗೆ ಪ್ರತಿ ವರುಷವು ನೀರು ನೀರಿನ ನೆಲೆಗಳ ಹುಡುಕಾಟದ ನಾಟಕಗಳನ್ನು ಪ್ರದರ್ಶಿಸಿದ್ದೇವೆ. ಇಲ್ಲಿ ಮಕ್ಕಳೊಂದಿಗೆ ಇನ್ನೂ ಹಲವರಿಗೆ ಎಚ್ಚರಿಕೆ ಮೂಡಿಸುವಂಥ ಕಾರ್ಯವನ್ನು ಮಾಡಲೇಬೇಕಿದೆ. 

ಕೆರೆಯ ಉಳುವಿಗಾಗಿ ನಮ್ಮ ಗವಿ ಮಠದ ಶ್ರೀಗಳು ಆಶೀರ್ವಾದ ನೀಡಿ ಸುತ್ತ ಮುತ್ತಲಿನ ಜನರ ಹೃದಯಕ್ಕೆ ಬೇಕಾದ ಕಾರ್ಯಕ್ಕೆ ಚಾಲನೆ ನೀಡಿದರು. ಮಳೆಗಾಲದಲ್ಲಿ ನಾನು ಕುಷ್ಟಗಿಯಿಂದ ಗಜೇಂದ್ರಗಡಕ್ಕೆ ಸಾಗುವಾಗ ಕೆರೆಯ ಒಂದಿಷ್ಟು ಕುರೂಹ ಕಾಣುತ್ತಿರಲಿಲ್ಲ. ಅದು ರಸ್ತೆಯಷ್ಟೇ ಸಮವಾಗಿ ಅಂಗಳ ಕಾಣಿಸುತ್ತಿತ್ತು. ಹಿಂದೊಮ್ಮೆ ನಿಡಶೇಸಿ  ಮುರಾರ್ಜಿ ಶಾಲೆಗೆ ನಾಟಕ ಮಾಡಿಸಲು ತೆರಳಿದ್ದ ಸಮಯದಲ್ಲಿ ಮುಖವಾಡ ಮಾಡಿಸಲು ಮಣ್ಣು ಬೇಕಿತ್ತು ಆಗ ಇದೆ ಕೆರೆಗೆ ಸಾಗಿದ್ದಾಗ ನನಗೆ ಇದೊಂದು ಕೆರೆನಾ ...? ಎಂಬುವುದು ಆಗ ಕಾಡಿತ್ತು. ಆದರೆ ಇಂದು ಆದ ಕಾರ್ಯ ಅತ್ಯಂತ ಶ್ಲಾಘನೀಯ.