ಬುಧವಾರ, ಅಕ್ಟೋಬರ್ 18, 2017

ನಮ್ಮ ಕೂಗು

ನಮಗೆ ನಮ್ಮದೇ ಕೂಗು ಬೇಕು. ನಮ್ಮ ಕೂಗು ಕೇಳಿಸಿಕೊಳ್ಳದ ಹಲವು ಕಿವಿಗಳು ನಮ್ಮ ಮಧ್ಯ ಇವೆ. ಮನೆಯಲ್ಲಿ ಪಾಲಕರಿಗೇ ನಮ್ಮ ಕೂಗು ಮುಟ್ಟೋಲ್ಲ‌. ಶಾಲೆಯಲ್ಲಿ ಶಿಕ್ಷಕರಿಗೆ ನಮ್ಮ ಕೂಗು ಮುಟ್ಟೋಲ್ಲ. ಓಟ್ ಹಾರಿಸಿಕೊಂಡ ರಾಜಕಾರಣಿಗಳ ಕಿವಿಗೆ ನಮ್ಮ ಕೂಗು ಮುಟ್ಟೋಲ್ಲ ಹೀಗೆ ನಮ್ಮದೇ ಕಂಠದ ಧ್ವನಿ ಯಾರಿಗೂ ಮುಟ್ಟದ ಪರಿಸ್ಥಿತಿ ಬಂದೊದಗಿದೆ. ಕೇಳುವ ಕಿವಿಗಳೇ ಇಲ್ಲದಿರುವ ಈ ಸ್ಥಿತಿಯಲ್ಲಿ ನಾವು ನಮಗಾಗಿ ಕಿವಿಗಳ ಕೊಡುವವರ ಹುಡುಕಾಟ ನಡೆಸಿದ್ದೇವೆ. ಅಥಾವ ಆಲಿಸುವ ವರ್ಗವನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದೇವೆ. ಅಂತಹ ಒಂದು ಪ್ರಯತ್ನ ನಮ್ಮ ಕೂಗು ನಾಟಕ.