ಗುರುವಾರ, ಫೆಬ್ರವರಿ 27, 2020

Sobhane pada

ಕಲಿಕೆ ಹೇಗಿರಬೇಕು ?

ಇಂದಿನ ಮಕ್ಕಳಲ್ಲಿ ನಾವೇನು ಕಲಿಸುತ್ತಿದ್ದೇವೆ ಎಂಬುದನ್ನು ನಾವೇ ಮೊದಲು ಮನಗಾಣಬೇಕಿದೆ. ಪರೀಕ್ಷೆಯೇ ನಮ್ಮ ಅಂತಿಮ. ಅದಕ್ಕೆ ಬೇಕಾದ ತಯಾರಿಯನ್ನು ಮಾತ್ರ ಮಾಡಿದರೆ ನಮ್ಮ ಕೆಲಸ ಮುಗಿಯಿತು ಎನ್ನುವುದಾದರೇ ನಾವು ನಮ್ಮ ಮಕ್ಕಳನ್ನು ಅಂಗವಿಕಲರನ್ನಾಗಿ ಮಾಡುತ್ತಿದ್ದೇವೆ ಎಂದೆನಿಸುತ್ತದೆ.  ಮಕ್ಕಳಿಗೆ  ಕಲಿಸಬೇಕಾದ ಸಾಕಷ್ಟು ಸೂಕ್ಷ್ಮತೆಗಳಿವೆ. ನಾವು ಆ ಕುರಿತು ಆಲೋಚಿಸಲೇ ಬೇಕಾಗಿದೆ. ನಾನೊಬ್ಬ ರಂಗಶಿಕ್ಷಕನಾಗಿ ಮಕ್ಕಳನ್ನು ಗಮನಿಸುವಾಗ ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆಗಳಿದ್ದು ನಾವು ಯಾಕೆ ಗಮನಿಸುತ್ತಿಲ್ಲ ಎಂದೆನಿಸುತ್ತದೆ.
ಮೊದಲಿಗೆ ನಾವು ಮಕ್ಕಳ ಪ್ರಶ್ನೇಗಳಿಗೆ ಎಂದೂ ಉತ್ತರಿಸದೇ ಸಾಗುತ್ತಿದ್ದೇವೆ. ಮಕ್ಕಳ ಗೊಂದಲಗಳಿಗೆ ಮಕ್ಕಳೇ ಪರಿಹಾರ ಕಂಡುಕೊಳ್ಳುವ ಸಂದರ್ಭವನ್ನು ನಾವು ಮಾಡಿ ಕೊಡುತ್ತಿಲ್ಲ. ಯಾಕೆ ನಾವು ಪಾಠದ ತಿರಳನ್ನು ಹೊಸ ಅರ್ಥಗಳನ್ನು ಮಕ್ಕಳೊಂದಿಗೆ ಚರ್ಚಿಸದೇ ಸಾಗುತ್ತಿದ್ದೇವೆ...? ಒಂದು ಪಾಠದ ವಿಷಯ ವಸ್ತುಗೆ  ಸಮಾನವಾಗಿ ಇತರರು ಬರೆದ ಕಥೆಯನ್ನೋ, ಲೇಖನವನ್ನೋ ಅಥಾವ ಕವಿತೆಯನ್ನೋ ಉದಾಹರಿಸದೇ ಹೋಗುತ್ತಿದ್ದೇವೆ ? 

ನಿನ್ನೆ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಒಂದು ತಾಲೂಕಿನಿಂದ ಬಂದ ಶಾಲೆಯ ಮಕ್ಕಳು ಬಿಲ್ಲಹಬ್ಬ ಪಾಠವನ್ನು ನಾಟಕವಾಗಿ ಪ್ರದರ್ಶಿಸುತ್ತಿದ್ದಾಗ ಇತ್ತಿಚಿನ ಸಿನಿಮಾ ಒಂದರ ನಾಯಕನ ಪ್ರವೇಶದ ಸಂಗೀತವನ್ನು ಬಳಸಿಕೊಂಡಿದ್ದರು. ಆದರೆ ಗಮನಿಸಬೇಕಾದ ಅಂಶವೆಂದರೇ ಕಂಸನ ಪ್ರವೇಶದಲ್ಲಿ ಸುಯೋದನ... ಎಂದು ಬಂದಾಗ ಹೇಗೆ ಸ್ವೀಕರಿಸಬೇಕು...
ಮತ್ತೊಂದು ತಂಡ ಸಂಗೊಳ್ಳಿ ರಾಯಣ್ಣನ ನಾಟಕದಲ್ಲಿ ರಾಯಣ್ಣನ ತಾಯಿ ಬ್ರಿಟೀಷ ಅಧಿಕಾರಿಯನ್ನು ಮನೆಯಲ್ಲಿ ರಾಯಣ್ಣನಿಗೆ ತಿಳಿಯದಂತೆ ಮುಚ್ಚಿಡುತ್ತಾಳೆ ಎಂದು ಪ್ರದರ್ಶನದಲ್ಲಿ ತೋರ್ಪಡಿಸುತ್ತಾರೆ. ಈ ನಾಟಕಗಳ ಹಿಂದೆ ಇರುವ ಶಿಕ್ಷಕರು ಮಕ್ಕಳಿಂದ ಆಡಿಸುವ ಮಾತುಗಳು ತಪ್ಪಾಗದಂತೆ ಎಚ್ಚರ ವಹಿಸಬೇಕು. ಇಲ್ಲ ನಾವು ಮಾಡಿದ್ದೆ ಸರಿ ಎನ್ನುವುದಾದರೇ ಮಕ್ಕಳಲ್ಲಿ  ಶಿಕ್ಷಕರಾದ ನಾವೇ ಗೊಂದಲ ಮೂಡಿಸಿದಂತೆ ಆಗುತ್ತದೆ. ನಾವು ಶಿಕ್ಷಕರು ಮಕ್ಕಳನ್ನು ಕೇವಲ ಪರೀಕ್ಷೆಯ ದೃಷ್ಟಿಯನ್ನಿಟ್ಟುಕೊಂಡು ಬೋಧಿಸದೇ ಮಕ್ಕಳು ಪಾಠದ ಕುರಿತು ಸುಲಲಿತವಾಗಿ ಮಾತಾಡುಂತೆ, ಚರ್ಚಿಸುವಂತೆ, ಪಾಠದ ಲೇಖಕನನ್ನೇ ಪ್ರಶ್ನಿಸುವಂತೆ ಮಕ್ಕಳನ್ನು ಬಿಡಬೇಕಾಗಿದೆ. ನಾನು ಹಾಗೂ ನನ್ನ ವಿದ್ಯಾರ್ಥಿಗಳು ಹೀಗೆ ಇರಬೇಕೆಂದು ಬಯಸುವವ ನಾನು.

ಬುಧವಾರ, ಫೆಬ್ರವರಿ 19, 2020

Mallige Mudisere

ಸೋಮವಾರ, ಫೆಬ್ರವರಿ 10, 2020

ಹೊಸತನದ ಹಸಿವು

ಕ್ರಿಯಾ ಶೀಲಾವಾದ ಕಾರ್ಯ ನಿರಂತರವಾಗಿ ಜರುಗತ್ತಲಿದ್ದರೆ ಅಲ್ಲಿ ಹೊಸತನದ ಹಸಿವು ನಿರಂತರವಾಗಿರುತ್ತದೆ. ಅಂತಹ ಕಾರ್ಯ ಶಾಲೆಗಳಲ್ಲಿ  ನಿರಂತರವಾಗಿ ನಡೆದಾಗ ಆಗುವ ಆನಂದವೇ ಬೇರೆ. 

ಶನಿವಾರ, ಫೆಬ್ರವರಿ 8, 2020

Vijaya Karnataka


Samyunktha Karnataka


Udayavani



https://uc.xyz/1up6eX?pub=link Share image

Prajavani


ಸೋಮವಾರ, ಫೆಬ್ರವರಿ 3, 2020

ಶನಿವಾರ, ಫೆಬ್ರವರಿ 1, 2020

ನಾಟಕಕ್ಕೆ ಸ್ವಾಗತ


Dambaru Bandaddu