ಶನಿವಾರ, ಜೂನ್ 9, 2018

Janapada

ಶುಕ್ರವಾರ, ಜೂನ್ 8, 2018

ಪ್ರಜಾವಾಣಿಯಲ್ಲಿ ನಮ್ಮ ಶಾಲೆಯ ಪರಿಸರ ದಿನಾಚರಣೆ

ಪ್ರಜಾವಾಣಿಯಲ್ಲಿ ನಮ್ಮ ಶಾಲೆಯ  ಪರಿಸರ ದಿನಾಚರಣೆಯ ಕುರಿತು  ಬಂದ ವರದಿ 



ಮಂಗಳವಾರ, ಜೂನ್ 5, 2018

ವಿಶ್ವ ಪರಿಸರ ದಿನಾಚರಣೆ



ಇಂದು ಸರ್ಕಾರಿ ಪ್ರೌಢಶಾಲೆ ಜಾಗೀರಗುಡದೂರು ನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪರಿಸರ ದಿನವನ್ನು ವಿಶಿಷ್ಟವಾಗಿ ಆಚರಿಸಿದ ಶಾಲೆಯ ಮಕ್ಕಳು ಸಸಿ ನೆಡುವುದರ ಮೂಲಕ ಚಾಲನೆಯನ್ನು ನೀಡಿ, ಪರಿಸರಕ್ಕೆ ಸಂಬಂಧಿಸಿದ ರಂಗಗೀತೆಗಳನ್ನು ಹಾಡಿ ಎಲ್ಲರ ಕಾಳಜಿಯನ್ನು ಗಟ್ಟಿಗೊಳಿಸಿದರು. ಈಗಾಗಲೇ ನಮ್ಮ ಸಸ್ಯ ಸಮೃದ್ಧಿ ನಾಶದ ಅಂಚಿನಲ್ಲಿ ರುವುದನ್ನು ರಂಗಗೀತೆಗಳಲ್ಲಿ ನೆನಪಿಸುತ್ತಾ, ಮುಂದಿನ ತಲೆಮಾರಿಗಾಗಿ ಉಳಿಸಬೇಕಾದ ಸಸ್ಯ ಸಂಪತ್ತನ್ನು ತಮ್ಮ ರಂಗಗೀತೆಗಳ ಮೂಲಕ ಜಾಗೃತಿಯನ್ನು ಮೂಡಿಸಿದರು. ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಸಂಗನಗೌಡ ಪಾಟೀಲ್ ಗುರುಗಳು ಮಾತನಾಡಿ  ಮಕ್ಕಳಿಂದಲೇ ಹೊಸ ಬದಲಾವಣೆ ಸಾಧ್ಯ. ಪರಿಸರ ಸಂರಕ್ಷಣೆ ಹಾಗೂ ಮುಂದಿನ ತಲೆಮಾರಿಗಾಗಿ ಇಂದಿನ ಪ್ರತಿಯೊಬ್ಬ ಮಕ್ಕಳು ಒಂದೊಂದು ಸಸಿಯನ್ನು ನೆಡಬೇಕೆಂದು ತಿಳಿಸಿದರು.  ಸಸಿ  ನೆಡುವುದರ  ಜೊತೆಗೆ ಸಸಿಯನ್ನು ಬೆಳೆಸಿ ಮರವಾಗಲು ಜಾಗೃತಿಯೂ ಬೇಕು ಎಂದು ತಿಳಿಸಿದರು. ಶ್ರೀ ಶಿವಪ್ಪ ರವರು ಮಾತನಾಡಿ ರಂಗ ಗೀತೆಗಳು ಜನರಲ್ಲಿ ಹುದಗಿರುವ ಪರಿಸರ ಕಾಳಜಿಯನ್ನು  ಜಾಗೃತಿಗೊಳಿಸಿ ಪರಿಸರ ಸಂರಕ್ಷ ಣೆಯಲ್ಲಿ ತೊಡಗುವಂತೆ ಹುರಿದುಂಬಿಸುವ ರಂಗ ಗೀತೆಗಳಾಗಿದ್ದು ಇಂತಹ ರಂಗ ಗೀತೆಗಳಿಂದ ಜನರನ್ನು ಎಚ್ಚರಿಸಲು ಅತ್ಯವಶ್ಯಕವಾಗಿದೆ. ಶಾಲೆಯಲ್ಲಿ ಒಂಬತ್ತು ಮತ್ತು ಹತ್ತನೇ ತರಗತಿಯ ಮಕ್ಕಳು ರಂಗಗೀತೆಗಳನ್ನು ಹಾಡಿ ಪರಿಸರ ಪರಿಸರ ದಿನಾಚರಣೆಗೆ ಹೊಸ ಕಳೆಯನ್ನು ತಂದುಕೊಟ್ಟರು.ನಾಟಕ ಶಿಕ್ಷಕರಾದ ಗುರುರಾಜ ಅವರ ಮಾರ್ಗದರ್ಶನದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ರಂಗಗೀತೆಗಳನ್ನು ಪ್ರಸ್ತುತಪಡಿಸಿದರು. ಜಗದೀಶ, ಮರಿಯಪ್ಪ ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮ ನಡೆಸಿದರು.