ಮಂಗಳವಾರ, ನವೆಂಬರ್ 30, 2021













 

ಭಾನುವಾರ, ನವೆಂಬರ್ 28, 2021

Folk Singer - Haluru Subanna

ಗುರುವಾರ, ನವೆಂಬರ್ 18, 2021

ಎಸ್ ಎಸ್ ಎಲ್ ಸಿ ಮಕ್ಕಳಿಗೆ ದ ರಾ ಬೆಂದ್ರೆ ಅವರ ಸಾಕ್ಷ್ಯಚಿತ್ರವನ್ನು ತೋರಿಸುತ್ತಿರುವುದು


ಎಸ್ ಎಸ್ ಎಲ್ ಸಿ ಮಕ್ಕಳಿಗೆ ದ ರಾ ಬೆಂದ್ರೆ ಅವರ ಸಾಕ್ಷ್ಯಚಿತ್ರವನ್ನು ತೋರಿಸುತ್ತಿರುವುದು 


 

ಬುಧವಾರ, ನವೆಂಬರ್ 17, 2021

HAKKI HARUTHIDE NODIDERA

ಮಂಗಳವಾರ, ನವೆಂಬರ್ 9, 2021

ತೇಜಸ್ವಿನಿ ಬಾದಿಮನಾಳ ೮ ನೇ ತರಗತಿ

ವಿಜಯಲಕ್ಷ್ಮಿ ಹಡಪದ ೮ ನೇ ತರಗತಿ




ಜನಪದೀಯರ ಸಂದರ್ಶನ - ಮಲ್ಲಮ್ಮಜ್ಜಿ

                 
  ಜನಪದೀಯರ ಸಂದರ್ಶನ

ಮಲ್ಲಮ್ಮಜ್ಜಿ


ಸಂದರ್ಶಿಸಿದವರು : ಕು || ವಿನೋದ ಸ.ಪ್ರೌ.ಶಾಲೆ, ಜಹಗೀರಗುಡದೂರ.


ಪರಮನಹಟ್ಟಿ ಊರಿನ ಮಲ್ಲಮ್ಮ ಎಂದರೆ ನೆನಪಾಗುವುದೇ ಅವರ ಜೋಗುಳ ಪದ ಸೋಬಾನ ಪದ ಬೀಸೋಕಲ್ಲಿನಪದ ಇಂತಹ ಮುಂತಾದ ಪದಗಳನ್ನು ಹಾಡುತ್ತಾರೆ. ಜಾತ್ರೆಯ ಸಮಯದಲ್ಲಿ ಊರಿನ ಪುರಾಣದ ಮಧ್ಯ ಮಧ್ಯದಲ್ಲಿ ಪುರಾಣದ  ಅಜ್ಜ ಇವರ ಮತ್ತು ಇವರ ಸಂಗಡಿಗರೊಂದಿಗೆ ಪದಗಳನ್ನು ಹಾಡಿಸುತ್ತಾರೆ. ಇಂತಹ ಸಮಾರಂಭಗಳಲ್ಲಿ ಹಾಡುವುದೆಂದರೆ ಅಜ್ಜಿಗೆ ಬಲು ಇಷ್ಟ. ಇಂದು ಮಲ್ಲಮ್ಮ ಅಜ್ಜಿಯ ಪರಿಚಯ ಮಾಡಿಕೊಳ್ಳುವ ಒಂದು ಸಣ್ಣ ಪ್ರಯತ್ನ ನಮ್ಮದು.


ವಿನೋದ : ನಮಸ್ಕಾರ ಅಜ್ಜಿ ಹೇಗಿದ್ದೀರಿ ? ನಿಮ್ಮ ಆರೋಗ್ಯ ಹೇಗಿದೆ ?

ಮಲ್ಲಮ್ಮ : ನಮಸ್ಕಾರ ಮಗ ನಾನು ಆರಾಮಾಗಿದ್ದೇನೆ ದೇವರ ದಯದಿಂದ.

ವಿನೋದ : ಅರ್ಜಿ ನಿಮ್ಮ ಸ್ವಂತ ಗ್ರಾಮ ಮತ್ತು ತಂದೆ-ತಾಯಿಯವರ ಪರಿಚಯ ಹೇಳಿ.

ಮಲ್ಲಮ್ಮ: ನನ್ನ ಸ್ವಂತ ಊರು ಬಿಳೆಕಲ್ ನಮ್ಮ ತಂದೆ ನಿಂಗಪ್ಪ ತಾಯಿ ಮಾಲವ್ವ.

ವಿನೋದ : ಅಜ್ಜಿ  ನೀವು ಪರಮನಹಟ್ಟಿ ಗೆ ಬರಲು ಕಾರಣ.


ಮಲ್ಲಮ್ಮ: ಈ ಊರು ನನ್ನ ತಾಯಿಯ ತವರು ಮನೆ ನಮ್ಮ ತಾಯಿಗೆ ನಾನು ಮತ್ತು ನನ್ನ ತಂಗಿ ಇಬ್ಬರೇ ಮಕ್ಕಳು ಆದ್ದರಿಂದ ನಾನು ನನ್ನ ತಾಯಿಯ ಆಸ್ತಿ ಇದೇ ಊರಲ್ಲಿ ಇದ್ದಿದ್ದರಿಂದ ನಾನು ಈ ಊರಿಗೆ ಬಂದೆ.


ವಿನೋದ : ಅಜ್ಜಿ ನೀವು ಶಾಲೆಗೆ ಹೋಗಿದ್ದೀರಾ ?


ಮಲ್ಲಮ್ಮ : ಇಲ್ಲಪ್ಪ ಹೋಗಿಲ್ಲ ಆಕಾರದಲ್ಲಿ ಹೋಗಬೇಕು ನಾನು ಸಣ್ಣವಳಿದ್ದಾಗ ನಮಗೆ ಬಹಳ ಬಡತನವಿತ್ತು ಮೂರು ಹೊತ್ತಿನ ಊಟಕ್ಕೆ ನಮ್ಮ ತಂದೆ ತಾಯಿ ನಮಗೆ ತರಲು ಪರದಾಡುತ್ತಿದ್ದರು. ನನ್ನ ದನಗಳು ಮೇಯಿಸಲು ಕಳಿಸುತ್ತಿದ್ದರು ಈಗಿನ ಹಾಗೆ ಆ ಕಾಲದಲ್ಲಿ ಶಾಲೆ ವ್ಯವಸ್ಥೆ, ಊಟ, ಪುಸ್ತಕ ಯಾವುದು ಇರಲಿಲ್ಲ ನಮ್ಮೂರಿನ ಮಾರುತೇಶ್ವರ ದೇವಸ್ಥಾನದಲ್ಲಿ ಒಬ್ಬರು ಮೇಷ್ಟ್ರು ಬರ್ತಾ ಇದ್ರು. ಅದ್ಯಾಕೋ ಏನೋ ನಾನಂತು ಶಾಲೆಗೆ ಹೋಗಲೇ ಇಲ್ಲ. ಈಗ ಅನಿಸುತ್ತೆ ನಾನು ಶಾಲೆಗೆ ಹೋಗಬೇಕಿತ್ತು ಅಂತ.

ವಿನೋದ : ನಿಮಗೆ ಈ ಹಾಡಿನ ಹವ್ಯಾಸ ಹೇಗೆ ಬೆಳಿತು ?


ಮಲ್ಲಮ್ಮ : ನಾನು ಸ್ವಲ್ಪ ದೊಡ್ಡವಳಾದ ಮೇಲೆ ನನ್ನ ತಂಗಿನ ದನ ಮೇಯಿಸಲು ಕಳಿಸಿದರು. ನನ್ನನ್ನು ಕೂಲಿಗೆ ಹಚ್ಚಿದ್ರು. ನಾನು ಕೂಲಿಗೆ ಹೋಗುವಾಗ ಒಂದು ದಿನಕ್ಕೆ 75 ಪೈಸೆಯಿಂದ 2 ರೂಪಾಯಿ ವರೆಗೂ ಕೊಡ್ತಾ ಇದ್ರು.