ಮಂಗಳವಾರ, ಆಗಸ್ಟ್ 20, 2013

ತಾಲಿಂ

                               ಮಕ್ಕಳಲ್ಲಿ ನಾಟಕದ ಕುರಿತು ಕೊಂಚ ಹಿಂಜರಿಕೆ ಇರುವುದನ್ನು ನಾನು ಕಂಡಿದ್ದೇನೆ. ಕಾರಣ ಹಲವಾರು ಇವೆ. ಆದರೆ ನಿಜ ಅರ್ಥದಲ್ಲಿ ವಿವರಿಸುವಲ್ಲಿ ಮಕ್ಕಳಿಗೆ ಮುಟ್ಟಿಸುವ ಹಂತ ಎಲ್ಲೋ ಕಡಿಮೆಯಾಗುತ್ತಿದೆ ಎಂಬ ಭಾವ  ಯಾಕೆಂದರೆ ಅಧುನಿಕ  ರಂಗಭೂಮಿಯ  ಕುರಿತು ಲವಲೇಶ ಕಾಣದ ಈ ಪ್ರದೇಶಗಳಲ್ಲಿ ನಾವು ವಿದ್ಯಾರ್ಥಿಗಳಿಗಾಗಲಿ  ಅವರ ಪಾಲಕರಿಗೆ ಅರ್ಥೈಸುವ ಹೊತ್ತಿಗೆ ಸಮಯ ಮುಗಿದೇ ಹೋಗಿರುತ್ತದೆ. ವಿದ್ಯಾರ್ಥಿಯನ್ನು ಮೊದಲ ಹಂತದಲ್ಲಿಯೇ ರಂಗಭೂಮಿಯ ನಟನನ್ನಾಗಿಸಲು ನಾವಿಲ್ಲಿ  ಪ್ರಯತ್ನ ಎಂದಿಗೂ ಮಾಡಿಲ್ಲ ಕಾರಣ, ವಿದ್ಯಾರ್ಥಿಗಳಿಗೆ ಪ್ರಾಥಮಿಕವಾಗಿ ಪ್ರಪಂಚವನ್ನು ತಮ್ಮ ಕಣ್ಣುಗಳಿಂದಲೇ ನೋಡುವಂಥ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಅದು ಗೂಳೆ ಹೋಗುವ ಇಂಥಹ ಸ್ಥಳಗಳ ಪೋಷಕರು ಮಕ್ಕಳ  ಶೈಕ್ಷಣಿಕ ನೆಲೆಯಲ್ಲಿ ದೃಷ್ಟಿ ಹಾಯಿಸುವುದು ತುಂಬಾ ಕಷ್ಟ. ಆದರೆ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಭಾಗುವಹಿಸುವಿಕೆ ಆರೋಗ್ಯಕರವಾಗಿ ಸ್ಪರ್ಧಾ ಸ್ಪೂರ್ತಿಯಿಂದ ಎಷ್ಟರ ಮಟ್ಟಿಗೆ ಇದ್ದು ನಾವು ಕಂಡಿದ್ದೇವೆ. ಕಾಲೇಜುಗಳಲ್ಲಿ ನಡಿಯುವ ವಿಚಾರ ಸಂಕಿರಣಗಳಲ್ಲಿ, ಗೋಷ್ಠಿಗಳಲ್ಲಿ, ಚರ್ಚೆ - ಸಂವಾದಗಳಲ್ಲಿ ನಮ್ಮ ವಿದ್ಯಾರ್ಥಿಗಳ ಭಾಗುವಹಿಸುವಿಕೆಯನ್ನು ಕಾಣಲು ಆಗುತ್ತಲೇ ಇಲ್ಲ. ಪ್ರೌಢಶಿಕ್ಷಣದ ನಂತರ ಮಕ್ಕಳಲ್ಲಿ ಸಂಘಟನಾ ಸಾಮರ್ಥ್ಯವನ್ನು ಕಾಣಲು ಇಚ್ಚಿಸುತ್ತೇನೆ. ಪ್ರಶ್ನಿಸುವ ಇಲ್ಲವೇ ಹುಡುಕಾಟವನ್ನು ನಡೆಸುವ ಛಲ ಅವರಲ್ಲಿ ಸದಾ ಕಂಡರೆ ಒಳ್ಳೆಯದು. ಆದರೆ ಅದು ಸಾಧ್ಯಾವಾಗಿದೆಯೇ ಎನುವುದು. ಮಕ್ಕಳು ತಮ್ಮ ಪೋಷಕರಿಗೆ ತಿಳಿಸಬೇಕು  ನಾನು ಸರಿಯಾದ ಮಾರ್ಗದಲ್ಲಿಯೇ ಇದ್ದೇನೆ ಎಂದು. ದುಡಿದು ಬದುಕುವ ಜನರಲ್ಲಿ ಮಗ/ಮಗಳ ಕುರಿತು ಶಿಕ್ಷಕರಲ್ಲಿ ವಿಚಾರಿಸುವ ಸಮಯವನ್ನು ಹೊಂದಿಸಿಕೊಳ್ಳದೇ ಇದ್ದರೆ ನಮ್ಮ ಮಕ್ಕಳನ್ನು ನಾವು ಎಂದಿಗೂ ದೊಡ್ಡ ಹುದ್ದೆಯಲ್ಲಿ ಕಾಣಲು ಖಂಡಿತ ಸಾಧ್ಯಾವಿಲ್ಲ. ಮಕ್ಕಳನ್ನು ಶಾಲೆಯಲ್ಲಿ ಭಾಗುವಹಿಸುವಿಕೆಯನ್ನು ಕಂಡು ಅವರಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಭಾಗವಹಿಸುವ ಮಾತುಗಳನ್ನು ಆಡಿದರೆ ಮಕ್ಕಳು ಎಂದಿಗೂ ಇಂದೆ ಉಳಿಯುವುದಿಲ್ಲ ಸದಾ ಮುಂದೆ ಬರುವ ಪ್ರಯತ್ನ ಮಾಡುತ್ತಾರೆ. ಸೋತರು ಹೆದರಬೇಡ ಪ್ರಯತ್ನ ಪಡು ಮತ್ತೇ ನೀ ಗೆಲ್ಲುತ್ತೀ ಎಂದಾಗ ಕಂಡಿತ ಮಗು ತನ್ನ ಆತ್ಮ ವಿಶ್ವಾಸವನ್ನು ಕಳೆದು ಕೊಳ್ಳದೇ ಉನ್ನತದತ್ತ ಮುಖ ಮಾಡುತ್ತಾನೆ. 

ಸೋಮವಾರ, ಆಗಸ್ಟ್ 12, 2013

ಸರ್ಕಾರಿ ಶಾಲೆಯ ರಂಗ ಚಟುವಟಿಕೆಗಳು

ರಂಗ ಚಟುವಟಿಕೆಯ ಆಧಾರದಿಂದ ಮಕ್ಕಳಿಗೆ ಹೊಸತನದ ಪಾಠವನ್ನು ಹೇಳಿಕೊಡಲು ಸಾಧ್ಯವೆಂದು ಪ್ರಸ್ತುತ ನನ್ನ ಸಹೋಧ್ಯೋಗಿಗಳು ಮಾತಾನಾಡುತ್ತಿರುವುದನ್ನು ಕಂಡು ನನ್ನನ್ನು ನಾನೇ ನಂಬಲಾಗಲಿಲ್ಲ. ಈ ವಾತವರಣ ಬರಲು ನಾನು ಐದು ವರ್ಷ (ಡಿಸೆಂಬರ್ ಗೆ) ಕಾಯಬೇಕಾಯಿತು. ಆದರೆ ಇದು ಸಂಪೂರ್ಣ ಸತ್ಯವು ಅಲ್ಲ. ಆ ದಿನಗಳು ದೂರಿಲ್ಲ ಎಂಬ ಭಾವನೆಯು ನನ್ನ ಗೆಳೆಯರು, ಹಿತೈಷಿಗಳು ನನ್ನೊಂದಿಗೆ  ಹಂಚಿ ಕೊಂಡಿದ್ದು ಇದೆ. ನಾಟಕ ಎಂದರೆ ಕೇವಲವಾಗಿ ಮಾತಾನಾಡುತ್ತಿದ್ದ ನಮ್ಮ ಉತ್ತರದ ಭಾಗದಲ್ಲಿ ಹೊಸತನದ ಅಧುನಿಕ ನಾಟಕಗಳ ಕುರಿತು ಪಾಠವನ್ನು ಮಾಡುವ ನಾವು ನಿಲ್ಲಲು ಸಾಧ್ಯಾವೇ ಎಂಬ ಪ್ರಶ್ನೆಗಳು ಹುಟ್ಟಿದ್ದು ಇದೆ. ಪ್ರೌಢಶಾಲೆಗಳಲ್ಲಿ ನಾಟಕ ಶಿಕ್ಷಕರನ್ನು ೧೯೮೨ ರಲ್ಲಿಯೇ ಆಯ್ಕೆ ಪ್ರಾರಂಭಿಸಿದ್ದರೂ ಇಲ್ಲಿಯವರೆಗೂ ೬೦ ರಿಂದ ೭೦ ರ ಸಂಖ್ಯೆಯು ದಾಟಿಲ್ಲ ಆದರೆ ಇದು ಹೆಚ್ಚಿನ ಶಿಕ್ಷಕರನ್ನು  ಮೈಸೂರು ವಿಭಾಗದಲ್ಲಿ ಸರ್ಕಾರ ನಾಟಕ  ಶಿಕ್ಷಕರನ್ನು ತೆಗೆದು ಕೊಂಡಿದೆ. ಗುಲ್ಬಾರ್ಗ ಹಾಗೂ ಬೆಳಗಾವಿ ವಿಭಾಗದಲ್ಲಿ ತುಂಬಾ ಕಡಿಮೆ. 

ಕರ್ನಾಟಕ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಎಷ್ಟೇ ಹಿಂದಿನಿಂದಲೂ ಬಂದರೂ  ಸಮೃದ್ಧಿಯಾಗಿ ಇಂದಿನ  ವಿದ್ಯಾರ್ಥಿಗಳಲ್ಲಿ  ಕಾಣಲು ಸಾಧ್ಯಾವಾಗಿಲ್ಲ. ನೀನಾಸಂ,ರಂಗಾಯಣ, ಶಿವಸಂಚಾರ ರಂಗ ತಂಡಗಳು ನಿರ್ಮಾಣವು ಉತ್ತರ ಕರ್ನಾಟಕದ  ಭಾಗಗಳಲ್ಲಿ ಕಾಣಲು ಸಾಧ್ಯಾವಾಗಿಲ್ಲ. ಗುಲ್ಬಾರ್ಗದಲ್ಲಿ ರಂಗಾಯಣ ನಿರ್ಮಾಣಕ್ಕೆ ಬಡ್ಜ್ ಟ್ ನಲ್ಲಿ ಘೋಷಣೆಯನ್ನು ಮಾಡಿದ್ದಾರೆ ಆದರೆ ನಮ್ಮ ಗ್ರಾಮೀಣ ಜನರಿಗೆ ಹಾಗೂ  ಮಕ್ಕಳಿಗೆ ಇನ್ನೂ ಎಷ್ಟು ವರ್ಷಗಳ ಕಾಲ ಕತ್ತಲೆಯಲ್ಲಿ ಇಡುತ್ತೇವೆ ಎಂದು  ತಿಳಿಯುತ್ತಿಲ್ಲ. ಈಗ ಇರುವ ನಾಟಕ ಶಿಕ್ಷಕರನ್ನು ಅವರ ಕಾರ್ಯಗಳನ್ನು ಅವರ ಶಾಲೆ-ಹಳ್ಳಿಗಳಿಗೆ ಬೇಟಿ ನೀಡಿ ಇಲಾಖೆಯ ತಜ್ಞರು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ರಂಗ ಚಟುವಟಿಕೆಗಳ  ಕಾರ್ಯಗಳಿಂದ ಆದ ಬದಲಾವಣೆಗಳನ್ನು ಮಕ್ಕಳಿಂದಲೇ  ಕಾಣಬಹುದು. ಸಣ್ಣ ಸಣ್ಣ ಕಾರ್ಯ ಚಟುವಟಿಕೆಗಳಿಂದ ಮಕ್ಕಳಲ್ಲಿ ಇರುವ ಉತ್ಸಾಹ ಅವರು ಒಂದು ಸಂಪೂರ್ಣ ನಾಟಕವನ್ನು ಎಲ್ಲ ಪರಿಕರ, ರಂಗ ಸಜ್ಜಿಕೆ, ರಂಗ ವಿನ್ಯಾಸ, ಬೆಳಕಿನ ಹಾಗೂ ವೇಷ ಭೂಷಣಗಳೊಂದಿಗೆ ಮಕ್ಕಳು ವೇದಿಕೆಯ ಮೇಲೆ ಕಂಡರೆ ಅವರಲ್ಲಿ ಹುಟ್ಟುವ ಅಭಿನಯವನ್ನು ಕಾಣುವ ಅವರ ತಂದೆ ತಾಯಿಗಳ ಕಣ್ಣುಗಳಲ್ಲಿ ಉಕ್ಕುವ ಪ್ರೀತಿಯನ್ನು ಕಾಣುವುದೇ ಬಹಳ ಮುಖ್ಯ.


ಮಂಗಳವಾರ, ಆಗಸ್ಟ್ 6, 2013

ಹಾಲು ವಿತರಣೆಯ ಮೊದಲ ದಿನ












                   ಗೆಳೆಯರೊಬ್ಬರು ಈ ಛಾಯ ಚಿತ್ರಗಳನ್ನು ನೋಡಿ ಪ್ಲಾಸ್ಟಿಕ್ ಬಳಕೆ ಮಾಡಬಾರದಿತ್ತು ಎಂದು ಸಲಹೆ ನೀಡಿದರು. ಹೌದು ಅನಿವಾರ್ಯ ಕಾರಣಗಳಿಂದ ನಮ್ಮ ಶಾಲೆಯಲ್ಲಿ ಮೊದಲದಿನ ಪ್ಲಾಸ್ಟಿಕ್ ಬಳಕೆ ಮಾಡಲೇ ಬೇಕಾಯಿತು. ಮಕ್ಕಳಲ್ಲಿ ಸರ್ಕಾರದ ಹೊಸತನಗಳು ಸಂತೋಷವನ್ನು ಉಂಟು ಮಾಡ ಬೇಕಾಗಿರುವುದು. ಹಾಲು ಹಾಲಿನಂಥಹ ಮನಸ್ಸುಗಳಿಗೆ ಉನ್ನತ ಶಿಕ್ಷಣದ ಹಾದಿಯತ್ತ ಮಕ್ಕಳು ಸಾಗಲು ಒಂದು ಒಳ್ಳೆಯ ವೇದಿಕೆಯಾಗಬೇಕಿದೆ. ಶಿಕ್ಷಕರೆಲ್ಲ ಈ ಕಾರ್ಯಕ್ರಮದಲ್ಲಿ  ಮಕ್ಕಳೊಂದಿಗೆ ಭಾಗವಹಿಸಿದ್ದು ಅದು ಯಾವಗಲೂ ನಿರಂತರವಾಗಿ  ಮಕ್ಕಳ ಶೈಕ್ಷಣಿಕ ಸಮಸ್ಯಗಳನ್ನು ಉಚಿತ ಸಮಯದಲ್ಲಿ ಬಗೆಹರಿಸುವುದು ಮಕ್ಕಳ ಜ್ಞಾನ ವೃದ್ಧಿಯಾಗಲು ಸಾಧ್ಯತೆ ಇದೆ.