ಮಂಗಳವಾರ, ಡಿಸೆಂಬರ್ 31, 2013

ಆ ದಿನದ ನೆನಪು ....




                ೧-೧೦-೨೦೧೩ ರಂದು ನಡೆದ ನಮ್ಮ ಪ್ರೌಢಶಾಲೆಯ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಗಣ್ಯವ್ಯಕ್ತಿಗಳಿಂದ ಭಾಷಣ/ಚರ್ಚೆ/ಮಂಥನ ನಡೆದವು. ನಂತರ ಸಾಂಯಕಾಲ ೪.೦೦ ಘಂಟೆಗೆ ಶಾಲೆಯಿಂದ ಊರಿನಡೆಗೆ ಹೊರಟ ಮೆರವಣಿಗೆಯಲ್ಲಿ ಬಾಲಕಿಯರ ಡೊಳ್ಳುಕುಣಿತ ಹಾಗೂ ಗ್ರಾಮದ ಯುವಕರಿಂದ ಹೆಜ್ಜೆಕುಣಿತ ಮೆರವಣಿಗೆಯಲ್ಲಿ ಗಮನ ಸೆಳೆದವು. 

                   ನಂತರ ೭.೦೦ ಘಂಟೆಗೆ ವರ್ಷ ಪೂರ್ತಿ ನಡೆಸಿದ ಸಾಂಸ್ಕೃತಿಕ ವಿಷಯಗಳನ್ನು ಛಾಯಚಿತ್ರಗಳನ್ನು ಜನರಿಗೆ ಪ್ರದರ್ಶನವನ್ನಿಟ್ಟು ೨೫ ನಿಮಿಷದ ಮಕ್ಕಳ ಕಲಿಕೆಯ ಸಾಕ್ಷ್ಯಚಿತ್ರವನ್ನು ತೋರ್ಪಡಿಸಿದರು. ಇದು ನಮಗೆ ಹೆಮ್ಮೆಯ ವಿಷಯವಾಗಿತ್ತು. ಹಾಗೆ "ನಮ್ಮೂರ ಹಬ್ಬ" ನಾಟಕದ ಮೂಲಕ ಮೊಹರಂನ್ನು ನೆನಪಿಸುವಂತೆ ವಿದ್ಯಾರ್ಥಿಗಳು ಕಲಾ ಪ್ರದರ್ಶನವನ್ನು ನೈತಿಕ ಜೀವನದಂತೆ ನಟಿಸಿದರು. ಈ ನಾಟಕಕ್ಕೆ ವಿಷಯ ಸಂಗ್ರಹಣೆ ಮಾಡಿ ನಿರ್ದೇಶಿಸಿದ ಶಿಕ್ಷಕರ ಪಾತ್ರ ಮಹತ್ವದ್ದಾಗಿತ್ತು.

                   ಆ ಕಾರ್ಯಕ್ರಮದಲ್ಲಿ ಶ್ರೀಮತಿ ಅನುಪಮಾ ಪ್ರಕಾಶರವರು ನಮ್ಮೂಎಇನ ಚಿಕ್ಕ ಮಕ್ಕಳೊಂದಿಗೆ ಕುಳಿತುಕೊಂಡು ಮಾತನಾಡುವುದು ತುಂಭಾ ಆಶ್ಚರ್ಯಕರ ಸಂಗತಿಯಾಗಿತ್ತು. ಕೆಲವು ಸಮಯ ಮಳೆರಾಯನ ಆರ್ಭಟದಿಂದ ಕಾರ್ಯಕ್ರಮ ಅಸ್ಥವ್ಯಸ್ಥವಾಗಿತ್ತು. ಇದರಿಂದ ಜನರಲ್ಲಿ ಗೊಂದಲವಾಗಿ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಯಿತು. ಇದು ನಾಟಕ ಶಿಕ್ಷಕರಾದ ಗುರುರಾಜ ಗುರುಗಳಿಗೆ ಬೇಸರವಾದ ಸಂಗತಿಯಾದರು ಕಾರ್ಯಕ್ರಮ ತುಂಭಾ ಅಚ್ಚುಕಟ್ಟಾಗಿ ನೆರವೇರಿತು. ಆಸೆಗಳು ನೂರಾರಿದ್ದು ನೆರವೇರಿಸುವ ಶಕ್ತಿಯಾದ ಶಿಕ್ಷಕ ವೃಂದಕ್ಕೆ ನಾವು ಯಾವಾಗಲು ಚಿರರುಣಿ.

ಧನ್ಯಾವಾದಗಳೊಂದಿಗೆ.

                                                                                                        ಕುಮಾರ ಯಮನೂರಪ್ಪ ಗಂಗೂರ
                                                                                                                            ಹಳೇ ವಿದ್ಯಾರ್ಥಿ