ಭಾನುವಾರ, ಮಾರ್ಚ್ 30, 2014

ಪಠ್ಯ - ರಂಗ - ಪ್ರದರ್ಶನ


          ನಮ್ಮ ಶಾಲೆಯಲ್ಲಿ ಒಂದು ವರ್ಷದ ಕಾರ್ಯಕ್ರಮವನ್ನು ಈಗಾಗಲೇ ನಡೆಸುತಲಿದ್ದು ಮಕ್ಕಳೊಂದಿಗೆ, ನಮ್ಮ ಶಿಕ್ಷಕರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡು ನಂತರದಲ್ಲಿ ನಮ್ಮ ತಾಲೂಕಿನ ಆಯ್ದ ೨೫ ಜನ ಶಿಕ್ಷಕರನ್ನು ನಮ್ಮ ಶಾಲೆಯಲ್ಲಿಯೇ ಶ್ರೀ ಮಲ್ಲೇಶ್ ಪಾವಗಡ ಹಾಗೂ ಶ್ರೀ ಗುರುರಾಜ ನಾಟಕಾ ಶಿಕ್ಷಕರನ್ನು ಆಮಂತ್ರಿಸಿ ಎರಡು ದಿನದ ಕಾರ್ಯಗಾರವನ್ನು ನಡೆಸಲಾಗಿದ್ದು ಅದಕ್ಕೆ ಐ.ಎಫ್,ಎ ನ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ ಪ್ರಕಾಶ ಹಾಗೂ ನಮ್ಮ ಬ್ಲಾಕ್ ನ ಶಿಕ್ಷಣಾಧಿಕಾರಿಗಳು ಎರಡು ದಿನದ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. 

                  ಕಾರ್ಯಗಾರದಲ್ಲಿ ರಂಗಪಠ್ಯವನ್ನು ಸಿದ್ಧಪಡಿಸುವ ಕುರಿತು ಆಯೋಜಿಸಲಾಗಿತ್ತು. ಎಲ್ಲ ಶಿಕ್ಷಕರು ತುಂಭಾ ಉತ್ಸಾಹದಿಂದ ಭಾಗವಹಿಸಿ ಎರಡು ದಿನಗಳ ಸಂಪೂರ್ಣ ಲಾಭವನ್ನು ಪಡೆದುಕೊಂಡರು. 

ಹೆಚ್ಚಿನ ಮಾಹಿತಿಗಾಗಿ ಬೇಟಿ ನೀಡಿ :

ಬುಧವಾರ, ಮಾರ್ಚ್ 26, 2014

ಮಾರ್ಚ್ 27 ವಿಶ್ವ ರಂಗಭೂಮಿ ದಿನಾಚರಣೆ.



ಮಾರ್ಚ್ 27 ವಿಶ್ವ ರಂಗಭೂಮಿ ದಿನಾಚರಣೆ. 

----
ಈ ವರ್ಷದ ವಿಶ್ವರಂಗಭೂಮಿ ಸಂದೇಶ ನೀಡಿರುವುದು ಬ್ರೆಟ್ ಬೈಲೆ ಅವರು. ಅವರ ಸಂದೇಶ ಮತ್ತು ಅವರ ಪರಿಚಯ ಇಲ್ಲಿದೆ ನೋಡಿ..
--
--
ಎಲ್ಲೆಲ್ಲಿ ಮಾನವ ಸಮುದಾಯವಿದೆಯೋ ಅಲ್ಲಲ್ಲಿ ಪ್ರದರ್ಶನದ ಅದಮ್ಯ ಚೇತನ ಪ್ರಕಟಗೊಳ್ಳುತ್ತದೆ. ಸಣ್ಣಸಣ್ಣ ಹಳ್ಳಿಗಳ ಮರದಕೆಳಗೆ, ಮಹಾನಗರಗಳ ಹೈಟೆಕ್ ವೇದಿಕೆಗಳಲ್ಲಿ, ಶಾಲೆಗಳ ಸಭಾಂಗಣದಲ್ಲಿ, ಬಯಲಲ್ಲಿ ಮತ್ತು ದೇವಾಲಯಗಳಲ್ಲಿ, ನಗರದ ಸಂಕೀರ್ಣಗಳಲ್ಲಿ ಸಮುದಾಯ ಕೇಂದ್ರಗಳಲ್ಲಿ, ನಗರದೊಳಗಿನ ನೆಲಮಾಳಿಗೆಗಳಲ್ಲಿ ಜನರು ಒಗ್ಗೂಡಿ ತಾವೇ 
ಸೃಷ್ಟಿಸಿಕೊಂಡ ಅಲ್ಪಕಾಲಿಕ ರಂಗಜಗತ್ತಿನಲ್ಲಿ ಮಾನವ ಜಟಿಲತೆ, ವೈವಿಧ್ಯತೆ ಮತ್ತು ದೌರ್ಬಲ್ಯಗಳನ್ನು ಅಭಿನಯ ಮತ್ತು ಧ್ವನಿಯ ಮೂಲಕ ಜೀವಂತವಾಗಿ ವ್ಯಕ್ತಪಡಿಸುತ್ತಾರೆ. 
ದುಖಿಃಸಲು, ನೆನಪಿಸಿಕೊಳ್ಳಲು, ನಗಲು, ಅವಲೋಕಿಸಲು, ಕಲಿಯಲು, ಧೃಡೀಕರಿಸಿಕೊಳ್ಳಲು, ಕಲ್ಪಿಸಿಕೊಳ್ಳಲು, ದೇವರ ಅವತಾರಗಳನ್ನು ಆವಾಹಿಸಲು ತಾಂತ್ರಿಕ ನೈಪುಣ್ಯತೆ, ಸೌಂದರ್ಯ, ಅನುಕಂಪ ಹಾಗು ಪೈಶಾಚಿಕತೆಗಳಲ್ಲಿರುವ ನಮ್ಮ ಸಾಮಥ್ರ್ಯವನ್ನು ನೋಡಿ ಆಶ್ಚರ್ಯಪಡಲು ನಾವು ಸೇರುತ್ತೇವೆ. ಪುನಶ್ಚೇತನ ಮತ್ತು ಸಬಲೀಕರಣ ಗೊಳ್ಳಲು ವಿಭಿನ್ನ ಸಂಸ್ಕೃತಿಗಳ ಸಂಪತ್ತನ್ನು ಸಂಭ್ರಮಿಸಲು, ನಮ್ಮನ್ನು ಬೇರ್ಪಡಿಸುವ ಗಡಿಗಳನ್ನು ಕಿತ್ತೊಗೆಯಲು ಒಗ್ಗೂಡುತ್ತೇವೆ. 
ಎಲ್ಲೆಲ್ಲಿ ಮಾನವ ಸಮುದಾಯವಿದೆಯೋ ಅಲ್ಲಲ್ಲಿ ಪ್ರದರ್ಶನದ ಅದಮ್ಯ ಚೇತನ ಪ್ರಕಟಗೊಳ್ಳುತ್ತದೆ. ಅದು ಸಮುದಾಯದಲ್ಲಿ ಜನಿಸಿ ವಿಭಿನ್ನ ಸಂಪ್ರದಾಯಗಳ ಮುಖವಾಡಗಳನ್ನು ವೇಷಭೂಷಣಗಳನ್ನು ಧರಿಸಿ ಭಾಷೆ ಲಯ ಮತ್ತು ಸಂಜ್ಞೆಗಳನ್ನು ಮೈಗೂಡಿಸಿಕೊಂಡು ನಮ್ಮಗಳ 
ನಡುವೆ ನೆಲೆಯೂರಿದೆ. ಈ ಪ್ರಾಚೀನ ಚೈತನ್ಯದೊಂದಿಗೆ ಕೆಲಸ ಮಾಡುವ ಕಲಾವಿದರಾದ ನಮ್ಮನ್ನು ಹೃದಯದ ಮೂಲಕ ಅಭಿಪ್ರಾಯಗಳ ಮೂಲಕ ಮತ್ತು ದೇಹದ ಮೂಲಕ ಆ ಚೈತನ್ಯವನ್ನು ಹರಿಸಿ ನಮ್ಮ ಲೌಕಿಕ ವಾಸ್ತವತೆಯಯನ್ನು ಆಕರ್ಷಕ ನಿಗೂಢಗಳನ್ನು ಬಹಿರಂಗ ಪಡಿಸಲು ಒತ್ತಾಯಿಸುತ್ತದೆ. ಬಂಡವಾಳಶಾಹಿ ದಬ್ಬಾಳಿಕೆಯಿಂದ ಲಕ್ಷಾಂತರ ಜನ ಸಂಘರ್ಷ ಮತ್ತು ಸಂಕಷ್ಟಗಳಿಗೆ ಒಳಗಾಗಿ ಬದುಕಲು ಹೋರಾಡುತ್ತಿರುವ ಈ ದಶಕದಲ್ಲಿ ನಮ್ಮ ರಹಸ್ಯಗಳನ್ನು ಕಸಿದುಕೊಂಡು ಗೂಢಚಾರಿಗಳ ಮೂಲಕ ದಾಳಿಮಾಡುವ ಮತ್ತು ನಮ್ಮ ಮಾತುಗಳನ್ನು ನಿರ್ಬಂಧಗೊಳಿಸಿ ಮೂಗುತೂರಿಸುವ ಸಕರ್ಾರದ ಆಡಳಿತದಲ್ಲಿ ಅರಣ್ಯನಾಶ, ಪ್ರಾಣಿಸಂಕುಲದ ನಾಶ, ವಿಷಪೂರಿತವಾಗುತ್ತಿರುವ ಸಾಗರ; ವ್ಯಕ್ತಪಡಿಸಲು ಇವುಗಳಲ್ಲಿ ಯಾವ ಅನುಭವ ನಮ್ಮನ್ನು ಒತ್ತಾಯಿಸುತ್ತದೆ. ಒಂದು ರಾಷ್ಟ್ರ, ಒಂದು ಜನಾಂಗ ಒಂದು ಲಿಂಗ, ಲೈಂಗಿಕ ಆದ್ಯತೆ, ಒಂದು ಧರ್ಮ, ಒಂದು ಸಿದ್ಧಾಂತ ಒಂದು ಸಾಮಾಜಿಕ ಚೌಕಟ್ಟು ಉಳಿದವುಗಳಿಗಿಂತ ಅತ್ಯುತ್ತಮ ಎಂದು ನಮ್ಮ ಮನವೊಲಿಸುವ ಪ್ರಾಬಲ್ಯಪೂರಿತ ಆದೇಶಗಳಿರುವ ಅಸಮಾನತೆಯ ಈ ಜಗತ್ತಿನಲ್ಲಿ ಕಲೆಯು ಸಾಮಾಜಿಕ ಪ್ರಣಾಳಿಕೆಯಿಂದ ಮುಕ್ತವಾಗಿರಬೇಕೆಂಬ ಒತ್ತಾಯವನ್ನು ಸಮಥರ್ಿಸಿಕೊಳ್ಳಲು ಸಾಧ್ಯವೇ? 
ನಾವು ಪರಿಷ್ಕೃತ ಬೇಡಿಕೆಗಳನ್ನು ಪೂರೈಸುವ ಸಭಾಂಗಣದ ರಂಗಸ್ಥಳದ ಕಲಾವಿದರೋ? ಅಥವಾ ನಮ್ಮಲ್ಲಿನ ಶಕ್ತಿಯನ್ನು ಬಳಸಿಕೊಂಡು ಸಮಾಜದ ಹೃದಯ ಮನಸ್ಸುಗಳನ್ನು ತಿಳಿಗೊಳಿಸಿ ಜನರನ್ನು ಒಗ್ಗೂಡಿಸಿ, ಪ್ರೇರೇಪಿಸಿ, ಮುದಗೊಳಿಸಿ ತಿಳಿಹೇಳಿ, ಆಶಾಭಾವನೆ ಹಾಗು ಮುಕ್ತಮನಸ್ಸಿನ ಸಹಯೋಗವನ್ನುಂಟುಮಾಡುವ ಕಲಾವಿದರೋ? 
------------ 
ಬ್ರೆಟ್ ಬೈಲೆ ಕಿರುಪರಿಚಯ: ಬ್ರೆಟ್ ಬೈಲೆ ದಕ್ಷಿಣ ಆಫ್ರಿಕಾದ ನಾಟಕಕಾರ ವಿನ್ಯಾಸಕಾರ ನಿರ್ದೇಶಕ. ಮೂರನೇ ಜಗತ್ತಿನ ಬನ್ಫೈಟ್ (ಕಲಾತಂಡ)ದ ಕಲಾತ್ಮಕ ನಿರ್ದೇಶಕ. ಜಿಂಬಾಬ್ವೆ, ಉಗಾಂಡ, ಹೈಟಿ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಯು.ಕೆ ಮತ್ತು ಯುರೋಪ್, ದಕ್ಷಿಣ ಆಫ್ರಿಕಾದಾದ್ಯಂತ ಪ್ರದರ್ಶನಗಳನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯ ರಂಗಸಂಸ್ಥೆಯ ಮ್ಯೂಜಿಕ್ ಥಿಯೇಟರ್ ನೌ' ಕಾರ್ಯಕ್ರಮದ ತೀಪರ್ುಗಾರರಾಗಿ ಜೋಹಾನ್ಸ್ಬರ್ಗನ ಕಲೆ ಮತ್ತು ಸಂಸ್ಕೃತಿಯ ಆರಂಭ ಪ್ರದರ್ಶನದ ನಿರ್ದೇಶಕರಾಗಿ ದುಡಿದವರು.



ಕನ್ನಡಕ್ಕೆ: ಶ್ರೀಕಂಠ ಗುಂಡಪ್ಪ 

ಹಿರಿಯ ರಂಗಕರ್ಮಿ. ನಂ. 57, 'ಈಶಾನ್ಯ' 3ನೇ ಮೇನ್, 3ನೇ ಕ್ರಾಸ್, ಬ್ಯಾಂಕ್ ಕಾಲೋನಿ, ಬೋಗಾದಿ, ಮೈಸೂರು
0821-2598801, ಮೊ: 998600662

ನಾಟಕ ಮೇಷ್ಟ್ರುಗಳೇಲ್ಲ ಸೇರೋಣ ಬನ್ನಿ


ನಾಟಕ ಮೇಷ್ಟ್ರುಗಳೇಲ್ಲ ಸೇರೋಣ ಬನ್ನಿ

ಬುಧವಾರ, ಮಾರ್ಚ್ 19, 2014

ಬೀಳ್ಕೊಡುಗೆಯ ಮಾತು

            ಕಳೆದ ಎರಡು-ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿದ್ದು ಕಲೆತು ಈಗ ಅಂತಿಮ ಘಟ್ಟ ಪರೀಕ್ಷೆಗಳು. ಇಲ್ಲಿ ಎಷ್ಟರ ಮಟ್ಟಿಗೆ ನೀವು ನಿಮ್ಮನ್ನು ಕಟ್ಟಿ ಕೊಳ್ಳುವಿರೋ ಆಗ ಮಾತ್ರ ಯಶಸ್ಸು ನಿಮ್ಮ ಬೆನ್ನ ಹಿಂದೆಯೇ ಬೀಳುತ್ತದೆ. ಅದು ಬಿಟ್ಟು ನಾನು ಶಾಲೆಯಿಂದ ಕಾಲೇಜಿಗೆ ಹೋಗುತ್ತಿದ್ದೇನೆ ನನ್ನ ತಡ್ಯೋರು ಯಾರು  ಎಂಬ ಆಲೋಚನೆಗಳು ಪುಸ್ತಕವನ್ನು ಬೆರೆಳಲ್ಲಿ ತಿರುಗಿಸುತ್ತಾ ಹೋಗುವುದೇ ನನ್ನ ಯಶಸ್ಸಿನ ಘಟ್ಟ ಎಂದು ಸಾಗಿದರೇ ನಿರಾಶೆ ಮುಂದೆ ಕಟ್ಟಿಟ್ಟಿದ್ದು. ನಿಮ್ಮ ಶ್ರಮದಿಂದ ಹೊಸತನಕ್ಕೆ ಸಾಗಲು ಪೂರ್ವ ತಯಾರಿಯೊಂದಿಗೆ ಸಾಗಿದರೆ ನಿಮ್ಮನ್ನು ಯಶಸ್ಸಿನ ಕದೇ ತೆಗೆದುಕೊಂಡು ಹೋಗುತ್ತದೆ.

ಮಂಗಳವಾರ, ಮಾರ್ಚ್ 18, 2014

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ



   
ಈ ಬಾರಿಯ ಮಕ್ಕಳಲ್ಲಿ ನಾವು ಶೇ ೧೦೦ ರಷ್ಟು ಫಲೀತಾಂಶವನ್ನು ನೀಡುವರೆಂಬ ಬಯಕೆಯಲ್ಲಿ ಇದ್ದೇವೆ. ಅಭ್ಯಾಸವು ಅಷ್ಟೇ ಪರಿಣಾಮಕಾರಿಯಾಗಿ ನಡೆಯುತ್ತಿದ್ದು ಮಕ್ಕಳು ತುಂಬು ಉತ್ಸಾಹದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಗುರುವಾರ, ಮಾರ್ಚ್ 13, 2014

ನಾಟಕದ ಚಿತ್ರೀಕರಣ

ನಮ್ಮೂರ ಹಬ್ಬ - ನಾಟಕ   ನಿ : ಗುರುರಾಜ್ .ಎಲ್

ಮಂಗಳವಾರ, ಮಾರ್ಚ್ 4, 2014