ಭಾನುವಾರ, ಡಿಸೆಂಬರ್ 23, 2018

ಗಾಂಧೀಜಿಯವರ ಜೀವನ ಪಯಣ( ಶೈಕ್ಷಣಿಕ ಲೇಖನ)


                                                  -    ಶ್ರೀ ತಿಪ್ಪಣ್ಣ ರಾಮದುರ್ಗ

ಭಾಷೆ ನಿತ್ಯ ಜೀವನದ ಸಂಜೀವಿನಿ. ಮಾತೃ ಭಾಷೆಯ ಮೂಲಕ ಕಲಿತ ಕಲಿಕೆ ಸಂತಸದಾಯಕವೂ ಹೌದು, ಇಂತಹ ಸಂತಸದಾಯಕ, ಆಸಕ್ತಿಯುತ ಕಲಿಕೆಗೆ ಉತ್ತಮ ನಿದರ್ಶನವೇ, ನಮ್ಮ ಶಾಲೆಯಲ್ಲಿ ದಿನಾಂಕ ೧೭.೧೨.೨೦೧೮ ರಂದು ರಂಗಾಯಣ ತಂಡ ಧಾರವಾಡದವರಿಂದ ಬೊಳವಾರ ಮಹಮ್ಮದ ಕುಂಇ್ ರವರ ಪಾಪು ಗಾಂಧಿ ಬಾಪು ಗಾಂಧಿ ಕಾದಂಬರೊ ಆಧಾರಿತ ನಾಟಕ ನಮ್ಮೆಲ್ಲರನ್ನು ಬಾವುಕರನ್ನಾಗಿಸಿ ಅಂತಪ್ರಜ್ಞೆಯನ್ನು ಮೂಡಿಸಿ ದೇಶದ ನಾಡಿನ ಬಗ್ಗೆ ಗಾಂಧೀಜಿಯವರ ಹುಟ್ಟಿನಿಂದ ಜೀವನದ ಕೊನೆಯ ಕ್ಷಣದವರೆಗಿನ ಮಹತ್ವದ ಘಟನೆಗಳನ್ನು ಆಧಾರಿಸಿದ ಪಾಪು ಗಾಂಧಿ - ಬಾಪು ಗಾಂಧಿ ಕೃತಿಗೆ 'ಕೇಂದ್ರ ಸಾಹಿತ್ಯ ಅಕಾಡೆಮಿ' ಪ್ರಶಸ್ತಿ ಲಭಿಸಿದೆ.

ನಾಟಕದ ಹಿಂದಿನ ದಿನದಿಂದಲೂ ಬಹಳಷ್ಟು ಕುತೂಹಲ ಕೆರಳಿಸಿದ ನಾಟಕ ಇದಾಗಿತ್ತು. ೧೭/೧೨/೨೦೧೮ ರಂದು ಮಧ್ಯಾಹ್ನ ೨.೦೦ ಗಂಟೆಗೆ ನಮ್ಮ ಶಾಲೆಯನ್ನು ಪ್ರವೇಶಿಸಿದ ತಂಡದ ಎರಡು ವಾಹನಗಳನ್ನು ನೋಡಿದಾಗ ನಮ್ಮ ವಿದ್ಯಾರ್ಥಿ ವಿದ್ಯಾರ್ಥಿಯೆಲ್ಲರೂ ಸಂಭ್ರಮಿಸಿದರು. ಕಲಾವಿದರೆಲ್ಲರೂ ಊಟ ಮಾಡುವಷ್ಟರಲ್ಲಿ ನಮ್ಮ ಜಹಗೀರಗುಡದೂರ ಕ್ಲಸ್ಟರ್ ವ್ಯಾಪ್ತಿಯ ಬಹುತೇಕ ಶಾಲೆಗಳ ಆಸಕ್ತಿಯಿರುವಂತಹ ಶಿಕ್ಷಕರೆಲ್ಲರೂ ಸೇರಿಕೊಂಡರು. ಗ್ರಾಮದ ಜನತೆಯು ಪಾಲ್ಗೊಂಡಿತ್ತು.

ನಾಟಕ ಪ್ರಾರಂಭವಾದಾಗ ೩ ಗಂಟೆ ೪೦ ನಿಮಿಷ.... ಗಾಂಧೀಜಿಯವರ ಜನನದೊಂದಿಗೆ ಆರಂಭವಾದ ನಾಟಕ, ಗಾಂಧೀಜಿಯವರ ಬಾಲ್ಯ ಜೀವನದ ತುಂಟಾಟಗಳು, ವಿದ್ಯಭ್ಯಾಸದ ಕುರಿತು ಕಲಾವಿದರು ಮನೋಜ್ಞವಾದ ಅಭಿನಯವನ್ನು ನೀಡಿ ನಮ್ಮೆಲ್ಲರ ಮನಸ್ಸುನ್ನು ಪ್ರಫುಲ್ಲಗುಳಿಸಿದರು. ಗಾಂಧೀಜಿಯವರ ಬಾಲ್ಯಜೀವನದ ಕತೆ ಕೇಳಿ ಮಕ್ಕಳಂತೂ ಸಾಕಷ್ಟು ತಿಳಿದುಕೊಂಡರು.

ಗಾಂಧೀಜಿಯವರ ಬ್ಯಾರಿಸ್ಟರ್ ಪದವಿ ಪಡೆಯಲು ಇಂಗ್ಲೇಂಡಿಗೆ ಹೋದ ದಿನಗಳು ಅದ್ಬುತವಾಗಿ ಮರುಕಳಿಸುವಲ್ಲಿ ಕಲಾವಿಧರ ನಟನೆ ಮತ್ತು ಶ್ರಮ ಇತ್ತು. ಇಡೀ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದರ ಜೊತೆಗೆ ಸಮರ್ಪಕವಾದ ವಿಷಯದ ವಿವರಣೆಯನ್ನು ಅಚ್ಚುಕಟ್ಟಾಗಿ ತಿಳಿಸಿಕೊಟ್ಟರು.
ಗಾಂಧೀಜಿಯವರು ಬ್ಯಾರಿಸ್ಟರ್ ಪದವಿ ಪಡೆದು ಕೆಲಸಕ್ಕೆಂದು ದಕ್ಷಿಣ ಆಫ್ರೀಕಾಕ್ಕೆ ಹೋದ ದಿನಗಳನ್ನು ಕಲಾವಿದರು ರೀತಿ ಮತ್ತು ಅಭಿನಯ ನನ್ನ ಮನಸ್ಸನ್ನು ಸೊರೆಗೊಂಡಿತು. ದ.ಆಫ್ರಿಕಾದಲ್ಲಿ ಗಾಂಧೀಜಿಯವರು ಅನುಭವಿಸಿದ ಯಾತನೆ, ಅವಮಾನ ಭಾರತೀಯರಿಗಾಗುತ್ತಿದ್ದ ಕಿರುಕುಳ ತೊಂದರೆಗಳನ್ನು ವಿರೋಧಿಸಿ ಪ್ರಾರಂಭಿಸಿದ ಹೋರಾಟ ಮನಮುಟ್ಟುವಂತಿತ್ತು.



ನಮ್ಮ ಶಾಲೆಯಲ್ಲಿರುವ ನಾಟಕ ಶಿಕ್ಷಕರಾದ ಗುರುರಾಜ ಹೊಸಪೇಟೆ ಸಾರ್ ರವರು ತಮ್ಮ ಗುರುಗಳಾದ ಶ್ರೀಪಾದ ಭಟ್ಟರವರ ನಿರ್ದೇಶನದಲ್ಲಿ ನಾಟಕ ರಾಜ್ಯದಾದ್ಯಂತ ಪ್ರದರ್ಶನಗೊಳ್ಳತ್ತಿರುವುದರ ಕುರಿತು ತಿಳಿಸಿಕೊಟ್ಟರು. ಇದರಿಂದ ಗುರುವಿನ ಮಹತ್ವ ಮತ್ತು ಹಿರಿಮೆಯನ್ನು ನಮ್ಮ ವಿದ್ಯಾರ್ಥಿಗಳೆಲ್ಲರೂ ತಿಳಿದುಕೊಂಡರು.


ಆಕಸ್ಮಿಕವಾಗಿ ಗಾಂಧೀಜಿಯವರು ಭಾರತಕ್ಕೆ ಬರಬೇಕಾದ ಸಂದರ್ಭ ಬಂದಾಗ ಇಲ್ಲಿಯ ಜನರ ಪರಿಸ್ಥಿತಿ ಕಂಡು ಇಲ್ಲಿಯ ಜನರಿಗೆ ನ್ಯಾಯ ದೊರಕಿಸಿಕೊಡಲು ಭಾರತದಲ್ಲಿಯೇ ಉಳಿಯಲು ತೀರ್ಮಾನಿಸಿದರು. ಭಾರತದಲ್ಲಿ ಗಾಂಧೀಜಿಯವರ ನೇತೃತ್ವದ ಹೋರಾಟವನ್ನು 'ಗಾಂಧೀಯುಗ' ಎಂದು ಕರೆಯಲಾಗುತ್ತದೆ. ಗಾಂಧೀಜಿಯವರ ನಾಯಕತ್ವದಲ್ಲಿ ನಡೆದ ಹೋರಾಟಗಳಿಗೆ ರಾಜಕೀಯ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರ ಮಾರ್ಗದರ್ಶನವಿತ್ತು. ಗಾಂಧೀಜಿಯವರ ಹೋರಾಟದ ಸಾಧನಗಳೆಂದರೇ
ಸತ್ಯಾಗ್ರಹ
ಅಹಿಂಸೆ
ಹಿಂದೂ ಮುಸ್ಲಿಂ ಏಕತೆಯನ್ನು ನಾಟಕದಲ್ಲಿ ಚಿತ್ರಿಸಿದ ರೀತಿ ನಮ್ಮನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಯಿತು.
ಗಾಂಧೀಜಿಯವರ ಅಸಹಕಾರ ಚಳುವಳಿಯನ್ನು ಪ್ರೆರೇಪಿಸಿದ ಜಲಿಯನ್ ವಾಲಬಾಗ್ ಹತ್ಯಾಕಾಮಡ, ಖಿಲಾಫತ್ ಚಳುವಳಿ, ಗಾಂಧೀಜಿಯವರ ಕರೆಗೆ ಜನತೆಯು ಸ್ಪಂದಿಸದ ರೀತಿ ಮನಮುಟ್ಟುವಂತಿತ್ತು. ಸ್ವಾತಂತ್ರ ಬಂದಾಗ ದೇಶದ ಜನತೆ ಮತ್ತು ಹೋರಾಟಗಾರರೆಲ್ಲರು ಸಂಭ್ರಮಿಸುತ್ತಿದ್ದರೆ, ಗಾಂಧೀಜಿಯವರು ಕೊಲ್ಕತ್ತದ ಪ್ರದೇಶದಲ್ಲಿ ಸ್ವಚ್ಛತೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದು ಅವರ  "ಗ್ರಾಮೀಣ ಅಭಿವೃದ್ದಿಯೇ ದೇಶದ ಅಭಿವೃದ್ದಿ " ಎಂಬ ಮಾತಿಗೆ ಕನ್ನಡಿ ಇಡಿದಂತಿತ್ತು.


ನಮ್ಮ ಶಾಲೆಯ ಎಲ್ಲಾ ಶಿಕ್ಷಕ ಸಿಬ್ಬಂದಿ ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಜೊತೆಗೆ ನಮ್ಮ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ಜಹಗೀರಗುಡದೂರ ಮತ್ತು ಬಾದಿಮನಾಳ ಶಾಲೆಯ ಮಕ್ಕಳೆಲ್ಲರೂ ನಾಟಕದ ಕುರಿತು ಪ್ರಶಂಸೆಯ ಮಾತುಗಳನ್ನಾಡುತ್ತಿದ್ದುದು ಕಂಡು ಬಂತು.
ಒಟ್ಟಾರೆಯಾಗಿ ಗಾಂಧೀಜಿಯವರ ಹೋರಾಟದ 150 ನೇ ವರ್ಷಾಚರಣೆಯಲ್ಲಿ  ಗಾಂಧೀಜಿಯ ಬದುಕು ಮತ್ತು ಸೇವೆಯ ಜೊತೆ ಜೊತೆಗೆ ಹೋರಾಟವನ್ನು ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಷ್ಟೇ ಅಲ್ಲದೇ ಸಾರ್ವಜನಿಕವಾಗಿ ಈ ಪ್ರದರ್ಶನ ಯಶಸ್ವಿಯುತವಾಗಿ ಮೂಡಿಬಂತೆಂದು ಹೇಳಲು ಇಚ್ಛಿಸುತ್ತೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher