ಈ ಕವನವನ್ನು ಮಾನ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಡಿ ಡಿ ಪಿ ಐ ಡಯಟ್ ರಾಯಚೂರ್ ರವರು ರಚನೆ ಮಾಡಿದ್ದು .
ಕಲಿಯಲು ಬಂದಿರುವೆ
ಕಲಿಸುವೆಯಾ ಗುರುವೇ?
ಬೆತ್ತವ ಪಕ್ಕಕ್ಕೆ ಸರಿಸು
ಮಮತೆ ಪ್ರೀತಿಯ ತೋರಿಸು
ಬಡವ ನಾನು ಬಂದಿರುವೆ ನಿನ್ನ ನಂಬಿ
ಕಲಿಸುವೆಯಾ ಗುರುವೆ
ಕಾಸಿಲ್ಲ ನನ್ನೊಳು ಮನೆಯಲ್ಲಿ ಕಾಳಿಲ್ಲ
ಕೂಲಿ ಮಾಡದಿದ್ದರೆ ಕೂಳೂ ಸಹ ಇಲ್ಲ
ಪಕ್ಕದ ಮನೆಯ ರವಿ ಶಶಿಯಂತೆ
ಖಾಸಗಿ ಶಾಲೆಗೆ ಸೇರಲು ಕಾಸಿಲ್ಲ
ಬಂದಿರುವೆ ನಂಬಿ ನಿನ್ನ
ಕಲಿಯಲು ಬಂದಿರುವೆ
ಕಲಿಸುವೆಯಾ ಗುರುವೇ
ಹರುಕು ಬಟ್ಟೆ ಮುರುಕು ಗುಡಿಸಲು
ಮಣ್ಣಿನ ಮನೆಗಳವರು ನಾವು
ಮಳೆ ಬಂದರೆ ಭಯ ನೀರೆಲ್ಲ ಮನೆಯೊಳಗೆ
ಗೂಡು ಗ್ರಹಚಾರ ನೆಟ್ಟಗಿಲ್ಲದವರು ನಾವು
ನೆಚ್ಚಿ ನಿನ್ನ ಬಂದಿಹೆವು
ಕಲಿಸುವೆಯಾ ಗುರುವೆ ಕರುಣೆದೋರಿ
ಸುಖ ಸಂತೋಷಗಳ ನಾವರಿಯೆವು
ಮನೆಯಲ್ಲಿ ಬರಿಯ ಗೋಳು
ಬಂಧುಬಳಗ ಇದ್ದರೂ ಇಲ್ಲ ಬಾರರು ಯಾರೂ
ನೋವಿನ ಕಥೆಗಳು ಇವೆ ಬೇಕಾದಷ್ಟು
ಮಲಗಿದಾಗ ಅವುಗಳದ್ದೇ ಕನಸು
ಹಬ್ಬ ಹರಿದಿನಗಳು ನಮಗೆಲ್ಲಿ
ನಂಬಿ ನಿನ್ನ ಬಂದಿಹೆವು
ಕಲಿಸುವೆಯಾ ಗುರುವೇ??
ಕರುಣೆದೋರಿ
ಅಪ್ಪ ಅಮ್ಮ ಕೂಲಿಗಳು
ಕೂಲಿ ಸಿಕ್ಕರೆ ಕೂಳು
ಕೂಲಿ ಸಿಗದಿದ್ದರೆ ಮನೆಯಲ್ಲಿ ಗೋಳು
ಓದಲು ತೆಗೆದರೆ ಪುಸ್ತಕ
ಅಪ್ಪ ಅಮ್ಮನ ಸ್ಥಿತಿಯ ಚಿತ್ರಣ ಹಾಳೆಹಾಳೆಗಳಲ್ಲಿ
ಕಣ್ಣೀರ ಧಾರೆ ತೊಟ್ಟಿಕ್ಕುತ್ತಿದೆ
ಗಂಟಲುಬ್ಬಿ ಬರುತ್ತಿದೆ
ನಮ್ಮದೇತರ ಬಾಳು
ಅಪ್ಪ ಅಮ್ಮಂದಿರಿಗೆ ಕನಸು ನಾನು
ಭವಿಷ್ಯ ನಾನು
ಮುನ್ನುಡಿ ಬರೆ ಗುರುವೇ
ಅಕ್ಷರವ ಕಲಿಸು ಗುರುವೇ
ಕಲಿಸುವೆಯಾ ಗುರುವೇ ಕರುಣೆದೊರಿ
ಅಪ್ಪನ ಹರುಕು ಅಂಗಿ ಅಮ್ಮನ ಹರುಕು ಸೀರೆ
ಬದಲಿಸಬೇಕು ನಾನು
ಎತ್ತರಕ್ಕೇರಬೇಕು ನಾನು
ಮನೆಯ ತಮ್ಮ ತಂಗಿಯರ ಆಶಾಕಿರಣ ನಾನು
ರವಿ ಶಶಿಯ ಮನೆಗಳಂತೆ ಮನೆ ಕಟ್ಟಬೇಕು ನಾನು
ನನಗೂ ಒಳ್ಳೆಯ ಉಡುಪು ಧರಿಸುವಾಸೆ
ಒಳ್ಳೆಯ ಬದುಕು ಬದುಕುವಾಸೆ
ಕಲಿಸುವೆಯಾ ಗುರುವೇ
ಬದಲಿಸಿಕೊಳ್ಳಲು ನನ್ನ ಭವಿಷ್ಯ
ನಾನು ನಿಮ್ಮ ಮಗ ಮಗಳಂತೆ
ಅಪ್ಪನ ನಂತರದ ಅಪ್ಪ ನೀನು
ಅಮ್ಮನ ನಂತರದ ಅಮ್ಮ ನೀನು
ದೇವರನ್ಮೇ ನಿನ್ನಲ್ಲಿ ಕಂಡಿರುವೆ
ಕಲಿಸುವೆಯಾ ಗುರುವೇ ಕರುಣೆತೋರಿ
ನನಗೆ ಕಲಿಯುವಾಸೆ
ಕಲಿಸುವೆಯಾ ಗುರುವೇ
ಕರುಣೆದೋರಿ
ಕೈಮುಗಿದು ಬೇಡುವೆ
ಕಲಿಸು ಗುರುವೇ ಕಲಿಸು
#ಮಹಿಮ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher