ಮಂಗಳವಾರ, ಡಿಸೆಂಬರ್ 18, 2018

ಪಟ್ಯ ನಾಟಕ -2

ನಾಟಕ ಕಟ್ಟುವ ಪೂರ್ವದಲ್ಲಿ ಮಕ್ಕಳನ್ನು ರಂಗಾಟಗಳ ಮೂಲಕ ತೊಡಗಿಸುವುದು ತುಂಬಾ ಉಚಿತವಾದದ್ದು. ಕಾರಣ ಮಕ್ಕಳಿಂದ ನಾವು ಬಯಸುವ ಫಲಿತಾಂಶ ನಿರೀಕ್ಷೆಯಂತೆ ದೊರಕುತ್ತದೆ.
ಮಕ್ಕಳ ದೇಹದಲ್ಲಿ ಸಹಜವಾದ ಒಂದು ಬಿಗುಪು ಇದ್ದೆ ಇರುತ್ತದೆ. ಇಲ್ಲಿ ನಾಟಕಕ್ಕೆ ಬೇಕಾದಂತೆ ನಿಲುವುಗಳಿಗಾಗಿ ಮತ್ತು ದೇಹದಲ್ಲಿರುವು ಬಿಗುಪನ್ನು ಬಿಡಿಸಲು ರಂಗಾಟಗಳು ಸೂಕ್ತ. ಅಂತ ಕೆಲವು ಆಟಗಳು ಇಲ್ಲಿ ವಿವರಿಸಲಾಗಿದೆ.

ಕನ್ನಡಿಯಾಟ

ಕನ್ನಡಿಯನ್ನು ಎಲ್ಲರೂ ದಿನನಿತ್ಯ ಬಳಸುವ ಒಂದು ವಸ್ತು. ನಮ್ಮನ್ನು ನಾವು ಚೆಂದ ಕಾಣಲು, ನಮ್ಮ ಮುಖವನ್ನು ಸುಂದರವಾಗಿ ಕಾಣುವಂತೆ ಮಾಡುಕೊಳ್ಳಲು ಕನ್ನಡಿಯನ್ನು ಬಳಸುತ್ತೇವೆ.  ಮಕ್ಕಳಲ್ಲಿ ನಾವು ಒಬ್ಬನನ್ನು ವ್ಯಕ್ತಿಯನ್ನಾಗಿ ಹಾಗೂ ಮತ್ತೊಬ್ಬನನ್ನು ಕನ್ನಡಿಯನ್ನಾಗಿ  ನಿಲುವಂತೆ ತಿಳಿಸುವುದು. ವ್ಯಕ್ತಿಯ ಪ್ರತಿ ಚಲನೆಯನ್ನು  ಕನ್ನಡಿಯಾಗಿರುವವ ಅನುಕರಣೆ ಮಾಡವಂತೆ ಸೂಚಿಸಬೇಕು. ಅನುಕರಣೆ ಮಾಡುವ ವಿದ್ಯಾರ್ಥಿಗೆ ಮೈಯೆಲ್ಲಾ ಕಣ್ಣಾಗಿರಬೇಕು. ಪ್ರತಿ ಚಲನೆಯನ್ನು ಅನುಕರಿಸುತ್ತಾ ಹೋಗಬೇಕು. ಹೀಗೆ ಅನುಕರಿಸುವ ವಿದ್ಯಾರ್ಥಿಯು ತನ್ನ ಗಮನ ಕೇಂದ್ರೀಕರಿಸುವುದನ್ನು ವೃದ್ದೀಸಿಕೊಳ್ಳುವನು. ಹೀಗೆ ಆಡುವ ಆಟವನ್ನು ಗುಂಪುಗಳಲ್ಲಿ ಮಾಡುವುದರಿಂದ ನಾಟಕ ಕಟ್ಟುವಿಕೆಯಲ್ಲಿ ಪರಿಣಾಮಕಾರಿಯಾಗಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher