ಕಲಿಕೆ ನಮ್ಮ ಭವಿಷ್ಯವನ್ನು ರೂಪಿಸುತ್ತದೆ. ಚಿಕ್ಕವನಿಂದ ಹಿಡಿಸು ನಮ್ಮ ಅರಿವಿಗೆ ಬಂದು ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಲು ಹೆಣಗುವ ಸ್ಥಿತಿ ಇದೆಯಲ್ಲ ಅದು ಪ್ರತಿಯೊಬ್ಬನು ತನ್ನನ್ನು ತಾನು ಕಂಡುಕೊಳ್ಳುವ ಹಾದಿ. ನಾನು ನೀನಾಸಂನಲ್ಲಿ ಇದ್ದಾಗ ನಾಟಕದ ಒಂದು ಮಾತು. "ಪಾಡು ಪಟ್ಟು ಅರಿವು ಮೂಢಬೇಕು" ಸದಾ ಕಟುಕುತ್ತಿರುತ್ತದೆ. ಆದರೆ ಎಂಥ ಪಾಡು? ಹೇಗೆ ಎಂಬ ಸಾವಿರ ಪ್ರಶ್ನೇಗಳು ಸುಳಿದು ಹೋಗುತ್ತಿರುತ್ತವೆ. ಅದು ಇರಲಿ ನಾನು ಕಲಿಕೆಯ ವಿಚಾರಕ್ಕೆ ಮತ್ತೇ ಬರುತ್ತೇನೆ. ಇಂದಿನ ಶಿಕ್ಷಣ ತಜ್ಞರು ಮಕ್ಕಳಿಗೆ ಸುಲುಭ ರೀತಿಯಲ್ಲಿ ಬೋಧಿಸಲು ಹಲವಾರು ಮಾರ್ಗಗಳನ್ನು ಹುಡುಕಿ ನೀಡಿದ್ದಾರೆ. ಆದ್ರೆ ಅದು ಎಷ್ಟರ ಮಟ್ಟಿಗೆ ಮುಟ್ಟುತ್ತಿವೆ ? ಭಯವಾಗುತ್ತೆ. ಮಕ್ಕಳ ಕಲಿಕೆಯಲ್ಲಿ ನಾವು ಸೃಜನಶೀಲತೆಯನ್ನು ನೀಡದೇ ಕೇವಲ ನೋಟ್ಸ್, ಹೋಂ ವರ್ಕ್, ಎಕ್ಸ್ಂ ಅಂತನೇ ಇದ್ರೆ, ಮಕ್ಕಳನ್ನು ನಾವೇ ಹಿಂದಕ್ಕೆ ತಳ್ಳುತ್ತಿದ್ದೇವೆ ಎಂದೆನಿಸುತ್ತದೆ. ಶಿಕ್ಷಣ ತಜ್ಞರ ಯೋಜನೆಗಳನ್ನು ನಾವು ಸರಿಯಾದ ರೀತಿಯಲ್ಲಿ ಪ್ರಯೋಗಿಸಿದರೆ ಅದು ಸಂಪೂರ್ಣವಾಗಿ ಅಭಿವೃದ್ಧಿಯತ್ತ ಸಾಗಬಹುದು. ಸಣ್ಣ ಪುಟ್ಟ ಸಮಸ್ಯಗಳನ್ನು ಅಲ್ಲಿಯೇ ಬಗೆಹರಿಸಿಕೊಂಡು ಸೃಜನಶೀಲವಾದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು, ಮಕ್ಕಳ ಮನೋಭಿವೃದ್ಧಿಯತ್ತ ಚಿತ್ತ ಹರಿಸಬೇಕು.
ನಾನೊಬ್ಬ ನಾಟಕ ಶಿಕ್ಷಕನಾಗಿ ಕೇವಲ ನಾಟಕವನ್ನೇ ಬೋಧಿಸದೇ ಇತರೆ ವಿಚಾರ, ವಿಷಯಗಳತ್ತನು ಗಮನ ನೀಡಬೇಕಾದ ಅನಿವಾರ್ಯತೆ ಇದೆ ಹಾಗೂ ಅದನ್ನು ನಾವು ಗಮನಿಸಲೇ ಬೇಕಾಗಿದೆ. ನಾಟಕ ಕಲಿಕೆಯಿಂದ ವಿದ್ಯಾರ್ಥಿ ತನ್ನ ಗುಣ ಅವಗುಣಗಳನ್ನು ಕಂಡುಕೊಂಡು ತಿದ್ದಿಕೊಳ್ಳುವ ಅವಕಾಶವನ್ನು ರಂಗಮಂಚದಲ್ಲಿ ಕಲ್ಪಿಸಿಕೊಡಲಾಗುತ್ತದೆ. ಅದು ಪ್ರತಿ ಹೈಸ್ಕೂಲ್ ಮಕ್ಕಳಿಗೆ ಇಂದು ಬೇಕಾಗಿದೆ.