೧೯೪೭ ಆಗಷ್ಟ ೧೫ ರಂದು ನಮ್ಮ ಭಾರತ ದೇಶಕ್ಕೆ ಸ್ವತಂತ್ರ ಸಿಕ್ಕಿತು ನಿಜ, ಆದರೆ ಹೈದ್ರಾಬಾದ್ ನಿಜಾಮನ ಅರಸೊತ್ತಿಗೆ ವ್ಯಾಪ್ತಿಗೆ ಒಳಪಟ್ಟಂತ ೧೬ ಜಿಲ್ಲೆಗಳಿಗೆ ಸ್ವತಂತ್ರದ ಅನುಭವ, ಹರ್ಷೋದ್ಘಾರ ಕೇವಲ ಕನಸಿನ ಮಾತಾಗಿ ಹೋಯಿತು. ನಿಜಾಮನ ಹೆಸರಿನಲ್ಲಿ ಅರಾಜಕತೆಯು ತಾಂಡವಾಡುತ್ತಿತ್ತು. ಹಿಂಸಾತ್ಮಕವಾದ ಆಡಳಿತದ ಕಪಿಮುಷ್ಠಿಯಲ್ಲಿ ಜನಸಾಮಾನ್ಯರೆಲ್ಲರೂ ತತ್ತರಿಸಿ ಹೋದರು. ಆಗಬಾರದ ಅನಾಹುತಗಳಾದವು. ಮತಾಂಧರ ದೌರ್ಜನ್ಯದಿಂದ ಮುಗ್ಧರ ಉಸಿರುಗಟ್ಟಿ ಹೋಗಿತ್ತು. ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿ ದಾರಿಕಾಣದ ಅನಾಥ ಬದುಕಿನಂತೆ ಅನಿವಾರ್ಯದ ಜೀವನ ನಡೆಸಬೇಕಾಯಿತು.
ದುಷ್ಟರ ದೌರ್ಜನ್ಯವನ್ನು ಮಟ್ಟಹಾಕಲು ಹಲವಾರು ಹೋರಾಟ ಸಮೀತಿಗಳ, ಸಂಘಟನೆಗಳು ಮತ್ತು ಸ್ವಯಂ ಸೇವಕ ಸಂಸ್ಥೆಗಳು ಹೈದ್ರಾಬಾದ್ ಸಂಸ್ಥಾನದ ವಿರುದ್ಧ ಅನೇಕ ಚಳುವಳಿಗಳು, ಹೋರಾಟಗಳು ಮತ್ತು ಉಗ್ರ ಪ್ರತಿಭಟನೆಗಳು ಪ್ರಾರಂಭಗೊಂಡವು. ಹೋರಾಟಗಳೆಲ್ಲವು ಹಿಂಸಾತ್ಮಕ ರೂಪ ತಾಳಿ ಅನೇಕ ತ್ಯಾಗ ಬಲಿದಾನಗಳಾದವು. ಇದನೆಲ್ಲ ಸೂಕ್ಷ್ಮ ರೀತಿಯಲ್ಲಿ ತಿಳಿದುಕೊಂಡ ಆಗಿನ ಕೇಂದ್ರ ಸರ್ಕಾರದ ಉಪ ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿಗಳಾಗಿದ್ದ ಉಕ್ಕಿನ ಮನುಷ್ಯರೆಂದೇ ಪ್ರಖ್ಯಾತರಾದ ಸನ್ಮಾನ್ಯಸರ್ದಾರ ವಲ್ಲಭಬಾಯಿ ಪಾಟೇಲರು ೧೩ ನೇ ಸೆಪ್ಟಂಬರ್ ೧೯೪೮ ರಿಂದ ೧೭ ಸೆಪ್ತೆಂಬರ್ ೧೯೪೮ ರವರೆಗೆ ಮಿಲಿಟರಿ ಕಾರ್ಯಚಾರಣೆ ಮಾಡಿಸಿದರು. ಈ ಕಾರ್ಯಚರಣೆಯಿಂದ ಮತಾಂಧರ ಅಟ್ಟಹಾಸದ ಆಡಳಿತಕ್ಕೆ ಅಂತ್ಯ ಹಾಡಿತು.
ನಮ್ಮ ಕರ್ನಾಟಕದ ಆಗಿನ ಅವಿಭಜಿತ ಜಿಲ್ಲೆಗಳಾದ ಬೀದರ, ಗುಲ್ಬರ್ಗಾ ಮತ್ತು ರಾಯಚೂರು ನಿಜಾಮನ ಆಡಳಿತಕ್ಕೋಳಾಪಟ್ಟಿದ್ದವು. ಇವೇ ಈಗಿನ ಬೀದರ್, ಗುಲ್ಬರ್ಗಾ,ಯಾದಗಿರಿ, ರಾಯಚೂರ, ಕೊಪ್ಪಳ ಮತ್ತು ಬಳ್ಳಾರಿ ಈ ಆರೂ ಜಿಲ್ಲೆಗಳು ಅರಸೊತ್ತಿಗೆಯ ಆಡಳಿತಕ್ಕೆ ಸಿಕ್ಕು ವಿಲ-ವಿಲನೇ ಒದ್ದಾಡಿಡ ನತದೃಷ್ಟ ತೀರಾ ಹಿಂದುಳಿದ ಜಿಲ್ಲೆಗಳು. ಈ ಜಿಲ್ಲೆಗಳಿಗೆ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸಿ ನಾಗರೀಕ ಪ್ರಗತಿಗಾಗಿ ಪ್ರಯತ್ನಿಸಿ ಸಂವಿಧಾನದ ೩೭೧ ನೇ ಕಲಂ ನ್ನು ಜಾರಿಗೊಳಿಸಿದ ಸರ್ಕಾರಕ್ಕೆ ಕನ್ನಡಿಗರ ಅನಂತ ವಂದನೆಗಳು.
(ಮುಂದುವರಿಯುವುದು)
ಶಿವಪ್ಪ ಆರ್. ಇಲಾಳ
ಶಿಕ್ಷಕರು
ಸರಕಾರಿ ಪ್ರೌಢಶಾಲೆ,
ಜಹಗೀರಗುಡದೂರ
ಕರೆಗಾಗಿ : 9731981167
ಶಿವಪ್ಪ ಆರ್. ಇಲಾಳ
ಶಿಕ್ಷಕರು
ಸರಕಾರಿ ಪ್ರೌಢಶಾಲೆ,
ಜಹಗೀರಗುಡದೂರ
ಕರೆಗಾಗಿ : 9731981167