ಇಂದು ತುಂಭಾನೇ ಹಿಂಸೆಯಾಗಿದೆ. ಶಾಲೆಯ ಆರು ಕೋಣೆಯ ಬೀಗಗಳನ್ನು ಮುರಿದು ಕಳ್ಳತನ ನಡೆದು ಹೋಗಿದೆ. ಪೋಲೀಸ್ ಜೀಪುಗಳು ಮಕ್ಕಳು ಓಡಾಡುವ ಮೈದಾನದಲ್ಲಿ ಬಂದು ನಿಲ್ಲುವಂತಾಗಿದೆ. ದಿನ ಪೂರ್ತಿ ಮಕ್ಕಳು ಶಿಕ್ಷಕರು ಹೊರಗಡೆ ಇರಬೇಕಾದ ಸ್ಥಿತಿ. ಮಕ್ಕಳಿಗಾಗಿ ನೀಡಿದ್ದ ಲ್ಯಾಪ್ ಟಾಪ್, ಎಲ್.ಇ.ಡಿ,ಬ್ಯಾಟರಿ, ಇನ್ ವೇಟರ್ ಗಳನ್ನು ಕದ್ದು ಒಯ್ಯಲಾಗಿದೆ.. ಶಾಲೆಯ ತುಂಬಾ ಪೋಲಿಸ್ ಜೀಪು, ಊರ ಜನ, ನಾಯಿ ಶೋಧನೆಯ ಕಾರ್ಯ ಬಿರುಸಿನಿಂದ ನಡೆದಿದೆ. ಮಕ್ಕಳಿಗೆ - ಶಿಕ್ಷಕರಿಗೆ ಆದ ಸಂಕಟ, ಹಿಂಸೆ ಅಷ್ಟಿಷ್ಟಲ್ಲ. ಸರಣಿ ಪರೀಕ್ಷೆ ನಡೆಯುತಲಿದ್ದು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಆದ ದಿನದ ನಷ್ಟ, ಈ ಕಳುವಾದ ಸಾಮಾನುಗಳ ಬಳಕೆ ಮಕ್ಕಳಿಗಾಗಿಯೇ ಇರಬೇಕಾದದ್ದು, ಅದು ಯಾರ ಹೊಟ್ಟೆಗಾಗಿ ಅಲ್ಲ. ಸಮಸ್ಯ ಬಗೆ ಹರಿದು ಒಳ್ಳೆಯ ದಿನಗಳು ಬರಲಿ. ಮಕ್ಕಳ ಭವಿಷ್ಯದ ಜೊತೆ ಆಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ.