ಶನಿವಾರ, ಫೆಬ್ರವರಿ 7, 2015

ಮನೋವಿಕಾಸದತ್ತ

ಇಂದಿನ ದಿನಗಳಲ್ಲಿ ಶಿಕ್ಷಣ, ಮಕ್ಕಳ ಮುಂದಿನ ಭವಿಷ್ಯದ ಕುರಿತು ನಾವು ತುಂಭ ಗಂಭೀರವಾಗಿ ಆಲೋಚಿಸುವ ಪ್ರಸಂಗ ಬಂದೊದಗಿದೆ. ಸಿ.ಸಿ.ಇ ಗೊಂದಲಗಳಲ್ಲಿ ಎಲ್ಲ ಶಿಕ್ಷಕರು ಕಾಣಿಸಿಕೊಳ್ಳುತ್ತಿದ್ದಾರೆ. ಯಾರ ಹತ್ತಿರ ಮಾತಾಡಿದರು ಯಾಕಾದರು ಬಂತೇನು ಈ ಸಿ.ಸಿ.ಇ ಎಂದು ಮಾತನಾಡುತ್ತಲೇ ವಿಚಾರಗಳನ್ನು  ಸರಳ ರೀತಿಯಲ್ಲಿ ಬಗೆಹರಿಸುವುದನ್ನು ಬಿಟ್ಟು ಸಾಕಷ್ಟು ತಮ್ಮನ್ನು ಹಾಗೂ ವ್ಯವಸ್ಥೆಯನ್ನು ಹಳಿಯುವುದರಲ್ಲಿಯೇ ಕಾಲ ನೂಕೂತ್ತಾರೆ. ದಾರಿಯಲ್ಲಿ ಒಬ್ಬ ಶಿಕ್ಷಕರು ನನ್ನನ್ನು ಕಂಡು "ಇನ್ನೂ ಮುಂದೆ ಶಾಲೆಯಲ್ಲಿ ಬರೀ ನಿಮ್ಮ ನಾಟಕಗಳೇ ನಡೆಯುತ್ತೇ ನೋಡ್ರಿ, ಈ ಸಿ.ಸಿ.ಇ ಅದೇ ಹೇಳೋದು. ಪಾಠವನ್ನು ನಾಟಕ ಮಾಡಿ ಅಂತ" ಹೇಳುತ್ತಿದ್ದರು. ಆ ಶಿಕ್ಷಕರು ತಾವು ಏನನ್ನು ಮಾತನಾಡುತ್ತಿದ್ದಾರೆ ಎಂದು ಸಣ್ಣ ಆಲೋಚನೆಯು ಅವರಿಗೆ ಹೊಳೆಯದೇ ಮಾತನಾಡುವುದನ್ನು ಕಂಡಾಗ ನನಗೆ ಭಯ ಹಾಗೂ ಆತಂಕ ಶುರುವಾಯಿತು. ಶಿಕ್ಷಕರೇ ಹೀಗೆ ಗೊಂದಲದ ಮಾತು, ವಿಚಾರ ಮಾಡುವಾಗ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಈ ಪರಿಸ್ಥಿತಿಯನ್ನು ಏದುರಿಸಬೇಕು. ವಿದ್ಯಾರ್ಥಿಗಳಿಗೆ ಯೋಜನೆಗಳನ್ನೇ ಮಾಡಿಕೊಂಡು ಬರಲು ನೀಡಿ ಕಳುಹಿಸಿದ ಮಕ್ಕಳು ಗೊಂದಲಗಳಲ್ಲಿ ಬಿದ್ದು , ಕೆಲವು ದಿನ ಶಾಲೆ ಬಿಟ್ಟು ಮನೆ ಇಲ್ಲವೇ ಹೊಲ ಕೊನೆಗೆ ದುಡಿಯಲಿಕ್ಕೆ ಎಲ್ಲಿಗಾದರೂ ಕೂಲಿಗೂ ಪಲಾಯನ ಮಾಡುವ ಪರಿಸ್ಥಿತಿ ತನ್ನಿಂದ ತಾನೇ ಸೃಷ್ಟಿಯಾಗಿದೆ.

ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಹೆಚ್ಚು ಒತ್ತು ನೀಡುವ ಸ್ಥಿತಿಯಲ್ಲಿ ನಾವಿಂದು ಇಲ್ಲ. ಕಾರಣ ನಮ್ಮ ಶಿಕ್ಷಕರ ಒತ್ತಡಗಳು. ಪ್ರಾಥಾಮಿಕತೆಯಿಂದ ಬರುವಾಗ ಇರಬೇಕಾದ ಸಣ್ನ ತಯಾರಿಯು ಮಕ್ಕಳಲ್ಲಿ ಇಲ್ಲದಾಗ ಪ್ರೌಢಶಾಲಾ ಶಿಕ್ಷಕರ ಬೋಧನೆ ವಿದ್ಯಾರ್ಥಿಗಳಿಗೆ ತಲುಪುವುದು ಕಠಿಣ. ಇನ್ನೂ ಮಕ್ಕಳ ಪ್ರಜ್ಞೆಯ ಕುರಿತು ವಿಚಾರ ಮಾಡುವಾಗ ಸಾಕಷ್ಟು ಗೊಂದಲಗಳು ಪ್ರಾರಂಭವಾಗುತ್ತವೆ. ನಮಗೆ ದೊರಕುವ ಕಡಿಮೆ ಅವಧಿ ಇಂದು ಸಾಕಾಗುತ್ತಿಲ್ಲ. ಇದ್ದ ಅವಧಿಯಲ್ಲಿ  ನಾನು ಮಾಡಬೇಕಾದ ಕಾರ್ಯ ಅತ್ಯಂತ ಸೂಕ್ಷ್ಮದಾಗಿದೆ. ನನ್ನ ಸಮಯ ಹೊಂದಣಿಕೆಯಲ್ಲಿಯೇ ಎಷ್ಟೋ ಮಕ್ಕಳು ಮುಂದೆ ಸಾಗಿ ಹೋಗಿ ಕಳೆದಾಗ ನನ್ನನ್ನು ನಾನು ಜರಿದುಕೊಳ್ಳುವುದೇ ಉಳಿದ ದಾರಿ.