ಮೊನ್ನೆಯ ದಿನ ಶಾಲೆಯ ಕಳವು ಪ್ರಕರಣದಿಂದ ಇಡೀ ಶಾಲಾ ಸಿಬ್ಬಂದಿ ವರ್ಗದಲ್ಲಿ ಅತ್ಯಂತ ಆತಂಕ ಹಾಗೂ ದುಃಖ ಮಡುಗಟ್ಟಿತ್ತು. kscst ರಾಜ್ಯ ಕಛೇರಿಯಿಂದ ನೀಡಲ್ಪಟ್ಟ ಮಕ್ಕಳ ಕಲಿಕೆಗಾಗಿ ೮,೯ ಹಾಗೂ ೧೦ ನೆ ತರಗತಿಯ ದೃಶ್ಯ ಪಾಠಗಳನ್ನು ಚಿಕ್ಕ ಲ್ಯಾಪ್ ಟಾಪ್ ನಲ್ಲಿ ತುಂಬಿ ನೀಡಲಾಗಿತ್ತು. ಅದು ವಿದ್ಯಾರ್ಥಿಗಳಿಗೆ ಬಿಟ್ಟರೆ ಮತ್ತಾರಿಗೂ ಉಪಯೋಗವಿಲ್ಲ. ಅಲ್ಲದೇ ಅದು ನಮ್ಮ virtual lab ಲ್ಲಿ ಮಾತ್ರ ಬಳಕೆಗೆ ಬರುವಂತೆ ಮಾಡಿದ್ದು, ಅದು ಎಲ್ಲಿಯು ಉಪಯೋಗಕ್ಕೆ ಬರುವುದೇ ಇಲ್ಲ. ಅಷ್ಟೇ ಅಲ್ಲದೇ LED ಟಿ.ವಿ, ಬ್ಯಾಟರಿ, ಇನ್ ವೇಟರ್ ಹಾಗೂ ಚರ್ಜಾರ್ ಗಳನ್ನು ಶಾಲೆಯ ಬೀಗಗಳನ್ನು ಮುರಿದು ಕದ್ದು ಒಯ್ದಿದ್ದಾರೆ. ಮಕ್ಕಳ ಅಭ್ಯಾಸಕ್ಕೆ ಪೂರಕವಾದವುಗಳನ್ನೇ ತೆಗೆದುಕೊಂಡು ಹೋದಾಗ ಅದರಿಂದ ತಮಗೇನು ಲಾಭ...? ಮಕ್ಕಳ ಅಭ್ಯಾಸಕ್ಕೂ ಹಾನಿ ಮಾಡುವ ಇಂಥಹ ನಮ್ಮ ನಡುವಿನವರಿಗೆ ಏನೆಂದು ಹೇಳಬೇಕು.
ಆ ನೋವಿನಿಂದ ಹೊರ ಬರಲು ಆಗದೇ ನಮ್ಮ ಎಲ್ಲ ಶಿಕ್ಷಕ ವೃಂದ ಸಂಕಟಪಡುತ್ತಿದೆ. ಅದೇ ನಿನ್ನೆಯ ದಿನ ನಮ್ಮ ಶಾಲೆಯ ಆನಂದಪ್ಪ ಕುರಿಯವರು ಒಂದು ಚಿಕ್ಕ ಮಗುವಿನ ಪ್ರಾಣ ಉಳಿಸಿ ಅಭಿನಂದಕ್ಕೆ ಅರ್ಹರಾಗಿದ್ದರೆ. ಟಾಟಾ ಎ.ಸಿ ಯಲ್ಲಿ ಗಜೇಂದ್ರಗಡದಿಂದ ಶಾಲೆಗೆ ಬರುವಾಗ ಹಿರೇಗೊಣ್ಣಗರದ ಪ್ರಾಥಮಿಕ ಶಾಲೆಯ ಬಳಿ ಇರುವ ಹೊಲದಲ್ಲಿ ನಡೆದ ಘಟನೆ. ರಸ್ತೆಯ ಪಕ್ಕದಲ್ಲಿಯೇ ಹೊಲಕ್ಕಾಗಿ ನೀರು ನಿಲ್ಲಲು ನಿರ್ಮಿಸಿದ ತೊಟ್ಟಿ (ದೋಣಿ) ಯಲ್ಲಿ ಇರುವ ಬೋರ್ ಅದು. ೨ ರಿಂದ ೩ ಅಡಿ ಆಳವಿರುವ ತೊಟ್ಟಿಯಲ್ಲಿ ಕರೆಂಟ್ ಇದ್ದಾಗ ಹೊಲದವರು ಬೋರ್ ನ್ನು ಚಾಲೂ ಮಾಡೋರು. ಅಲ್ಲಿಯೇ ಪಕ್ಕದಲ್ಲಿರುವ ಪ್ರಾಥಮಿಕ ಶಾಲ ಮಕ್ಕಳು ಇತ್ತ ಹಾಯುವುದು ಕಡಿಮೆ. ಶಾಲೆಯ ಮಕ್ಕಳಿಗೆ ಈ ನೀರು ಅಂಥಹ ಅಪಾಯದ ಸ್ಥಿತಿಯನ್ನೇನು ತಂದು ಒಡ್ಡುವಂಥದ್ದಲ್ಲ. ಆದರೆ ನಮ್ಮ ಪಾಲಕರ ಬೇಜಾವಬ್ದಾರಿಯಿಂದಾಗಿ ಕೆಲವು ಅನಾಹುತಗಳು ಜರುಗಿದ್ದವನ್ನು ಕಂಡಿದ್ದೇವೆ. ಅಂಥಹ ಕ್ಷಣ ಇದಾಗದಿದ್ದದೇ ಒಳ್ಳೆಯದು.
ನಮ್ಮ ಶಾಲೆಯ ಧ್ವಿತೀಯ ದರ್ಜೆ ಸಹಾಯಕರಾದ ಆನಂದಪ್ಪ ಕುರಿಯವರು ಎಂದಿನಂತೆ ಶಾಲೆಗೆ ಹತ್ತಿರದ ಗಜೇಂದ್ರಗಡದಿಂದ ಬಿಸಿಯೂಟಕ್ಕಾಗಿ ತರಕಾರಿಯನ್ನು ತರುವುದು ದಿನನಿತ್ಯದ ಪದ್ಧತಿ. ಹಾಗೇ ಮೊನ್ನೆ ಟಾಟಾ ಎಸಿ ಯಲ್ಲಿ ಬರುವಾಗ ಒಂದು ೭-೮ ವರ್ಷದ ಮಗು ಈ ತೊಟ್ಟಿಯ ಕಡೇ ಚಿಕ್ಕ ಬಿಂದಿಗೆಯನ್ನು ಹಿಡಿದು ನೀರು ತರಲು ಬಂದಿದೆ. ಆ ಮಗುವಿನ ಹಿಂದೆ ೨-೩ ವರ್ಷದ ಮಗು ಆಡುತ್ತಾ ಹಾಗೇ ಬಂದಿದೆ. ಬಿಂದಿಗೆಯನ್ನು ನೀರು ಬರುತ್ತಿರುವ ಕೊಳವೆ ಬಳಿ ಈ ಮಗು ತೆಗೆದುಕೊಂಡು ಹೋಗಿ ಬಿಂದಿಗೆ ತುಂಬಿಸುವ ಪ್ರಯತ್ನದಲ್ಲಿದ್ದಾಗ ಚಿಕ್ಕ ಮಗು ನೀರಿನೊಳಗೆ ಹಾಗೇ ಸಾಗುತ್ತಾ ಬಂದು ಬಿದ್ದು ಬಿಟ್ಟಿದೆ. ಇದನ್ನು ಕಂಡಾ ಮಗು ಬಿಂದಿಗೆ ಬಿಟ್ಟು ಏನು ಮಾಡಬೇಕು ಎಂದು ತಿಳಿಯದೇ ಜೋರಾಗಿ ಕಿರುಚಲು ಪ್ರಾರಂಭಿಸಿದೆ. ಸುತ್ತಾ ಮುತ್ತಾ ಯಾರು ಸ್ಥಳೀಯರು ಇಲ್ಲ. ಶಾಲೆ ತರಗತಿಗಳು ಪ್ರಾರಂಭವಾಗಿದ್ದರಿಂದ ಶಿಕ್ಷಕರು ಹಾಗೂ ವಿದ್ಯಾರ್ಹಿಗಳು ಕೋಣೆಯೊಳಗೆ ಸೇರಿದ್ದಾರೆ. ಅದೇ ಸಮಯಕ್ಕೆ ಗೊಣ್ಣಗರದ ಕಡೇಯಿಂದ ಬಾದಿಮನಾಳ ಕ್ರಾಸ್ ಕಡೇ ಸಾಗುತ್ತಿದ್ದ, ಗಾಡಿಯಲ್ಲಿ ನಮ್ಮ ಆನಂದಪ್ಪ ಕುರಿಯವರ ಗಮನ ಈ ಮಕ್ಕಳ ಮೇಲೆ ಬಿದ್ದಿದ್ದು. ತಕ್ಷಣವೇ ಗಾಡಿ ನಿಲ್ಲಿಸಿ ಓಡಿದ್ದಾರೆ. ಮಗುವಿ ಕೇವಲ ಕೈ ಮಾತ್ರ ಕಾಣತ್ತಿದ್ದು ತಕ್ಷಣವೇ ಆ ಮ್ಗುವನ್ನು ನೀರಿನಿಂದ ಎತ್ತಿ ರಕ್ಷಣೆ ಮಾಡಿದ್ದಾರೆ. ಇನ್ನೋಂದು ಗಳಿಗೆ ತಡವಾಗಿದ್ದರೆ ಇಡೀ ಕುಟುಂಬ ಊರು ದುಃಖದ ಮಡುವಿನಲ್ಲಿರಬೇಕಾಗಿತ್ತು. ಆದರೆ ಸಮಯ ಒಳ್ಳೆಯದಾಗಿದ್ದರಿಂದ ಆ ಮಗು ಉಳಿಯಿತು.
ಇಂಥಹ ಒಳ್ಳೆಯ ಕಾರ್ಯ ಮಾಡಿದ ನಮ್ಮ ಆನಂದಪ್ಪ ಕುರಿಯವರಿಗೆ ನಾವು ನಮ್ಮ ಶಾಲೆ ಹಾಗೂ ಎಲ್ಲ ಶಿಕ್ಷಕ, ವಿದ್ಯಾರ್ಥಿಗಳಿಂದ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಆನಂದಪ್ಪ ಕುರಿ |