ಬುಧವಾರ, ಆಗಸ್ಟ್ 29, 2018

ಬುಧವಾರ, ಆಗಸ್ಟ್ 22, 2018

ಸೋಮವಾರ, ಆಗಸ್ಟ್ 20, 2018

ಹಸಿರು ಕರ್ನಾಟಕ ಆಂದೋಲನ

‌ಇಂದು ದಿನಾಂಕ ೨೦.೦೮. ೨೦೧೮ ರಂದು ಅರಣ್ಯ ಇಲಾಖೆಯ ವತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ ಹಸಿರು ಕರ್ನಾಟಕ ಆಂದೋಲನದ ಅಡಿಯಲ್ಲಿ ಹಸಿರು ಕರ್ನಾಟಕಕ್ಕಾಗಿ ಪ್ರತಿಜ್ಞಾವಿಧಿ ಹಾಗೂ ಸಸಿ ನೆಡುವ ಕಾರ್ಯಕ್ರಮ ನೆಡೆಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯರಾದ ಶ್ರೀ ಈಶಪ್ಪ ತಳವಾರ ಅವರು ಮರಗಳನ್ನು ಸಂರಕ್ಷಿಸುವ ಆನಿವಾರ್ಯತೆ ನಮ್ಮ ಮೇಲೆ ಬಿದ್ದಿದೆ. ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತುಂಬಾ ಅತಂತ್ರ ಸ್ಥಿತಿಯಲ್ಲಿರುವ ಕೇರಳ ನಮ್ಮ ಕೊಡಗು ಪರಿಸ್ಥಿತಿಗೆ ಮೂಲ ಕಾರಣ ನಾವು ಪರಿಸರ ನಾಶ ಮಾಡಿರುವುದೇ. ನಮ್ಮ ಪರಿಸರವನ್ನು ನಾವು ಉಳಿಸಿಕೊಂಡು ಹೋಗದೇ ಇದ್ದರೆ ಮುಂದಿನ ದಿನಗಳಲ್ಲಿ ಅದೇ ಸ್ಥಿತಿಯನ್ನು ನಾವು ಎದುರಿಸಬೇಕಾಗುತ್ತದೆ ಎಂದು ಮಕ್ಕಳಿಗೆ ತಿಳಿಹೇಳಿದರು.  ಉಪವಲಯ ಅರಣ್ಯಾಧಿಕಾರಿಯಾದ ಶ್ರೀ ಚಿದಾನಂದ ಓಲೇಕಾರ ಮಾತನಾಡಿ ಮಕ್ಕಳು ಪರಿಸರದ ಕುರಿತು ಖಾಳಜಿವಹಿಸಿದರೆ ಮುಂದಿನ ಪ್ರಕೃತಿ ವಿಕೋಪಗಳನ್ನು ತಡೆಯಲು ಸಾಧ್ಯ ಎನ್ನುವ ಮಾತುಗಳನ್ನು ಆಡಿದರು. ಶಾಲಾ ಮಕ್ಕಳಿಂದ ಪರಿಸರ  ಸಂರಕ್ಷಣೆ ಕುರಿತು ನಾಟಕ ಎಲ್ಲರ ಮನ ಸೆಳೆಯಿತು. ಪೆದ್ದನ  ಕೆರೆ ನಾಟಕ ದಲ್ಲಿ ಪರಿಸರ ಉಳುವಿನ ಬಗ್ಗೆ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನು ಉಳಿಸಿ ಮಳೆ ಬಿದ್ದ ನೀರನ್ನು ಸಂಗ್ರಸಿ ಅವುಗಳಿಗೆ ಕುಡಿಯಲು ಅನುಕೂಲ ಮಾಡಿ ಕೊಟ್ಟು  ಪರಿಸರವಾದಿಯೊಬ್ಬ ಕಟ್ಟಿದ ಕೆರೆಗಳ ಕುರಿತಾದ ನಾಟಕ ಹತ್ತಿರದ ಕಾಲ ಕಾಲೇಶ್ವರದ ಪರಿಸರ ಹಾಗೂ ಸುತ್ತಮುತ್ತಲಿನ ಪರಿಸರವನ್ನು ನಾವುಉಳಿಸಿಕೊಳುವ ಬಗೆಯನ್ನು  ಈ ನಾಟಕದಲ್ಲಿ ಪ್ರಸ್ತುತ ಪಡಿಸಿದರು. ನಾಟಕವನ್ನು ರಚಿಸಿ ನಿರ್ದೇಶಿಸಿದ ಗುರುರಾಜ ನಾಟಕ ಶಿಕ್ಷಕರ  ಖಾಳಜಿಯಿಂದ ನಾಟಕ  ಅಚ್ಚುಕಟ್ಟಾಗಿ ಪ್ರದರ್ಶನ ಗೊಂಡಿತು.
ಕೊನೆಯದಾಗಿ ಮಾತನಾಡಿದ ಅರಣ್ಯ  ರಕ್ಷಕರು ಶ್ರೀ ಕಳಕಪ್ಪ ಬ್ಯಾಳಿಯವರು ನೀವು ಮಕ್ಕಳು ಮಾಡಿದ   ಈ ನಾಟಕದಲ್ಲಿ ಸಾಕಷ್ಟು ವಿಚಾರಗಳು ತಿಳಿದು ಬರುತ್ತವೆ. ನಾವು ನಮ್ಮ ಪರಿಸರವನ್ನು ಯಾವ ರೀತಿ ಇಟ್ಟುಕೊಂಡು ಕಾಪಾಡಿಕೊಂಡು ಬರಬೇಕು ಅನ್ನುವುದು ತುಂಬಾ ಅಚ್ಚುಕಟ್ಟಾಗಿ ವಿವರಿಸಿದ್ದಿರಿ ಈ ವಿಚಾರಗಳು ನಿಮ್ಮ ಮನೆಯಲ್ಲಿ ತಿಳಿಸಿ ಪರಿಸರವನ್ನು ಸಂರಕ್ಷಣೆ ಮಾಡವಂತೆ ಹುರಿದುಂಬಿಸಿ ಎಂದು ಸಲಹೆಯನ್ನು ನೀಡಿದರು. ಶ್ರೀ ಶಿವಪ್ಪ  ಇಲಾಳ ಶಿಕ್ಷಕರು ಮಕ್ಕಳಿಗೆಲ್ಲ ಪ್ರಮಾಣ ವಚನ   ಬೊಧಿಸಿದರು. ಕಾರ್ಯಕ್ರಮದಲ್ಲಿ ಜಗದೀಶ ಬಾಸಿಂಗದ, ಮರಿಯಪ್ಪ ಜರಕುಂಟಿ , ಶ್ರೀದೇವಿ ಗುಳಬಾಳ ,  ತಿಪ್ಪಣ್ಣ ರಾಮದುರ್ಗ, ಪ್ರಶಾಂತ ಕಟ್ಟಿ,  ಶ್ರೀಮತಿ ಇಮಾಂಬಿ ರಾ ಯಲಬುರ್ಗಿ  ಹಾಗೂ ಗುರುರಾಜ ನಾಟಕ ಶಿಕ್ಷಕರು ಇದ್ದರು



ಶುಕ್ರವಾರ, ಆಗಸ್ಟ್ 17, 2018

ದೇವತಾಪುರದ ಮಕ್ಕಳು















ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಬೆಂಗಳೂರು ಹಾಗೂ ವಿಸ್ತಾರ ರಂಗಶಾಲೆ ಕೊಪ್ಪಳ ಇವರ ಸಹಯೋಗದಲ್ಲಿ "ಚಿಣ್ಣರ ಚಿಲುಮೆ" ಮಕ್ಕಳ ರಂಗ ತರಬೇತಿಯ ಸಮಾರೋಪ ಸಮಾರಂಭವನ್ನು ವಿಸ್ತಾರ ರಂಗಶಾಲೆಯಲ್ಲಿ ನಡೆಸಲಾಯಿತು. ಪಾರಂಪರಿಕ ರಂಗಕಲೆಗಳು ಸದಾ ಕ್ರಿಯಾಶೀಲವಾಗಿ ಮಕ್ಕಳ ಜೊತೆಗೆ ಇದ್ದಾಗ ಮಕ್ಕಳ ಮಾನಸಿಕ ವ್ಯಕ್ತಿತ್ವ ಸದೃಢವಾಗುತ್ತದೆ. ಸ್ವಸ್ಥಾ ಸಮಾಜ ನಿರ್ಮಾಣವಾಗುತ್ತದೆ ಎಂದು ರಾಜ್ಯ ಸಮನ್ವಯ ಸಂಚಾಲಕರು ಹಾಗೂ ಮಕ್ಕಳ ಸಾಹಿತಿ ಶ್ರೀ ಶಂಕರ ಹಲಗತ್ತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಅಭಿಪ್ರಾಯ ತಿಳಿಸಿದರು. ಸರ್ಕಾರ ನಿರ್ಮಿಸುವ ಈ ರೀತಿಯ ಮಕ್ಕಳ ಯೋಜನೆಯು ರಂಗಭೂಮಿಯ ಮೂಲಕ ನಡೆಸುತ್ತಿರುವುದು ಭಾರತದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ವಿಸ್ತಾರನ ಉಪ ನಿರ್ದೇಶಕರಾದ ಆಶಾ ವಿ ಅವರು ನುಡಿದರು.

ಕುಮಾರಿ ವೆಣ್ಣೀಲಾ ಹಾಲ್ಕುರಿಕೆ ರಚಿತವಾದ ಈ ನಾಟಕ ಮಕ್ಕಳ ಮೂಲಭೂತ ಸಮಸ್ಯೆಗಳನ್ನು ಅರ್ಥಯಿಸುವ ಪ್ರೇಕ್ಷಕರ ಪ್ರಖರ ಚಿಂತನೆಗೊಳ ಪಡುವ ಸಂದೇಶಾತ್ಮಕ ನಾಟಕ ದೇವತಾಪುರದ ಮಕ್ಕಳು. 

 ಮಕ್ಕಳ ನಾಟಕ ಮನೋಜ್ಞ ಮಾತುಗಳಿಂದ ನೃತ್ಯ, ಸಂಗೀತದೊಂದಿಗೆ ಪ್ರದರ್ಶನಗೊಂಡಿತು. ಅಲ್ಲಲ್ಲಿ ಬೆಳಕಿನ ವಿನ್ಯಾಸ ಕುಂಟಿತಗೊಂಡಿದ್ದರು ರಂಗಸಜ್ಜಿಕೆ ಪರಿಕರ ನಿರ್ದೇಶಕರ ಅಚ್ಚುಕಟ್ಟತೆ ತಂತ್ರಜ್ಞಾನದಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಗುರುರಾಜ ಹೊಸಪೇಟೆ ನಿರ್ದೇಶನದ "ದೇವತಾಪುರದ ಮಕ್ಕಳು" ನಾಟಕ  ಯಶಸ್ವಿಯಾಯಿತು.

ಕಾರ್ಯಕ್ರಮದಲ್ಲಿ ಹಿರೇಬಿಡ್ನಾಳ ಗ್ರಾಮ ಪಂಚಾಯಿತಿಯ ಉಪಧ್ಯಾಕ್ಷರಾದ ಬಸವರಾಜ ಕನಕಾಪುರ, ರಾಜ್ಯ ಸಮಿತಿ ಸದಸ್ಯರಾದ ಕಲಾವಿದೆ ಸುನಂದ ನಿಂಬನಗೌಡರ, ಯೂಸಫ್ ಜೆ ಡಿ, ವೆಣ್ಣೀಲಾ ಹಾಲ್ಕುರಿಕಿ, ನಿರ್ದೇಶಕ ಗುರುರಾಜ ಹೊಸಪೇಟೆ, ವಿಸ್ತಾರ ರಂಗಶಾಲೆಯ ಸಂಯೋಜಕರಾದ ಲಕ್ಷ್ಮಣ ಪೀರಗಾರ ಅವರು ವೇದಿಕೆ ಮೇಲಿದ್ದರು. ಸುಂಕಪ್ಪ ಮೀಸಿ ಕಾರ್ಯಕ್ರಮ ನಿರೂಪಿಸಿದರೆ ಕರಿಯಪ್ಪ ಅವರು ವಂದನಾರ್ಪಣೆ ಮಾಡಿದರು.

ಮಂಗಳವಾರ, ಆಗಸ್ಟ್ 14, 2018

ತಾಲೂಕಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಯ ಕುರಿತು ಪತ್ರಿಕೆಯಲ್ಲಿ


ತಾಲೂಕ ಮಟ್ಟದ ವಿಜ್ಞಾನ



ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ, ವಸ್ತು ಹಾಗೂ ಚರ್ಚಾ ಸ್ಪರ್ಧೆಯನ್ನು  ದಿನಾಂಕ ೦೯.೦೮.೨೦೧೮ ರಂದು ಸರಕಾರಿ ಬಾಲಕರ ಪದವಿಪೂರ್ವ ಕಾಲೇಜ್ ನಲ್ಲಿ ನಡೆಸಲಾಯಿತು. 'ಪೆದ್ದನ ಕೆರೆ' ನಾಟಕವನ್ನು ಜಹಗೀರ ಗುಡದುರ ಮಕ್ಕಳು ಭಾಗವಹಿಸಿ ಮೊದಲ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಪರಿಸರ ಸಂರಕ್ಷಣೆ ಕುರಿತು ನಾಟಕ ವಿಷಯ ಒಳಗೊಂಡಿದ್ದ ನಾಟಕ ಎಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾಯಿತು. 

ಗುರುವಾರ, ಜುಲೈ 26, 2018

ಸ್ವಚ್ಛ ಭಾರತ ಅಭಿಯಾನ

ದಿನಾಂಕ :26.07.2018      ದಿನ : 04 

" ಸ್ವಚ್ಛ ಭಾರತ ಸಪ್ತಾಹ ಅಭಿಯಾನ "

ಇಂದು ನಾಲ್ಕನೇ ದಿನ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಎಸ್.ಡಿ.ಎಮ್.ಸಿ ಸದಸ್ಯರಿಗೆ, ಬಿಸಿಯೂಟ ಸಿಬ್ಬಂದಿ ಹಾಗೂ ಪರಿಚಾರಕರಿಗೆ ಸ್ವಚ್ಛತೆ ಕುರಿತು ಮಾಹಿತಿ ತಿಳಿಸುತ್ತಾ ಮಕ್ಕಳ ಆರೋಗ್ಯದ ಕುರಿತು ಗಮನ ನೀಡುವ ಬಗ್ಗೆ ಸಂಕ್ಷಿಪ್ತವಾಗಿ ಶಿವಪ್ಪ ಇಲಾಳ ಅವರಿಂದ ವಿವರಿಸಲಾಯಿತು. ಜೊತೆಗೆ ಸಸಿ ನೆಡುವ ಕಾರ್ಯವನ್ನು ಜರುಗಿಸಲಾಯಿತು.  ಸಭೆಯಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಭೀಮರಾವ್ ಸಾಳುಂಕಿಯವರು ಸದಸ್ಯರಾದ ಮಲ್ಲಿಕಾರ್ಜುನ ಹೆಬ್ಲಿ, ಮುತ್ತಣ್ಣ, ಅಂದಪ್ಪನವರು, ಹನುಮಂತ ಅಡುಗೆ ಸಿಬ್ಬಂದಿಗಳಾದ ಬಸಮ್ಮ, ಶಾಂತಮ್ಮ ಹಾಗೂ ಪುಷ್ಪ ಅವರು ಪರಿಚಾರಕರಾದ ಯಂಕಮ್ಮ ಅವರೆಲ್ಲರೂ ಭಾಗವಹಿಸಿದ್ದರು.

ಶಿಕ್ಷಕರಾದ ಸಂಗನಗೌಡ ಪಾಟೀಲ , ಶಿವಪ್ಪ ಇಲಾಳ, ಪ್ರಶಾಂತ ಕಟ್ಟಿ , ಗುರುರಾಜ , ಶ್ರೀದೇವಿ ಗುಳಬಾಳ ಹಾಗೂ ಇಮಾಂಬಿ ಅವರು ಪಾಲ್ಗೊಂಡಿದ್ದರು.

ಬುಧವಾರ, ಜುಲೈ 25, 2018

ಸ್ವಚ್ಚ ಭಾರತ ಸಪ್ತಾಹ ಅಭಿಯಾನ



ದಿನಾಂಕ : 25.7.2018                                      ದಿನ : ೦3

'ಸ್ವಚ್ಛ ಭಾರತ ಅಭಿಯಾನ' ಹೆಸರಿನಡಿಯಲ್ಲಿ ಇಂದು ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ   ಏರ್ಪಡಿಸಲಾಗಿತ್ತು. 8,9 ಮತ್ತು 10  ನೆ ತರಗತಿಯ ವಿದ್ಯಾರ್ಥಿಗಳೆಲ್ಲರು ಭಾಗವಹಿಸಿ ತಾವು ಕಂಡು  ಓದಿದ  ವಿಷಯವನ್ನು ಪ್ರಬಂಧದ  ರ ೂಪದಲ್ಲಿ    ಎಲ್ಲರೂ ಬರೆದು ಭಾಗವಹಿಸಿದರು.




ಮಂಗಳವಾರ, ಜುಲೈ 24, 2018

ಸ್ವಚ್ಚ ಭಾರತ ಸಪ್ತಾಹ ಅಭಿಯಾನ



ದಿನಾ0ಕ : 24.07.2018                                                                                                                        ದಿನ -2


ಇ0ದು ಶುದ್ಧ ಕುಡಿಯುವ ನೀರಿನ ಟ್ಯಾಂಕ್ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸಲಾಯಿತು. ಶುದ್ಧ ನೀರಿನ ಮಹತ್ವ ಕುರಿತು ಮಕ್ಕಳಿಗೆ ತಿಳಿಸುತ್ತಾ ಸ್ವಚ್ಚ ಪರಿಸರವನ್ನು ಇಟ್ಟುಕೊಳ್ಳುವುದರಿ0ದ ಆರೋಗ್ಯ ಚೆನ್ನಾಗಿರುತ್ತದೆ ಎ0ದು ಅರಿವು ಮೂಡಿಸಲಾಯಿತು. ನಂತರ ವಿಜ್ಜಾನ ಶಿಕ್ಷಕರಾದ ಎಸ್.ಬಿ.ಪಾಟೀಲ್ ಗುರುಗಳು ಶುದ್ಧ ನೀರಿನ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವುದರ ಮೂಲಕ ಅರಿವು ಮೂಡಿಸಲಾಯಿತು.




ಸ್ವಚ್ಚ ಭಾರತ ಸಪ್ತಾಹ ಅಭಿಯಾನ



ದಿನಾ0ಕ : 23.07.2018                                                                                                             ದಿನ 1  :


ಊರಿನೊಳಗೆ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಘೋಷಣೆಗಳ ಮೂಲಕ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು. ಜಾಥದಲ್ಲಿ ಮಕ್ಕಳೊಟ್ಟಿಗೆ ಶಿಕ್ಷಕರು,ಎಸ್.ಡಿ.ಎಂ.ಸಿ ಯ ಸದಸ್ಯರು ಹಾಗೂ ಗ್ರಾಮದ ಹಿರಿಯರೆಲ್ಲರು ಭಾಗವಹಿಸಿದ್ದರು.                                                     




Government High School, JAHAGEER GUDADUR

ಬುಧವಾರ, ಜುಲೈ 18, 2018

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಪಾತ್ರ



 ಸರ್ದಾರ್ ವಲ್ಲಭಭಾಯಿ ಪಟೇಲ್ ರವರು ನಮ್ಮ ರಾಷ್ಟ್ರ ನಾಯಕರಾಗಿದ್ದಾರೆ ಇವರು ಭಾರತದ ಸ್ವಾತಂತ್ರಗಳಿಸಲು ಹೋರಾಡಿದ ಮಹಾ ನಾಯಕರಾಗಿದ್ದಾರೆ ಅದರಲ್ಲಿ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇವರು ಬಾಲ್ಯದಲ್ಲಿಯೇ ದೇಶಪ್ರೇಮ ಮತ್ತು ದೇಶದ ಅಭಿಮಾನದ ಭಾವನೆಯನ್ನು ಬೆಳೆಸಿ ಕೊಂಡರು. ಇವರನ್ನು ಭಾರತದಲ್ಲಿ ಉಕ್ಕಿನ ಮನುಷ್ಯ ಎಂದು ಕರೆದು ಗೌರವಿಸಲಾಯಿತು. ಇವರ ತಂದೆ ಜವರೇ ಬಾಯಿ ಪಾಟೀಲ್ ತಾಯಿ ರಾಧಾಬಾಯಿ ಸರ್ದಾರ್ ವಲ್ಲಭಭಾಯಿ ಪಟೇಲರು ಗುಜರಾತಿನ ನದಿಯ ಎಂಬ ಗ್ರಾಮದಲ್ಲಿ  1875 ಅಕ್ಟೋಬರ್ 31ರಂದು ಜನಿಸಿದರು.

  ವಿಷಯ ನಿರೂಪಣೆ : 1947 ಆಗಸ್ಟ್ 14ರಂದು ಭಾರತಕ್ಕೆ ಮಧ್ಯರಾತ್ರಿ ಸ್ವಾತಂತ್ರ್ಯ ದೊರೆಯಿತು ತುಂಡಾಯಿತು ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ಭಾರತದೊಂದಿಗೆ ವಿಲೀನವಾಗಬಹುದು ಅಥವಾ ಪಾಕಿಸ್ತಾನಕ್ಕಾದರೂ ಹೋಗಬಹುದು ಅಥವಾ ನೀವೇ ಸ್ವಂತ ರಾಜ್ಯಾಡಳಿತವನ್ನು ನಡೆಸಬಹುದು ಎಂದು ಹೇಳಿದರು. ಆಗ ಕೆಲವು ಜನರಿಗೆ ತುಂಬಾ ಹುರುಪಾಯಿತು. ಆದರೆ ಭಾರತದ ನಾಡಿಬಡಿತವನ್ನು ಅರ್ಥ ಮಾಡಿಕೊಂಡಂತಹ ಕೆಲವು ಸಂಸ್ಥಾನಗಳು ಭಾರತದ ಒಕ್ಕೂಟದೊಂದಿಗೆ ವಿಲೀನಗೊಂಡವು. ಆದರೆ ಬಹಳಷ್ಟು ಸಂಪದ್ಭರಿತವಾದ ಹೈದರಾಬಾದ್-ಕರ್ನಾಟಕ ಮಾತ್ರ ವಿಲಿನಗೊಳ್ಳಲಿಲ್ಲ. 216 ವರ್ಷಗಳ ಕಾಲ ಆಳಿದ ಆಶಿಬ್ ಜಾಯಿ ಮನೆತನದ ಉಸ್ಮಾನ್ ಅಲಿಖಾನ್ ಜಂಗ್ ಬಹದ್ದೂರ್ ಎಂಬ ಕೊನೆಯ ಅರಸ ಹೈದರಾಬಾದ್-ಕರ್ನಾಟಕಗಳಿಗಿದ್ದನು. ದುಷ್ಟರ ಮಾತಿಗೆ ಮರುಳಾದ ಅಂತಹ ಉಸ್ಮಾನ್ ಅಲಿಖಾನ್ ಜಂಗ್ ಬಹುದ್ದೂರ್ ರವರನ್ನು ನಿಜಾಂ ಆಡಳಿತ ಎಂದು ಕರೆಯುವರು. ಅದಕ್ಕೆ ನವಾಬ್ ಆಡಳಿತವೆ ಎಂದು ಕರೆಯುವರು ಇವರ ಸಂಸ್ಥಾನಗಳಲ್ಲಿ 16 ಜಿಲ್ಲೆಗಳಲ್ಲಿ ಒಳಪಟ್ಟಿದ್ದವು ಆಂಧ್ರ ಪ್ರದೇಶದ ಜಿಲ್ಲೆಗಳು ಮಹಾರಾಷ್ಟ್ರದ ಐದು ಜಿಲ್ಲೆಗಳು ಹಾಗೂ ಕರ್ನಾಟಕದ 3 ಜಿಲ್ಲೆಗಳು ಒಟ್ಟು 16 ಜಿಲ್ಲೆಗಳು ಒಳಪಟ್ಟಿದ್ದವು. ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರುರವರು ಮತ್ತು ಗೃಹ ಮಂತ್ರಿಗಳಾದ ಸರ್ದಾರ್ ವಲ್ಲಭಭಾಯಿ ಪಟೇಲರು ನಿಜಾಮಿಗೆ ನೀನು ಭಾರತ ಒಕ್ಕೂಟದೊಂದಿಗೆ ವಿಲೀನವಾಗು ಎಂದು ಎಷ್ಟೇ ಹೇಳಿದರೂ ಅವರಿಗೆ ಸ್ವಲ್ಪವೂ ಕಿಮ್ಮತ್ತು ಕೊಡಲಿಲ್ಲ.

ಗುಲ್ಪುಟ್ಟಿ ಮುನ್ಪುಟ್ಟಿ


ಜಹಗೀರ ಗುಡದೂರ : ಎಂಟನೇ ತರಗತಿ ಮಕ್ಕಳಿಗೆ ಆಶುವಿಸ್ತರಣೆ





ಬುಧವಾರ, ಜುಲೈ 11, 2018

ಬೆಕ್ಕು ಬಂತು ಬೆಕ್ಕು

ಬೆಕ್ಕು ಬಂತು ಬೆಕ್ಕು 
ಓಡಿ ಓಡಿ ಬಂದಿತು 
ಅತ್ತ ಇತ್ತ ನೋಡಿತು 
ಮನೆಯ ಒಳಗೆ ನುಗ್ಗಿತು 

ಬೆಣ್ಣೆ ನೋಡಿ ನಕ್ಕಿತು 
ಅದನು ತಿನ್ನಲು ಹೋಯಿತು 
ಮರುದಿನ ಬಂದಿತು 
ಮೊಸರು ನೋಡಿ ತಿಂದಿತು 

ಮತ್ತೆ ಮತ್ತೆ ಬಂದಿತು 
ಮನೆಯವರಿರುವುದನ್ನು ಕಂಡಿತು 
ಮೇಲಿಂದ ಜಿಗಿಯಿತು 
ಎಲ್ಲ ಮಜ್ಜಿಗೆ ಕುಡಿಯಿತು 

ಒಂದು ದಿನ ಇಲಿಯ ನೋಡಿ
ಅದನು ತಿನ್ನಲು ಹೋಯಿತು  
ಅದು ಕಟ್ಟಿಗೆಯಲಿ ಹೋಯಿತು 
ಸಪ್ಪೆ ಮುಖ ಮಾಡಿ ಹೊರಟಿತು 

ಮಂಗಳವಾರ, ಜುಲೈ 3, 2018

ಸಿಜಿಕೆ



















ಸಿಜಿಕೆ ಅಂದ್ರೆ ಒಬ್ಬ ಅಸಾಮಾನ್ಯ ಸಂಘಟಕ. ಹೊಸತನವನ್ನು ಕಟ್ಟಿಕೊಡುವುದರಲ್ಲಿ ಸಿಜಿಕೆ ಅದ್ಭುತ. 
೨೦೦೧ ರ  ಹಂಪಿ ಉತ್ಸವದಲ್ಲಿ  ಅವರ ಜೊತೆ ಇದ್ದದ್ದು ಅವರ ಜೊತೆ ಎಲ್ಲಾ ರೀತಿಯಲ್ಲಿ 
 ಸಹಾಯ ಮಾಡುತ್ತಾ ನಾನು ನನ್ನನ್ನು ಕಂಡು ಕೊಳ್ತಾ ಇದ್ದೆ.
 ಬೀದಿ ನಾಟಕ ಮಾಡ್ತಾ ಹೊಸಪೇಟೆಯಲ್ಲಿ ಇದ್ದಾಗ ಈ ಸಿಜಿಕೆ ಅನ್ನೋ  ದೊಡ್ಡ ವ್ಯಕ್ತಿ  ನಮ್ಮನ್ನು ಅಲುಗಾಡಿಸಿ ಬಿಟ್ಟರು.
ಸ್ಲಮ್ಮಿನ ನಾವು ಹುಡುಗರೆಲ್ಲ ಇವರನ್ನು ಕಂಡಾಗ,  ಸಾಮಾನ್ಯರಂತೆ   ನೋಡಿದ್ದು. 
ಆದರೆ ಇವರ ಶಕ್ತಿ ಇಡೀ ಕರ್ನಾಟಕದ ರಂಗ ಕಲಾಬಳಗವನ್ನೇ ಆವರಿಸಿತ್ತು.
 ಎಂಪಿ ಪ್ರಕಾಶ್ ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಸಿಆರ್ ಸಿಂಹ ಕರಬಸಯ್ಯಿ ಹೀಗೆ  
 ಅದ್ಭುತ ಅದ್ಭುತ ಪ್ರತಿಭೆಗಳೆಲ್ಲ ಇವರ ಐವತ್ತನೇ ಹುಟ್ಟು ಹಬ್ಬಕ್ಕೆ ಬಂದಾಗ ನಮ್ಮ ಬಾಯಿಗಳು ತೆರೆದು ಕೊಂಡೆ  ಇದ್ದವು. 
ಎಸ್ಸೆಸ್ಸೆಲ್ಸಿ ಓದುತ್ತಿರುವ ಹುಡುಗರಿಗೆ ಈ ರೀತಿ ದೈತ್ಯ ಪ್ರತಿಭೆಗಳೆಲ್ಲಾ ಒಂದೆಡೆ ಸೇರಿದಾಗ
 ಅವರ ಚರ್ಚೆ ಅವರ ಮಾತು  ಅಬ್ಬಬ್ಬಾ ನಂಬಕ್ಕೆ ಸಾಧ್ಯವಾಗುತ್ತಿರಲಿಲ್ಲ. 
 ಅವರಿಗೆಲ್ಲ ಊಟ ಬಡಿಸೋಕೆ ನೀರ್ ಕೊಡೋಕೆ ಹೀಗೆ ಬೇರೆ  ಬೇರೆ ಕಾರ್ಯಗಳಿಗೆ ನಾವು ನಿಯೋಜನೆ ಹೊಂದಿದ್ದೆವು.
 ಮುನಿರಾಬಾದ್ನ ಆ ಮೂರು ದಿನಗಳ ಅವರ ಹಾಡು ಚರ್ಚೆ ನಿಜವಾಗ್ಲೂ ನನ್ನನ್ನು
 ಹೊಸ ಲೋಕಕ್ಕೆ ಕರೆದುಕೊಂಡು ಹೋಯಿತು. ಉಳಿದವರು ಯಾರೂ ನನಗೆ ಅಂತ ನೆನಪಲ್ಲಿ ಉಳಿದಿಲ್ಲ
 ಆದರೆ ಸಿಜಿಕೆ ಮಾತ್ರ ಅವರ ಮಾತು, ಅವರ ರೀತಿ ಅವರು ಕಟ್ಟಿದ ಪರಿಯಿಂದ ಅವರು ನನ್ನಲ್ಲಿ ಇನ್ನು ಜೀವಂತವಾಗಿದ್ದಾರೆ.
 ನಂತರದಲ್ಲಿ ನಾನು ಶಿವಸಂಚಾರ, ನೀನಾಸಂ ಹೀಗೆ ಹಲವು ಕಡೆ ನನ್ನನ್ನು ನಾನು ಕಂಡುಕೊಳ್ಳುತ್ತಾ ಇರುವಾಗಲೂ 
ಸಿಜಿಕೆ ನನಗೆ  ಮತ್ತೊಂದು  ರೀತಿಯಲ್ಲಿ ಕಾಣ್ತಾ ಇದ್ದರು.  
ಸಾಣೇಹಳ್ಳಿ ಅಂತ ಒಂದು ಹಳ್ಳಿಯಲ್ಲಿ ಶಿವಸಂಚಾರ ರೂಪುಗೊಳ್ಳಲು ಕಾರಣ, 
ಸಿಜಿಕೆ ಅಂತ ಸ್ವಾಮಿಗಳೇ ಹೇಳಿದ್ದ ನಾನು ಕೇಳಿದ್ದೇನೆ.
 ಬೀದಿ ನಾಟಕಕ್ಕೆ ಜೀವ ಕೊಟ್ಟವರು  ಪ್ರಸನ್ನ, ಸಿಜಿಕೆ, ಬಸವಲಿಂಗಯ್ಯ,    
  ಎ. ಎಸ್‌ ಮೂರ್ತಿ  ಹೀಗೆ ಸಾಕಷ್ಟು ರಂಗಕರ್ಮಿ ಗಳು ಇದ್ದು ಅದರಲ್ಲಿ 
ನನ್ನನ್ನು  ಸಿ.ಜಿ.ಕೆ ಹಾಗೂ ಬಸವಲಿಂಗಯ್ಯ  ಮತ್ತೊಂದು ರೀತಿಯಲ್ಲಿ ನನ್ನ ತಪ್ಪುಗಳನ್ನು  ತಿದ್ದುತ್ತಾ ಬಂದಿದ್ದರು. 
ಇಂದು ಸಿಜಿಕೆ ಅವರ ಜನ್ಮದಿನ ಅವರನ್ನು ಕಳ್ಕೊಂಡ  ನಾವು , 
ರವೀಂದ್ರ ಕಲಾಕ್ಷೇತ್ರ ನನಗೆ ಎಂದಿಗೂ ಬಣ ಬಣ ಎಂದು  ಕಾಣುತ್ತೆ. 
ಕಳೆದ ಎರಡು ವರ್ಷಗಳ ಹಿಂದೆ ಬೆಲ್ಚಿ ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶನ ನೀಡುವುದರೊಂದಿಗೆ 
ಸಮುದಾಯ ಹಾಗೂ ಸಿ ಜಿ ಕೆ ಅವರನ್ನು ಮತ್ತೆ ನೆನಪಿಸಿದ ಹಾಗಾಯಿತು 
ಅದೇ ರೀತಿ ಮತ್ತೆ ಸಿಜಿಕೆಯವರ ಜನ್ಮದಿನ  ಬೀದಿರಂಗ ದಿನವಾಗಿ ಕಂಡು ಬರುತ್ತಿರುವುದು ಖುಷಿ ಕೊಡುತ್ತದೆ . 
ಸಿಜಿಕೆ ಅವರ ಸಂಘಟನಾ ಶಕ್ತಿ ಅವರ ರಂಗ ಕಾರ್ಯ ನಮ್ಮಂಥವರಿಗೆ ಯುವಪೀಳಿಗೆಗೆ 
ಸಾಕಷ್ಟು ಅವಶ್ಯಕತೆ ಇದೆ. ಅವರಂತೆ ಇಚ್ಛಾಶಕ್ತಿ ಹೊಂದಿದ ರಂಗಕರ್ಮಿಗಳನ್ನು 
ನಾನು ಮುಂದೆಯೂ ಕಾಣಲು ಬಯಸುತ್ತಾನೆ. ಹ್ಯಾಪಿ ಬರ್ತ್ಡೇ ಸಿಜಿಕೆ ಸಾರ್.

ಶನಿವಾರ, ಜೂನ್ 9, 2018

Janapada

ಶುಕ್ರವಾರ, ಜೂನ್ 8, 2018

ಪ್ರಜಾವಾಣಿಯಲ್ಲಿ ನಮ್ಮ ಶಾಲೆಯ ಪರಿಸರ ದಿನಾಚರಣೆ

ಪ್ರಜಾವಾಣಿಯಲ್ಲಿ ನಮ್ಮ ಶಾಲೆಯ  ಪರಿಸರ ದಿನಾಚರಣೆಯ ಕುರಿತು  ಬಂದ ವರದಿ