ಕುಮಾರಿ ವೆಣ್ಣೀಲಾ ಹಾಲ್ಕುರಿಕೆ ರಚಿತವಾದ ಈ ನಾಟಕ ಮಕ್ಕಳ ಮೂಲಭೂತ ಸಮಸ್ಯೆಗಳನ್ನು ಅರ್ಥಯಿಸುವ ಪ್ರೇಕ್ಷಕರ ಪ್ರಖರ ಚಿಂತನೆಗೊಳ ಪಡುವ ಸಂದೇಶಾತ್ಮಕ ನಾಟಕ ದೇವತಾಪುರದ ಮಕ್ಕಳು.
ಮಕ್ಕಳ ನಾಟಕ ಮನೋಜ್ಞ ಮಾತುಗಳಿಂದ ನೃತ್ಯ, ಸಂಗೀತದೊಂದಿಗೆ ಪ್ರದರ್ಶನಗೊಂಡಿತು. ಅಲ್ಲಲ್ಲಿ ಬೆಳಕಿನ ವಿನ್ಯಾಸ ಕುಂಟಿತಗೊಂಡಿದ್ದರು ರಂಗಸಜ್ಜಿಕೆ ಪರಿಕರ ನಿರ್ದೇಶಕರ ಅಚ್ಚುಕಟ್ಟತೆ ತಂತ್ರಜ್ಞಾನದಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಗುರುರಾಜ ಹೊಸಪೇಟೆ ನಿರ್ದೇಶನದ "ದೇವತಾಪುರದ ಮಕ್ಕಳು" ನಾಟಕ ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಹಿರೇಬಿಡ್ನಾಳ ಗ್ರಾಮ ಪಂಚಾಯಿತಿಯ ಉಪಧ್ಯಾಕ್ಷರಾದ ಬಸವರಾಜ ಕನಕಾಪುರ, ರಾಜ್ಯ ಸಮಿತಿ ಸದಸ್ಯರಾದ ಕಲಾವಿದೆ ಸುನಂದ ನಿಂಬನಗೌಡರ, ಯೂಸಫ್ ಜೆ ಡಿ, ವೆಣ್ಣೀಲಾ ಹಾಲ್ಕುರಿಕಿ, ನಿರ್ದೇಶಕ ಗುರುರಾಜ ಹೊಸಪೇಟೆ, ವಿಸ್ತಾರ ರಂಗಶಾಲೆಯ ಸಂಯೋಜಕರಾದ ಲಕ್ಷ್ಮಣ ಪೀರಗಾರ ಅವರು ವೇದಿಕೆ ಮೇಲಿದ್ದರು. ಸುಂಕಪ್ಪ ಮೀಸಿ ಕಾರ್ಯಕ್ರಮ ನಿರೂಪಿಸಿದರೆ ಕರಿಯಪ್ಪ ಅವರು ವಂದನಾರ್ಪಣೆ ಮಾಡಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher