ಸೋಮವಾರ, ಆಗಸ್ಟ್ 20, 2018

ಹಸಿರು ಕರ್ನಾಟಕ ಆಂದೋಲನ

‌ಇಂದು ದಿನಾಂಕ ೨೦.೦೮. ೨೦೧೮ ರಂದು ಅರಣ್ಯ ಇಲಾಖೆಯ ವತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ ಹಸಿರು ಕರ್ನಾಟಕ ಆಂದೋಲನದ ಅಡಿಯಲ್ಲಿ ಹಸಿರು ಕರ್ನಾಟಕಕ್ಕಾಗಿ ಪ್ರತಿಜ್ಞಾವಿಧಿ ಹಾಗೂ ಸಸಿ ನೆಡುವ ಕಾರ್ಯಕ್ರಮ ನೆಡೆಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯರಾದ ಶ್ರೀ ಈಶಪ್ಪ ತಳವಾರ ಅವರು ಮರಗಳನ್ನು ಸಂರಕ್ಷಿಸುವ ಆನಿವಾರ್ಯತೆ ನಮ್ಮ ಮೇಲೆ ಬಿದ್ದಿದೆ. ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತುಂಬಾ ಅತಂತ್ರ ಸ್ಥಿತಿಯಲ್ಲಿರುವ ಕೇರಳ ನಮ್ಮ ಕೊಡಗು ಪರಿಸ್ಥಿತಿಗೆ ಮೂಲ ಕಾರಣ ನಾವು ಪರಿಸರ ನಾಶ ಮಾಡಿರುವುದೇ. ನಮ್ಮ ಪರಿಸರವನ್ನು ನಾವು ಉಳಿಸಿಕೊಂಡು ಹೋಗದೇ ಇದ್ದರೆ ಮುಂದಿನ ದಿನಗಳಲ್ಲಿ ಅದೇ ಸ್ಥಿತಿಯನ್ನು ನಾವು ಎದುರಿಸಬೇಕಾಗುತ್ತದೆ ಎಂದು ಮಕ್ಕಳಿಗೆ ತಿಳಿಹೇಳಿದರು.  ಉಪವಲಯ ಅರಣ್ಯಾಧಿಕಾರಿಯಾದ ಶ್ರೀ ಚಿದಾನಂದ ಓಲೇಕಾರ ಮಾತನಾಡಿ ಮಕ್ಕಳು ಪರಿಸರದ ಕುರಿತು ಖಾಳಜಿವಹಿಸಿದರೆ ಮುಂದಿನ ಪ್ರಕೃತಿ ವಿಕೋಪಗಳನ್ನು ತಡೆಯಲು ಸಾಧ್ಯ ಎನ್ನುವ ಮಾತುಗಳನ್ನು ಆಡಿದರು. ಶಾಲಾ ಮಕ್ಕಳಿಂದ ಪರಿಸರ  ಸಂರಕ್ಷಣೆ ಕುರಿತು ನಾಟಕ ಎಲ್ಲರ ಮನ ಸೆಳೆಯಿತು. ಪೆದ್ದನ  ಕೆರೆ ನಾಟಕ ದಲ್ಲಿ ಪರಿಸರ ಉಳುವಿನ ಬಗ್ಗೆ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನು ಉಳಿಸಿ ಮಳೆ ಬಿದ್ದ ನೀರನ್ನು ಸಂಗ್ರಸಿ ಅವುಗಳಿಗೆ ಕುಡಿಯಲು ಅನುಕೂಲ ಮಾಡಿ ಕೊಟ್ಟು  ಪರಿಸರವಾದಿಯೊಬ್ಬ ಕಟ್ಟಿದ ಕೆರೆಗಳ ಕುರಿತಾದ ನಾಟಕ ಹತ್ತಿರದ ಕಾಲ ಕಾಲೇಶ್ವರದ ಪರಿಸರ ಹಾಗೂ ಸುತ್ತಮುತ್ತಲಿನ ಪರಿಸರವನ್ನು ನಾವುಉಳಿಸಿಕೊಳುವ ಬಗೆಯನ್ನು  ಈ ನಾಟಕದಲ್ಲಿ ಪ್ರಸ್ತುತ ಪಡಿಸಿದರು. ನಾಟಕವನ್ನು ರಚಿಸಿ ನಿರ್ದೇಶಿಸಿದ ಗುರುರಾಜ ನಾಟಕ ಶಿಕ್ಷಕರ  ಖಾಳಜಿಯಿಂದ ನಾಟಕ  ಅಚ್ಚುಕಟ್ಟಾಗಿ ಪ್ರದರ್ಶನ ಗೊಂಡಿತು.
ಕೊನೆಯದಾಗಿ ಮಾತನಾಡಿದ ಅರಣ್ಯ  ರಕ್ಷಕರು ಶ್ರೀ ಕಳಕಪ್ಪ ಬ್ಯಾಳಿಯವರು ನೀವು ಮಕ್ಕಳು ಮಾಡಿದ   ಈ ನಾಟಕದಲ್ಲಿ ಸಾಕಷ್ಟು ವಿಚಾರಗಳು ತಿಳಿದು ಬರುತ್ತವೆ. ನಾವು ನಮ್ಮ ಪರಿಸರವನ್ನು ಯಾವ ರೀತಿ ಇಟ್ಟುಕೊಂಡು ಕಾಪಾಡಿಕೊಂಡು ಬರಬೇಕು ಅನ್ನುವುದು ತುಂಬಾ ಅಚ್ಚುಕಟ್ಟಾಗಿ ವಿವರಿಸಿದ್ದಿರಿ ಈ ವಿಚಾರಗಳು ನಿಮ್ಮ ಮನೆಯಲ್ಲಿ ತಿಳಿಸಿ ಪರಿಸರವನ್ನು ಸಂರಕ್ಷಣೆ ಮಾಡವಂತೆ ಹುರಿದುಂಬಿಸಿ ಎಂದು ಸಲಹೆಯನ್ನು ನೀಡಿದರು. ಶ್ರೀ ಶಿವಪ್ಪ  ಇಲಾಳ ಶಿಕ್ಷಕರು ಮಕ್ಕಳಿಗೆಲ್ಲ ಪ್ರಮಾಣ ವಚನ   ಬೊಧಿಸಿದರು. ಕಾರ್ಯಕ್ರಮದಲ್ಲಿ ಜಗದೀಶ ಬಾಸಿಂಗದ, ಮರಿಯಪ್ಪ ಜರಕುಂಟಿ , ಶ್ರೀದೇವಿ ಗುಳಬಾಳ ,  ತಿಪ್ಪಣ್ಣ ರಾಮದುರ್ಗ, ಪ್ರಶಾಂತ ಕಟ್ಟಿ,  ಶ್ರೀಮತಿ ಇಮಾಂಬಿ ರಾ ಯಲಬುರ್ಗಿ  ಹಾಗೂ ಗುರುರಾಜ ನಾಟಕ ಶಿಕ್ಷಕರು ಇದ್ದರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher