ಮಂಗಳವಾರ, ಜುಲೈ 3, 2018

ಸಿಜಿಕೆ



















ಸಿಜಿಕೆ ಅಂದ್ರೆ ಒಬ್ಬ ಅಸಾಮಾನ್ಯ ಸಂಘಟಕ. ಹೊಸತನವನ್ನು ಕಟ್ಟಿಕೊಡುವುದರಲ್ಲಿ ಸಿಜಿಕೆ ಅದ್ಭುತ. 
೨೦೦೧ ರ  ಹಂಪಿ ಉತ್ಸವದಲ್ಲಿ  ಅವರ ಜೊತೆ ಇದ್ದದ್ದು ಅವರ ಜೊತೆ ಎಲ್ಲಾ ರೀತಿಯಲ್ಲಿ 
 ಸಹಾಯ ಮಾಡುತ್ತಾ ನಾನು ನನ್ನನ್ನು ಕಂಡು ಕೊಳ್ತಾ ಇದ್ದೆ.
 ಬೀದಿ ನಾಟಕ ಮಾಡ್ತಾ ಹೊಸಪೇಟೆಯಲ್ಲಿ ಇದ್ದಾಗ ಈ ಸಿಜಿಕೆ ಅನ್ನೋ  ದೊಡ್ಡ ವ್ಯಕ್ತಿ  ನಮ್ಮನ್ನು ಅಲುಗಾಡಿಸಿ ಬಿಟ್ಟರು.
ಸ್ಲಮ್ಮಿನ ನಾವು ಹುಡುಗರೆಲ್ಲ ಇವರನ್ನು ಕಂಡಾಗ,  ಸಾಮಾನ್ಯರಂತೆ   ನೋಡಿದ್ದು. 
ಆದರೆ ಇವರ ಶಕ್ತಿ ಇಡೀ ಕರ್ನಾಟಕದ ರಂಗ ಕಲಾಬಳಗವನ್ನೇ ಆವರಿಸಿತ್ತು.
 ಎಂಪಿ ಪ್ರಕಾಶ್ ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಸಿಆರ್ ಸಿಂಹ ಕರಬಸಯ್ಯಿ ಹೀಗೆ  
 ಅದ್ಭುತ ಅದ್ಭುತ ಪ್ರತಿಭೆಗಳೆಲ್ಲ ಇವರ ಐವತ್ತನೇ ಹುಟ್ಟು ಹಬ್ಬಕ್ಕೆ ಬಂದಾಗ ನಮ್ಮ ಬಾಯಿಗಳು ತೆರೆದು ಕೊಂಡೆ  ಇದ್ದವು. 
ಎಸ್ಸೆಸ್ಸೆಲ್ಸಿ ಓದುತ್ತಿರುವ ಹುಡುಗರಿಗೆ ಈ ರೀತಿ ದೈತ್ಯ ಪ್ರತಿಭೆಗಳೆಲ್ಲಾ ಒಂದೆಡೆ ಸೇರಿದಾಗ
 ಅವರ ಚರ್ಚೆ ಅವರ ಮಾತು  ಅಬ್ಬಬ್ಬಾ ನಂಬಕ್ಕೆ ಸಾಧ್ಯವಾಗುತ್ತಿರಲಿಲ್ಲ. 
 ಅವರಿಗೆಲ್ಲ ಊಟ ಬಡಿಸೋಕೆ ನೀರ್ ಕೊಡೋಕೆ ಹೀಗೆ ಬೇರೆ  ಬೇರೆ ಕಾರ್ಯಗಳಿಗೆ ನಾವು ನಿಯೋಜನೆ ಹೊಂದಿದ್ದೆವು.
 ಮುನಿರಾಬಾದ್ನ ಆ ಮೂರು ದಿನಗಳ ಅವರ ಹಾಡು ಚರ್ಚೆ ನಿಜವಾಗ್ಲೂ ನನ್ನನ್ನು
 ಹೊಸ ಲೋಕಕ್ಕೆ ಕರೆದುಕೊಂಡು ಹೋಯಿತು. ಉಳಿದವರು ಯಾರೂ ನನಗೆ ಅಂತ ನೆನಪಲ್ಲಿ ಉಳಿದಿಲ್ಲ
 ಆದರೆ ಸಿಜಿಕೆ ಮಾತ್ರ ಅವರ ಮಾತು, ಅವರ ರೀತಿ ಅವರು ಕಟ್ಟಿದ ಪರಿಯಿಂದ ಅವರು ನನ್ನಲ್ಲಿ ಇನ್ನು ಜೀವಂತವಾಗಿದ್ದಾರೆ.
 ನಂತರದಲ್ಲಿ ನಾನು ಶಿವಸಂಚಾರ, ನೀನಾಸಂ ಹೀಗೆ ಹಲವು ಕಡೆ ನನ್ನನ್ನು ನಾನು ಕಂಡುಕೊಳ್ಳುತ್ತಾ ಇರುವಾಗಲೂ 
ಸಿಜಿಕೆ ನನಗೆ  ಮತ್ತೊಂದು  ರೀತಿಯಲ್ಲಿ ಕಾಣ್ತಾ ಇದ್ದರು.  
ಸಾಣೇಹಳ್ಳಿ ಅಂತ ಒಂದು ಹಳ್ಳಿಯಲ್ಲಿ ಶಿವಸಂಚಾರ ರೂಪುಗೊಳ್ಳಲು ಕಾರಣ, 
ಸಿಜಿಕೆ ಅಂತ ಸ್ವಾಮಿಗಳೇ ಹೇಳಿದ್ದ ನಾನು ಕೇಳಿದ್ದೇನೆ.
 ಬೀದಿ ನಾಟಕಕ್ಕೆ ಜೀವ ಕೊಟ್ಟವರು  ಪ್ರಸನ್ನ, ಸಿಜಿಕೆ, ಬಸವಲಿಂಗಯ್ಯ,    
  ಎ. ಎಸ್‌ ಮೂರ್ತಿ  ಹೀಗೆ ಸಾಕಷ್ಟು ರಂಗಕರ್ಮಿ ಗಳು ಇದ್ದು ಅದರಲ್ಲಿ 
ನನ್ನನ್ನು  ಸಿ.ಜಿ.ಕೆ ಹಾಗೂ ಬಸವಲಿಂಗಯ್ಯ  ಮತ್ತೊಂದು ರೀತಿಯಲ್ಲಿ ನನ್ನ ತಪ್ಪುಗಳನ್ನು  ತಿದ್ದುತ್ತಾ ಬಂದಿದ್ದರು. 
ಇಂದು ಸಿಜಿಕೆ ಅವರ ಜನ್ಮದಿನ ಅವರನ್ನು ಕಳ್ಕೊಂಡ  ನಾವು , 
ರವೀಂದ್ರ ಕಲಾಕ್ಷೇತ್ರ ನನಗೆ ಎಂದಿಗೂ ಬಣ ಬಣ ಎಂದು  ಕಾಣುತ್ತೆ. 
ಕಳೆದ ಎರಡು ವರ್ಷಗಳ ಹಿಂದೆ ಬೆಲ್ಚಿ ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶನ ನೀಡುವುದರೊಂದಿಗೆ 
ಸಮುದಾಯ ಹಾಗೂ ಸಿ ಜಿ ಕೆ ಅವರನ್ನು ಮತ್ತೆ ನೆನಪಿಸಿದ ಹಾಗಾಯಿತು 
ಅದೇ ರೀತಿ ಮತ್ತೆ ಸಿಜಿಕೆಯವರ ಜನ್ಮದಿನ  ಬೀದಿರಂಗ ದಿನವಾಗಿ ಕಂಡು ಬರುತ್ತಿರುವುದು ಖುಷಿ ಕೊಡುತ್ತದೆ . 
ಸಿಜಿಕೆ ಅವರ ಸಂಘಟನಾ ಶಕ್ತಿ ಅವರ ರಂಗ ಕಾರ್ಯ ನಮ್ಮಂಥವರಿಗೆ ಯುವಪೀಳಿಗೆಗೆ 
ಸಾಕಷ್ಟು ಅವಶ್ಯಕತೆ ಇದೆ. ಅವರಂತೆ ಇಚ್ಛಾಶಕ್ತಿ ಹೊಂದಿದ ರಂಗಕರ್ಮಿಗಳನ್ನು 
ನಾನು ಮುಂದೆಯೂ ಕಾಣಲು ಬಯಸುತ್ತಾನೆ. ಹ್ಯಾಪಿ ಬರ್ತ್ಡೇ ಸಿಜಿಕೆ ಸಾರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher