ಸೋಮವಾರ, ನವೆಂಬರ್ 28, 2011

ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ




ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ  ಮಕ್ಕಳ ಉತ್ಸಾಹವನ್ನು ಗಮನಿಸಿದರೆ ನಮಗೆ ನಮ್ಮ0ಥಹ  ಶಿಕ್ಷಕರಿಗೆ ಮುಜುಗರ ಪಡುವ ಸ್ಥಿತಿ ಬಂದು ಎರಗುತ್ತದೆ. ಕಾರಣ ನಮ್ಮ ಮಕ್ಕಳಿಗೆ ನಾವು ಮುಕ್ತವಾಗಿ ಕಲಿಯಲು ಭಾಗವಹಿಸಲು ಬಿದುತ್ತಲಿದ್ದೆವೆಯೇ ಎಂಬ ವಿಚಾರ ಮಾಡಲೇ ಬೇಕಾಗುತ್ತಾದೆ. ಮಕ್ಕಳ ವಿಚಾರದಲ್ಲಿ ನಮ್ಮ ಕಾರ್ಯ ಸಾಲಲ್ಲ ಎಂಬುವುದನ್ನು ಮನಗಂಡು ನಾವು ಕಾರ್ಯ ಪ್ರವೃತ್ತರಾಗಬೇಕಾಗಿದೆ.


ಬುಧವಾರ, ಅಕ್ಟೋಬರ್ 12, 2011

ಮನಃ ಪರಿವರ್ತನೆ ನಾಟಕದ ಪ್ರದರ್ಶನ














ಧೃಡ ಮನಸ್ಸು


ಏನಾದರೂ ಸಾಧಿಸಲು ಛಲಬೇಕು. ಕಾರ್ಯ ಮಾಡುವ ಮನಸ್ಸಿರಬೇಕು, ಧೃಡ ಮನಸ್ಸಿರಬೇಕು. ಎಂದಾಗ ಮಾತ್ರ ಕಾರ್ಯ ಸಾಧಿಸಲು ಸಾಧ್ಯವಾಗುವುದು. ರೂಡಿಯಂತೆ ಮುಂದೆ ಗುರಿ ಇರಬೇಕು ಹಿಂದೆ ಗುರಿ ಇರಬೇಕು ಎಂದು ಹೇಳುತ್ತಾರೆ. ಮುಂದೆ ಗುರಿ ಇದ್ದರೆ ಮಾತ್ರ ಆಗುವುದಿಲ್ಲ ಹಿಂದೆ ಗುರುವು ಬೇಕು. ಗುರುಗಳು ಪ್ರೋತ್ಸಾಹ ನೀಡುವರು. ಪ್ರೋತ್ಸಾಹನೆ ಇಲ್ಲದಿದ್ದರೆ ಅವನ ಧೃಡಮನಸ್ಸು , ಪಟ್ಟ ಶ್ರಮ ವ್ಯರ್ಥವಾಗುವುದು . ಕಲಿಯಲು ಮನಸ್ಸು ಬೇಕು. ಮನಸ್ಸಿದ್ದರೆ ಮಾರ್ಗ ಎನ್ನವುದು ನಿಜಕ್ಕೂ ಸತ್ಯ ಎನಿಸಿದೆ. ಆದ್ದರಿಂದ ನನಗೂ ಸೇರಿ " ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು".


---- ಸವಿತಾ.ಎಸ್ .ಬಾಗೂರ, ೧೦ ನೇ ತರಗತಿ.

ಕವನ

ಶಾಲೆಯೊಂದು ಸುಂದರ ಆಗರ

ಶಿಕ್ಷಕರು ಅಲ್ಲಿ ಜ್ಞಾನದ ಸರೋವರ

ವಿದ್ಯಾರ್ಥಿಗಳಿರಬೇಕು ಸದಾ ವಿದ್ಯಾದರ

**********************************

ಇದು ನನ್ನ ಕವನ

ಸೋಡಿಯಂ ಲವಣ

ಮೇಲಿದೆ ಗಗನ

ಕೆಳಗಿದೆ ಭುವನ

ಹೇಗಿದೆ ನನ್ನ ಕವನ
..............................................
ವಚನ
.ಎಸ್ .ಬಂಡಿ , ೮ ನೆತರಗತಿ

ಬುಧವಾರ, ಅಕ್ಟೋಬರ್ 5, 2011

ತಿಂಗಳ ಸಂಜೆ


ಪ್ರತಿ ತಿಂಗಳು "ತಿಂಗಳ ಸಂಜೆ" ಕಾರ್ಯಾಕ್ರಮದಲ್ಲಿ ಜಾಕನಪಲ್ಲಿ ಊರಿನ ಹಿರಿಯರ ಸಂಗಡ ಶಾಲೆಯ ಎಲ್ಲ ಸಿಬ್ಬಂದಿ ಯವರೊಂದಿಗೆ ತಮ್ಮ ಹೊಸ ಹೊಸ ಕಾರ್ಯಕ್ರಮಗಳು ಎಲ್ಲರ ಮನ ಸೆಳೆದಿವೆ. ತಮ್ಮ ಪ್ರಯತ್ನ ಸದಾ ಕ್ರಿಯಾಶೀಲಾವಾಗಿರಲಿ ಎಂದು ನಮ್ಮ ಪತ್ರಿಕಾ ಬಳಗ ಆಶಿಸುತ್ತದೆ.

ಶನಿವಾರ, ಅಕ್ಟೋಬರ್ 1, 2011

ಹೆಮ್ಮರಗಾಲದ ಪತ್ರಿಕೆಗೆ ನಮ್ಮ ಹೆಜ್ಜೆಗಳು ಪತ್ರಿಕೆಯಿಂದ ಶುಭ ಕೊರುತ್ತಲಿದ್ದೇವೆ.



ಗೆಳೆಯ ಸಂತೋಷನ ಪ್ರಯತ್ನ ನಮಗೂ ಸ್ಪೂರ್ತಿ,

ಮಕ್ಕಳ ಬರವಣಿಗೆಯ ಜೊತೆಗೆ ಗಣ್ಯರ ಸಲಹೆಗಳು

ಸದಾ ಸಿಗಲೆಂದು ಆಶಿಸುವೆವು.



ಮಂಗಳವಾರ, ಸೆಪ್ಟೆಂಬರ್ 27, 2011

ರಂಗಶಿಕ್ಷಣ



ರಂಗ ಅಧ್ಯಯನ ನಮಗೆ ಯಾಕೆ ಬೇಕು ? ಅದರಿಂದ ಉಪಯೋಗವೇನು ? ಹೀಗೆ ಎಲ್ಲ ಶಿಕ್ಷಕ ವರ್ಗದಲ್ಲಿ ಸಹಜವಾದ ಚರ್ಚೆ ಇದ್ದೆ ಇರುತ್ತದೆ. ನಾವು ಮಕ್ಕಳಲ್ಲಿ ಕಾಣಬೇಕಾಗಿರುವುದು ಹೊಸತನವನ್ನು , ಮುಕ್ತತೆಯನ್ನು . ಆದರೆ ಈಗಿರುವ ವ್ಯವಸ್ಥೆಯಲ್ಲಿ ಅಥಾವ ನಮ್ಮದೇ ತಪ್ಪು ನಿರ್ಧಾರಗಳಿಂದ ಮಕ್ಕಳಿಗೆ ನಾವು ಕಲಿತ ಶಿಕ್ಷಣವನ್ನೂ , ನಡಾವಳಿಕೆಯನ್ನೂ ಕೇವಲ ಕಂಠಪಾಠ ಹಾಕುವಂತೆ ಮಕ್ಕಳನ್ನು ಹೆದರಿಸಿ, ಬೆದರಿಸಿ ಅವರ ಮುಕ್ತತೆಯನ್ನು ನಾವೇ ನಾಸಾ ಮಾಡಿದ್ದೇವೆ. ಹಿರಿಯರ ಅನುಕರಣೆಯನ್ನು ಮಾಡುತ್ತಲೇ ಸಾಗುತ್ತಿರುವ ಈಗಿನ ಮಕ್ಕಳು ಸೂಪ್ತ ಪ್ರತಿಭೆ ಹೊರ ಹಾಕುವುದಕ್ಕಿಂತ ಕೇವಲ ಹಿರಿಯರ ಕನ್ನಡಿಯಾಗಿ ಸಾಗುತ್ತಿರುವುದು ದುರಂತವೆಂದು ಹೇಳಬೇಕಾಗಿದೆ.

ನನ್ನ ಅನುಭವದ ಒಂದು ಮಾತು. ಶಿಕ್ಷಣ ಪಡೆಯುತ್ತಲೇ ಅಬ್ದುಲ್ ಸಾಬ್ ಒಡನಾಟದಲ್ಲಿ ಬೀದಿನಾಟಕ ಮಾಡುತ್ತಾ ಅದು ಯಾಕೆ ? ತಮಾಷೆಗಾಗಿಯೋ ....., ಮನರಂಜನೆಗಾಗಿಯೋ........,ಇಲ್ಲ ಹೋರಾಟದ ಧೃಷ್ಟಿಯಿಂದಲೋ ಎಂಬುವುದನ್ನು ತಿಳಿಯದೆ ದುಮುಕಿದ್ದು. ಇಲ್ಲಿ ಯಾರು ಹೀಗೆ ಮಾಡಿ ... ಎಂದು ತೋರಿಸಿ ಕೊಡುವಂತಹ ಬುದ್ಧಿವಂತರಿರಲಿಲ್ಲ . ಆಗ ಸಹಜವಾಗಿ ನಮ್ಮ ಕಲಿಕೆಯ ತೀವ್ರತೆ ಹುಡುಕುತ್ತಾ ಹೊಸದರತ್ತ ತುಡಿತ ಸೆಳೆಯುತ್ತಿತ್ತು . ಇಲ್ಲಿ ಅಬ್ದುಲ್ ಕೇವಲ ಮಾರ್ಗದರ್ಶಕರಾಗಿ ನಮ್ಮನ್ನು ಮುಂದಕ್ಕೆ ದೂಡುತ್ತಿದ್ದರು. ಹೊಸತನಕ್ಕೆ ನಾವೇ ಅಣಿಯಾಗುತ್ತ ಸಾಗಿದ್ದು .

ಇಲ್ಲಿ
ನಾವು ಮಕ್ಕಳನ್ನು ಶಾಲೆಯಲ್ಲಿ ಅಥಾವ ಮನೆಯಲ್ಲಿ ಹೇಳಿಕೊಡುವಾಗ ಸ್ವತಂತ್ರ್ಯವಾಗಿ ಬದುಕುವ ಹಾಗೂ ತಮ್ಮ ಪ್ರಶ್ನೇ ಗಳನ್ನು ಬಗೆಹರಿಸಿಕೊಳ್ಳು ವಂಥಹ ವಾತಾವರಣವನ್ನು ನಾವು ಕಲ್ಪಿಸಿಕೊಡಬೇಕಾಗಿದೆ. ಮಕ್ಕಳಿಗೆ ಹೊಸತನದ ದಾರಿಗಳನ್ನು ಹೊರಹಾಕಬೇಕೆ ಹೊರತು ಹೀಗೆಯೇ ಆಗಬೇಕೆಂಬುವುದು ಬಯಸಬಾರದು . ಮೊದಲಿಗೆ ನಾವು (ಶಿಕ್ಷಕರು/ಪಾಲಕರು ) ಮುಕ್ತವಾಗಿದ್ದರೆ , ಸಹಜವಾಗಿ ಮಕ್ಕಳಿಂದ ಸೃಜನಶೀಲವಾದ ಚಿಂತನೆ ಹೊರಬರಲು ಸಾಧ್ಯ . ಅದು ಯಾವುದೇ ಕ್ಷೆತ್ರದಲ್ಲಿದ್ದರು ಒಂದು ಸ್ಥಳವಕಾಶವನ್ನು ಮಾಡಿಕೊಡಬೇಕಾದದ್ದು ಮುಖ್ಯವೆಂದೆನಿಸುತ್ತದೆ.

ಮಕ್ಕಳು ಮಾಡಿದ್ದನ್ನು ಸರಿಯಲ್ಲ ಎನ್ನುವುದಕ್ಕಿಂತ , ದಾರಿಯಲ್ಲಿ ತರಹದ ಸಮಸ್ಯಗಳು ಬರುತ್ತವೆ ... ಹೀಗೆ ಹೋದರೆ ಹೊಸ ಸವಾಲಗಳು ಹುಟ್ಟಿ ಕೊಳ್ಳುತ್ತವೆ ಎಂದು ಅರ್ಥೈಸಬೇಕು , ಹೇರಬಾರದು. ರಂಗಭೂಮಿ ವೃತ್ತಿ ಪರತೆಗೋ , ಹವ್ಯಾಸಕ್ಕೋ ಎಂಬ ಗೊಂದಲಗಳ ನಡುವೆ ಮಕ್ಕಳು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅವರಿಗೆ ಬಿಡಬೇಕು. ಆಯ್ಕೆ ಎಂದಾಕ್ಷಣ ಕೊನೆ ಎಂತಲ್ಲ ಅವರವರ ಯೋಚನೆಗಳಿಂದ ಆಯ್ಕೆಗಳು ಬದಲಾಗುತ್ತವೆ. ರಂಗಶಿಕ್ಷಣ ಎಂಥಹ ಸಮಸ್ಯಗಳನ್ನು ನಿಭಾಯಿಸುವ ಸಾಮರ್ಥ್ಯ ಹೆಚ್ಚುತ್ತದೆ ಎನ್ನುವುದು ನನ್ನ ಆಲೋಚನೆ .

ಗುರುರಾಜ

ಭಾನುವಾರ, ಸೆಪ್ಟೆಂಬರ್ 11, 2011

ಬುಧವಾರ, ಆಗಸ್ಟ್ 24, 2011

ನಮ್ಮ ಇಂಡಿಯಾ

ಭರತ ಖಂಡಕ್ಕೆ ನಮೋ
ಭರತ ಭೂಮಿಗೆ ನಮೋ
ಪುಣ್ಯ ಭರತಕ್ಕೆ ನಮೋ
ಪುಣ್ಯ | ಮಹಾತ್ಮರಿಗೆ | ನಮೋ ...... ನಮೋ

ಭರತಕ್ಕೆ ಕೈಗಾರಿಕೆ
ಭರತಕ್ಕೆ ಗಣಿಗಾರಿಕೆ
ಭರತಕ್ಕೆ ಹೃದಯಾರಿಕೆ
ಇವು | ಭರತಕ್ಕೆ | ಪ್ರಥಮ

ಭರತಕೆ ಕಿತ್ತೂರ ರಾಣಿ
ಭರತಕೆ ಮಹಾತ್ಮಗಾಂಧಿ
ಭರತಕೆ ಜವಾಹರಲಾಲ ನೆಹರು
ಇವರು | ಭಾರತಕ್ಕೆ | ಪುಣ್ಯದಾತರು
ಪುಣ್ಯ ಮಹಾತ್ಮರು | ಜನಿಸಿದರು ನಮ್ಮ ಇಂಡಿಯಾದಲ್ಲಿ

ನಮ್ಮ ಇಂಡಿಯಾ ..........
ನಮ್ಮ ಇಂಡಿಯಾ ..........

*************************
ಹುಲಿಗೆವ್ವ .ವೈ .ಪೂಜಾರ, ೧೦ ನೇ ತರಗತಿ

ಭಾನುವಾರ, ಆಗಸ್ಟ್ 21, 2011

ಸೋಮವಾರ, ಆಗಸ್ಟ್ 15, 2011

"ಮನ್ಹಪರಿವರ್ಥನೆ"


                       

                                          

ಗುರುವಾರ, ಆಗಸ್ಟ್ 4, 2011










ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ - ಹನುಮನಾಳ ದಲ್ಲಿ ನಮ್ಮ ಶಾಲೆಯ ಮಕ್ಕಳು " "ಮನ್ಹಪರಿವರ್ತನೆ" ನಾಟಕವನ್ನು ಪ್ರದರ್ಶಿಸಿದರು. ಅದರ ಕೆಲವು ಚಿತ್ರಗಳು ಇಲ್ಲಿವೆ.





ನಮ್ಮ ಶಾಲೆಯ ನೆಯ ತರಗತಿಯ ಮಕ್ಕಳು ೧೮..೨೦೧೧ ರಂದು ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದೆವು. ಹಿರಿಯ ಶಿಕ್ಷಕರಾದ ಶ್ರೀ ದತ್ತಾತ್ರೆಯಾ ಪತ್ತಾರ, ಅಮಿನಪ್ಪ ರಾಜುರ ,ಜಗಧೀಶ ಬಾಸಿಂಗದ ಹಾಗೂ ಗುರುರಾಜ ಮಕ್ಕಳೊಂದಿಗೆ ಕೂಡಿ ತೆಗೆಸಿದ ಚಿತ್ರಗಳು .


ಶುಕ್ರವಾರ, ಏಪ್ರಿಲ್ 29, 2011

ಐ.ಎಪ್.ಎ ಶಾಲೆಯಲ್ಲಿ ಕಾರ್ಯಗಾರ

ಅನುಪಮಾ, ವಿಶಾಲ ಪಾಟೀಲ ಮತ್ತು ಸತ್ಯನಾರಾಯಣ ಭಾಗವಹಿಸಿದ್ದರು.



ಕ್ಷೇತ್ರ ಶಿಕ್ಷಾಣಾಧಿಕಾರಿ ವೆಂಕಟೇಶ ಅವರು
ವಿಶಾಲ ಪಾಟಿಲ್
ಸತ್ಯನಾರಾಯಣ ಅವರು ಮಕ್ಕಳೊಂದಿಗೆ
ಶಾಲಾ ಸಿಬ್ಬಂದಿ ಹಾಗೂ ಎಸ್.ಡಿ.ಎಂ.ಸಿ ಅವರೊಂದಿಗೆ ಅನುಪಮಾ


ಕಲಿ ಕಲಿಸು ಕಾರ್ಯಗಾರ ತರಹದ ಚಟುವಟಿಕೆಗಳಲ್ಲಿ (ದೇಹದ ಚಲನೆ,ಗೊಂಬೆಯಾಟ ,ರಂಗಭೂಮಿ,ಸಂಗೀತ ಮತ್ತುಚಿತ್ರಕಲೆ) ನಮ್ಮ ಮಕ್ಕಳಲ್ಲಿ ಅದು ಗ್ರಾಮೀಣ ಪ್ರದೇಶದಲ್ಲಿ ನಾಟಕ ಎಂದಾಕ್ಷಣ ಕಿಳಾಗಿಯೇ ಕಾಣುವುದು, ಹಿರಿಯರೇ ಅದನ್ನುತುಂಭಾ ಆಶ್ಲಿಲತೆಗೆ ತಳ್ಳಿದ್ದು ಮಾತಿನಲ್ಲಿ ಅರ್ಥವಾಗುತ್ತಿತ್ತು. ನಾಟಕ ಕಥೆಗಳನ್ನೂ,ಪಾಠವನ್ನು ರಂಗ ರೂಪಕ್ಕೆ ತರುವ ಆಲೋಚನೆ . ಗೊಂಬೆಗಳನ್ನು ನಾವು ಅಲ್ಲಿ ಬಳಸಲು ಬಹುದು. ಸಂಗೀತವನ್ನು ರಂಗ ಗೀತೆಗಳ ಮೂಲಕ ಹಿಡಿದು ಜಾನಪದವನ್ನು ಬಳಿಸಿಕೊಳ್ಳುವಆಲೋಚನೆ. ಚಿತ್ರಕಲೆಯನ್ನು ವಿಜ್ಞಾನ ಇನ್ನು ಬೇರೆ ಬೇರೆ ಸಮಯಗಳಲ್ಲಿ ಬಳಸಿಕೊಳ್ಳುತ್ತಿದ್ದೆ. ಆದರೆ ಪ್ರಥಮವಾಗಿ ಹುದುಗರೆನು ಬಂದು ಬಿಡುತ್ತಿದ್ದರು. ಆದರೆ ಹುದುಗಿರ ಪಾಲ್ಗೊಳ್ಳುವಿಕೆ ಶಿಕ್ಷಕರಿಂದಲೇ ಹಿಂಜರಿತವಿತ್ತು. ಅದನ್ನು ಅನುಪಮಾ ನಮ್ಮ ಶಾಲೆಯಲ್ಲಿಒಂದು ದಿನದ ಕಾರ್ಯಗಾರದಲ್ಲಿ ಎಲ್ಲರ ಚಿಂತನೆಗಳನ್ನು ಬದಲಾಯಿಸುವಲ್ಲಿ ಸ್ವಲ್ಪವಾದರೂ ಸಹಾಯವಾಯಿತು. ಎಂದು ಹೇಳಲುಹರ್ಷವಾಗುತ್ತದೆ.
ಇನ್ನು ಇದು ಪ್ರಾರಂಭ. ಮುಂದಿನ ಹಂತಗಳಲ್ಲಿ ಸಾಕಷ್ಟು ಕೆಲಸಗಳು ನಡೆಯಲಿವೆ.

ಶನಿವಾರ, ಏಪ್ರಿಲ್ 16, 2011

ಚಿಟ್ಟೆಗಳ ಬಣ್ಣದ ಆಟ



ಚಿಟ್ಟೆಗಳ ಬಣ್ಣದ ಆಟ ಮಕ್ಕಳ ಬೇಸಿಗೆ ಶಿಬಿರ


ದಿನಾಂಕ : ೧೫.೦೪.೨೦೧೧ ರಿಂದ ೨೫.೦೪.೨೦೧೧ ರ ವರೆಗೆ


ಸ್ಥಳ : ಸಪ್ತಗಿರಿ ಆಂಗ್ಲ ಮಾಧ್ಯಮ ಶಾಲೆ, ಹೊಸಪೇಟೆ.


ಸಂಘಟಕರು : ಹೊಸಪೇಟೆ ಯುವ ವೇದಿಕೆ ಯಾ ಗೆಳೆಯರು.


ಸಂಪನ್ಮೂಲ ವ್ಯಕ್ತಿಗಳು : ಶ್ರೀ ಶಶಿಧರ ಪಾಟಿಲ , ರಂಗ ಅಧ್ಯಯನ ಕೆಂದ್ರದ ಪದವಿಧರರು, ರೋಣ


ಶ್ರೀ ವಾದಿರಾಜ ಕಲಾ ಶಿಕ್ಷಕರು, ಹೊಸಪೇಟೆ.


ಕುಮಾರಿ ಮಂಜುಳಾ , ಸಂಗೀತ ಶಿಕ್ಷಕಿ, ಮರಿಯಮ್ಮನಹಳ್ಳಿ