ಸ್ವೀಡಿಷ್ ಶಾಲಾ ಬಾಲಕಿ ಕರೆ ಗ್ರೇಟ್ ಥಾಂಬರ್ಗ ಎನ್ನೋ ಬಾಲಕಿ ನಮ್ಮ ಜಗತ್ತಿನ ತಾಪಾಮಾನದ ಕುರಿತು ಕೈಗೊಂಡ ಇಂದು ಜಗತ್ತಿನ ಎಲ್ಲೆಡೆ ಗಾಳಿಯಂತೆ ಹಬ್ಬಿ ಪ್ರಜ್ಞಾವಂತರ, ಶಿಕ್ಷಕರು ಹಾಗೂ ಮಕ್ಕಳೆಲ್ಲ ಜಾಗೃತರಾಗಿ ನಮ್ಮ ನಾಳೆಯ ಬದುಕಿಗಾಗಿ ಈ ತಾಪಮಾನವನ್ನು ಕಡಿಮೆ ಮಾಡಿ ನಾವೆಲ್ಲ ಕಡಿಮೆ ಮಾಡೋಣ ಎನ್ನುವ ರೀತಿಯಲ್ಲಿ ತಿಳುವಳಿಕೆಯು ಎಲ್ಲರಲ್ಲಿ ಸುಳಿದಾಡುತ್ತಿರುವುದು ಸಂತೋಷದ ಸಂಗತಿ.
ನಮ್ಮ ಸರಕಾರೀ ಪ್ರೌಢಶಾಲೆ ಹಾಗು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಅಡಿಯಲ್ಲಿ
ಕ್ಲೈಮೇಟ್ ಸ್ಟ್ರೈಕ್ (ಹವಾಮಾನ ಮುಷ್ಕರ) ಹಾಗೂ ಬೇಡಿಕೆ ಮತ್ತು ಪ್ರತಿಜ್ಞೆಗಳನ್ನು ಎಲ್ಲರೊಂದಿಗೆ ಸೇರಿ ಆಚರಿಸಲಾಯಿತು. ವಿಜ್ಞಾನ ಶಿಕ್ಷಕರಾದ ಸಂಗನಗೌಡ ಪಾಟೀಲ್ ಹಾಗು ಶಿವಪ್ಪ ಇಳಾಳ ಅವರು ಮಕ್ಕಳಿಗೆ ಹಾಗು ನೆರೆದೆವರೆಲ್ಲರಿಗೂ ಪ್ರತಿಜ್ಞೆಯನ್ನು ಮಾಡಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ನಾಟಕ ಶಿಕ್ಷಕರಾದ ಗುರುರಾಜ ಅವರು ವಹಿಸಿ ನಂತರದಲ್ಲಿ ಗುಡದೂರ ಕೆರೆ ನಾಟಕವನ್ನು ಪ್ರದರ್ಶಿಸಲಾಯಿತು.
Good initiative. Congrats to local KJVS members, students and staff
ಪ್ರತ್ಯುತ್ತರಅಳಿಸಿ