ಬುಧವಾರ, ಆಗಸ್ಟ್ 24, 2011

ನಮ್ಮ ಇಂಡಿಯಾ

ಭರತ ಖಂಡಕ್ಕೆ ನಮೋ
ಭರತ ಭೂಮಿಗೆ ನಮೋ
ಪುಣ್ಯ ಭರತಕ್ಕೆ ನಮೋ
ಪುಣ್ಯ | ಮಹಾತ್ಮರಿಗೆ | ನಮೋ ...... ನಮೋ

ಭರತಕ್ಕೆ ಕೈಗಾರಿಕೆ
ಭರತಕ್ಕೆ ಗಣಿಗಾರಿಕೆ
ಭರತಕ್ಕೆ ಹೃದಯಾರಿಕೆ
ಇವು | ಭರತಕ್ಕೆ | ಪ್ರಥಮ

ಭರತಕೆ ಕಿತ್ತೂರ ರಾಣಿ
ಭರತಕೆ ಮಹಾತ್ಮಗಾಂಧಿ
ಭರತಕೆ ಜವಾಹರಲಾಲ ನೆಹರು
ಇವರು | ಭಾರತಕ್ಕೆ | ಪುಣ್ಯದಾತರು
ಪುಣ್ಯ ಮಹಾತ್ಮರು | ಜನಿಸಿದರು ನಮ್ಮ ಇಂಡಿಯಾದಲ್ಲಿ

ನಮ್ಮ ಇಂಡಿಯಾ ..........
ನಮ್ಮ ಇಂಡಿಯಾ ..........

*************************
ಹುಲಿಗೆವ್ವ .ವೈ .ಪೂಜಾರ, ೧೦ ನೇ ತರಗತಿ

ಭಾನುವಾರ, ಆಗಸ್ಟ್ 21, 2011

ಸೋಮವಾರ, ಆಗಸ್ಟ್ 15, 2011

"ಮನ್ಹಪರಿವರ್ಥನೆ"


                       

                                          

ಗುರುವಾರ, ಆಗಸ್ಟ್ 4, 2011










ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ - ಹನುಮನಾಳ ದಲ್ಲಿ ನಮ್ಮ ಶಾಲೆಯ ಮಕ್ಕಳು " "ಮನ್ಹಪರಿವರ್ತನೆ" ನಾಟಕವನ್ನು ಪ್ರದರ್ಶಿಸಿದರು. ಅದರ ಕೆಲವು ಚಿತ್ರಗಳು ಇಲ್ಲಿವೆ.





ನಮ್ಮ ಶಾಲೆಯ ನೆಯ ತರಗತಿಯ ಮಕ್ಕಳು ೧೮..೨೦೧೧ ರಂದು ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದೆವು. ಹಿರಿಯ ಶಿಕ್ಷಕರಾದ ಶ್ರೀ ದತ್ತಾತ್ರೆಯಾ ಪತ್ತಾರ, ಅಮಿನಪ್ಪ ರಾಜುರ ,ಜಗಧೀಶ ಬಾಸಿಂಗದ ಹಾಗೂ ಗುರುರಾಜ ಮಕ್ಕಳೊಂದಿಗೆ ಕೂಡಿ ತೆಗೆಸಿದ ಚಿತ್ರಗಳು .


ಶುಕ್ರವಾರ, ಏಪ್ರಿಲ್ 29, 2011

ಐ.ಎಪ್.ಎ ಶಾಲೆಯಲ್ಲಿ ಕಾರ್ಯಗಾರ

ಅನುಪಮಾ, ವಿಶಾಲ ಪಾಟೀಲ ಮತ್ತು ಸತ್ಯನಾರಾಯಣ ಭಾಗವಹಿಸಿದ್ದರು.



ಕ್ಷೇತ್ರ ಶಿಕ್ಷಾಣಾಧಿಕಾರಿ ವೆಂಕಟೇಶ ಅವರು
ವಿಶಾಲ ಪಾಟಿಲ್
ಸತ್ಯನಾರಾಯಣ ಅವರು ಮಕ್ಕಳೊಂದಿಗೆ
ಶಾಲಾ ಸಿಬ್ಬಂದಿ ಹಾಗೂ ಎಸ್.ಡಿ.ಎಂ.ಸಿ ಅವರೊಂದಿಗೆ ಅನುಪಮಾ


ಕಲಿ ಕಲಿಸು ಕಾರ್ಯಗಾರ ತರಹದ ಚಟುವಟಿಕೆಗಳಲ್ಲಿ (ದೇಹದ ಚಲನೆ,ಗೊಂಬೆಯಾಟ ,ರಂಗಭೂಮಿ,ಸಂಗೀತ ಮತ್ತುಚಿತ್ರಕಲೆ) ನಮ್ಮ ಮಕ್ಕಳಲ್ಲಿ ಅದು ಗ್ರಾಮೀಣ ಪ್ರದೇಶದಲ್ಲಿ ನಾಟಕ ಎಂದಾಕ್ಷಣ ಕಿಳಾಗಿಯೇ ಕಾಣುವುದು, ಹಿರಿಯರೇ ಅದನ್ನುತುಂಭಾ ಆಶ್ಲಿಲತೆಗೆ ತಳ್ಳಿದ್ದು ಮಾತಿನಲ್ಲಿ ಅರ್ಥವಾಗುತ್ತಿತ್ತು. ನಾಟಕ ಕಥೆಗಳನ್ನೂ,ಪಾಠವನ್ನು ರಂಗ ರೂಪಕ್ಕೆ ತರುವ ಆಲೋಚನೆ . ಗೊಂಬೆಗಳನ್ನು ನಾವು ಅಲ್ಲಿ ಬಳಸಲು ಬಹುದು. ಸಂಗೀತವನ್ನು ರಂಗ ಗೀತೆಗಳ ಮೂಲಕ ಹಿಡಿದು ಜಾನಪದವನ್ನು ಬಳಿಸಿಕೊಳ್ಳುವಆಲೋಚನೆ. ಚಿತ್ರಕಲೆಯನ್ನು ವಿಜ್ಞಾನ ಇನ್ನು ಬೇರೆ ಬೇರೆ ಸಮಯಗಳಲ್ಲಿ ಬಳಸಿಕೊಳ್ಳುತ್ತಿದ್ದೆ. ಆದರೆ ಪ್ರಥಮವಾಗಿ ಹುದುಗರೆನು ಬಂದು ಬಿಡುತ್ತಿದ್ದರು. ಆದರೆ ಹುದುಗಿರ ಪಾಲ್ಗೊಳ್ಳುವಿಕೆ ಶಿಕ್ಷಕರಿಂದಲೇ ಹಿಂಜರಿತವಿತ್ತು. ಅದನ್ನು ಅನುಪಮಾ ನಮ್ಮ ಶಾಲೆಯಲ್ಲಿಒಂದು ದಿನದ ಕಾರ್ಯಗಾರದಲ್ಲಿ ಎಲ್ಲರ ಚಿಂತನೆಗಳನ್ನು ಬದಲಾಯಿಸುವಲ್ಲಿ ಸ್ವಲ್ಪವಾದರೂ ಸಹಾಯವಾಯಿತು. ಎಂದು ಹೇಳಲುಹರ್ಷವಾಗುತ್ತದೆ.
ಇನ್ನು ಇದು ಪ್ರಾರಂಭ. ಮುಂದಿನ ಹಂತಗಳಲ್ಲಿ ಸಾಕಷ್ಟು ಕೆಲಸಗಳು ನಡೆಯಲಿವೆ.

ಶನಿವಾರ, ಏಪ್ರಿಲ್ 16, 2011

ಚಿಟ್ಟೆಗಳ ಬಣ್ಣದ ಆಟ



ಚಿಟ್ಟೆಗಳ ಬಣ್ಣದ ಆಟ ಮಕ್ಕಳ ಬೇಸಿಗೆ ಶಿಬಿರ


ದಿನಾಂಕ : ೧೫.೦೪.೨೦೧೧ ರಿಂದ ೨೫.೦೪.೨೦೧೧ ರ ವರೆಗೆ


ಸ್ಥಳ : ಸಪ್ತಗಿರಿ ಆಂಗ್ಲ ಮಾಧ್ಯಮ ಶಾಲೆ, ಹೊಸಪೇಟೆ.


ಸಂಘಟಕರು : ಹೊಸಪೇಟೆ ಯುವ ವೇದಿಕೆ ಯಾ ಗೆಳೆಯರು.


ಸಂಪನ್ಮೂಲ ವ್ಯಕ್ತಿಗಳು : ಶ್ರೀ ಶಶಿಧರ ಪಾಟಿಲ , ರಂಗ ಅಧ್ಯಯನ ಕೆಂದ್ರದ ಪದವಿಧರರು, ರೋಣ


ಶ್ರೀ ವಾದಿರಾಜ ಕಲಾ ಶಿಕ್ಷಕರು, ಹೊಸಪೇಟೆ.


ಕುಮಾರಿ ಮಂಜುಳಾ , ಸಂಗೀತ ಶಿಕ್ಷಕಿ, ಮರಿಯಮ್ಮನಹಳ್ಳಿ

ಮಂಗಳವಾರ, ಏಪ್ರಿಲ್ 12, 2011

ವಿಜ್ಞಾನದ ಕಾರ್ಯಾಗಾರವನ್ನು ವಿಜ್ಞಾನದ ಶಿಕ್ಷಕರಿಲ್ಲದ ಕಾರಣ
ನಾವು ಅದನ್ನು ಬೆರೆಯಾ ಚಿಂತನೆಯಲ್ಲಿ ಇಡೀ ಯೋಜನೆಯನ್ನು
ತೆಗೆದುಕೊಂಡು ಹೋಗಿ ಅದರ ಕೆಲವು ಛಾಯ ಚಿತ್ರಗಳು ಇಲ್ಲಿ ಹಾಕಲಾಗಿದೆ.



















ಶನಿವಾರ, ಮಾರ್ಚ್ 5, 2011

ಮರೆಯಲಾಗದ ಕಲ್ಪನೆ

ನಿಮ್ಮ ನೆನಪು



ಬರೆಯಲಾಗದ ಚಿತ್ರ



ನಿಮ್ಮ ಮನಸ್ಸು



ಬಿಡಿಸಲಾಗದ ಬಂಧನ



ನಿಮ್ಮ ಸ್ನೇಹ



===============



ಕಲೆಗಾರ ನಾನಲ್ಲ



ಕವಿಗಾರ ನಾನಲ್ಲ



ಭಾವನೆ ಗಳೊಂದಿಗೆ



ಬದುಕುವುದ ಬಿಟ್ಟು



ಬೇರೇನೂ ಗೊತ್ತಿಲ್ಲ



ಆಸ್ತಿಯು ನನಗಿಲ್ಲ



ಆಸೆಯು ನನಗಿಲ್ಲ



ನಿಮ್ಮ ಸ್ನೇಹ ಬಿಟ್ಟು



ಬೇರೇನೂ ಬೇಕಿಲ್ಲ



==================



ವಚನ ಎಸ್. ಬಂಡಿ , ೭ ನೆ ತರಗತಿ



***********************



ಬುಧವಾರ, ಫೆಬ್ರವರಿ 16, 2011

ದತ್ತಾತ್ರೇಯ ಎಸ್. ಪತ್ತಾರ

ಬಹುಶ ಇದು ೧೯೭೮ ರ ಚಿತ್ರ ಇದು ಸದ್ಯ ಅಂದರೆ ವರ್ಷದ ಚಿತ್ರ





ಸದ್ಯ ಅಂದರೆ ೨ ವರ್ಷಗಳಾಗಿವೆ ನಾವು ಕೆಲಸಕ್ಕೆ ಸೇರಿ ಆದರೆ ಈ ನಮ್ಮ ಸಹೋಧ್ಯೋಗಿ ನಾನು ಹುಟ್ಟುವುದಕ್ಕು ಮುಂಚೆ ಕೆಲಸ ಪ್ರಾರಂಭಿಸಿದವರು. ಅವರ ಅನುಭವಗಳನ್ನು ಕೇಳಿದರೆ, ಮೈ ರೋಮಾಂಚನವಾಗುತ್ತದೆ. ಇಂದು ಅವರೊಂದಿಗೆ ನಾವೆಲ್ಲರೂ ತಮಾಷೆ ಯೊಂದಿಗೆ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಾ ನಮ್ಮೆಲ್ಲರಿಗೂ ತಮ್ಮ ಹಿಂದೆ ಕಳೆದ ಸ್ಥಿತಿಗಳನ್ನು ತಿಳಿಸಿರುತ್ತಾರೆ. ನಿಜವೆಂದರೆ ಆಗಿನ ಕಾಲದ ಶಿಕ್ಷಣ ಹಾಗೂ ವ್ಯವಸ್ಥೆ ಇದ್ದುದನ್ನು ನಮ್ಮೊಂದಿಗೆ ಅವರು ಹಂಚಿಕೊಳ್ಳುವಾಗ "ನಿಜಾನಾ.... ಮೊದಲೆಲ್ಲ ಹಾಗಿತ್ತಾ " ಎಂಬ ಆಲೋಚನೆಗಳು ನಮ್ಮನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ.
ಇವರ ಕುರಿತು ನಾನು ಸದಾ ಕೆದುಕುತ್ತಾ ಅವರ ಹಿಂದಿನ ಶಿಕ್ಷಣ ಬದುಕನ್ನು ಇಲ್ಲಿ ಇಡಲು ಆಸಕ್ತನಾಗಿದ್ದೇನೆ.


ಭಾನುವಾರ, ಫೆಬ್ರವರಿ 6, 2011

ಮುಂದಿನ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನ ಗಂಗಾವತಿಯಲ್ಲಿ ನಡೆಸಲು ನಿರ್ದಾರಿಸುವುದು ಸ್ವಾಗತಾರ್ಹ ....

ಬುಧವಾರ, ಫೆಬ್ರವರಿ 2, 2011


ಗದಗ ಜಿಲ್ಲಾ ನೇ ಕನ್ನಡ ಸಾಹಿತ್ಯ ಸಮ್ಮೇಳನ - ೧೧

ಗಜೇಂದ್ರಗಡ

ಸಿದ್ಧವಾದ ನಾಟಕ ಪ್ರದರ್ಶನ ಪಕ್ಕದ ಶಾಲೆಗಳಲ್ಲಿ ನೀಡಲು ಹೋಗುವಾಗ ನಾವು ಎತ್ತಿನ ಬಂಡಿಯಲ್ಲಿ ಮಕ್ಕಳೊಂದಿಗೆಹೋಗುವುದೆಂದು ಯೋಚಿಸಿ ತಯಾರಿ ಮಾಡಿಕೊಂಡು ಹೊರಟಾಗ ಮಕ್ಕಳ ಪಾಲಕರ ಜೊತೆ ಊರಿನ ಸಮಸ್ತರಿಗೂ ಆಶ್ಚರ್ಯ ಹಾಗೂ ಕೌತುಕ. ನಾಟ ಮಾಡಿಸಿದರೆ ಮುಗಿಯೋದಿಲ್ಲ ಅದನ್ನು ಸಮಾಜದ ಮುಂದೆ ಪ್ರಸ್ತುತ ಪಡಿಸುವುದು ಬಹಳ ಮುಖ್ಯ.











ಬುಧವಾರ, ಜನವರಿ 19, 2011

ಮೊದಲು ನಾನು ಅರಳು ಮೊಗ್ಗು ರಂಗ್ ಶಿಬಿರಕ್ಕೆ ಸಾವಿರ ಪ್ರಣಾಮಗಳನ್ನುಸಲ್ಲಿಸಲು ಬಯಸುತ್ತೇನೆ. ಏಕೆಂದರೆ ಸಿಬಿರವುಮಕ್ಕಳ ಪ್ರತಿಬೆಯನ್ನು ಹೊರ ತಂದು ಅದನ್ನು ಮುನ್ನೆಡೆಸುವ ವಿಶಾಲ ಉದ್ದೇಶ ಹಾಗು ಗುರಿಗಳನ್ನು ಹೊಂದಿದೆ. ಇಂತಹ ರಂಗಶಿಬಿರವನ್ನು ನಮ್ಮ ಶಾಲೆಯಲ್ಲಿ ನಡೆಸಿದ್ದು ನಮಗೆ ತುಂಬಾ ಹೆಮ್ಮೆಯ ಸಂಗತಿ.

ಶ್ರೀಧರ
೯ನೆಯ ತರಗತಿ

ಶನಿವಾರ, ಡಿಸೆಂಬರ್ 25, 2010

ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ - ಶಿಬಿರದ ದಿನಗಳಲ್ಲಿ



ಮಕ್ಕಳ ನಾಟಕ 
ಗುರುರಾಜ ಅವರ ನಿರ್ಧೆಶನದಲ್ಲಿ ಉತ್ತಮವಾಗಿ ಮೂಡಿಬಂದಿದೆ.

ಶರಣಪ್ಪ ವಡಿಗೇರಿ , ಜನಪದ ಕಲಾವಿದರು




























































  ಕರ್ನಾಟಕ ಸರ್ಕಾರ

      ಕರ್ನಾಟಕ ಬಾಲ ವಿಕಾಸ ಅಕಾಡೆಮಿ-ಧಾರವಾಡ
       ಇವರ ಆಶ್ರಯದಲ್ಲಿ

       “ಅರಳು ಮೊಗ್ಗು” ಮಕ್ಕಳ ರಂಗ ಶಿಬಿರ


          ಸಮಾರೋಪ ಸಮಾರಂಭ

    ಹಾಗೂ

         ನಾಟಕ "ಕತ್ತಲೆ ನಗರ ತಲೆಕೆಟ್ಟರಾಜ"
                                                              ನಿ : ಗುರುರಾಜ, ಹೊಸಪೇಟೆ




ಉದ್ಘಾಟನೆ :  ಝಾಕೀರ ಹುಸೇನ್ ತಾ.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ
ಅಧ್ಯಕ್ಷತೆ :   ಕುಮಾರಿ ರಶ್ಮೀ, ಪ್ರಾಂಶುಪಾಲರು ಮೊ.ದೇ.ವ.ಶಾಲೆ,ನಿಡಶೇಸಿ
ಅತಿಥಿಗಳು :  ಶ್ರೀ ಬಸವರಾಜ ಬಾಗಲಿ, ಶಿಕ್ಷಣ ಸಂಯೋಜಕರು
             ಶರಣಪ್ಪ ವಡಗೇರಿ, ಜಾನಪದ ಕಲಾವಿದ
             ಶ್ರೀ ಈಶಪ್ಪ ತಳವಾರ  ಮು.ಗು.ಸರ್ಕಾರಿಪ್ರೌಢಶಾಲೆ,ಜಾಹಗೀರಗುಡದೂರ
             ಶ್ರೀ ಶಿವಪುತ್ರಪ್ಪ 


ದಿನಾಂಕ 18.12.2010 ಬೆ : 11.00 ಕ್ಕೆ
ಸ್ಥಳ : ಗುರು ಭವನ, ಕುಷ್ಟಗಿ


ಸರ್ವರಿಗೂ ಸ್ವಾಗತ

ಕರ್ನಾಟಕ ಬಾಲ ವಿಕಾಸ ಅಕಾಡೆಮಿ-ಧಾರವಾಡ

ಶ್ರೀ ಮೊರಾರ್ಜ ದೇಸಾಯಿ ವಸತಿ ಶಾಲೆ,ನಿಡಶೇಸಿ, ಶಿಕ್ಷಕವರ್ಗ



ಅರಳು ಮೊಗ್ಗು - ರಂಗ ತರಬೇತಿ












ಅರಳುಮೊಗ್ಗು 

 ನಮ್ಮ ನಾಟಕ ಶಿಕ್ಷಕರಾದ ಗುರುರಾಜ್ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇವೆ ಏಕೆಂದರೆ ಇಡೀ ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಆರಿಸಿಕೊಂಡಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ. ಗುರುರಾಜ್ ಸರ್ ಅವರು ನಮಗೆ 15 ದಿನಗಳವರೆಗೆ ತರಬೇತಿ ಕೊಟ್ಟು 6 ಶಾಲೆಯಲ್ಲಿ ನಾಟಕವನ್ನು ಪ್ರದರ್ಶಿಸಿದೆವು. ಈ ನಾಟಕದ ಹೆಸರು ಕತ್ತಲೆ ನಗರಿ ತಲೆಕೆಟ್ಟ ರಾಜ ಇದು 9ನೇ ತರಗತಿಯ ಹಿಂದಿ ಪಾಠ ದಲ್ಲಿದೆ.
 ಗುರುರಾಜ್ ಸರ್ ಅವರು ನಮ್ಮಲ್ಲಿ 15 ದಿನಗಳ ತರಬೇತಿಯಲ್ಲಿ ನಮಗೆ ಬಲೂನಿನ ಮುಖವಾಡಗಳ ತಯಾರಿಕೆ ಮಣ್ಣಿನ ಮುಖವಾಡಗಳ ತಯಾರಿಕೆ ತಿಳಿಸಿದರು ನಂತರ ಅನೇಕ ರೀತಿಯ ಆಟಗಳನ್ನು ಇದರಿಂದ ನಮಗೆ ಕವಿಗಳ ಹೆಸರುಗಳು ತಿಳಿದವು. ನಮ್ಮ ಪಾಠ ಪುನರಾವರ್ತನೆಯಾಯಿತು. ಕೆಲವು ದಿನಗಳ ನಂತರ ಎಲ್ಲರಿಂದ ಅನೇಕ ಚಟುವಟಿಕೆಗಳನ್ನು ಮಾಡಿಸಿದರು. ಅದರಿಂದ ಧ್ವನಿಗಳ ಆಧಾರದ ಮೇಲೆ ಅವರಿಗೆ ಪಾತ್ರಗಳನ್ನು ಹಂಚಿದರು ನಮ್ಮ ಶಾಲೆಯಲ್ಲಿನ ವಸ್ತುಗಳನ್ನೇ ಬಳಸಿ ಅನೇಕ ನಾಟಕಕ್ಕೆ ಬೇಕಾಗುವ ಪೀಠೋಪಕರಣಗಳನ್ನು ಮಾಡಿಸಿದರು. ಕೆಲವು ದಿನಗಳ ನಂತರ ನಮ್ಮ ನಾಟಕದ ಅಭ್ಯಾಸವು ಪೂರ್ಣವಾಗಿ ಮುಗಿಸಿ 6 ಶಾಲೆಗಳಿಗೆ ಭೇಟಿ ನೀಡಿದೆವು. ಅವುಗಳೆಂದರೆ ಹನುಮಸಾಗರ, ತಳವಗೇರಾ, ಕೊರಡಕೆರ, ಮಾವಿನ ಇಟಗಿ ಮಕ್ಕಳಿಗೆ ನಮ್ಮ ಗುರುಗಳು ಕಲಿಸಿದ ಪಾಠಗಳನ್ನು ಕಲಿಸಿದ ನಂತರ ಕೊನೆಯದಾಗಿ ಕುಷ್ಟಗಿಯಲ್ಲಿ ನಮ್ಮ ಪ್ರದರ್ಶನದಲ್ಲಿ ಅನೇಕ ಶಾಲಾ ಕಾಲೇಜುಗಳಿಂದ ಬಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಮ್ಮ ನಾಟಕವನ್ನು ನೋಡಿ ಆನಂದಿಸಿದರು ಇದು ನಮ್ಮ ಅನಿಸಿಕೆಯಾಗಿದೆ. 

ಕಾವ್ಯ ಬಿ ಬಿಂಗಿ ಕೊಪ್ಪದ 
9ನೇ ತರಗತಿ 
ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ,
ನಿಡಶೇಸಿ.











ಜೀವಕಳೆ ನೀಡಿದ ನಾಟಕ ಪ್ರದರ್ಶನ


ಕರ್ನಾಟಕ ಬಾಲವಿಕಾಸ ಅಕಾಡೆಮಿಯ ವತಿಯಿಂದ ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದಲ್ಲಿರುವ ಶ್ರೀ ಮೊರಾರ್ಜಿ ದೇಸಾಯಿವಸತಿ ಶಾಲೆಯಲ್ಲಿ೧೫ ದಿನಗಳ "ಅರಳು ಮೊಗ್ಗು " ಮಕ್ಕಳ ರಂಗ ಶಿಬಿರ ವನ್ನು ನಡೆಸಿ ಬೇರೆ ಬೇರೆ ೫ ಊರಿನ ಶಾಲೆಗಳಲ್ಲಿನಾಟಕ ಪ್ರದರ್ಶನದ ಜೊತೆಗೆ ಅಲ್ಲಿಯ ಮಕ್ಕಳಿಗೆ ನಮ್ಮ ಶಿಬಿರಾರ್ಥಿಗಳು ರಂಗಾ ಟಗಳು, ರಂಗಾ ಗಿತೆಗಳನ್ನುಹೇಳಿಕೊಟ್ಟರು. ಇಲ್ಲಿನಾವು ೧೫ ದಿನಗಳ ರಂಗಾ ತರಬೇತಿಯ ಮಕ್ಕಳ ತರಬೇತಿಯ ಛಾಯಾ ಚಿತ್ರಗಳನ್ನು ಹಾಕಿದ್ದೇನೆ.



ಗುರುರಾಜ .ಎಲ್

























ಇಂದಿನ ನಾಟಕ ಪ್ರದರ್ಶನ "ಕತ್ತಲೆ ನಗರ ತಲೆಕೆಟ್ಟ ರಾಜ " ಚೆನ್ನಾಗಿ ಮುಡಿ ಬಂದಿದೆ. ಮಕ್ಕಳ ನೈಜ ಪ್ರತಿಭೆ- ನಾಟಕ ಪಾತ್ರಕ್ಕೆ ಜೀವ ತುಂಬಿ ಜೀವಕಳೆ ನೀಡಿ ನಾಟಕ ಪ್ರದರ್ಶನ ಮಾಡಿದ್ದು ತುಂಭಾ ಶ್ಲಾಘನೀಯ. ನಿರ್ಧೇಶನ ನೀಡಿದ ಶ್ರೀ ಗುರುರಾಜ ರವರಿಗೆ ಧನ್ಯಾವಾದಗಳು.

ಶ್ರೀ ಬಸವರಾಜ ಬಾಗಲಿ
ಶಿಕ್ಷಣ ಸಂಯೋಜಕರು , ಕುಷ್ಟಗಿ