ಗುರುವಾರ, ಡಿಸೆಂಬರ್ 27, 2018

ನಾಟಕ ಸಾಹಿತ್ಯ ಹಾಗೂ ಪ್ರಯೋಗಗಳು







ಪಠ್ಯ ಸಾಹಿತ್ಯವನ್ನು ನಾಟಕೀಯಗೊಳಿಸಿಕೊಂಡು ಅಭ್ಯಾಸ ಮಾಡಿದರೇ ಅದು ಶಾಶ್ವತವಾಗಿ ನಮ್ಮಲ್ಲಿ ಉಳಿಯುತ್ತದೆ. ಪಾಠವನ್ನು ಕುರುಡು ರೀತಿಯಲ್ಲಿ ಓದಿದರೆ ಅದರ ವ್ಯಾಲಿಡಿಟಿ ಕಮ್ಮಿ ಅದೇ ನಾವು ಓದುವ ಯಾವುದೇ ಸಾಹಿತ್ಯವನ್ನು ಮನಸ್ಸಿನಿಂದ ಅನುಭವಿಸಿ ಅಭ್ಯಾಸ ಮಾಡಿದರೇ ಅದು ಅಚ್ಚಿನಂತೆ ಮನಸ್ಸಲ್ಲಿ ಕಾಯಂ ಆಗಿ ಉಳಿದಿರುತ್ತದೆ. ಸಾಹಿತ್ಯ ಪ್ರಕಾರದಲ್ಲಿ ನಾಟಕ ಸಾಹಿತ್ಯ ಓದುಗರ  ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ನಮ್ಮ ಪಠ್ಯಗಳನ್ನೇ ನಾವು ಅಭಿನಯ ಮೂಲಕ ಅಭ್ಯಾಸ ಮಾಡಿದರೆ ಅದು ಮಾಡುವವರ ಹಾಗು ನೋಡುವವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದು ಬಿಡುತ್ತದೆ. ಗಾಂಧೀಜಿ ಅವರಿಗೆ ಸತ್ಯ ಹರಿಶ್ಚಂದ್ರ ಹಾಗು ಶ್ರವಣ ಕುಮಾರ ನಾಟಕಗಳು ಅವರ ಇಡೀ ಜೀವನವನ್ನೇ ಬದಲಾಯಿಸಿ ಬಿಟ್ಟಿತು. ಹೀಗಾಗಿ ನಾಟಕ ಸಾಹಿತ್ಯ ಹಾಗೂ ಪ್ರಯೋಗಗಳು ಮಕ್ಕಳನ್ನು ತಮ್ಮೊಳಗೆ ತಮ್ಮನ್ನು ವಿಮರ್ಶಿಸಿ ಕೊಳ್ಳುವಂತೆ ಮಾಡುತ್ತದೆ. 

ಮಕ್ಕಳ ಹಕ್ಕುಗಳ ಗ್ರಾಮಸಭೆ - ಜಹಗೀರಗುಡದೂರ

ಬುಧವಾರ, ಡಿಸೆಂಬರ್ 26, 2018

ಭಾನುವಾರ, ಡಿಸೆಂಬರ್ 23, 2018

ಗಾಂಧೀಜಿಯವರ ಜೀವನ ಪಯಣ( ಶೈಕ್ಷಣಿಕ ಲೇಖನ)


                                                  -    ಶ್ರೀ ತಿಪ್ಪಣ್ಣ ರಾಮದುರ್ಗ

ಭಾಷೆ ನಿತ್ಯ ಜೀವನದ ಸಂಜೀವಿನಿ. ಮಾತೃ ಭಾಷೆಯ ಮೂಲಕ ಕಲಿತ ಕಲಿಕೆ ಸಂತಸದಾಯಕವೂ ಹೌದು, ಇಂತಹ ಸಂತಸದಾಯಕ, ಆಸಕ್ತಿಯುತ ಕಲಿಕೆಗೆ ಉತ್ತಮ ನಿದರ್ಶನವೇ, ನಮ್ಮ ಶಾಲೆಯಲ್ಲಿ ದಿನಾಂಕ ೧೭.೧೨.೨೦೧೮ ರಂದು ರಂಗಾಯಣ ತಂಡ ಧಾರವಾಡದವರಿಂದ ಬೊಳವಾರ ಮಹಮ್ಮದ ಕುಂಇ್ ರವರ ಪಾಪು ಗಾಂಧಿ ಬಾಪು ಗಾಂಧಿ ಕಾದಂಬರೊ ಆಧಾರಿತ ನಾಟಕ ನಮ್ಮೆಲ್ಲರನ್ನು ಬಾವುಕರನ್ನಾಗಿಸಿ ಅಂತಪ್ರಜ್ಞೆಯನ್ನು ಮೂಡಿಸಿ ದೇಶದ ನಾಡಿನ ಬಗ್ಗೆ ಗಾಂಧೀಜಿಯವರ ಹುಟ್ಟಿನಿಂದ ಜೀವನದ ಕೊನೆಯ ಕ್ಷಣದವರೆಗಿನ ಮಹತ್ವದ ಘಟನೆಗಳನ್ನು ಆಧಾರಿಸಿದ ಪಾಪು ಗಾಂಧಿ - ಬಾಪು ಗಾಂಧಿ ಕೃತಿಗೆ 'ಕೇಂದ್ರ ಸಾಹಿತ್ಯ ಅಕಾಡೆಮಿ' ಪ್ರಶಸ್ತಿ ಲಭಿಸಿದೆ.

ನಾಟಕದ ಹಿಂದಿನ ದಿನದಿಂದಲೂ ಬಹಳಷ್ಟು ಕುತೂಹಲ ಕೆರಳಿಸಿದ ನಾಟಕ ಇದಾಗಿತ್ತು. ೧೭/೧೨/೨೦೧೮ ರಂದು ಮಧ್ಯಾಹ್ನ ೨.೦೦ ಗಂಟೆಗೆ ನಮ್ಮ ಶಾಲೆಯನ್ನು ಪ್ರವೇಶಿಸಿದ ತಂಡದ ಎರಡು ವಾಹನಗಳನ್ನು ನೋಡಿದಾಗ ನಮ್ಮ ವಿದ್ಯಾರ್ಥಿ ವಿದ್ಯಾರ್ಥಿಯೆಲ್ಲರೂ ಸಂಭ್ರಮಿಸಿದರು. ಕಲಾವಿದರೆಲ್ಲರೂ ಊಟ ಮಾಡುವಷ್ಟರಲ್ಲಿ ನಮ್ಮ ಜಹಗೀರಗುಡದೂರ ಕ್ಲಸ್ಟರ್ ವ್ಯಾಪ್ತಿಯ ಬಹುತೇಕ ಶಾಲೆಗಳ ಆಸಕ್ತಿಯಿರುವಂತಹ ಶಿಕ್ಷಕರೆಲ್ಲರೂ ಸೇರಿಕೊಂಡರು. ಗ್ರಾಮದ ಜನತೆಯು ಪಾಲ್ಗೊಂಡಿತ್ತು.

ನಾಟಕ ಪ್ರಾರಂಭವಾದಾಗ ೩ ಗಂಟೆ ೪೦ ನಿಮಿಷ.... ಗಾಂಧೀಜಿಯವರ ಜನನದೊಂದಿಗೆ ಆರಂಭವಾದ ನಾಟಕ, ಗಾಂಧೀಜಿಯವರ ಬಾಲ್ಯ ಜೀವನದ ತುಂಟಾಟಗಳು, ವಿದ್ಯಭ್ಯಾಸದ ಕುರಿತು ಕಲಾವಿದರು ಮನೋಜ್ಞವಾದ ಅಭಿನಯವನ್ನು ನೀಡಿ ನಮ್ಮೆಲ್ಲರ ಮನಸ್ಸುನ್ನು ಪ್ರಫುಲ್ಲಗುಳಿಸಿದರು. ಗಾಂಧೀಜಿಯವರ ಬಾಲ್ಯಜೀವನದ ಕತೆ ಕೇಳಿ ಮಕ್ಕಳಂತೂ ಸಾಕಷ್ಟು ತಿಳಿದುಕೊಂಡರು.

ಗಾಂಧೀಜಿಯವರ ಬ್ಯಾರಿಸ್ಟರ್ ಪದವಿ ಪಡೆಯಲು ಇಂಗ್ಲೇಂಡಿಗೆ ಹೋದ ದಿನಗಳು ಅದ್ಬುತವಾಗಿ ಮರುಕಳಿಸುವಲ್ಲಿ ಕಲಾವಿಧರ ನಟನೆ ಮತ್ತು ಶ್ರಮ ಇತ್ತು. ಇಡೀ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದರ ಜೊತೆಗೆ ಸಮರ್ಪಕವಾದ ವಿಷಯದ ವಿವರಣೆಯನ್ನು ಅಚ್ಚುಕಟ್ಟಾಗಿ ತಿಳಿಸಿಕೊಟ್ಟರು.
ಗಾಂಧೀಜಿಯವರು ಬ್ಯಾರಿಸ್ಟರ್ ಪದವಿ ಪಡೆದು ಕೆಲಸಕ್ಕೆಂದು ದಕ್ಷಿಣ ಆಫ್ರೀಕಾಕ್ಕೆ ಹೋದ ದಿನಗಳನ್ನು ಕಲಾವಿದರು ರೀತಿ ಮತ್ತು ಅಭಿನಯ ನನ್ನ ಮನಸ್ಸನ್ನು ಸೊರೆಗೊಂಡಿತು. ದ.ಆಫ್ರಿಕಾದಲ್ಲಿ ಗಾಂಧೀಜಿಯವರು ಅನುಭವಿಸಿದ ಯಾತನೆ, ಅವಮಾನ ಭಾರತೀಯರಿಗಾಗುತ್ತಿದ್ದ ಕಿರುಕುಳ ತೊಂದರೆಗಳನ್ನು ವಿರೋಧಿಸಿ ಪ್ರಾರಂಭಿಸಿದ ಹೋರಾಟ ಮನಮುಟ್ಟುವಂತಿತ್ತು.



ನಮ್ಮ ಶಾಲೆಯಲ್ಲಿರುವ ನಾಟಕ ಶಿಕ್ಷಕರಾದ ಗುರುರಾಜ ಹೊಸಪೇಟೆ ಸಾರ್ ರವರು ತಮ್ಮ ಗುರುಗಳಾದ ಶ್ರೀಪಾದ ಭಟ್ಟರವರ ನಿರ್ದೇಶನದಲ್ಲಿ ನಾಟಕ ರಾಜ್ಯದಾದ್ಯಂತ ಪ್ರದರ್ಶನಗೊಳ್ಳತ್ತಿರುವುದರ ಕುರಿತು ತಿಳಿಸಿಕೊಟ್ಟರು. ಇದರಿಂದ ಗುರುವಿನ ಮಹತ್ವ ಮತ್ತು ಹಿರಿಮೆಯನ್ನು ನಮ್ಮ ವಿದ್ಯಾರ್ಥಿಗಳೆಲ್ಲರೂ ತಿಳಿದುಕೊಂಡರು.


ಆಕಸ್ಮಿಕವಾಗಿ ಗಾಂಧೀಜಿಯವರು ಭಾರತಕ್ಕೆ ಬರಬೇಕಾದ ಸಂದರ್ಭ ಬಂದಾಗ ಇಲ್ಲಿಯ ಜನರ ಪರಿಸ್ಥಿತಿ ಕಂಡು ಇಲ್ಲಿಯ ಜನರಿಗೆ ನ್ಯಾಯ ದೊರಕಿಸಿಕೊಡಲು ಭಾರತದಲ್ಲಿಯೇ ಉಳಿಯಲು ತೀರ್ಮಾನಿಸಿದರು. ಭಾರತದಲ್ಲಿ ಗಾಂಧೀಜಿಯವರ ನೇತೃತ್ವದ ಹೋರಾಟವನ್ನು 'ಗಾಂಧೀಯುಗ' ಎಂದು ಕರೆಯಲಾಗುತ್ತದೆ. ಗಾಂಧೀಜಿಯವರ ನಾಯಕತ್ವದಲ್ಲಿ ನಡೆದ ಹೋರಾಟಗಳಿಗೆ ರಾಜಕೀಯ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರ ಮಾರ್ಗದರ್ಶನವಿತ್ತು. ಗಾಂಧೀಜಿಯವರ ಹೋರಾಟದ ಸಾಧನಗಳೆಂದರೇ
ಸತ್ಯಾಗ್ರಹ
ಅಹಿಂಸೆ
ಹಿಂದೂ ಮುಸ್ಲಿಂ ಏಕತೆಯನ್ನು ನಾಟಕದಲ್ಲಿ ಚಿತ್ರಿಸಿದ ರೀತಿ ನಮ್ಮನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಯಿತು.
ಗಾಂಧೀಜಿಯವರ ಅಸಹಕಾರ ಚಳುವಳಿಯನ್ನು ಪ್ರೆರೇಪಿಸಿದ ಜಲಿಯನ್ ವಾಲಬಾಗ್ ಹತ್ಯಾಕಾಮಡ, ಖಿಲಾಫತ್ ಚಳುವಳಿ, ಗಾಂಧೀಜಿಯವರ ಕರೆಗೆ ಜನತೆಯು ಸ್ಪಂದಿಸದ ರೀತಿ ಮನಮುಟ್ಟುವಂತಿತ್ತು. ಸ್ವಾತಂತ್ರ ಬಂದಾಗ ದೇಶದ ಜನತೆ ಮತ್ತು ಹೋರಾಟಗಾರರೆಲ್ಲರು ಸಂಭ್ರಮಿಸುತ್ತಿದ್ದರೆ, ಗಾಂಧೀಜಿಯವರು ಕೊಲ್ಕತ್ತದ ಪ್ರದೇಶದಲ್ಲಿ ಸ್ವಚ್ಛತೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದು ಅವರ  "ಗ್ರಾಮೀಣ ಅಭಿವೃದ್ದಿಯೇ ದೇಶದ ಅಭಿವೃದ್ದಿ " ಎಂಬ ಮಾತಿಗೆ ಕನ್ನಡಿ ಇಡಿದಂತಿತ್ತು.


ನಮ್ಮ ಶಾಲೆಯ ಎಲ್ಲಾ ಶಿಕ್ಷಕ ಸಿಬ್ಬಂದಿ ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಜೊತೆಗೆ ನಮ್ಮ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ಜಹಗೀರಗುಡದೂರ ಮತ್ತು ಬಾದಿಮನಾಳ ಶಾಲೆಯ ಮಕ್ಕಳೆಲ್ಲರೂ ನಾಟಕದ ಕುರಿತು ಪ್ರಶಂಸೆಯ ಮಾತುಗಳನ್ನಾಡುತ್ತಿದ್ದುದು ಕಂಡು ಬಂತು.
ಒಟ್ಟಾರೆಯಾಗಿ ಗಾಂಧೀಜಿಯವರ ಹೋರಾಟದ 150 ನೇ ವರ್ಷಾಚರಣೆಯಲ್ಲಿ  ಗಾಂಧೀಜಿಯ ಬದುಕು ಮತ್ತು ಸೇವೆಯ ಜೊತೆ ಜೊತೆಗೆ ಹೋರಾಟವನ್ನು ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಷ್ಟೇ ಅಲ್ಲದೇ ಸಾರ್ವಜನಿಕವಾಗಿ ಈ ಪ್ರದರ್ಶನ ಯಶಸ್ವಿಯುತವಾಗಿ ಮೂಡಿಬಂತೆಂದು ಹೇಳಲು ಇಚ್ಛಿಸುತ್ತೇನೆ.

ಶನಿವಾರ, ಡಿಸೆಂಬರ್ 22, 2018

ನಮ್ಮ ಜಾನಪದ ಅಕಾಡೆಮಿ ಪುರಸ್ಕೃತ ಅತ್ತಾರ ಸಾಹೇಬರು

ಶುಭೋದಯ

ಸಂಯಮ ಮತ್ತು ಸಮಯ ಇವೆರಡು ಪ್ರಬಲ ಯೋಧರಿದ್ದಂತೆ.ಜೀವನದಲ್ಲಿ ಇವುಗಳನ್ನು ರೂಡಿಸಿಕೊಳ್ಳುವದು ಅವಶ್ಯ.
---------------ಲಿಯೋ ಸ್ಟಾಲ್ ಟಾಯ್.

ಮಂಗಳವಾರ, ಡಿಸೆಂಬರ್ 18, 2018

ಪಟ್ಯ ನಾಟಕ -2

ನಾಟಕ ಕಟ್ಟುವ ಪೂರ್ವದಲ್ಲಿ ಮಕ್ಕಳನ್ನು ರಂಗಾಟಗಳ ಮೂಲಕ ತೊಡಗಿಸುವುದು ತುಂಬಾ ಉಚಿತವಾದದ್ದು. ಕಾರಣ ಮಕ್ಕಳಿಂದ ನಾವು ಬಯಸುವ ಫಲಿತಾಂಶ ನಿರೀಕ್ಷೆಯಂತೆ ದೊರಕುತ್ತದೆ.
ಮಕ್ಕಳ ದೇಹದಲ್ಲಿ ಸಹಜವಾದ ಒಂದು ಬಿಗುಪು ಇದ್ದೆ ಇರುತ್ತದೆ. ಇಲ್ಲಿ ನಾಟಕಕ್ಕೆ ಬೇಕಾದಂತೆ ನಿಲುವುಗಳಿಗಾಗಿ ಮತ್ತು ದೇಹದಲ್ಲಿರುವು ಬಿಗುಪನ್ನು ಬಿಡಿಸಲು ರಂಗಾಟಗಳು ಸೂಕ್ತ. ಅಂತ ಕೆಲವು ಆಟಗಳು ಇಲ್ಲಿ ವಿವರಿಸಲಾಗಿದೆ.

ಕನ್ನಡಿಯಾಟ

ಕನ್ನಡಿಯನ್ನು ಎಲ್ಲರೂ ದಿನನಿತ್ಯ ಬಳಸುವ ಒಂದು ವಸ್ತು. ನಮ್ಮನ್ನು ನಾವು ಚೆಂದ ಕಾಣಲು, ನಮ್ಮ ಮುಖವನ್ನು ಸುಂದರವಾಗಿ ಕಾಣುವಂತೆ ಮಾಡುಕೊಳ್ಳಲು ಕನ್ನಡಿಯನ್ನು ಬಳಸುತ್ತೇವೆ.  ಮಕ್ಕಳಲ್ಲಿ ನಾವು ಒಬ್ಬನನ್ನು ವ್ಯಕ್ತಿಯನ್ನಾಗಿ ಹಾಗೂ ಮತ್ತೊಬ್ಬನನ್ನು ಕನ್ನಡಿಯನ್ನಾಗಿ  ನಿಲುವಂತೆ ತಿಳಿಸುವುದು. ವ್ಯಕ್ತಿಯ ಪ್ರತಿ ಚಲನೆಯನ್ನು  ಕನ್ನಡಿಯಾಗಿರುವವ ಅನುಕರಣೆ ಮಾಡವಂತೆ ಸೂಚಿಸಬೇಕು. ಅನುಕರಣೆ ಮಾಡುವ ವಿದ್ಯಾರ್ಥಿಗೆ ಮೈಯೆಲ್ಲಾ ಕಣ್ಣಾಗಿರಬೇಕು. ಪ್ರತಿ ಚಲನೆಯನ್ನು ಅನುಕರಿಸುತ್ತಾ ಹೋಗಬೇಕು. ಹೀಗೆ ಅನುಕರಿಸುವ ವಿದ್ಯಾರ್ಥಿಯು ತನ್ನ ಗಮನ ಕೇಂದ್ರೀಕರಿಸುವುದನ್ನು ವೃದ್ದೀಸಿಕೊಳ್ಳುವನು. ಹೀಗೆ ಆಡುವ ಆಟವನ್ನು ಗುಂಪುಗಳಲ್ಲಿ ಮಾಡುವುದರಿಂದ ನಾಟಕ ಕಟ್ಟುವಿಕೆಯಲ್ಲಿ ಪರಿಣಾಮಕಾರಿಯಾಗಿರುತ್ತದೆ.

ಪಟ್ಯ ನಾಟಕ 1

ರಂಗಭೂಮಿ ವಿಸ್ತಾರವಾದದ್ದು. ಒಂದು ನಾಟಕ ಪ್ರದರ್ಶನವನ್ನು ನಾವು ಕೇವಲ ಮನರಂಜನೆ ಎಂದು ಕಾಣುವುದು ಒಂದಡೇ ಆದರೆ, ಬೌದ್ದಿಕ ಹಾಗೂ ಮಾನಸಿಕ ಸಬಲತೆಯ ದೃಷ್ಟಿಯಲ್ಲಿಯೂ ಇಂದು ನಾವು ಕಾಣಬೇಕಾಗಿದೆ. ಮಕ್ಕಳ ಜೊತೆಗೆ ದಿನಪೂರ್ತಿ ಇರುವ ನಮಗೆ ಅವರ ಮನೋವಿಕಾಸಕ್ಕೆ ಬೇಕಾದ ರೀತಿಯಲ್ಲಿ ಚಿತ್ರಿಸಬಹುದಾಗಿದೆ. ರಂಗಭೂಮಿಯಲ್ಲಿ ಕಥಾ ವಿಷಯವನ್ನು ನಾವು ರಂಗಕ್ಕೆ  ಪ್ರದರ್ಶನ ರೂಪದಲ್ಲಿ ಪ್ರೇಕ್ಷಕರ ಮುಂದೆ ಇಡುತ್ತೇವೆ. ಅದೇ ರೀತಿ ನಮ್ಮ ಪಟ್ಯದ ಪಾಠವೊಂದನ್ನು ನಾವು ಪ್ರಯೋಗಕ್ಕೆ ಅಣಿ ಮಾಡುವಾಗ ಒಂದಿಷ್ಟು ಸಣ್ಣ ಟಿಪ್ಪಣಿಗಳನ್ನು ಮಾಡಿಕೊಂಡರೇ ಒಳ್ಳೆಯದು.
ಪ್ರದರ್ಶನ ಪೂರ್ವದಲ್ಲಿ ನಡೆಯುವ ಪ್ರಕ್ರಿಯೆಯೆ ಸ್ಮರಣೀಯವಾದದ್ದು. ಪಾಠವನ್ನು ಅಭ್ಯಾಸ ಮಾಡುವಾಗ  - ಬರುವ ಒಂದಿಷ್ಟು ಪಾತ್ರ, ಘಟನೆ ಮತ್ತು ಸಂದರ್ಭಗಳನ್ನು ನೆನಪಲ್ಲಿ ಇಟ್ಟುಕೊಂಡು ಬರೆದು, ಮೌಖಿಕವಾಗಿ ಹೇಳುವ ಪರಿ. ಆದರೆ ಪ್ರದರ್ಶನದ ದೃಷ್ಟಿಯಲ್ಲಿ ನಡೆಯುವ ಪ್ರಕ್ರಿಯೆ ಅದ್ಬುತವಾದದ್ದು. ಮಗುವಿಗೆ ಕಥೆ ಅರ್ಥವಾಗುವುದರ ಜೊತೆಗೆ ಅದನ್ನು ಪ್ರತಿ ಸಂದರ್ಭದಲ್ಲಿಯು ಭಾವನಾತ್ಮಕವಾಗಿ ತೊಡಗಿಸುವಂಥ ಕ್ರಿಯೆ. ಸ್ಥಳವನ್ನು ತನ್ನ ಮನಸ್ಸು - ಕಣ್ಣಲ್ಲಿ ತಂದುಕೊಂಡು ತಾನು ಸಂಪೂರ್ಣ ಪಾತ್ರವಾಗುವ ಪ್ರಕ್ರಿಯೆ ಇದೆಯಲ್ಲ ಅದು ಮಗುವಿನ ಜೊತೆ ಜೊತೆಗೆ ಕಥೆಯು ಎಲ್ಲರೊಳಗೆ ಜೀವಂತವಾಗುತ್ತೆ.


(ಮುಂದುವರೆಯುವುದು...)

ಜಾನಪದ ಜಂಗಮ - ದಾವಲಸಾಬ್ ಅತ್ತಾರ



ಜಾನಪದ ಜಂಗಮ.....
ಹಾಡುಗಳ ಸರದಾರ- ದಾವಲಸಾಬ್ ಅತ್ತಾರ

ಕುಷ್ಟಗಿ ತಾಲೂಕಿನ ಹಾಬಲಕಟ್ಟೆ  ಗಡಿ ಗ್ರಾಮದ ಜಾನಪದ ಕಲಾವಿದ ದಾವಲಸಾಬ್ ಅತ್ತಾರ ನಿಷ್ಕಳಂಕ ವ್ಯಕ್ತಿತ್ವ. ಇವರಿಗೆ ಎಂದೋ ಜಾನಪದ ಕಲಾ ಅಕಾಡೆಮಿ ಪ್ರಶಸ್ತಿ ಸಿಗಬೇಕಿತ್ತು... ಸರ್ಕಾರ ಪ್ರತಿ ವರ್ಷ ಪ್ರಶಸ್ತಿ ಪ್ರಕಟಿಸಿದಾಗಲೆಲ್ಲಾ ಅವರ ಹೆಸರು ಅಯ್ಕೆ ಪಟ್ಟಿಯಲ್ಲಿ ಇರುತ್ತಿರಲಿಲ್ಲ ಎನ್ನುವ ಭ್ರಮನಿರಸನದಿಂದ ಸೋತು ಹೋಗಿದ್ದರು.
 ಸರ್ಕಾರದ ಧೋರಣೆ ಇವರಂತಹ ಕಲಾವಿದರಿಗೆ ತಾತ್ಸಾರ, ಅಸಡ್ಡೆ ಧೋರಣೆ ಹಿನ್ನೆಲೆಗೆ ಬೇಸರವೂ ಮುನಿಸು ಕೂಡ ಇತ್ತು. ಬಡವನ ಸಿಟ್ಟು ದವಡೆಗೆ ಮೂಲ ಎನ್ನುವ ಹಾಗೆ ಏನೇ ಸಿಟ್ಟು ಶೆಡವು ಇದ್ದರೂ ನುಂಗಿಕೊಂಡಿದ್ದ ದಾಬಲಸಾಬ ಎಂದಿಗೂ ಯಾರೋಂದಿಗೂ ತೋರಿಸಿಕೊಂಡವರಲ್ಲ. 
ಅವರು ಒಮ್ಮೊಮ್ಮೆ ನಮ್ಮಂತವರಿಗೆ ಎಲ್ಲಿ ಸಿಗತೈತ್ರಿ ನಾವ್ ಹಿಂಗಾ ಹಾಡಕೋಂತ ಹೋಗದ್ರೀ ಸರ್ಕಾರ ಗುರ್ತಿಸದೇ ಇದ್ರೂ ಜನ ಗುರುತಿಸುತ್ತರಲ್ಲಾ ಅಷ್ಟೇ ಸಾಕ್ರೀ... ಸರ್ಕಾರ ಯಾವಾಗ ನಮ್ಮಂತ ಬಡ ಕಲಾವಿದರ ಮ್ಯಾಗ ಕಣ್ ತೆಗೆಬೇಕ್ರೀ ಅಂದಿದ್ದರು. 
ಅವರೇ ಹೇಳಿದಂತೆ ಬೆಂಗಳೂರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳೆದ ಐದಾರು ವರ್ಷಗಳ ಹಿಂದೆ ಹೋದಾಗ ಅಲ್ಲಿ ಪ್ರಕಾಶ ಸರ್ ಎಂಬುವವರಿಗೆ ತಮ್ಮ ಕಲಾ ಸಾಧನೆ ಹೊತ್ತಿಗೆ ತೋರಿಸಿದ್ದರು. ಇವರ ಸಾಧನೆಗಳನ್ನು ಅವಲೋಕಿಸಿದ್ದ ಪ್ರಕಾಶ್ ಅವರು ನಿಮ್ಮಂತವರಿಗೆ ಅಲ್ಲದೆ ಇನ್ಯಾರಿಗೆ ಪ್ರಶಸ್ತಿ ಕೊಡಬೇಕ್ರೀ ಆ ಚಿಂತಿ ಬಿಡು... ನನಗ ಇಟಗಿ ಭೀಮವ್ವ ದೇವಸ್ಥಾನ ತೋರಿಸು ಎಂದಿದ್ದರು. ಜೊತೆಗೆ ದಾವಲಸಾಬ್ ಅತ್ತಾರ ಅವರನ್ನು ಕರೆದುಕೊಂಡು ದೇವಸ್ಥಾನದ ದರ್ಶನ ಮಾಡಿಸಿದ್ದಕ್ಕೆ ನೆರವಾದ  ಈ ಕಲಾವಿದನಿಗೆ ೫೦೦ ರೂ ಕೊಟ್ಟಿದ್ದರು. ಅವರು ಎಲ್ಲಿಯವರು ಎನ್ನುವುದು ಈ ಕಲಾವಿದನಿಗೆ ಗೊತ್ತಿಲ್ಲ ಅವರ ಶಿಫಾರಸ್ಸಿನಿಂದಲೇ ಈ ಪ್ರಶಸ್ತಿ ಬಂದಿದೆ ಎನ್ನುವುದು ಅವರ ಬಲವಾದ ನಂಬಿಕೆ ದಾವಲಸಾಬ್ ಅವರದು.ಅವರನ್ನು ಅಭಿನಂದಿಸಬೇಕು ಎನ್ನುವ ತುಡಿತವಿದೆ ಅದರೆ ಅವರ ಮೋಬೈಲ್ ಸಂಖ್ಯೆ ಸಹ ಬರೆದುಕೊಂಡಿಲ್ಲ. ಅದರೆ ಅವರನ್ನು ಕಂಡು ಕೃತಜ್ಞತೆ ಸಲ್ಲಿಸಬೇಕೆನ್ನು  ತುಡಿತವಿದೆ ಅದರೆ ಅವರೆಲ್ಲಿ ಇದ್ದಾರೆಯೋ ಗೊತ್ತಿಲ್ಲ.....

 ಜಾನಪದ ಕಲಾ ಅಕಾಡೆಮಿ ಈ ಪ್ರಶಸ್ತಿ ಬೆಟ್ಟದಷ್ಟಿದ್ದ ಕಷ್ಟಗಳೆಲ್ಲಾ ಮಂಜಿನಂತೆ ನೀರಾಗಿಸಿದೆ ಅವರ ಮೊಗದಲ್ಲಿ‌ ವ್ಯಕ್ತವಾಗುವ ಸಂತಸವೇ ಉಲ್ಲೇಖಿಸುತ್ತಿದೆ. ದಾವಲಸಾಬ್ ಸುಮಾರು ಮೂರು ತಲೆಮಾರಿನಿಂದ ಜಾನಪದವನ್ನು ಜತನ ಮಾಡಿರುವ ಅವರು ಜೀವನೋಪಯಕ್ಕೆ ಊರೂರು, ಜಾತ್ರೆಯಲ್ಲಿ ಊದುಬತ್ತಿ ಮಾರುವ ದಾವಲಸಾಬ್ ಅವರು, ಆತ್ಮಸಂತೋಷಕ್ಕೆ ರಿವಾಯತ್, ಲಾವಣಿ ಜಾನಪದ ಪ್ರಕಾರಗಳನ್ನು ಬೆಳಗಾಗುವತನ ಹಾಡಿದರೂ ದಣಿಯ ಧ್ವನಿ... 
ಈ ಧ್ವನಿಗೆ  ಬೆಲೆ ಕಟ್ಟಲಾಗದು.... ಸರ್ಕಾರ ತಡವಾಗಿ ಯಾದರೂ ಗುರುತಿಸಿ ಪ್ರಶಸ್ತಿ ಮೌಲ್ಯ ಹೆಚ್ಚಿಸಿಕೊಂಡಿದೆ ಎನ್ನುವುದು ಅತಿಶಯೋಕ್ತಿಯ ಮಾತು. 
ಜಾನಪದ ಕಲಾ ಜಂಗಮನಾಗಿರುವ ದಾವಲಸಾಬ್ ಮಾನವೀಯ ವ್ಯಕ್ತಿತ್ವಕ್ಕೆ ಜಾನಪದ ಅಕಾಡೆಮಿ ಪ್ರಶಸ್ತಿ ಎನ್ನುವ ಮೌಲ್ಯ ಕಟ್ಟಿಸಿಕೊಂಡಿರುವ ಹಾಬಲಕಟ್ಟಿಯ ಹಾಡುಗಳ ಸರದಾರ ದಾವಲಸಾಬ್ ಅತ್ತಾರ ಅವರಿಗೆ ಅಭಿನಂದನೆಗಳು.....

-ಮಂಜುನಾಥ ಮಹಾಲಿಂಗಪೂರ
ಕುಷ್ಟಗಿ.

ಗಾಂಧಿ ೧೫೦ ರಂಗಪಯಣದಲ್ಲಿ ಕಂಡ ಚಿತ್ರಗಳು

ಸೋಮವಾರ, ಡಿಸೆಂಬರ್ 17, 2018