ಶುಕ್ರವಾರ, ಫೆಬ್ರವರಿ 13, 2015
ಹೈ.ಕ.ಪ್ರದೇಶದ ನಿವಾಸಿಗಳು ಅನುಚ್ಛೇದ 371 ಜೆ ಮೀಸಲಾತಿ ಪಡೆಯುವ ಬಗೆ
* ಹೈದ್ರಾಬಾದ್ ಕರ್ನಾಟಕದ ಪ್ರದೇಶಕ್ಕೆ ಸಂಬಂಧಿಸಿದ ಆರೂ ಜಿಲ್ಲೆಗಳ, ಆಯಾ ಜಿಲ್ಲೆಯ ಕಂದಾಯ ಉಪ
ವಿಭಾಗಾಧಿಕಾರಿಗಳು (ಎ.ಸಿ) ಯವರು " ಅರ್ಹತಾ ಪ್ರಮಾಣ ಪತ್ರ " ವನ್ನು ನೀಡುವ ಸಕ್ಷಮ ಪ್ರಾಧೀಕಾರವಾಗಿದ್ದಾರೆ.
* ಆರು ಜಿಲ್ಲೆಯನ್ನು ಹೊರತುಪಡಿಸಿ ಅನ್ಯರಿಗೆ ಈ ಪ್ರಮಾಣ ಪತ್ರ ಪಡೆಯುವ ಹಕ್ಕು ಇರುವುದಿಲ್ಲ.
* ಸಕ್ಷಮ ಪ್ರಾಧಿಕಾರ ನಿಗದಿಪಡಿಸಿದ ನಿಯಮಾನುಸಾರ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿ ಸ್ಥಳೀಯರು ಈ "ಅರ್ಹತಾ ಪ್ರಮಾಣ ಪತ್ರ " ಪಡೆದುಕೊಂಡು ವಿಶೇಷ ಸೌಲಭ್ಯ ಪಡೆಯಲು ಹಕ್ಕನ್ನು ಹೊಂದಿದ್ದಾರೆ.
ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ತುಂಬಾ ಪಾರದರ್ಶಕವಾಗಿ ಕಾರ್ಯ ನಡೆಯುತ್ತಾ ಇದೆ. ಶ್ರೀ ಮಂಜುನಾಥ ಕೊಪ್ಪಳದ ಸಕ್ಷಮ ಪ್ರಾಧಿತಾರಿ /AC ಸಾಹೇಬರು. ಚನಾಗಿ ಮತ್ತು ಕಟ್ಟು ನಿಟ್ಟಿನಿಂದ ಕೆಲಸ ನಿರ್ವಹಿಸುತ್ತಾ ಅರ್ಹರಿಗೆ ಮಾತ್ರ ಸಿಗುವಂತಾಗುತ್ತಿದೆ.
೧. ಅನುಬಂಧ - A ಅರ್ಹತಾ ಪ್ರಮಾಣಪತ್ರ ಪಡೆಯುವುದು AC ಯಿಂದ.
೨. ಅನುಬಂಧ - B ವಾಸಸ್ಥಳ ಪ್ರಮಾಣಪತ್ರ ಪಡೆಯುವುದು ತಹಶೀಲ್ದಾರರಿಂದ.
೩. ಅನುಬಂಧ - C ವ್ಯಾಸಂಗಪ್ರಮಾಣ ಪತ್ರ ಪಡೆಯುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ.
೪. ಅನುಬಂಧ - D ಸ್ವಗ್ರಾಮ ಪ್ರಮಾಣಪತ್ರ - ಸರ್ಕಾರಿ ನೌಕರಿರಗೆ ಅವರ ನೇಮಕಾತಿ ಪ್ರಾಧಿಕಾರದಿಂದ (SR ನಂತೆ)
೫. ಅನುಬಂಧ - E ಸಿಂಧುತ್ವ ಪ್ರಮಾಣಪತ್ರ ಜಿಲ್ಲಾ ತ್ರಿಸದಸ್ಯ ಕಮಿಟಿಯಿಂದ ( DC, CEO, SP )
[ ಸಿಂಧುತ್ವ - ಅರ್ಹತಾ ಪ್ರಮಾಣ ಪತ್ರದ ಸರಿತನದ ಪರಿಶೀಲನೆಯೇ ಸಿಂಧುತ್ವ ]
* ಸರಕಾರಿ ನೌಕರರು 01.01.2013 ಕ್ಕಿಂತ ಮೊದಲು ಅಥಾವ 10 ವರ್ಷ ಆರೂ ಜಿಲ್ಲೆಯ ವ್ಯಾಪ್ತಿಯಲ್ಲಿ ವಾಸವಾಗಿದ್ದರೆ ಅವರು ಅರ್ಹರು ಎಂದು ಈ ಮೊದಲು ತಪ್ಪಾಗಿ ನಮೂದಾಗಿತ್ತು. ಆದರೆ ಅವರಿಗೆ ಈ ಅವಕಾಶ ಇಲ್ಲ ಮತ್ತು ಅವರು ಅರ್ಹರೂ ಅಲ್ಲ. ( ದಿ: 16.01.2015 & 18.01.2015 ರ ವಿಜಯ ಕರ್ನಾಟಕ ಪತ್ರಕೆ ನೋಡಬಹುದು.)
ವ್ಯಾಪ್ತಿಗೆ ಒಳಪಡದವರು ಈಗಾಗಲೇ ಪ್ರಮಾಅಣಪತ್ರ ಪಡೆದುಕೊಂಡಿದ್ದರೆ ಮರಳಿ ಸಕ್ಷಮ ಪ್ರಾಧಿಕಾರಕ್ಕೆ ಹಿಂದುರುಗಿಸಬೇಕು. ಇಲ್ಲದಿದ್ದರೆ ಶಿಕ್ಷಾರ್ಹರು ಎಂದು ಆದೇಶ ಮಾಡಿದ್ದಾರೆ.
ಪ್ರಮಾಣ ಪತ್ರ ಪಡೆಯಲು ಅಗತ್ಯ ದಾಖಲೆಗಳು
1. ವರ್ಗಾವಣೆ ಪ್ರಮಾಣಪತ್ರ
2. ಚುನಾವಣಾ ಗುರುತಿನ ಪತ್ರ
3. ಆಧಾರ
4. ವಂಶಾವಳಿ
5. ಪಹಣಿ/ಸ್ಥಿರಾಸ್ಥಿ/ಮನೆ ಉತಾರ
6. ವಾಸಸ್ಥಳ
7. ವ್ಯಾಸಂಗ ಪ್ರಮಾಣಪತ್ರ
ಶಿವಪ್ಪ ಆರ್.ಇಲಾಳ
ಶಿಕ್ಷಕರು
ಸರಕಾರಿ ಪ್ರೌಡಶಾಲೆ
ಜಹಗೀರಗುಡದೂರ
ಕರೆಗಾಗಿ : 9731981167
ಗುರುವಾರ, ಫೆಬ್ರವರಿ 12, 2015
ಹದಿಹರೆಯದವರಿಗಾಗಿ ಆರೋಗ್ಯ ಶಿಕ್ಷಣ ಕಾರ್ಯಕ್ರಮ
ಇಂದು ಶಾಲಾ ಮಧ್ಯಾಹ್ನದ ಅವಧಿಯಲ್ಲಿ ಮಕ್ಕಳಿಗಾಗಿ " ಹದಿಹರೆಯ ಭವಿಷ್ಯದ ಅಡಿಪಾಯ " ರಾಜ್ಯ ಸರ್ಕಾರದ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಆರೋಗ್ಯದ ಕುರಿತು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಬುಧವಾರ, ಫೆಬ್ರವರಿ 11, 2015
ಹೈ.ಕ.ಪ್ರದೇಶಕ್ಕೆ ಅನುಚ್ಛೇದ 371 ಜೆ ಮೀಸಲಾತಿ ಸೌಲಭ್ಯದ ವಿವರ
ಏನಿದು 371 ನೇ ಕಲಂ ? :
ಬುಡಕಟ್ಟು ಜನಾಂಗದ ಮತ್ತು ಶೋಷಿತ ವರ್ಗದ ಪ್ರದೇಶಕ್ಕೆ ವಿಶೇಷವಾದ ಮೀಸಲಾತಿ ಸೌಲಭ್ಯ ನೀಡುವುದು. ಜನ ಜೀವನವನ್ನು ಅಭಿವೃದ್ಧಿಪಥದತ್ತ ಸಾಗಿಸುವುದು.
371 ನೇ (ಜೆ) ಎಂದರೇನು ? :
ಸಂವಿಧಾನದ 371 ನೇ ನಿಯಮಕ್ಕೆ ತಿದ್ದುಪಡಿ ಮಾಡಿಸಿದ ಉಪನಿಯಮ "ಜೆ" ಎಂಬುದನ್ನು ಜಾರಿಗೊಳಿಸಲಾಯಿತು.
ಈಗಾಗಲೇ 371 ನೇ ಕಲಂ ನ್ನು ತಿದ್ದು ಪಡೆ ಮಾಡಿಸಿ ಇಂಥಹ ಸೌಲಭ್ಯ ಪಡೆದ ರಾಜ್ಯಗಳೆಂದರೆ
371 - ಎ ನಿಯಮದಡಿ "ನಾಗಾಲ್ಯಾಂಡ್ " ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಬಿ ನಿಯಮದಡಿ "ಅಸ್ಸಾಂ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಸಿ ನಿಯಮದಡಿ " ಮಣಿಪುರ " ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಡಿ ನಿಯಮದಡಿ " ಆಂದ್ರಪ್ರದೇಶ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಈ ನಿಯಮದಡಿ " ಮಹಾರಾಷ್ಟ್ರ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಎಫ್ ನಿಯಮದಡಿ "ಸಿಕ್ಕೀಂ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಜಿ ನಿಯಮದಡಿ "ಮಿಜೋರಾಮ್" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಎಚ್ ನಿಯಮದಡಿ "ಅರುಣಾಚಲ ಪ್ರದೇಶ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಐ ನಿಯಮದಡಿ "ಗೋವಾ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಜೆ ನಿಯಮದಡಿ ನಮ್ಮ "ಕರ್ನಾಟಕ" ರಾಜ್ಯಕ್ಕೆ ಮೀಸಲಾತಿ ಸೌಲಭ್ಯ ದೊರಕಿದೆ.
ಈ 371 ಜೆ ಕಲಂ ನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎಲ್ಲರೂ ಪಕ್ಷಬೇದ ಮರೆತು ಸರ್ವಾನುಮತದಿಂದ ಅಂಗೀಕಾರ ಮಾಡಿದರು. ದಿನಾಂಕ 01.01.2013 ರಂದು ಸನ್ಮಾನ್ಯ ರಾಷ್ಟ್ರಪತಿಗಳಿಂದ ಅನುಮೋದನೆಯಾಯಿತು. ಇದರಿಂದ ನಮ್ಮ ಸಂವಿಧಾನದ 98 ನೇ ತಿದ್ದುಪಡಿಯಾಯಿತು.
ಕರ್ನಾಟಕ ಸರ್ಕಾರದಿಂದ ಈ ಪ್ರದೇಶ ಭಾಗಕ್ಕೆ ಸಾರ್ವಜನಿಕ ಉಧ್ಯೋಗದಲ್ಲಿ ಮೀಸಲಾತಿ ಹಾಗೂ ಶೈಕ್ಷಣಿಕವಾಗಿ ವೃತ್ತಿಪರ ಕೋರ್ಸ ಗಳ ಪ್ರವೇಶಾತಿಯಲ್ಲಿ ಈ 371 ನೇ ಜೆ ಕಲಂ ಅನ್ವಯವಾಗುತ್ತದೆ. ಸಾರ್ವಜನಿಕ ಉದ್ಯೋಗದಲ್ಲಿ ಖಾಲಿ ಇರುವಂತೆ
* ಹುದ್ದೆಗಳಲ್ಲಿ ಶೇ 85 % ರಷ್ಟು ಮೀಸಲಾತಿಯನ್ನು ಗ್ರೂಪ್ " ಡಿ " ದರ್ಜೆಗೆ ನೀಡಲಾಗಿದೆ.
* ಹುದ್ದೆಗಳಲ್ಲಿ ಶೇಕಡಾ 80% ರಷ್ಟು ಮೀಸಲಾತಿಯನ್ನು ಗ್ರೂಪ್ " ಸಿ " ದರ್ಜೆಯ ನೌಕರರಿಗೆ ನೀಡಲಾಗಿದೆ.
* ಹುದ್ದೆಗಳಲ್ಲಿ ಶೇಕಡಾ 75 % ರಷ್ಟು ಮೀಸಲಾತಿಯನ್ನು ಗ್ರೂಪ್ " ಬಿ " ಹಾಗೂ " ಎ " ದರ್ಜೆಗೆ ನೀಡಲಾಗಿದೆ.
ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ನಿಗದಿ ಪಡಿಸಿದ ನಿಯಮವು ಈ ಬಡ್ತಿಗೆ ಅನ್ವಯವಾಗುತ್ತದೆ.
( ಮುಂದುವರಿಯುವುದು )
ಶಿವಪ್ಪ ಆರ್.ಇಲಾಳ
ಶಿಕ್ಷಕರು
ಸರಕಾರಿ ಪ್ರೌಢಶಾಲೆ
ಜಹಗೀರಗುಡದೂರ
ಕರೆಗಾಗಿ : 9731981167
ಮಂಗಳವಾರ, ಫೆಬ್ರವರಿ 10, 2015
ಹೈ.ಕ.ಪ್ರದೇಶಕ್ಕೆ ಅನುಚ್ಛೇದ ೩೭೧ ಜೆ ಮೀಸಲಾತಿ ಸೌಲಭ್ಯ
೧೯೪೭ ಆಗಷ್ಟ ೧೫ ರಂದು ನಮ್ಮ ಭಾರತ ದೇಶಕ್ಕೆ ಸ್ವತಂತ್ರ ಸಿಕ್ಕಿತು ನಿಜ, ಆದರೆ ಹೈದ್ರಾಬಾದ್ ನಿಜಾಮನ ಅರಸೊತ್ತಿಗೆ ವ್ಯಾಪ್ತಿಗೆ ಒಳಪಟ್ಟಂತ ೧೬ ಜಿಲ್ಲೆಗಳಿಗೆ ಸ್ವತಂತ್ರದ ಅನುಭವ, ಹರ್ಷೋದ್ಘಾರ ಕೇವಲ ಕನಸಿನ ಮಾತಾಗಿ ಹೋಯಿತು. ನಿಜಾಮನ ಹೆಸರಿನಲ್ಲಿ ಅರಾಜಕತೆಯು ತಾಂಡವಾಡುತ್ತಿತ್ತು. ಹಿಂಸಾತ್ಮಕವಾದ ಆಡಳಿತದ ಕಪಿಮುಷ್ಠಿಯಲ್ಲಿ ಜನಸಾಮಾನ್ಯರೆಲ್ಲರೂ ತತ್ತರಿಸಿ ಹೋದರು. ಆಗಬಾರದ ಅನಾಹುತಗಳಾದವು. ಮತಾಂಧರ ದೌರ್ಜನ್ಯದಿಂದ ಮುಗ್ಧರ ಉಸಿರುಗಟ್ಟಿ ಹೋಗಿತ್ತು. ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿ ದಾರಿಕಾಣದ ಅನಾಥ ಬದುಕಿನಂತೆ ಅನಿವಾರ್ಯದ ಜೀವನ ನಡೆಸಬೇಕಾಯಿತು.
ದುಷ್ಟರ ದೌರ್ಜನ್ಯವನ್ನು ಮಟ್ಟಹಾಕಲು ಹಲವಾರು ಹೋರಾಟ ಸಮೀತಿಗಳ, ಸಂಘಟನೆಗಳು ಮತ್ತು ಸ್ವಯಂ ಸೇವಕ ಸಂಸ್ಥೆಗಳು ಹೈದ್ರಾಬಾದ್ ಸಂಸ್ಥಾನದ ವಿರುದ್ಧ ಅನೇಕ ಚಳುವಳಿಗಳು, ಹೋರಾಟಗಳು ಮತ್ತು ಉಗ್ರ ಪ್ರತಿಭಟನೆಗಳು ಪ್ರಾರಂಭಗೊಂಡವು. ಹೋರಾಟಗಳೆಲ್ಲವು ಹಿಂಸಾತ್ಮಕ ರೂಪ ತಾಳಿ ಅನೇಕ ತ್ಯಾಗ ಬಲಿದಾನಗಳಾದವು. ಇದನೆಲ್ಲ ಸೂಕ್ಷ್ಮ ರೀತಿಯಲ್ಲಿ ತಿಳಿದುಕೊಂಡ ಆಗಿನ ಕೇಂದ್ರ ಸರ್ಕಾರದ ಉಪ ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿಗಳಾಗಿದ್ದ ಉಕ್ಕಿನ ಮನುಷ್ಯರೆಂದೇ ಪ್ರಖ್ಯಾತರಾದ ಸನ್ಮಾನ್ಯಸರ್ದಾರ ವಲ್ಲಭಬಾಯಿ ಪಾಟೇಲರು ೧೩ ನೇ ಸೆಪ್ಟಂಬರ್ ೧೯೪೮ ರಿಂದ ೧೭ ಸೆಪ್ತೆಂಬರ್ ೧೯೪೮ ರವರೆಗೆ ಮಿಲಿಟರಿ ಕಾರ್ಯಚಾರಣೆ ಮಾಡಿಸಿದರು. ಈ ಕಾರ್ಯಚರಣೆಯಿಂದ ಮತಾಂಧರ ಅಟ್ಟಹಾಸದ ಆಡಳಿತಕ್ಕೆ ಅಂತ್ಯ ಹಾಡಿತು.
ನಮ್ಮ ಕರ್ನಾಟಕದ ಆಗಿನ ಅವಿಭಜಿತ ಜಿಲ್ಲೆಗಳಾದ ಬೀದರ, ಗುಲ್ಬರ್ಗಾ ಮತ್ತು ರಾಯಚೂರು ನಿಜಾಮನ ಆಡಳಿತಕ್ಕೋಳಾಪಟ್ಟಿದ್ದವು. ಇವೇ ಈಗಿನ ಬೀದರ್, ಗುಲ್ಬರ್ಗಾ,ಯಾದಗಿರಿ, ರಾಯಚೂರ, ಕೊಪ್ಪಳ ಮತ್ತು ಬಳ್ಳಾರಿ ಈ ಆರೂ ಜಿಲ್ಲೆಗಳು ಅರಸೊತ್ತಿಗೆಯ ಆಡಳಿತಕ್ಕೆ ಸಿಕ್ಕು ವಿಲ-ವಿಲನೇ ಒದ್ದಾಡಿಡ ನತದೃಷ್ಟ ತೀರಾ ಹಿಂದುಳಿದ ಜಿಲ್ಲೆಗಳು. ಈ ಜಿಲ್ಲೆಗಳಿಗೆ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸಿ ನಾಗರೀಕ ಪ್ರಗತಿಗಾಗಿ ಪ್ರಯತ್ನಿಸಿ ಸಂವಿಧಾನದ ೩೭೧ ನೇ ಕಲಂ ನ್ನು ಜಾರಿಗೊಳಿಸಿದ ಸರ್ಕಾರಕ್ಕೆ ಕನ್ನಡಿಗರ ಅನಂತ ವಂದನೆಗಳು.
(ಮುಂದುವರಿಯುವುದು)
ಶಿವಪ್ಪ ಆರ್. ಇಲಾಳ
ಶಿಕ್ಷಕರು
ಸರಕಾರಿ ಪ್ರೌಢಶಾಲೆ,
ಜಹಗೀರಗುಡದೂರ
ಕರೆಗಾಗಿ : 9731981167
ಶಿವಪ್ಪ ಆರ್. ಇಲಾಳ
ಶಿಕ್ಷಕರು
ಸರಕಾರಿ ಪ್ರೌಢಶಾಲೆ,
ಜಹಗೀರಗುಡದೂರ
ಕರೆಗಾಗಿ : 9731981167
ಸೋಮವಾರ, ಫೆಬ್ರವರಿ 9, 2015
ಸಾಂಸ್ಕೃತಿಕ ಅಧ್ಯಾಪಕರು
ಕಲಿಕೆ ನಮ್ಮ ಭವಿಷ್ಯವನ್ನು ರೂಪಿಸುತ್ತದೆ. ಚಿಕ್ಕವನಿಂದ ಹಿಡಿಸು ನಮ್ಮ ಅರಿವಿಗೆ ಬಂದು ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಲು ಹೆಣಗುವ ಸ್ಥಿತಿ ಇದೆಯಲ್ಲ ಅದು ಪ್ರತಿಯೊಬ್ಬನು ತನ್ನನ್ನು ತಾನು ಕಂಡುಕೊಳ್ಳುವ ಹಾದಿ. ನಾನು ನೀನಾಸಂನಲ್ಲಿ ಇದ್ದಾಗ ನಾಟಕದ ಒಂದು ಮಾತು. "ಪಾಡು ಪಟ್ಟು ಅರಿವು ಮೂಢಬೇಕು" ಸದಾ ಕಟುಕುತ್ತಿರುತ್ತದೆ. ಆದರೆ ಎಂಥ ಪಾಡು? ಹೇಗೆ ಎಂಬ ಸಾವಿರ ಪ್ರಶ್ನೇಗಳು ಸುಳಿದು ಹೋಗುತ್ತಿರುತ್ತವೆ. ಅದು ಇರಲಿ ನಾನು ಕಲಿಕೆಯ ವಿಚಾರಕ್ಕೆ ಮತ್ತೇ ಬರುತ್ತೇನೆ. ಇಂದಿನ ಶಿಕ್ಷಣ ತಜ್ಞರು ಮಕ್ಕಳಿಗೆ ಸುಲುಭ ರೀತಿಯಲ್ಲಿ ಬೋಧಿಸಲು ಹಲವಾರು ಮಾರ್ಗಗಳನ್ನು ಹುಡುಕಿ ನೀಡಿದ್ದಾರೆ. ಆದ್ರೆ ಅದು ಎಷ್ಟರ ಮಟ್ಟಿಗೆ ಮುಟ್ಟುತ್ತಿವೆ ? ಭಯವಾಗುತ್ತೆ. ಮಕ್ಕಳ ಕಲಿಕೆಯಲ್ಲಿ ನಾವು ಸೃಜನಶೀಲತೆಯನ್ನು ನೀಡದೇ ಕೇವಲ ನೋಟ್ಸ್, ಹೋಂ ವರ್ಕ್, ಎಕ್ಸ್ಂ ಅಂತನೇ ಇದ್ರೆ, ಮಕ್ಕಳನ್ನು ನಾವೇ ಹಿಂದಕ್ಕೆ ತಳ್ಳುತ್ತಿದ್ದೇವೆ ಎಂದೆನಿಸುತ್ತದೆ. ಶಿಕ್ಷಣ ತಜ್ಞರ ಯೋಜನೆಗಳನ್ನು ನಾವು ಸರಿಯಾದ ರೀತಿಯಲ್ಲಿ ಪ್ರಯೋಗಿಸಿದರೆ ಅದು ಸಂಪೂರ್ಣವಾಗಿ ಅಭಿವೃದ್ಧಿಯತ್ತ ಸಾಗಬಹುದು. ಸಣ್ಣ ಪುಟ್ಟ ಸಮಸ್ಯಗಳನ್ನು ಅಲ್ಲಿಯೇ ಬಗೆಹರಿಸಿಕೊಂಡು ಸೃಜನಶೀಲವಾದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು, ಮಕ್ಕಳ ಮನೋಭಿವೃದ್ಧಿಯತ್ತ ಚಿತ್ತ ಹರಿಸಬೇಕು.
ನಾನೊಬ್ಬ ನಾಟಕ ಶಿಕ್ಷಕನಾಗಿ ಕೇವಲ ನಾಟಕವನ್ನೇ ಬೋಧಿಸದೇ ಇತರೆ ವಿಚಾರ, ವಿಷಯಗಳತ್ತನು ಗಮನ ನೀಡಬೇಕಾದ ಅನಿವಾರ್ಯತೆ ಇದೆ ಹಾಗೂ ಅದನ್ನು ನಾವು ಗಮನಿಸಲೇ ಬೇಕಾಗಿದೆ. ನಾಟಕ ಕಲಿಕೆಯಿಂದ ವಿದ್ಯಾರ್ಥಿ ತನ್ನ ಗುಣ ಅವಗುಣಗಳನ್ನು ಕಂಡುಕೊಂಡು ತಿದ್ದಿಕೊಳ್ಳುವ ಅವಕಾಶವನ್ನು ರಂಗಮಂಚದಲ್ಲಿ ಕಲ್ಪಿಸಿಕೊಡಲಾಗುತ್ತದೆ. ಅದು ಪ್ರತಿ ಹೈಸ್ಕೂಲ್ ಮಕ್ಕಳಿಗೆ ಇಂದು ಬೇಕಾಗಿದೆ.
ಭಾನುವಾರ, ಫೆಬ್ರವರಿ 8, 2015
ಶನಿವಾರ, ಫೆಬ್ರವರಿ 7, 2015
ಮನೋವಿಕಾಸದತ್ತ
ಇಂದಿನ ದಿನಗಳಲ್ಲಿ ಶಿಕ್ಷಣ, ಮಕ್ಕಳ ಮುಂದಿನ ಭವಿಷ್ಯದ ಕುರಿತು ನಾವು ತುಂಭ ಗಂಭೀರವಾಗಿ ಆಲೋಚಿಸುವ ಪ್ರಸಂಗ ಬಂದೊದಗಿದೆ. ಸಿ.ಸಿ.ಇ ಗೊಂದಲಗಳಲ್ಲಿ ಎಲ್ಲ ಶಿಕ್ಷಕರು ಕಾಣಿಸಿಕೊಳ್ಳುತ್ತಿದ್ದಾರೆ. ಯಾರ ಹತ್ತಿರ ಮಾತಾಡಿದರು ಯಾಕಾದರು ಬಂತೇನು ಈ ಸಿ.ಸಿ.ಇ ಎಂದು ಮಾತನಾಡುತ್ತಲೇ ವಿಚಾರಗಳನ್ನು ಸರಳ ರೀತಿಯಲ್ಲಿ ಬಗೆಹರಿಸುವುದನ್ನು ಬಿಟ್ಟು ಸಾಕಷ್ಟು ತಮ್ಮನ್ನು ಹಾಗೂ ವ್ಯವಸ್ಥೆಯನ್ನು ಹಳಿಯುವುದರಲ್ಲಿಯೇ ಕಾಲ ನೂಕೂತ್ತಾರೆ. ದಾರಿಯಲ್ಲಿ ಒಬ್ಬ ಶಿಕ್ಷಕರು ನನ್ನನ್ನು ಕಂಡು "ಇನ್ನೂ ಮುಂದೆ ಶಾಲೆಯಲ್ಲಿ ಬರೀ ನಿಮ್ಮ ನಾಟಕಗಳೇ ನಡೆಯುತ್ತೇ ನೋಡ್ರಿ, ಈ ಸಿ.ಸಿ.ಇ ಅದೇ ಹೇಳೋದು. ಪಾಠವನ್ನು ನಾಟಕ ಮಾಡಿ ಅಂತ" ಹೇಳುತ್ತಿದ್ದರು. ಆ ಶಿಕ್ಷಕರು ತಾವು ಏನನ್ನು ಮಾತನಾಡುತ್ತಿದ್ದಾರೆ ಎಂದು ಸಣ್ಣ ಆಲೋಚನೆಯು ಅವರಿಗೆ ಹೊಳೆಯದೇ ಮಾತನಾಡುವುದನ್ನು ಕಂಡಾಗ ನನಗೆ ಭಯ ಹಾಗೂ ಆತಂಕ ಶುರುವಾಯಿತು. ಶಿಕ್ಷಕರೇ ಹೀಗೆ ಗೊಂದಲದ ಮಾತು, ವಿಚಾರ ಮಾಡುವಾಗ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಈ ಪರಿಸ್ಥಿತಿಯನ್ನು ಏದುರಿಸಬೇಕು. ವಿದ್ಯಾರ್ಥಿಗಳಿಗೆ ಯೋಜನೆಗಳನ್ನೇ ಮಾಡಿಕೊಂಡು ಬರಲು ನೀಡಿ ಕಳುಹಿಸಿದ ಮಕ್ಕಳು ಗೊಂದಲಗಳಲ್ಲಿ ಬಿದ್ದು , ಕೆಲವು ದಿನ ಶಾಲೆ ಬಿಟ್ಟು ಮನೆ ಇಲ್ಲವೇ ಹೊಲ ಕೊನೆಗೆ ದುಡಿಯಲಿಕ್ಕೆ ಎಲ್ಲಿಗಾದರೂ ಕೂಲಿಗೂ ಪಲಾಯನ ಮಾಡುವ ಪರಿಸ್ಥಿತಿ ತನ್ನಿಂದ ತಾನೇ ಸೃಷ್ಟಿಯಾಗಿದೆ.
ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಹೆಚ್ಚು ಒತ್ತು ನೀಡುವ ಸ್ಥಿತಿಯಲ್ಲಿ ನಾವಿಂದು ಇಲ್ಲ. ಕಾರಣ ನಮ್ಮ ಶಿಕ್ಷಕರ ಒತ್ತಡಗಳು. ಪ್ರಾಥಾಮಿಕತೆಯಿಂದ ಬರುವಾಗ ಇರಬೇಕಾದ ಸಣ್ನ ತಯಾರಿಯು ಮಕ್ಕಳಲ್ಲಿ ಇಲ್ಲದಾಗ ಪ್ರೌಢಶಾಲಾ ಶಿಕ್ಷಕರ ಬೋಧನೆ ವಿದ್ಯಾರ್ಥಿಗಳಿಗೆ ತಲುಪುವುದು ಕಠಿಣ. ಇನ್ನೂ ಮಕ್ಕಳ ಪ್ರಜ್ಞೆಯ ಕುರಿತು ವಿಚಾರ ಮಾಡುವಾಗ ಸಾಕಷ್ಟು ಗೊಂದಲಗಳು ಪ್ರಾರಂಭವಾಗುತ್ತವೆ. ನಮಗೆ ದೊರಕುವ ಕಡಿಮೆ ಅವಧಿ ಇಂದು ಸಾಕಾಗುತ್ತಿಲ್ಲ. ಇದ್ದ ಅವಧಿಯಲ್ಲಿ ನಾನು ಮಾಡಬೇಕಾದ ಕಾರ್ಯ ಅತ್ಯಂತ ಸೂಕ್ಷ್ಮದಾಗಿದೆ. ನನ್ನ ಸಮಯ ಹೊಂದಣಿಕೆಯಲ್ಲಿಯೇ ಎಷ್ಟೋ ಮಕ್ಕಳು ಮುಂದೆ ಸಾಗಿ ಹೋಗಿ ಕಳೆದಾಗ ನನ್ನನ್ನು ನಾನು ಜರಿದುಕೊಳ್ಳುವುದೇ ಉಳಿದ ದಾರಿ.
ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಹೆಚ್ಚು ಒತ್ತು ನೀಡುವ ಸ್ಥಿತಿಯಲ್ಲಿ ನಾವಿಂದು ಇಲ್ಲ. ಕಾರಣ ನಮ್ಮ ಶಿಕ್ಷಕರ ಒತ್ತಡಗಳು. ಪ್ರಾಥಾಮಿಕತೆಯಿಂದ ಬರುವಾಗ ಇರಬೇಕಾದ ಸಣ್ನ ತಯಾರಿಯು ಮಕ್ಕಳಲ್ಲಿ ಇಲ್ಲದಾಗ ಪ್ರೌಢಶಾಲಾ ಶಿಕ್ಷಕರ ಬೋಧನೆ ವಿದ್ಯಾರ್ಥಿಗಳಿಗೆ ತಲುಪುವುದು ಕಠಿಣ. ಇನ್ನೂ ಮಕ್ಕಳ ಪ್ರಜ್ಞೆಯ ಕುರಿತು ವಿಚಾರ ಮಾಡುವಾಗ ಸಾಕಷ್ಟು ಗೊಂದಲಗಳು ಪ್ರಾರಂಭವಾಗುತ್ತವೆ. ನಮಗೆ ದೊರಕುವ ಕಡಿಮೆ ಅವಧಿ ಇಂದು ಸಾಕಾಗುತ್ತಿಲ್ಲ. ಇದ್ದ ಅವಧಿಯಲ್ಲಿ ನಾನು ಮಾಡಬೇಕಾದ ಕಾರ್ಯ ಅತ್ಯಂತ ಸೂಕ್ಷ್ಮದಾಗಿದೆ. ನನ್ನ ಸಮಯ ಹೊಂದಣಿಕೆಯಲ್ಲಿಯೇ ಎಷ್ಟೋ ಮಕ್ಕಳು ಮುಂದೆ ಸಾಗಿ ಹೋಗಿ ಕಳೆದಾಗ ನನ್ನನ್ನು ನಾನು ಜರಿದುಕೊಳ್ಳುವುದೇ ಉಳಿದ ದಾರಿ.
ಶುಕ್ರವಾರ, ಫೆಬ್ರವರಿ 6, 2015
ಗುರುವಾರ, ಫೆಬ್ರವರಿ 5, 2015
ಶನಿವಾರ, ಜನವರಿ 24, 2015
ಬುಧವಾರ, ಜನವರಿ 21, 2015
ಮಂಗಳವಾರ, ಜನವರಿ 20, 2015
ಸೋಮವಾರ, ಜನವರಿ 19, 2015
"ವಿಜ್ಞಾನ ದರ್ಶನ" ಜನವರಿ೧೬ ರಿಂದ ೧೮ ರವರೆಗೆ
![]() |
| ವಿಜ್ಞಾನ ದರ್ಶನದಲ್ಲಿ ನಮ್ಮ ವಿದ್ಯಾರ್ಥಿಗಳು |
![]() |
| ಲಾಲ್ ಬಾಗ್ ನಲ್ಲಿ ಎಸ್.ಬಿ ಪಾಟೀಲ್ ಗುರುಗಳೊಂದಿಗೆ |
![]() |
| ಮಳೆ ನೀರು ಕೊಯ್ಲು ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ |
![]() |
| ಮಳೆ ನೀರು ಕೊಯ್ಲು ಒಂದು ಮಾದರಿ |
![]() |
| ವಿಜ್ಞಾನಿಗಳೊಂದಿಗೆ ಮುಖಾಮುಖಿ - ಡಾ||ಎಸ್.ಜಿ.ಎಸ್.ಸ್ವಾಮಿ, ಡಾ||ಪೃಥ್ವೀರಾಜ್, ಡಾ||ಎನ್.ಆರ್.ರಮೇಶ್, ಶ್ರೀನಿವಾಸನ್,ಮೋಹನ್ ಕುಮಾರ |
![]() |
| ಏಂಪಿ ಥೀಯೇಟರ್ |
![]() |
| ಲಾಲ್ ಬಾಗ್ ನಲ್ಲಿ ಮರವನ್ನು ಅಪ್ಪಿಕೊಂಡಿರುವ ಮಕ್ಕಳು |
![]() |
| ಕೃಷ್ಣರಾಜು ಅವರೊಂದಿಗೆ ವಿದ್ಯಾರ್ಥಿಗಳು ಗ್ಲಾಸ್ ಹೌಸ್ ಬಳಿ |
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)

















































